ನೆರಿಯ ನೀಲಯ್ಯ ಮಲೆಕುಡಿಯ ಅವರಿಗೆ ಶ್ರದ್ದಾಂಜಲಿ ಸಭೆ
ಬೆಳ್ತಂಗಡಿ: ನೀಲಯ್ಯ ಮಲೆಕುಡಿಯರು ಎಲ್ಲಾ ಧರ್ಮೀಯರನ್ನು ಸಹೋದರರಂತೆ ಕಂಡು , ಸಮಾಜದ ಸೌಹಾರ್ದತೆಗಾಗಿ ದುಡಿದ ನಾಯಕ ಎಂದು ನೆರಿಯ ಸಿಯೋನ್ ಆಶ್ರಮದ ಆಡಳಿತ ನಿರ್ದೇಶಕ ಯು.ಸಿ ಪೌಲೋಸ್ ಹೇಳಿದರು. ಅವರು ನೆರಿಯ ಗ್ರಾಮದ ಕಲ್ಕಾರ್ ನಲ್ಲಿ ಹಿರಿಯ ಕಾಂಗ್ರೆಸ್ ನಾಯಕ , ಮಾಜಿ ನೆರಿಯ ಗ್ರಾಮ ಪಂಚಾಯತ್ ಸದಸ್ಯ , ಮಾಜಿ ಭೂ ನ್ಯಾಯ ಮಂಡಳಿ ಸದಸ್ಯ ನೀಲಯ್ಯ ಮಲೆಕುಡಿಯ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಒಂದು ನಿರ್ದಿಷ್ಟ ಪಕ್ಷದ ನಾಯಕರಾಗಿದ್ದರೂ ಎಲ್ಲರೊಂದಿಗೆ ಬೆರೆತು , ತನ್ನದೇ ರೀತಿಯಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ದುಡಿದ...
ಪದೇ ಪದೇ ಐ.ಟಿ ದಾಳಿ ಹಿನ್ನಲೆ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಆತ್ಮಹತ್ಯೆ
ಬೆಂಗಳೂರು, ಜನವರಿ 30: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ಬಂಗಲೆಯಲ್ಲಿ ನಡೆದಿದೆ. ಪದೇ ಪದೆ ಐಟಿ ಇಲಾಖೆ ಅಧಿಕಾರಿಗಳಿಂದ ದಾಳಿಯಿಂದ ಮನನೊಂದು ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಕೂಡ IT ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಅಶೋಕ್ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ‘ಭಾಸ್ಕರ ಪರ್ವ – ಮಾಧ್ಯಮ ಗುರುವಿಗೆ ಅಭಿನಂದನೆ ಕಾರ್ಯಕ್ರಮ
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ (SDM College) ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರು ತಮ್ಮ 33 ವರ್ಷಗಳ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿ ಬಳಗ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ‘ಭಾಸ್ಕರ ಪರ್ವ – ಮಾಧ್ಯಮ ಗುರುವಿಗೆ ಅಭಿನಂದನೆ’ ಎಂಬ ವಿಶೇಷ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆಎಸ್.ಡಿ.ಎಂ ಕಾಳೆಜಿನ ಪತ್ರಿಕೋದ್ಯಮ ವಿಭಾಗದ ಮೂಲಕವಾಗಿ ನೂರಾರು ಮಂದಿ ಪತ್ರಕರ್ತರನ್ನು ರೂಪಿಸಿದ ಭಾಸ್ಕರ ಹೆಗಡೆ ಅವರ ಶಿಷ್ಯಂದಿರು ದೇಶದ ವಿವಿಧ ಭಾಗಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು...
ಗೇರುಕಟ್ಟೆ ಕಾರು ಬೈಕ್ ನಡುವೆ ಅಪಘಾತ
ಗೇರುಕಟ್ಟೆ: ಇಲ್ಲಿನ ಪರಪ್ಪು ಸಮೀಪ ಗೇರುಕಟ್ಟೆ ಕಡೆಯಿಂದ ನಾಳಕ್ಕೆ ಹೋಗುವ ಸ್ವಿಫ್ಟ್ ಕಾರು ಹಾಗೂ ನಾಳದ ಕಡೆಯಿಂದ ಬರುವ ಬೈಕ್ ಎದುರು ಬದುರಾಗಿ ಡಿಕ್ಕಿ ಹೊಡೆದ ಘಟನೆ ಜ.29 ರಂದು ರಾತ್ರಿ ನಡೆದಿದೆ.ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯರ ಸಹಕಾರದಿಂದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಧರ್ಮಸ್ಥಳ ಪಾಂಗಳದಲ್ಲಿ ಹಗಲು ಹೊತ್ತಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ನಗದು ಕಳ್ಳತನ
ಬೆಳ್ತಂಗಡಿ : ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳ್ಳತನ ಮಾಡಿಕೊಂಡ ಹೋದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಳದ ಲಕ್ಷ್ಮೀ ನಿವಾಸದ ಬಾಲಕೃಷ್ಣ ಗೌಡರ ಮನೆಗೆ ಜ.29 ರಂದು ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆ ಒಳಗಡೆ ಮನೆಯಲ್ಲಿ ಯಾರು ಇಲ್ಲದ ವೇಳೆಗೆ ಕಳ್ಳತನ ನಡೆದಿದೆ. ಸಂಜೆ ವೇಳೆಗೆ ಕೆಲಸದಿಂದ ಮನೆಗೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದ್ದು, ಮನೆಯೊಳಗಿದ್ದ 40 ಸಾವಿರ ಮೌಲ್ಯದ 4 ಗ್ರಾಂ ಕಿವಿಓಲೆ,2 ಸಾವಿರ ಮೌಲ್ಯದ 2 ಜೊತೆ ಬೆಳ್ಳಿಯ ಕಾಲುಗೆಜ್ಜೆ,5,500...
ಬೆಳ್ತಂಗಡಿ; ಸರಕಾರಿ ಶಾಲೆಗಳ ದುರಸ್ತಿ ಹಾಗೂ ಶೌಚಾಲಯ ಅಭಿವೃದ್ಧಿಗೆ ಸರಕಾರದಿಂದ ರೂ.57.93 ಲಕ್ಷ ಅನುದಾನ ಬಿಡುಗಡೆ– ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ:ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 14 ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತುರ್ತು ದುರಸ್ತಿ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಒಟ್ಟು ರೂ.57.93 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿದೆ ಎಂದು ಶಾಸಕ ಹರೀಶ್ ಪೂಂಜ ಮಾಹಿತಿ ನೀಡಿದ್ದಾರೆ.ಈ ಅನುದಾನದಿಂದ ಶಾಲೆಗಳ ಮೂಲಭೂತ ಸೌಕರ್ಯಗಳು ಮತ್ತಷ್ಟು ಸುಧಾರಣೆಯಾಗಲಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಸುರಕ್ಷಿತ ಶಿಕ್ಷಣ ವಾತಾವರಣ ಕಲ್ಪಿಸಲು ಸಹಕಾರಿಯಾಗಲಿದೆಶಾಸಕರ ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರಕ್ಕೆ ಹಾಗೂ ಶಿಕ್ಷಣ ಸಚಿವರಿಗೆ ತಾಲೂಕಿನ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಶಾಸಕ ಹರೀಶ್ ಪೂಂಜ...
ಬೆಳ್ತಂಗಡಿ; ಫೆಬ್ರವರಿ 02 ರಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯ ಬಚಾವ್ ಆಂದೋಲನ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭಾಗಿ
ಬೆಳ್ತಂಗಡಿ; ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬಚಾವ್ ಆಂದೋಲನವು, ದಿನಾಂಕ 02:02 2026ನೇ ಸೋಮವಾರ ಬೆಳ್ತಂಗಡಿಯಲ್ಲಿ ನಡೆಯಲಿದ್ದು. ಸಮಾವೇಶದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಪರಿಶ್ರಮ ನೀಟ್ ಅಕಾಡೆಮಿಯ ಸಂಸ್ಥಾಪಕರು. ಪ್ರದೀಪ್ ಈಶ್ವರ್ ಮಾತನಾಡಲಿದ್ದಾರೆ.ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳಾದ ಸತೀಶ್ ಕಾಶಿಪಟ್ಣ ಹಾಗೂ ನಾಗೇಶ್ ಕುಮಾರ್ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.ಆ ದಿನ ಬೆಳಿಗ್ಗೆ 10:00 ಗಂಟೆಗೆ ಲಾಯಿಲ ಸಂಗಮ ಸಭಾಭವನದ ಬಳಿಯಿಂದ ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲಾಭವನದವರೆಗೆ ಕಾಲ್ನಡಿಗೆ ಜಾಥ...
ಉಜಿರೆ ಸ್ಕೂಟರ್ ಗೆ ಡಿಕ್ಕಿಹೊಡೆದು ಪರಾಯಾಗಿ ಹೊಂಡಕ್ಕೆ ಬಿದ್ದ ಕಾರು
ಬೆಳ್ತಂಗಡಿ; ಉಜಿರೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿ ಸ್ಕೂಟರ್ ಗೆ ಡಿಕ್ಕಿಹೊಡೆದು ನಿಲ್ಲಿಸದೆ ಹೋದ ಕಾರು ಹೊಂಡಕ್ಕೆ ಬಿದ್ದ ಘಟನೆ ಜ 28ರಂದು ರಾತ್ರಿ ನಡೆದಿದೆ.ಉಜಿರೆ ಬೆಳಾಲು ಕ್ರಾಸ್ ಬಳಿ ಪೇಟೆಯಲ್ಲಿ ಸ್ಕೂಟರ್ ತಾಗಿ, ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಹೊಂಡಕ್ಕೆ ಬಿದ್ದಿದೆ. ಸ್ಕೂಟರ್ ನಲ್ಲಿದ್ದ ಯುವತಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಚಾಲಕ ಕಾರನ್ನು ಉಜಿರೆ ಬೆಳಾಲು ಕ್ರಾಸ್ ಬಳಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ತಪ್ಪಿಸಿಕೊಂಡು ಹೋಗಿದ್ದು ಜನಾರ್ಧನ ಶಾಲೆ ಹತ್ತಿರ ಕಾರು...
ಸುಮಂತ್ ಕೊಲೆ ಪ್ರಕರಣ ಸಮಗ್ರ ತನಿಖೆ ಶಾಸಕ ಹರೀಶ್ ಪೂಂಜ ಒತ್ತಾಯ
ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ ಎನ್ನುವ ಬಾಲಕನ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ತನಿಖೆಯನ್ನು ಅತ್ಯಂತ ಕೂಲಂಕುಷವಾಗಿ ನಡೆಸಿ ಶೀಘ್ರದಲ್ಲಿ ಸತ್ಯಾ ಸತ್ಯತೆಯನ್ನು ಜನರ ಮುಂದಿಡಬೇಕೆಂದು ಶಾಸಕ ಹರೀಶ್ ಪೂಂಜರವರು ಗೃಹ ಸಚಿವರಾದ ಜಿ ಪರಮೇಶ್ವರ್ ರವರಿಗೆ ಆಗ್ರಹಿಸಿದರು. ಸುಮಂತ್‌ನ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಕುಟುಂಬಸ್ಥರು ಹಾಗೂ ಸ್ಥಳೀಯ ಸಾರ್ವಜನಿಕರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ನಡೆಯದಂತೆ, ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಶೀಘ್ರದಲ್ಲೇ ನಿಖರವಾದ ಸತ್ಯವನ್ನು ಜನರ ಮುಂದಿಡಬೇಕು ಎಂದು ಶಾಸಕರು ಗೃಹ ಸಚಿವರನ್ನು...
ಸುಮಂತ್ ಕೊಲೆ ಪ್ರಕರಣ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಫೆ 4 ರಂದು ಸಿಪಿಐಎಂ ಪ್ರತಿಭಟನೆ; ಬಿ.ಎಂ ಭಟ್
ಬೆಳ್ತಂಗಡಿ; ಬಾಲಕ ಸುಮಂತ್ ಕೊಲೆಯಾಗಿ ವಾರಗಳೇ ಕಳೆದವು. ಆದರೆ ಕೊಲೆಗಾರರ ಪತ್ತೆ ಇನ್ನೂ ಆಗಿಲ್ಲ. ಇದು ಅತ್ಯಂತ ವಿಷಾಧನೀಯ ಸಂಗತಿ ಎಂದು ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಆಪಾದಿಸಿರುಸುತ್ತಾರೆ.ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಾಚಾರ, ಕೊಲೆಯಾದರೆ ಬಹುತೇಕ ಪ್ರಕರಣಗಳಲ್ಲಿ ಅಪರಾದಿಗಳು ಪತ್ತೆ ಆಗುತ್ತಿಲ್ಲ ಎಂಬುದು ಆಘಾತಕಾರಿಯಾದ ವಿಚಾರ. ಕರ್ನಾಟಕ ಪೋಲೀಸ್ ಯಾವತ್ತೂ ಸೋಲುವ ಇಲಾಖೆ ಅಲ್ಲ. ಅದರಲ್ಲೂ ಈಗಿನ SP ಯವರು ದಕ್ಷ ಎಂದು ಹೆಸರು ಗಳಿಸಿದವರು. ಈ ಹೆಗ್ಗಳಿಕೆಗಳು ಬೆಳ್ತಂಗಡಿ ಪಾಲಿಗೆ ಅಲ್ಲ ಎನ್ನುವಂತೆ ಆಗಬಾರದಲ್ಲವೇ ಎಂದವರು ಪ್ರಶ್ನಿಸಿದರು?**ಇದೀಗ ಸುಮಂತ್ ಕೊಲೆ ಪ್ರಕರಣದಲ್ಲಾದರೂ ಪೋಲೀಸ್...















