ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ.

0

ಬೆಳ್ತಂಗಡಿ.ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ವಾರು ಉಸ್ತುವಾರಿಗಳನ್ನು ನೇಮಿಸಲಾಗಿರುವುದಾಗಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ. ನಾರಾವಿ ಜಿಲ್ಲಾ ಪಂಚಾಯತ್ಧರಣೇಂದ್ರ ಕುಮಾರ್ಅಳದಂಗಡಿ ಜಿಲ್ಲಾ ಪಂಚಾಯತ್ಶೇಖರ್ ಕುಕ್ಕೆಡಿಲಾಯಿಲ ಜಿಲ್ಲಾ ಪಂಚಾಯತ್ನಾರಾಯಣ ಗೌಡ ದೇವಸ್ಯಉಜಿರೆ ಜಿಲ್ಲಾ ಪಂಚಾಯತ್ನಮಿತಾ ಪೂಜಾರಿಧರ್ಮಸ್ಥಳ ಜಿಲ್ಲಾ ಪಂಚಾಯತ್ಸೆಬಾಸ್ಟಿಯನ್ ಪಿ.ಟಿಕಣಿಯೂರು ಜಿಲ್ಲಾ ಪಂಚಾಯತ್ಕೆ.ಕೆ ಶಾಹುಲ್ ಹಮೀದ್ಕುವೆಟ್ಟು ಜಿಲ್ಲಾ ಪಂಚಾಯತ್ಸುಭಾಶ್ ಚಂದ್ರ ರೈರವರನ್ನು ನೇಮಕ ಮಾಡಲಾಗಿದೆ.

ಧರ್ಮಸ್ಥಳ: ಉದ್ಯಮಿ ಎ.ಜೆ ಆಂಟನಿ ನಿಧನ

0

ಬೆಳ್ತಂಗಡಿ; ಧರ್ಮಸ್ಥಳ ನೇರ್ತನೆ ನಿವಾಸಿ ಉದ್ಯಮಿ ಆಂಟನಿ ಎ.ಜೆ ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಗುರುವಾರ ನಿಧನರಾಗಿದ್ದಾರೆ.ಧರ್ಮಸ್ಥಳ ಗ್ರಾಮಪಂಚಾಯತು ಮಾಜಿ ಸದಸ್ಯರಾದ ಎ ಜೆ ಆಂಟನಿ ಅವರು ಧರ್ಮಸ್ಥಳ ಕಲ್ಲೇರಿಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದರು. ಸಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವಿಧಾನ ಪರಿಷತ್ ಚುನಾವಣೆ; ಎಸ್. ರಾಜು ಪೂಜಾರಿ ಅವರಿಗೆ ಕಾಂಗ್ರೆಸ್ ಟಿಕೇಟ್, ಇಂದು ನಾಮಪತ್ರ ಸಲ್ಲಿಕೆ

0

ಬೆಳ್ತಂಗಡಿ; ಉಡುಪಿ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷ ಹಾಗೂ ಸಹಕಾರಿ ಧುರೀಣ ಬೈಂದೂರಿನ ಎಸ್‌.ರಾಜು ಪೂಜಾರಿ ಅವರು ರಾಜ್ಯ ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಪ್ರಾದಿಕಾರ ಕ್ಷೇತ್ರಕ್ಕೆ ಅ.21ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.58 ವರ್ಷ ಪ್ರಾಯದ ಬಿ.ಕಾಂ ಪದವೀಧರ ರಾಜು ಪೂಜಾರಿ ಅವರು 1987ರಲ್ಲಿ ಎನ್‌ಎಸ್‌ಯುಐನ ಪದಾಧಿಕಾರಿ ಯಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದ್ದು, ಕಾಂಗ್ರೆಸ್‌ನ ವಿವಿಧ ಸಂಘಟನೆಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಬಳಿಕ ಸದ್ಯ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.ಬೈಂದೂರು ತಾಲೂಕು ಮರವಂತೆಯ...

ಮದ್ದಡ್ಕದಲ್ಲಿ ನಾಗರಿಕ ಅಭಿನಂದನಾ ಸಮಿತಿಯಿಂದ ಯೋಧ ಮಂಜುನಾಥ ಹಾಗೂ ಶಿಕ್ಷಕ ವಿ.ಕೆ ವಿಟ್ಲ ಅವರಿಗೆ ನಾಗರಿಕ ಸನ್ಮಾನ

0

ಬೆಳ್ತಂಗಡಿ: ಕಾರ್ಗಿಲ್ ಯುದ್ಧದ ವಿಜಯದ ಬಳಿಕ ನಮ್ಮ ದೇಶವನ್ನು ಕಾಯುವ ವೀರ ಯೋಧರನ್ನು ಗುರುತಿಸಿ ಗೌರವಿಸುವ ನಾಗರಿಕ ಪ್ರಜ್ಞೆ ಹೆಚ್ಚಾಗಿದೆ ಎಂದು ಅಂಕಣಕಾರ ಆದರ್ಶ ಗೋಖಲೆ ಅಭಿಪ್ರಾಯಪಟ್ಟರುಅವರು ಅಕ್ಟೋಬರ್ 2ರಂದು ಮದ್ದಡ್ಕದ ವೀರಯೋಧ ಏಕನಾಥ ಶೆಟ್ಟಿ ಸಭಾ ವೇದಿಕೆಯಲ್ಲಿ ನಾಗರಿಕ ಅಭಿನಂದನಾ ಸಮಿತಿಯಿಂದ ಕುವೆಟ್ಟು ಹಾಗೂ ಓಡಿಲ್ನಾಳ ಗ್ರಾಮದ 35 ಸಂಘ ಸಂಸ್ಥೆಗಳು ಒಟ್ಟು ಸೇರಿ ಭಾರತೀಯ ಭೂಸೇನೆಯಲ್ಲಿ ಸುದೀರ್ಘ 24 ವರ್ಷಗಳ ಕಾಲ ಭಾರತ ಮಾತೆಯ ಸೇವೆಗೈದು ವೃತ್ತಿಯಿಂದ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದ ಯೋಧ ಮಂಜುನಾಥರವರಿಗೆ ಹಾಗೂ ನಮ್ಮೂರ ಸರಕಾರಿ...

ಪಡ್ಡಂದಡ್ಕದಲ್ಲಿ ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ.

0

ವೇಣೂರು; ಪದವಿ ಪೂರ್ವ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ,ರಾಷ್ಟೀಯ ಸೇವಾ ಯೋಜನೆ,ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜು ಮೂಡಬಿದ್ರಿ ರಾಷ್ಟೀಯ ಸೇವಾ ಯೋಜನೆ ಘಟದ 7 ದಿನಗಳ ವಾರ್ಷಿಕ ವಿಶೇಷ ಶಿಬಿರ ಪಡ್ಡಂದಡ್ಕ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.ಪ್ರಗತಿಪರ ಕೃಷಿಕ ಬಾಲ್ಯ ಶಂಕರ್ ಭಟ್ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತಾಡಿ ಈ ಶಿಬಿರವು ವಿದ್ಯಾರ್ಥಿಗಳಿಗೆ ಜೀವನಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತೆ ಮತ್ತು ಜನಸಾಮಾನ್ಯರೊಂದಿಗೆ ಬೆರೆಯುವ ಅವರ ಸಮಸ್ಯೆಯನ್ನು ಅರಿಯುವ ಅವಕಾಶ ಈ ಶಿಬಿರ ನೀಡುತ್ತೆ ಎಂದರುಅತಿಥಿಯಾಗಿ ಆಗಮಿಸಿದ ಉದ್ಯಮಿ...

ಕೊಕ್ಕಡ ಕಾರಿನಡಿಗೆ ಸಿಲುಕಿ ನಾಲ್ಕನೇ ತರಗತಿ ವಿದ್ಯಾರ್ಥಿ ಮೃತ್ಯು

0

ಬೆಳ್ತಂಗಡಿ. ಕಾರಿನಡಿಗೆ ಸಿಲುಕಿ ನಾಲ್ಕನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಕೊಕ್ಕಡದ ಮಲ್ಲಿಗೆ ಮಜಲ್ ಎಂಬಲ್ಲಿ ಇಂದು ಸಂಜೆ ನಡೆದಿದೆ. ಕೊಕ್ಕಡ ಸನೀಪದ ಮಲ್ಲಿಗೆ ಮಜಲ್ ನಿವಾಸಿ ಅಬ್ದುಲ್ ಹಮೀದ್ ಎಂಬವರ ಮಗ ನಾಲ್ಕನೇ ತರಗತಿಯ ನವಾಫ್ ಇಸ್ಮಾಯಿಲ್ ಸಾವನ್ನಪ್ಪಿದ ಬಾಲಕನಾಗಿದ್ದಾನೆ.ಮಾಹಿತಿ ಪ್ರಕಾರ ಕಾರು ಹಿಂದಕ್ಕೆ ತೆಗೆಯುವ ವೇಳೆ ಈ ಅವಘಡ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ವಿಧಾನ ಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್‌ ಕುಮಾರ್‌ ಬೊಟ್ಯಾಡಿ ಆಯ್ಕೆ

0

ಬೆಳ್ತಂಗಡಿ; ಕುತೂಹಲ ಕೆರಳಿಸಿದ್ದ ದ.ಕ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದ ಅಭ್ಯರ್ಥಿಯನ್ನು ಬಿಜೆಪಿ ಕೊನೆಗೂ ಪ್ರಕಟಿಸಿದೆ.ದಕ್ಷಿಣ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಕಿಶೋರ್‌ ಕುಮಾರ್‌ ಬೊಟ್ಯಾಡಿ ಪುತ್ತೂರು ಅವರನ್ನು ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪಚುನಾವಣೆಯ ಅಭ್ಯರ್ಥಿಯಾಗಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಘೋಷಿಸಿದೆ.

ಅಂಗನವಾಡಿ ನೌಕರರ ಸಂಬಳ ಬಾಕಿ ತಕ್ಷಣ ಪಾವತಿಸಲು ಸಿಐಟಿಯು ಆಗ್ರಹ

0

ಬೆಳ್ತಂಗಡಿ; ಅಂಗನವಾಡಿ ನೌಕರರಿಗೆ ಕಳೆದ ಜುಲೈ ತಿಂಗಳಿಂದ ಸಂಬಳ ನೀಡದೇ ಸತಾಯಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆ ಖಂಡನೀಯ, ಮಹಿಳೆಯರನ್ನು ಜೀತದಾಳುಗಳಂತೆ ದುಡಿಸುವ ಪ್ರಯತ್ನ ಇದಾಗಿದೆ. ಎರಡೂ ಸರಕಾರಗಳು ಜಂಟೀ ಜವಬ್ದಾರಿಯಿಂದ ನಡೆಸುವ ಈ ಐಸಿಡಿಎಸ್ ಯೋಜನೆಯ ಅವ್ಯವಸ್ಥೆ ಬಗ್ಗೆ ಸರಕಾರಗಳು ಉತ್ತರಿಸಬೇಕಿದೆ ಎಂದು ಸಿಐಟಿಯು ಮುಖಂಡ ಬಿ.ಎಂ.ಭಟ್ ಹೇಳಿದರು.ಅಂಗನವಾಡಿ ನೌಕರರ 3 ತಿಂಗಳ ಸಂಬಳ ಬಾಕಿಯನ್ನು ತಕ್ಷಣ ಪಾವತಿಗೆ ಆಗ್ರಹಿಸಿ, ಸರಕಾರ ತನ್ನ ಆದೇಶದಂತೆ ನಿವೃತ್ತರಿಗೆ ನೀಡಬೇಕಾದ ಗ್ರಾಚ್ಯುವಿಟಿಯನ್ನು ತಕ್ಷಣ ಪಾವತಿಸಲು ಆಗ್ರಹಿಸಿ, ಕೆಲವು ಸ್ವತಂತ್ರ ಸಂಘಗಳು ಈ ಗ್ರಾಚ್ಯುವಿಟಿ...

ಅಂಗನವಾಡಿ ನೌಕರರ ಸಂಬಳ ಬಾಕಿ ತಕ್ಷಣ ಪಾವತಿಸಲು ಸಿಐಟಿಯು ಆಗ್ರಹ

0

ಬೆಳ್ತಂಗಡಿ; ಅಂಗನವಾಡಿ ನೌಕರರಿಗೆ ಕಳೆದ ಜುಲೈ ತಿಂಗಳಿಂದ ಸಂಬಳ ನೀಡದೇ ಸತಾಯಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆ ಖಂಡನೀಯ, ಮಹಿಳೆಯರನ್ನು ಜೀತದಾಳುಗಳಂತೆ ದುಡಿಸುವ ಪ್ರಯತ್ನ ಇದಾಗಿದೆ. ಎರಡೂ ಸರಕಾರಗಳು ಜಂಟೀ ಜವಬ್ದಾರಿಯಿಂದ ನಡೆಸುವ ಈ ಐಸಿಡಿಎಸ್ ಯೋಜನೆಯ ಅವ್ಯವಸ್ಥೆ ಬಗ್ಗೆ ಸರಕಾರಗಳು ಉತ್ತರಿಸಬೇಕಿದೆ ಎಂದು ಸಿಐಟಿಯು ಮುಖಂಡ ಬಿ.ಎಂ.ಭಟ್ ಹೇಳಿದರು.ಅಂಗನವಾಡಿ ನೌಕರರ 3 ತಿಂಗಳ ಸಂಬಳ ಬಾಕಿಯನ್ನು ತಕ್ಷಣ ಪಾವತಿಗೆ ಆಗ್ರಹಿಸಿ, ಸರಕಾರ ತನ್ನ ಆದೇಶದಂತೆ ನಿವೃತ್ತರಿಗೆ ನೀಡಬೇಕಾದ ಗ್ರಾಚ್ಯುವಿಟಿಯನ್ನು ತಕ್ಷಣ ಪಾವತಿಸಲು ಆಗ್ರಹಿಸಿ, ಕೆಲವು ಸ್ವತಂತ್ರ ಸಂಘಗಳು ಈ ಗ್ರಾಚ್ಯುವಿಟಿ...

ರಾಷ್ಟ್ರೀಯ ಕ್ರೀಡಾಕೂಟಕ್ಕೆ ತೆರಳುವ ಕ್ರೀಡಾಪಟುವಿಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಅಭಿನಂದನೆ

0

ಬೆಳ್ತಂಗಡಿ; ರಾಷ್ಟ್ರೀಯ ಮಟ್ಟದ ಭಾರ ಎತ್ತುವಿಕೆ (81 K G ವಿಭಾಗದ) ಸ್ಪರ್ಧೆಯಲ್ಲಿ ಭಾಗವಹಿಸಲು ಹಿಮಾಚಲ ಪ್ರದೇಶಕ್ಕೆ ತೆರಳುವ ಉಜಿರೆ ಎಸ್ ಡಿ ಎಮ್ ಪ್ರಥಮ ವರ್ಷದ ವಿದ್ಯಾರ್ಥಿನಿ ಬಂದಾರು ಗ್ರಾಮದ ಕೆ ತೇಜಸ್ವಿನಿ ಪೂಜಾರಿ ಯವರಿಗೆ ಬೆಳ್ತಂಗಡಿ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ವತಿಯಿಂದ ಇಂದು ಆರ್ಥಿಕ ನೆರವನ್ನು ನೀಡಿ ಶುಭ ಹಾರೈಸಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜಯವೀಕ್ರಮ್ ಕಲ್ಲಾಪು,ಉಪಾಧ್ಯಕ್ಷರಾದ ಸುಂದರ ಪೂಜಾರಿ ,ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್,ಕೋಶಾದಿಕಾರಿ ಪ್ರಶಾಂತ್ ಮಚ್ಚಿನ ಜತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು,ವಿದ್ಯಾರ್ಥಿನಿ ತಂದೆ ಕೆ...