ಬೆಳ್ತಂಗಡಿ : ಕಂದಾಯ ನಿರೀಕ್ಷಕರಾಗಿ ಮಲ್ಲೇಶ್ ಕರ್ತವ್ಯಕ್ಕೆ ಹಾಜರು;ಪವಡಪ್ಪ ದೊಡ್ಡಮನಿ ಕರ್ತವ್ಯದಿಂದ ಬಿಡುಗಡೆ
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ 23 ವರ್ಷಗಳಿಂದ ವಿವಿಧ ಹುದ್ದೆಯಲ್ಲಿ ಕರ್ತವ್ಯ ಮಾಡಿ ಕಳೆದ ಏಳು ವರ್ಷಗಳಿಂದ ಕೊಕ್ಕಡ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿದ್ದ ಪವಡಪ್ಪ ದೊಡ್ಡಮನಿಯವರನ್ನು ಮೂಡಬಿದಿರೆ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಸ್ಥಳಕ್ಕೆ ಸರಕಾರ ವರ್ಗಾವಣೆ ಮಾಡಿದ್ದು. ಮೂಡಬಿದಿರೆ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾಗಿದ್ದ ಕಳೆದ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಜಿ.ಎಸ್. ಮಲ್ಲೇಶ್ ಅವರನ್ನು ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಸ್ಥಳಕ್ಕೆ ಆ.31 ರಂದು ವರ್ಗಾವಣೆ ಮಾಡಲಾಗಿತ್ತು. ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕರಾಗಿ ಜಿ.ಎಸ್. ಮಲ್ಲೇಶ್ ಅವರು...
ಮುಂಡಾಜೆ ಸೈಂಟ್ ಮೇರೀಸ್ ಚರ್ಚ್ ಗೆ ರಕ್ಷಿತ್ ಶಿವರಾಂ ಭೇಟಿ ಮಳೆಯಿಂದಾದ ಹಾನಿ ಪರಿಶೀಲನೆ
ಬೆಳ್ತಂಗಡಿ; ಮಳೆಯಿಂದ ಸೈಂಟ್ ಮೇರಿಸ್ ಮುಂಡಾಜೆ ಚರ್ಚ್ ನ ತಡೆಗೋಡೆ ಕುಸಿದುಬಿದ್ದಿದ್ದು ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಧರ್ಮಗುರುಗಳಾದ ವರ್ಗೀಸ್ ಪುದಿಯೆಡತ್ಚರ್ಚ್ ಪಾಲನಾ ಸಮಿತಿಯ ಸದಸ್ಯರಾದ ಅಲೆಕ್ಸ್, ಸಿ.ವಿ.ಜೋಸೆಫ್ ಹಾಗೂ ತೋಮಸ್ ಕಿರಣ್, ಕೆ.ಕೆ ಜೋಸ್, ಆ್ಯಂಟನಿ ಅಗರಿ, ರೆನ್ನಿ ಅಗರಿ , ಸಂತೋಷ್, ಸೆಬಾಸ್ಟಿನ್ ,ಪ್ರಕಾಶ್.ವಿ.ಸ್, ರಾಜೇಶ್.ಕೆ.ವಿ ಲಿಜೋಸ್ಕರಿಯಾ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಪ್ರವೀಣ್ ಹಳ್ಳಿ ಮನೆ ಉಪಸ್ಥಿತರಿದ್ದರು
ಧರ್ಮಸ್ಥಳ ಸಹಕಾರ ಸಂಘದ ಐತಿಹಾಸಿಕ ಸಾಧನೆ-ರೂ. 2.89 ಕೋಟಿ ನಿವ್ವಳ ಲಾಭ – ಶೇ.21 ಡಿವಿಡೆಂಟ್ ಘೋಷಣೆ
ಧರ್ಮಸ್ಥಳ: ಸುಭಾಷ್ ಯಾದವ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಮತ್ತೊಮ್ಮೆ ದಾಖಲೆ ಸಾಧನೆ ಮಾಡಿದ್ದು 2025-26ನೇ ಸಾಲಿನಲ್ಲಿ ರೂ. 2.89 ಕೋಟಿ ನಿವ್ವಳ ಲಾಭಗಳಿಸಿರುವ ಸಂಘವು ಸದಸ್ಯರಿಗೆ ಶೇ.21 ಡಿವಿಡೆಂಟ್ ಘೋಷಿಸಿದೆ. ಆ.14 ರಂದು ಸಂಘದ ಸಾಧನಾ ಕಟ್ಟಡದ ಅಟಲ್ ಜೀ ಸಭಾ ಭವನದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಾಯಿತು. ಸಂಘದ ಅಧ್ಯಕ್ಷ ಪ್ರೀತಮ್ ಡಿ. ಅವರು ಅಧ್ಯಕ್ಷತೆ ವಹಿಸಿದ್ದರು. 100 ಕೋಟಿ ಠೇವಣಿ; ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಪ್ರೀತಮ್ ಡಿ....
ಬಂಟ್ವಾಳ ಕಾವಳ ಪಡೂರಿನಲ್ಲಿ ಪೊಲೀಸ್ ದಾಳಿ; ನಿಷೇಧಿತ ಎಂ.ಡಿ.ಎಂ.ಎ ಸೇರಿದಂತೆ 4 ಲಕ್ಷ 90 ಸಾವಿರ ಮೌಲ್ಯದ ಸೊತ್ತುಗಳು ವಶಕ್ಕೆ.
ಬಂಟ್ವಾಳ; ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಯಶ್ ಕುಮಾರ್ ಶರ್ಮಾ, ಐ.ಪಿ.ಎಸ್ ರವರ ನೇತೃತ್ವದ ತಂಡವು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಕಾವಳಪಡೂರು ಎಂಬಲ್ಲಿ ದಾಳಿ ನಡೆಸಿ, ಸುಮಾರು 2 ಲಕ್ಷ 25 ಸಾವಿರ ಮೌಲ್ಯದ 22.57 ಗ್ರಾಂ ನಿಷೇಧಿತ ಎಂ.ಡಿ.ಎಂ.ಎ ಹಾಗೂ 30.34 ಗ್ರಾಂ ಗಾಂಜಾ, ಡ್ರಗ್ಸ್ ಸಾಗಾಟಕ್ಕೆ ಬಳಸಿದ ಕಾರು ಹಾಗೂ 5 ಮೊಬೈಲ್ ಗಳು ಸೇರಿದಂತೆ ಒಟ್ಟು 4 ಲಕ್ಷ 90 ಸಾವಿರ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳುನಾಶೀರ್ ಹುಸೇನ್...
ಬಂಟ್ವಾಳ : 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾದಕ ವಸ್ತು ಸೇವನೆ ಪ್ರಕರಣದ ವಾರೆಂಟ್ ಆರೋಪಿ ಬಂಧನ
ಬಂಟ್ವಾಳ : ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಕವಸ್ತು ಪ್ರಕರಣದಲ್ಲಿ ಸುಮಾರು ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸರು ಕೇರಳದ ಮಂಜೇಶ್ವರದಲ್ಲಿ ಬಂಧಿಸಿದ್ದಾರೆ. ಪುಂಜಾಲಕಟ್ಟೆ ಠಾಣಾ ಅಕ್ರ: 98/2019, ಕಲಂ 27(b) NDPS ಕಾಯ್ದೆ ಹಾಗೂ ಬಂಟ್ವಾಳದ ಮಾನ್ಯ ಹಿರಿಯ ನ್ಯಾಯಾಲಯದ ಸಿಸಿ ನಂ. 08/2020 ಪ್ರಕರಣದಲ್ಲಿ ವಾರೆಂಟ್ ಜಾರಿಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಸಂತೆ ಮಾರ್ಕೆಟ್ ರೋಡ್ ನಿವಾಸಿ ರಿಜ್ವಾನ್ ಮಗ ಎಂ.ಡಿ. ಸೈಫ್ ಅಲಿಯಾಸ್ ಮೊಹಮ್ಮದ್ ಸೈಫ್ (32) ಎಂಬಾತನನ್ನು ಆ.13ರಂದು ಕೇರಳ ರಾಜ್ಯದ ಮಂಜೇಶ್ವರದ ಕಡಂಬಾರು...
ಬೆಳ್ತಂಗಡಿ : ನ್ಯಾಯಾಲಯಕ್ಕೆ ಹಾಜರಾಗದ ವಾರೆಂಟ್ ಆರೋಪಿ ಬಂಧನ
ಬೆಳ್ತಂಗಡಿ: ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ವಾರೆಂಟ್ ಆರೋಪಿಯನ್ನು ವೇಣೂರು ಪೊಲೀಸರು ಪುತ್ತೂರಿನ ದರ್ಬೆಯಲ್ಲಿ ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ಅಕ್ರ 71/2008ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯದ CC No.535/2016ರಲ್ಲಿ ಐಪಿಸಿ ಕಲಂ 457, 380 ರಡಿ ದಾಖಲಾದ ಕಳ್ಳತನ ಪ್ರಕರಣದಲ್ಲಿ ವಾರಂಟ್ ಜಾರಿಯಾಗಿತ್ತು. ಪ್ರಕರಣದ ವಾರೆಂಟ್ ಆರೋಪಿ ಸುಳ್ಯ ತಾಲೂಕಿನ ಐವತ್ತೋಕ್ಲು ಗ್ರಾಮದ ನೆಲ್ಲಿಕಟ್ಟೆ ಮನೆ ನಿವಾಸಿ ಆದಮ್ ಅವರ ಪುತ್ರ ಮಹಮ್ಮದ್ ಶರೀಪ್ (46) ಎಂಬಾತನನ್ನು ಆ.13 ರಂದು ಬಂಧಿಸಿದ್ದಾರೆ. ಬೆಳ್ತಂಗಡಿ ಉಪವಿಭಾಗ...
ಬೆಳ್ತಂಗಡಿ : ಹೊಟೇಲ್ ಬಂದು ಕುಟುಂಬ ಸದಸ್ಯರಿಗೆ ಹಲ್ಲೆ ಮಹಿಳೆ ಮೇಲೆ ದೌರ್ಜನ್ಯ; ಐವರ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ : ಹೊಟೇಲ್ ಗೆ ಐದು ಮಂದಿ ಬಂದು ಮಹಿಳೆ ಸೇರಿದಂತೆ ನಾಲ್ಕು ಮಂದಿ ಕುಟುಂಬ ಸದಸ್ಯರಿಗೆ ಅವ್ಯಾಚ ಶಬ್ದಗಳಿಂದ ಬೈದು ಬಳಿಕ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಹಿಳೆಯನ್ನು ಎಳೆದುಕೊಂಡು ಹೋಗಿ ಜೊತೆ ಅಸಭ್ಯವಾಗಿ ವರ್ತಿಸಿ ದೌರ್ಜನ್ಯ ನಡೆಸಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐದು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ : ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಕುಕ್ಕಾವು ಎಂಬಲ್ಲಿ ಹೋಟೆಲ್ ನಡೆಸುತ್ತಿದ್ದ 45 ವರ್ಷದ ದೂರುದಾರೆಯ 28 ವರ್ಷದ ಮಗನ ಹೊಟೇಲ್ ಗೆ ಆ.6 ರಂದು...
ಕೊಕ್ಕಡ; ಕಾರು ತಡೆದು ವ್ಯಕ್ತಿಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಐವರು ಪೋಲಿಸ್ ವಶಕ್ಕೆ, ಬಾಲಕಿಯ ಅಪಹರಣ ದೂರು
ಕೊಕ್ಕಡ: ಅಪ್ರಾಪ್ತ ಬಾಲಕಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಕೊಕ್ಕಡ ಕಾಪಿನಬಾಗಿಲು ಎಂಬಲ್ಲಿ ಸಂಭವಿಸಿದೆ. ಈ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ, ಕಾರು ಚಾಲಕನ ವಿರುದ್ಧವೂ ಅಪಹರಣ ಪ್ರಕರಣ ದಾಖಲಾಗಿದೆ. ಕಾರ್ಕಳ ಈದು ನಿವಾಸಿ ಶೈಕ್ ಮುಕ್ತಾರ್ (50) ನೀಡಿದ ದೂರಿನಂತೆ, ಅವರು ಆಗಸ್ಟ್ 11ರ ರಾತ್ರಿ ತಮ್ಮ ಪರಿಚಯಸ್ಥರ ಅಪ್ರಾಪ್ತ ಮಗಳನ್ನು ಕಾರಿನಲ್ಲಿ ಕರೆದುಕೊಂಡು ಹಾಸನ ಕಡೆಗೆ ತೆರಳುತ್ತಿದ್ದರು. ಈ ವೇಳೆ ಕೊಕ್ಕಡ ಕಾಪಿನಬಾಗಿಲಿನಲ್ಲಿ ಕಾರು ತಡೆದು ನಿಲ್ಲಿಸಿದ ಗುಂಪೊಂದು ಶೈಕ್ ಮುಕ್ತಾರ್...
ರಾಜ್ಯದಲ್ಲಿ ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಡ್ಕಾ ನಿಷೇಧಿಸಿ ರಾಜ್ಯ ಸರಕಾರಾ ಆದೇಶ
ಬೆಂಗಳೂರು: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರಕಾರವು ಮಹತ್ವದ ಆದೇಶ ಹೊರಡಿಸಿದ್ದು, ತಂಬಾಕು ಹಾಗೂ ಗುಟ್ಕಾ ಪಾನ್ ಮಸಾಲದಂತಹ ನಿಕೋಟಿನ್ ಹೊಂದಿರುವ ಉತ್ಪನ್ನಗಳಿಗೆ ಒಂದು ವರ್ಷ ಕಾಲ ಪೂರ್ಣ ನಿಷೇಧ ಹೇರಿದೆ.ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಜನರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದಲ್ಲಿ ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಉತ್ಪನ್ನಗಳ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸುವ ಕುರಿತು ಆಗಸ್ಟ್ 10ರಂದು ಸರಕಾರಿ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ಇದು ಜಾರಿಯಲ್ಲಿರುತ್ತದೆ ಎಂದು ಆಹಾರ ಸುರಕ್ಷತೆ ಮತ್ತು...
ಮೀಸಲಾತಿ ಪಾಲಿಸದೆ ನೇಮಕಾತಿ; ಪಡಂಗಡಿ ಕೃಷಿ ಪತ್ತಿನಸಹಕಾರ ಸಂಘದ 4 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ತಡೆ
ಬೆಳ್ತಂಗಡಿ; ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೇರ ನೇಮಕಾತಿಯ ಮೂಲಕವಾಗಿ ನಾಲ್ಕು ಹುದ್ದೆಗಳನ್ನು ತುಂಬಲುಹೊರಡಿಸಿದ್ದ ನೇಮಕಾತಿ ಪ್ರಕ್ರಿಯೆಯನ್ನು ಮೀಸಲಾತಿಯ ಬಗೆಗಿನ ಆದೇಶಗಳು ಪಾಲನೆಯಾಗದ ಹಿನ್ನಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಪುತ್ತೂರು ಸಹಕಾರಸಂಘಗಳ ಸಹಾಯಕ ನಿಬಂಧಕರು ಸೂಚನೆ ನೀಡಿದ್ದಾರೆ.ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಮಾರಾಟ ಗುಮಾಸ್ತ ಹುದ್ದೆ ಹಾಗೂ ಕಿರಿಯ ಗುಮಸ್ತ ಮೂರುಹುದ್ದೆಗಳ ನೇಮಕಾತಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದರು. ಈಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿದ್ದರು. ಬೆಳ್ತಂಗಡಿ ತಹಶೀಲ್ದಾರರ ನೇತೃತ್ವದಲ್ಲಿ ನಡೆದ ಪರಿಶಿಷ್ಟ ಜಾತಿ ಪಂಗಡಗಳ ಮುಖಂಡರುಗಳ ಸಮಾಲೋಚನಾ...















