ಬೆಳ್ತಂಗಡಿ: ತಾಲೂಕಿನ ಇತಿಹಾಸ ಪ್ರಸಿದ್ದ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಅನೇಕ ವರ್ಷಗಳಿಂದ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದ ಭಾಸ್ಕರ ರಾವ್ ಸೆ. 9ರಂದು ತನ್ನ ವಾಸದ ಮನೆಯ ಸಮೀಪವೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇವಸ್ಥಾನದಲ್ಲಿ ದೀರ್ಘಕಾಲದಿಂದ ಧಾರ್ಮಿಕ ಸೇವೆ ಹಾಗೂ ಪರಿಚಾರಕರಾಗಿ ತೊಡಗಿಕೊಂಡಿದ್ದ ಇವರ ಮರಣಕ್ಕೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಬೆಳ್ತಂಗಡಿ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.




