Home ಸ್ಥಳೀಯ ಸಮಾಚಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ,ಬಹುಮಾನ ವಿತರಣೆ...

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ,ಬಹುಮಾನ ವಿತರಣೆ ಕಾರ್ಯಕ್ರಮ

0
3

ಪದ್ಮುಂಜ: ಸೆ 12 ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ, ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ವಿಜೃಂಭಣೆಯಿಂದ ನೆರವೇರಿತು.ಬೆಳಗ್ಗೆ ಉಮಾಮಹೇಶ್ವರ ಮಹಿಳಾ ಭಜನಾ ತಂಡ, ಹಾಗೂ ಭಜನಾ ಮಂಡಳಿ ಮಲೆಂಗಲ್ಲು ಇವರಿಂದ ಭಜನೆಯೊಂದಿಗೆ ಆರಂಭಗೊಂಡು,ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ವಿನೋದ ಆರ್ ಶೆಟ್ಟಿರವರು ನೆರವೇರಿಸಿದರು. ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ, ಅಂಗನವಾಡಿ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ನಡ.ವಿಶೇಷವಾಗಿ ಪುಟ್ಟ ಮಕ್ಕಳಿಗೆ ಮುದ್ದು ಕೃಷ್ಣನ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ಭೋಜ ಶೆಟ್ಟಿ ಪಣೆಕ್ಕರ, ದೇಶಿಯ ತಳಿ ಹೈನುಗಾರಿಕೆ ಮತ್ತು ಪ್ರಗತಿ ಪರ ಕೃಷಿಕರು,
ಸುನಿಲ್ ಭಂಡಾರಿ 32 ವರ್ಷಗಳಿಂದ ಯಕ್ಷಗಾನದಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದು, ಪ್ರಸ್ತುತ ಕಟೀಲು ಮೇಳದಲ್ಲಿ ಪ್ರಸಿದ್ಧ ಕಲಾವಿದ, ಸುಜಾತಾ ಶೆಟ್ಟಿ ವಿಕಲಚೇತನ ಮಕ್ಕಳ ವಿಶೇಷ ಶಿಕ್ಷಕಿಯಾಗಿ 16 ವರ್ಷದಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು ಪ್ರಸ್ತುತ ಕಣಿಯೂರು ಪದ್ಮುಂಜ ಎಂಡೋ ಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರದಲ್ಲಿ ಸೇವೆ.
ಇವರುಗಳನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಪಿಲಿಗೂಡು ಇಲ್ಲಿಯ ಧರ್ಮದರ್ಶಿಗಳಾದ ಪದ್ಮನಾಭ ಶಿಲ್ಪಿಗಳು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಉದಯ‌ ಕುಮಾರ್ ಮೇಲಾಂಟ, ಜಿತೇಶ್ ಜೈನ್ ,ಭಾರತಿ ಕೆ ರಾವ್, ವಿಠಲ ಶೆಟ್ಟಿ ಕೊಲ್ಲೊಟ್ಟು , ರಂಜಿತ್ ಮಣಿಯಾಣಿ, ರವಿ ಕುಮಾರ್, ತನಿಯಪ್ಪ ಗೌಡ, ಸಂದೇಶ್ ಶೆಟ್ಟಿ, ಚಂದ್ರ ಕಾಂತ ರಾವ್ ,ಸಮಿತಿ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಮಲೆಂಗಲ್ಲು ಕಾರ್ಯದರ್ಶಿ ಶರತ್ ಮೂರ್ಜಾಲು, ಪ್ರಸ್ತುತ್ ಜೈನ್ ಅಡೆಂಜ, ಉಪಾಧ್ಯಕ್ಷರಾದ ಭರತ್ ಶೆಟ್ಟಿ ಅಡೆಂಜ, ಪ್ರಶಾಂತ್ ಗೌಡ ಉರುಂಬುತ್ತಿಮಾರು ಕೋಶಾಧಿಕಾರಿಯಾದ ಕೃಷ್ಣ ನಾಯ್ಕ ವಳಬಾವು, ಕ್ರೀಡಾ ಸಂಚಾಲಕರಾದ ಸುನಿಲ್ ಮದಕ, ಯಶವಂತ ಬೊಳ್ಳರಮಜಲು, ಉಪಸ್ಥಿತರಿದ್ದರು.ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಕ್ಷಿತ್ ಪಣೆಕ್ಕರ ಅಧ್ಯಕ್ಷರು ಪ್ರಾಥಮಿಕ ಸಹಕಾರಿ ಸಂಘ ಪದ್ಮುಂಜ, ಸೀತಾರಾಮ ಆಳ್ವ ಸೇವಾ ಪ್ರತಿನಿಧಿ, ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here