ಚಾಮರಾಜ ನಗರದಲ್ಲಿ ಅರಣ್ಯ ಇಲಾಖೆಯವರಿಂದಮೂವರು ರೈತರ ಹತ್ಯೆ ಖಂಡನೀಯ ಬಿ.ಎಂ ಭಟ್
ಚಾಮರಾಜ ನಗರದಲ್ಲಿ ಸ್ವತಂತ್ರ ದೊರೆತ ದಿನವೇ ಅಧಿಕಾರಿಗಳ ಅಕ್ರಮ ನಡೆ ಖಂಡನೀಯಭಾರತ ದೇಶ ಇಂದು 80 ನೇ ಸ್ವಾತಂತ್ರೋತ್ಸವ ಆಚರಣೆಯ ಗುಂಗಿನಲ್ಲಿದ್ದರೆ ಚಾಮರಾಜ ನಗರದಲ್ಲಿ ಮೂವರು ಬಡ ರೈತರನ್ನು ಅರಣ್ಯ ಅಧಿಕಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿರುವುದು ಅತ್ಯಂತ ವಿಷಾಧನೀಯ ಸಂಗತಿ ಮತ್ತು ಖಂಡನೀಯ ವಿಚಾರ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಹೇಳಿದ್ದಾರೆ.ಚಾಮರಾಜ ನಗರದ ಮರಿಮಂಗಲ ಗ್ರಾಮದಲ್ಲಿ ಕಾಡಿಗೆ ಹಸು ಹುಡುಕಲು ಹೋದ ಮೂವರು ರೈತರನ್ನು ಶೂಟೌಟ್ ಮಾಡಲಾಗಿದೆ ಎಂಬ ವರದಿಯನ್ನು ಕೇಳಿ ಈ ಅಮಾನವೀಯ ಘಟನೆಯನ್ನು ಖಂಡಿಸಿ ಅವರು...
ಬೆಳ್ತಂಗಡಿ ಸಿಪಿಐಎಂ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
ಬೆಳ್ತಂಗಡಿ; ಯುವಜನರ ಆಶಯವನ್ನು ಮನಗಂಡು ಪ್ರಜಾಪ್ರಭುತ್ವ ದೇಶವನ್ನು ಮುನ್ನಡೆಸುವುದೇ ಸ್ವತಂತ್ರ ಹೋರಾಟಗಾರರುಗಳ ಆಶಯವಾಗಿತ್ತು ಎಂದು ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಅಭಿಷೇಕ್ ಪದ್ಮುಂಜ ಹೇಳಿದರು.ಅವರು ಇಂದು ಸಿಪಿಐಎಂ ಕಚೇರಿ ಇಎಂಎಸ್ ಭವನದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತಾಡುತ್ತಿದ್ದರು. ಭಗತ್‌ಸಿಂಗ್ ನಂತಹ ಕ್ರಾಂತಿಕಾರಿ ಹೋರಾಟಗಾರರು ಯುವಜನರು ಯುವ ಪೀಳಿಗೆಯು ಆಶಯಗಳ ಈಡೇರಿಕೆಗೆ ಸಮಾನತೆ, ಸ್ವಾಭಿಮಾನ, ಶೋ಼ಷ಼ಣಾರಹಿತ ಸಮಾಜಕ್ಕಾಗಿ ಹಾತೊರೆಯುತ್ತಾ ತ್ಯಾಗಮಯ ಹೋರಾಟ ನಡೆಸಿದವರು. ಅವರು ನಮಗೆ ಆದರ್ಶರಾಗಬೇಕು ಎಂದರು. ಎಲ್ಲಾ ಸ್ವಾತಂತ್ರ ಹೋರಾಟಗಾರರ ಆಶಯಗಳನ್ನು ಈಡೇರಿಸಲು ಕಟಿಬದ್ದರಾಗುವ ಪ್ರತಿಜ್ಞೆಗೈಯುವುದೇ ಸ್ವಾತಾಂತ್ರ್ಯ...
ಕಟ್ಟಡ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಶಾಸಕ ಹರೀಶ್ ಪೂಂಜ ಅವರಿಗೆ ಬಿ.ಎಂ.ಎಸ್ ಮನವಿ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳು ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಅವ್ಯವಸ್ಥೆಗಳ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಿ, ಸರ್ಕಾರದ ಗಮನ ಸೆಳೆದು ಶೀಘ್ರ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾಮಗಾರಿ ಮಜ್ದೂರ್ ಸಂಘ (ಬಿ.ಎಂ.ಎಸ್.) ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಮಾನ್ಯ ಬೆಳ್ತಂಗಡಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನ ಸಾವಿರಾರು ಕಟ್ಟಡ ಕಾರ್ಮಿಕರು ಮನೆ, ಕಟ್ಟಡ, ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆ...
ತುಳುನಾಡು ಕೋಳಿ ಸಾಕಾಣಿಕೆ ರೈತರ ಸಂಕಷ್ಟಕ್ಕೆ ಸ್ಪಂದಿಸಿ: ಶಾಸಕ ಹರೀಶ್ ಪೂಂಜಾರವರನ್ನು ಭೇಟಿಯಾದ ‘ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ’
ಬೆಳ್ತಂಗಡಿ; ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಳಿ ಸಾಕಾಣಿಕೆ ವಲಯವು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟ ಹಾಗೂ ರೈತರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ 'ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ (ರಿ.)' ನಿಯೋಗವು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಕರಾವಳಿ ಭಾಗದಲ್ಲಿ ಸಾವಿರಾರು ಕುಟುಂಬಗಳ ಜೀವನೋಪಾಯವಾಗಿರುವ ಕೋಳಿ ಸಾಕಾಣಿಕೆ ಉದ್ಯಮವು ಪ್ರಸ್ತುತ ಉತ್ಪಾದನಾ ವೆಚ್ಚದ ಏರಿಕೆ, ಮಾರುಕಟ್ಟೆ ಅಸ್ಥಿರತೆ, ಪ್ರಕೃತಿ ವಿಕೋಪ ಮತ್ತು ನೊಣದ ಹಾವಳಿಯಿಂದ ತೀವ್ರ ಹಾನಿಗೀಡಾಗಿದೆ. ಈ ವಲಯವನ್ನು ಉಳಿಸಿಕೊಳ್ಳಲು ತುರ್ತು ಕ್ರಮಗಳ ಅಗತ್ಯವಿದೆ ಎಂದು...
ಬೆಳ್ತಂಗಡಿ : 82 ವರ್ಷದ ವೃದ್ಧೆಯ 40 ಗ್ರಾಂ ತೂಕದ ಚಿನ್ನದ ಬಳೆ ಎಳೆದೊಯ್ದ ಕಳ್ಳ
ಬೆಳ್ತಂಗಡಿ : ಮನೆಯಲ್ಲಿ ಒಬ್ಬರೇ ಇದ್ದ 82 ವರ್ಷದ ವೃದ್ಧೆಯ ಕೈಯಲ್ಲಿದ್ದ ಸುಮಾರು 5 ಲಕ್ಷ ಮೌಲ್ಯದ ಚಿನ್ನದ ಬಳೆಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿರುವ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಉದ್ದದ ಗುಡ್ಡೆಯಲ್ಲಿ ನಡೆದಿದೆ. ಆ.14 ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿದೆ. ಉದ್ದದ ಗುಡ್ಡೆ ನಿವಾಸಿ ಅವ್ವಮ್ಮ (82) ಅವರು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಪ್ರವೇಶಿಸಿದ್ದಾನೆ ಎನ್ನಲಾಗಿದೆ. ಆರೋಪಿ, ಅವ್ವಮ್ಮ ಅವರ...
ಬೆಳ್ತಂಗಡಿ; ತಾಲೂಕು ಆಡಳಿತದ ನೇತೃತ್ವದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಬೆಳ್ತಂಗಡಿ; ತಾಲೂಕು ಆಡಳಿತ ಬೆಳ್ತಂಗಡಿ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಸಂಭ್ರಮದಿಂದ ಮಿನಿ ವಿಧಾನ ಸೌಧದ ಆವರಣದಲ್ಲಿ ನಡೆಯಿತು.ಬೆಳ್ತಂಗಡಿ ತಹಶಿಲ್ದಾರರಾದ ಎಸ್.ಎನ್ ನರಗುಂದ ಅವರು ಧ್ವಜರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಇತಿಹಾವನ್ನು ನೆನಪಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಹಿಸಿ ಮಾತನಾಡುತ್ತಾ ವಿಕಸಿತ ಭಾರತಸ ಕನಸು ಈಡೇರಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟಸ ಇತಿಹಾಸವನ್ನು ಅರಿತುಕೊಂಡು ಅವರನ್ನು ಅನುಸರಿಸಿ ದೇಶ ಕಟ್ಟುವ ಕಾರ್ಯವನ್ನು ಮಾಡೋಣ ಕೇವಲದೇಶ ಪ್ರೇಮದ ಘೋಷಣೆ, ಸಾಮಾಜಿಕ ಜಾಲತಾಣದ ಪೋಸ್ಟ್ ಮಾತ್ರವಲ್ಲ ಪ್ರತಿಯೊಬ್ಬರೂ...
ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
ಬೆಳ್ತಂಗಡಿ; ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಡಗರದಿಂದ ಆಚರಿಸಲಾಯಿತು. ಭಾರತೀಯ ಸೇನೆಯ ಮಾಜಿ ಸೈನಿಕರು,ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿರುವ ಶ್ರೀಯುತ ಜಯಕುಮಾರ್ ಅವರು ಧ್ವಜಾರೋಹಣವನ್ನು ನೆರವೇರಿಸಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.ಜೊತೆಗೆ ಸ್ವಾತಂತ್ರ್ಯ ಹೋರಾಟ ವೀರರ ತ್ಯಾಗ ಹಾಗೂ ಅವರಿಂದ ಅಳವಡಿಸಿಕೊಳ್ಳಬೇಕಾದ ಗುಣಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಇನ್ನೊಬ್ಬ ಮುಖ್ಯ ಅತಿಥಿ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಯಾಗಿ ನಿವೃತ್ತಿ...
ಬೆಂಗಳೂರಿನಲ್ಲಿ ಪತ್ನಿಯ ಕೊಲೆ ಮಾಡಿ ಆತ್ಮಹತ್ಯೆ ಗೆ ಶರಣಾದ ಬೆಳ್ತಂಗಡಿಯ ಯುವಕ
ಬೆಳ್ತಂಗಡಿ: ಬೆಂಗಳೂರು ನಗರದ ರಾಜೇಶ್ವರಿ ನಗರದಲ್ಲಿ ಬೆಳ್ತಂಗಡಿಯ ಯುವಕನೋರ್ವ ಹೆಂಡತಿಯನ್ನು ಕತ್ತು ಹಿಸುಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆ.13 ರಂದು ಮಧ್ಯರಾತ್ರಿ ನಡೆದಿದಿದ್ದು.ಮೃತರು ಪದ್ಮಾವತಿ (29) ಹಾಗೂ ಸುಮಂತ್ ಜೈನ್ (32) ಎಂಬವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಗೆ ಗ್ರಾಮದ ಎಳನೀರು ನಿವಾಸಿಯಾಗಿರುವ ಸುಮಂತ್ ಜೈನ್(32) ಸಿವಿಲ್ ಎಂಜಿನಿಯರ್ ಆಗಿದ್ದರು. ಹುಬ್ಬಳಿ ಮೂಲದ ಪದ್ಮಾವತಿ(29) ವೈಟ್ ಫೀಲ್ಡ್ ಸಮೀಪದ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಆ.13 ರಂದು ಮಧ್ಯರಾತ್ರಿ ಕೌಟುಂಬಿಕ ಕಲಹವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಸುಮಂತ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ....
ಕಸ್ತೂರಿ ರಂಗನ್ ವರದಿ ಅನುಷ್ಠನವನ್ನು ಕೇಂದ್ರ ಸರಕಾರ ಕೈಬಿಡಲಿ ರಕ್ಷಿತ್‌ಶಿವರಾಂ ಒತ್ತಾಯ; ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಿ
ಬೆಳ್ತಂಗಡಿ; ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ರಾಜ್ಯದ ಮಲೆನಾಡಿನ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಕೇಂದ್ರ ಸರಕಾರ ವರದಿ ಜಾರಿಗೆ ತರುವ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು, ರಾಜ್ಯದ ಸಂಸದರು ಕೇಂದ್ರರಕಾರದ ಮೇಲೆ ಒತ್ತಡ ಹೇರಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ರಂಗನ್ ವರದಿ ವಿರೋಧೀ ಹೋರಾಟ ಸಮಿತಿಯ ಸಂಚಾಲಕ ರಕ್ಷಿತ್ ಶಿವರಾಂ ಒತ್ತಾಯಿಸಿದ್ದಾರೆ.ಬೆಳ್ತಂಗಡಿ ಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಕಸ್ತೂರಿರಂಗನ್ ವರದಿ ವಿರುದ್ದ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು ತಾಲೂಕಿನಲ್ಲಿ ಇದರಿಂದ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ತೆರಳಿ ಜನಜಾಗೃತಿ...
ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ “ಆಟಿದ ಕಲ”
ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜು, ಹಳೇಕೋಟೆಯಲ್ಲಿ 'ಆಟಿದ ಕಲ' ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಬೆಳಗ್ಗೆ ಸಾಂಪ್ರದಾಯಿಕ ಆಟಿ ತಿಂಗಳ ತಿಂಡಿ-ತಿನಿಸುಗಳ ಸ್ಪರ್ಧೆಗಳ ಉದ್ಘಾಟನೆಯನ್ನು ವಾಣಿ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನೆರವೇರಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಸುಮಾರು 30 ತಂಡಗಳಲ್ಲಿ ಪಾಲ್ಗೊಂಡು ವಿವಿಧ ಬಗೆಯ ಸಾಂಪ್ರದಾಯಿಕ ಆಟಿ ತಿಂಡಿಗಳನ್ನು ತಯಾರಿಸಿ ಪ್ರದರ್ಶಿಸಿದರು. ವಿದ್ಯಾರ್ಥಿಗಳಿಂದ ತಯಾರಿಸಲಾದ ವೈವಿಧ್ಯಮಯ ಸಾಂಪ್ರದಾಯಿಕ ತಿಂಡಿಗಳು ಗಮನ ಸೆಳೆದವು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಕುಶಾಲಪ್ಪ ಗೌಡ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ...















