ಉಸ್ತುವಾರಿ ಸಚಿವರ ಆದೇಶ , ರಕ್ಷಿತ್ ಶಿವರಾಂ ಪ್ರಯತ್ನಕ್ಕೆ ಸ್ಪಂದಿಸಿದ ಲಾಯಿಲ ಗ್ರಾಮ ಪಂಚಾಯತ್; ಗುರಿಂಗಾನ ರಸ್ತೆ ಬದಿ ಬೀದಿ ದೀಪ ಅಳವಡಿಕೆ
ಬೆಳ್ತಂಗಡಿ: ಭಾರೀ ಮಳೆಯಿಂದ ಲಾಯಿಲ ಗ್ರಾಮದ ಪುತ್ರಬೈಲು, ಗುರಿಂಗಾನ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸೋಮಾವತಿ ನದಿಯಲ್ಲಿ ಉಕ್ಕಿ ಬಂದ್ದ ಪ್ರವಾಹದಿಂದ ಹಲವು ಮನೆಗಳು ಜಲಾವೃತಗೊಂಡು ಹಾನಿ ಉಂಟಾಗಿದ್ದು , ಅ 5 ರಂದು ಉಸ್ತುವಾರಿ ಸಚಿವ ಯು.ಟಿ. ಖಾದರ್ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಗುರಿಂಗಾನ ರಸ್ತೆಯಲ್ಲಿ ಹಲವು ವರ್ಷಗಳಿಂದ ಬೀದಿ ದೀಪಗಳ ಕೊರತೆಯಿದ್ದು, ಈ ಬಗ್ಗೆ ಪಂಚಾಯತ್ ಸದಸ್ಯರಲ್ಲಿ ಹಲವು ಬಾರಿ ಮನವಿ ಮಾಡಿದ್ದರೂ ಬೇಡಿಕೆ ಈಡೇರಿಲ್ಲ ಎಂದು ಸ್ಥಳೀಯರು ಸಚಿವ ಯು.ಟಿ. ಖಾದರ್ ಹಾಗೂ ರಕ್ಷಿತ್ ಶಿವರಾಂ ಅವರ...
ಮಳೆಯಿಂದ ಹಾನಿಗೀಡಾದ ಬಿಷಪ್ ಹೌಸ್, ಮುಂಡಾಜೆ ಚರ್ಚ್ ಗೆ ಶಾಸಕ ಹರೀಶ್ ಪೂಂಜ ಭೇಟಿ
ಬೆಳ್ತಂಗಡಿ; ಮಳೆಯಿಂದ ಹಾನಿಗೊಳಗಾದ ಬಿಷಪ್ ಹೌಸ್ ಬೆಳ್ತಂಗಡಿ ಹಾಗೂ ಸೈಂಟ್ ಮೆರೀಸ್ ಚರ್ಚ್ ಮುಂಡಾಜೆ ಇಲ್ಲಿನ ಪ್ರದೇಶಗಳಿಗೆ ಶಾಸಕರಾದ ಹರೀಶ್ ಪೂಂಜರವರು ಭೇಟಿ ನೀಡಿ ಪರಿಸೀಲಿಸಿದರು ಈ ಸಂದರ್ಭದಲ್ಲಿ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಸೆಬಾಸ್ಟಿಯನ್, ಮುಂಡಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಣೇಶ್ ಬಂಗೇರ, ಪ್ರಮುಖರಾದ ಪ್ರಾನ್ಸಿಸ್, ಅಲೆಕ್ಸ್ ಒಜೆ, ವಿನ್ಸೆಂಟ್ ವೈಪಾನ ಹಾಗೂ ಇತರರು ಉಪಸ್ಥಿತರಿದ್ದರು
ಉಜಿರೆ ನೀರಚಿಲುಮೆ ಬೈಕ್ ಬಸ್ ನಡುವೆ ಭೀಕರ ಅಪಘಾತ ಒರ್ವ ಸ್ಥಳದಲ್ಲಿಯೇ ಸಾವು
ಬೆಳ್ತಂಗಡಿ:ನೀರಚಿಲುಮೆಯ ತಿರುವಿನಲ್ಲಿ ಕೆಎಸ್‌ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಆ11 ರಂದು ಬೆಳಗ್ಗೆ ನಡೆದಿದೆ. ಧರ್ಮಸ್ಥಳದಿಂದ ಉಜಿರೆ ಕಡೆಗೆ ಬರುತ್ತಿದ್ದ ಕೆಎಸ್‌ಆರ್ಟಿಸಿ ಬಸ್ ಹಾಗೂ ಎದುರಿನಿಂದ ಬರುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸನತ್ (30) ಅವರನ್ನು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. […]
ಪುದುವೆಟ್ಟು ಸೈಂಟ್ ಮೇರಿ ಚರ್ಚ್ ವತಿಯಿಂದ ಶಾಸಕ ಹರೀಶ್ ಪೂಂಜ ಅವರಿಗೆ ಸನ್ಮಾನ
ಬೆಳ್ತಂಗಡಿ; ಸಂತ ಮರಿಯಮ್ಮನವರ ದೇವಾಲಯ ಪುದುವೆಟ್ಟು -ಬೊಲ್ಮನಾರು ಇದರ ವತಿಯಿಂದ ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ವಾರ್ತಾ ವಾಹಿನಿಗಳಲ್ಲಿ ಒಂದಾದ ಕರ್ನಾಟಕ ಟಿವಿಯವರು ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ “ಬೆಸ್ಟ್ ಎಂಎಲ್ಎ” ಅವಾರ್ಡ್ ಪಡೆದ ಶಾಸಕರಾದ ಶ್ರೀ ಹರೀಶ್ ಪೂಂಜರವರನ್ನು ನಿವಾಸಕ್ಕೆ ಆಗಮಿಸಿ ಆತ್ಮೀಯವಾಗಿ ಅಭಿನಂದಿಸಿ, ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಧರ್ಮಗುರುಗಳಾದ ರೆ.ಫಾ. ಸೇಬಾಸ್ಟಿನ್ ಪುನ್ನತಾನತ್, ಚರ್ಚ್ ನ ಆಡಳಿತ ಮಂಡಳಿ ಟ್ರಸ್ಟಿಗಳಾದ ಜಿಜೋ, ವಿನೋಯ್, ಜೋಸೆಫ್ ಕೆ. ವಿ, ಜೋಸೆಫ್ ಪಿ. ಎಮ್, ಜೋಬಿ, ಸೋಯ್ ಕೆ ಜೆ...
ವೇಣೂರು; ನಿಷೇಧಿತ ಮಾದಕ ವಸ್ತು ಸೇವನೆ ಆರೋಪಿ ಬಂಧನ
ಬೆಳ್ತಂಗಡಿ; ವೇಣೂರು ಮೇಲಿನ ಪೇಟೆಯಲ್ಲಿ ಮಾದಕವಸ್ತು ಸೇವಿಸಿ ಅಮಲಿನಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವೇಣೂರು ಪೊಲೀಸರು ಬಂಧಿಸಿ ಪ್ರಕರಣದಾಖಲಿಸಿಕೊಂಡಿದ್ದಾರೆ.ಬಂಧಿತ ಆರೋಪಿ ಬೆಳ್ತಂಗಡಿ ಕುಕ್ಕೇಡಿ ನಿವಾಸಿ ಮಹಮ್ಮದ್ ಆಸೀಪ್ (35) ಎಂಬಾತನಾಗಿದ್ದಾನೆ.ಆ 9 ರಂದು ಮದ್ಯಾಹ್ನ, ವೇಣೂರು ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯ ಡವಗಿ ರವರು ಠಾಣಾ ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಬೆಳ್ತಂಗಡಿ ವೇಣೂರು ಮೇಲಿನ ಪೇಟೆ ಎಂಬಲ್ಲಿ ತೆರಳಿದಾಗ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನಲ್ಲಿ ವಿಚಾರಿಸಲಾಗಿ ಬೆಳ್ತಂಗಡಿ ಕುಕ್ಕೇಡಿ ನಿವಾಸಿ ಮಹಮ್ಮದ್ ಆಸೀಪ್ (35)...
ಮಾದಕ ವಸ್ತುಗಳ ವಿರುದ್ಧ ಯುವ ಕಾಂಗ್ರೆಸ್‌ನಿಂದ ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಅಭಿಯಾನಕ್ಕೆ ಚಾಲನೆ
ಬೆಳ್ತಂಗಡಿ:ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಬೆಳ್ತಂಗಡಿ ತಾಲೂಕನ್ನು ಮಾದಕ ವಸ್ತು ಮುಕ್ತಗೊಳಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ‘ಡ್ರಗ್ಸ್ ಮುಕ್ತ ಬೆಳ್ತಂಗಡಿ’ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. “ನಶೆ ಬೇಡ… ನಾಳೆಯ ಭವಿಷ್ಯ ಬೇಕು” ಹಾಗೂ “Say NO to Drugs, Say YES to the Future”ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಅಭಿಯಾನದಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಯುವಜನರ ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ಭವಿಷ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು. ಮಾದಕ ವ್ಯಸನವು ಕೇವಲ...
ಬೆಳ್ತಂಗಡಿ; ಕಾಂಗ್ರೆಸ್ ಪಕ್ಷದ “ಸಂಘಟನಾ ಸೃಜನ್ ಅಭಿಯಾನ” ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯವೇ ಕಾಂಗ್ರೆಸ್ ಸಂಘಟನೆಯ ಬಲ: ರಕ್ಷಿತ್ ಶಿವರಾಂ
ಬೆಳ್ತಂಗಡಿ: ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಸಂಘಟನಾ ಸೃಜನ್ ಅಭಿಯಾನ’ ದ ಅಂಗವಾಗಿ ಬೆಳ್ತಂಗಡಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಯಿತು..ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ತಳಮಟ್ಟದ ಕಾರ್ಯಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಾರ್ಯಕರ್ತರ ಅಭಿಪ್ರಾಯ, ಸಲಹೆ ಹಾಗೂ ಅನುಭವಗಳನ್ನು ಆಧರಿಸಿ ಸಂಘಟನೆಯ ಮುಂದಿನ ರೂಪುರೇಷೆಗಳನ್ನು ರೂಪಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಸಕ್ರಿಯವಾಗಿರುವ ಸಂಘಟನೆಯಾಗದೆ, ಜನರ...
ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ
ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ರಾತ್ರಿ ಮತ್ತೆ ಕಾಡಾನೆ ಕಂಡುಬಂದಿದೆ.ಘಾಟಿ ಭಾಗದಲ್ಲಿ ಆಗಾಗ ಕಾಣ ಸಿಗುವ ಈ ಕಾಡಾನೆ ರಸ್ತೆ ಬದಿ ನಿಂತಿದ್ದು ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿದ್ದು ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಕಾಡಾನೆಗಳು ಪ್ರತಿ ನಿತ್ಯ ಎಂಬಂತೆ ಕಂಡು ಬರುತ್ತಿದೆ ಈ ಆನೆ ಈವರೆಗೆ ಜನರ ಮೇಲೆದಾಳಿ ನಡೆಸಿದಲ್ಲ ಆದರೂ ಆನೆ ರಸ್ತೆಯಲ್ಲಿಯೇ ಕಾಣಿಸುವುದು ಪ್ರಯಾಣಿಕರಲ್ಲಿ ಆತಂಕ ಹೆಚಚಿಸುತ್ತಿದೆ.
ಬೆಳ್ತಂಗಡಿ: ಮಾದಕ ವಸ್ತು ಸೇವನೆ ಮಾಡಿದ ವ್ಯಕ್ತಿಯ ಬಂಧನ ಪ್ರಕರಣ ದಾಖಲು
ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ಅಮಲಿನಲ್ಲಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನ ವಿರುದ್ಧ ಕಾರ್ಯಾಚರಣೆ ನಡೆಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆಯ ವಿನಾಯಕ ನಗರದ ನಿವಾಸಿ ಅರುಣ್ ಕುಮಾರ್ (36) ಎಂಬಾತನಾಗಿದ್ದಾನೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಆನಂದ ಎಂ. ಮತ್ತು ತಂಡ ಸಿಬ್ಬಂದಿಯೊಂದಿಗೆ ಆ.8 ರಂದು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ ವ್ಯಕ್ತಿಯೊಬ್ಬ ಅಮಲಿನಲ್ಲಿರುವಂತೆ ಕಂಡುಬಂದಿದ್ದಾನೆ. ಪೊಲೀಸರು ಆತನನ್ನು ವಿಚಾರಿಸಿದಾಗ ಸಮರ್ಪಕವಾಗಿ ಉತ್ತರಿಸದೆ ನಶೆಯ...
ಪಾರಂಕಿ; ಶಾಸಕ ಹರೀಶ್ ಪೂಂಜ ಅವರಿಂದ ಕಾಂಕ್ರೀಟ್ ರಸ್ತೆ ಉದ್ಘಾಟನೆ
ಬೆಳ್ತಂಗಡಿ; ರೂ. 44 ಲಕ್ಷ ವೆಚ್ಚದಲ್ಲಿಕಾಂಕ್ರೀಟೀಕರಗೊಂಡ ಪಾರೆಂಕಿ ಗ್ರಾಮದ ಹಾರಬೆ - ಶ್ರೀರಾಮನಗರ ಕಾಲೋನಿ ರಸ್ತೆಯನ್ನು ಶಾಸಕರಾದ ಶ್ರೀ ಹರೀಶ್ ಪೂಂಜರವರು ಉದ್ಘಾಟಿಸಿದರು..ಪಾರೆಂಕಿ ಬಿಜೆಪಿ ಶಕ್ತಿಕೇಂದ್ರದವರು ಬೆಸ್ಟ್ ಎಂ ಎಲ್ ಎ ಅವಾರ್ಡ್ ಪಡೆದ ಶಾಸಕರನ್ನು ಸನ್ಮಾಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ, ಶಕ್ತಿಕೇಂದ್ರ ಅಧ್ಯಕ್ಷರಾದ ಕಾಂತಪ್ಪ ಗೌಡ, ಕುಕ್ಕಳ ಶಕ್ತಿಕೇಂದ್ರ ಅಧ್ಯಕ್ಷರಾದ ಶೈಲೇಶ್ ಕುಕ್ಕಳ, ಪಾರೆಂಕಿ ಬೂತ್ ಸಮಿತಿ ಪುರುಷೋತ್ತಮ, ರಾಜೇಶ್ ದೋಟ, ದಯಾನಂದ, ಕುಕ್ಕಳ ಬೂತ್ ಸಮಿತಿಯ...















