ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಭಕ್ತಿಪೂರ್ವಕ ಶುಭ ಶುಕ್ರವಾರ ಆಚರಣೆ

0

ಬೆಳ್ತಂಗಡಿ; ಶುಭ ಶುಕ್ರವಾರವನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಚರಿಸಲಾಯಿತು.ಬೆಳ್ತಂಗಡಿ ಧರ್ಮಪ್ರಾಂತ್ಯದ 55 ಚರ್ಚ್ ಗಳಲ್ಲಿ ಶುಭ ಶುಕ್ರವಾರದ ವಿಧಿವಿದಾನಗೆಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಗಳಾದರು. ಬೆಳ್ತಂಗಡಿ ಸಂತ ಲಾರೆನ್ಸ್‌ ಅವರ ಪ್ರಧಾನ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ದಮಾದ್ಯಕ್ಷರಾದ ಅ. ವ. ಬಿಷಪ್ಪ್ ಲಾರೆನ್ಸ್ ಮುಕ್ಕುಯಿಯವರು ಶುಭ ಶುಕ್ರವಾರ ವಿಧಿವಿದಾನಗೆಳನ್ನು ನೆರವೆರಿಸಿ ಪ್ರವಚನ ನೀಡಿದರು. ನಂತರ ಯೆಸುಸ್ವಾಮಿಯು ಅನುಭವಿಸಿದ ಯಾತನೆಯನ್ನು ಸ್ಮರಿಸುವ ಶಿಲುಬೆಯ ಹಾದಿ ನಡೆಯಿತು. ಧರ್ಮಭಗಿನಿಯರು, ಭಕ್ತಾದಿಗಳು ಭಕ್ತಿಪೂರ್ವಕವಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಫಾ. ತೋಮಸ್ ಕಣ್ಣಾಂಙಳ್,...

ನಾವೂರಿನ ಯುವಕ ಮೈಸೂರಿನಲ್ಲಿ ನದಿ ನೀರಿಗೆ ಬಿದ್ದು ಸಾವು

0

ಬೆಳ್ತಂಗಡಿ;  ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರಂತದಲ್ಲಿ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಕೋಳಿ ಸಾಕಾಣಿಕೆ ವಾಹನದಲ್ಲಿ ದುಡಿಯುತ್ತಿದ್ದ ನಾವೂರು ಗ್ರಾಮದ ಕುದುರು ನಿವಾಸಿ ಮನ್ಸೂರ್ (19) ಎಂಬಾತ ತನ್ನ ಇಬ್ಬರು ಸಹೋದ್ಯೋಗಿಗಳ ಜೊತೆಗೆ ನಿನ್ನೆ ರಾತ್ರಿ ಟಿ.ನರಸೀಪುರ ತಾಲೂಕಿನ ಬನ್ನೂರು ನಲ್ಲಿ ತಂಗಿದ್ದರು. ಇಂದು ಬೆಳಗ್ಗೆ ಸ್ಥಳೀಯ ಕಾವೇರಿ ನದಿಯಲ್ಲಿ ವಾಹನ ತೊಳೆದು , ಸ್ನಾನ ಮಾಡಲು ತೆರಳಿದ ಸಂದರ್ಭದಲ್ಲಿ ಮನ್ಸೂರ್ ಎಂಬಾತ ಕಾಲು ಜಾರಿ ಬಾರಿ ಗುಂಡಿಗೆ ಬಿದ್ದು...

ಪುರುಷ ಕಟ್ಟುನ ಆಚರಣೆಯಲ್ಲಿ ಮುಸ್ಲಿಮರ ಅವಹೇಳೆನ 30ಮಂದಿ ಆರೋಪಿಗಳ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

0

ಬೆಳ್ತಂಗಡಿ; ವೇಣೂರು ಪೊಲೀಸ್ ಠಾಣಾವ್ಯಾಪ್ತಿಯ ಪೆರಾಡಿ ಗ್ರಾಮದ ಪೆರಾಡಿ ಪರಿಸರದಲ್ಲಿ ಪುರುಷ ಕಟ್ಟುವ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಂ ವೇಷ ಧರಿಸಿ ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ (ಸ.ಅ) ಮತ್ತು ಪವಿತ್ರವಾದ ಅಝಾನ್ ಅನ್ನು ಅವಹೇಳನ ಮಾಡಿದ ಪ್ರಕರಣಕ್ಕೆ‌ ಸಂಬಂಧಿಸಿದಂತೆ 17ಮಂದಿ ಆರೋಪಿಗಳ ವಿರುದ್ದ ಹಾಗೂ ಇದಕ್ಕೆ ಸಹಕರಿಸಿದ ಇತರ 20ರಿಂದ 30 ಮಂದಿಯ ವಿರುದ್ದ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ಮನೆ ನಿವಾಸಿ ಮಹಮ್ಮದ್ ರಫೀಕ್ ನೀಡಿರುವ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಸಾವ್ಯ ನಿವಾಸಿಗಳಾದ...

ಬೆಳ್ತಂಗಡಿ: ಸಂತ ಲಾರೆನ್ಸ್  ಪ್ರಧಾನ ದೇವಾಲಯದಲ್ಲಿ ಪವಿತ್ರ ಗುರುವಾರ(ಪಾಸ್ಖ ಗುರುವಾರ) ಆಚರಣೆ

0

ಬೆಳ್ತಂಗಡಿ; ಇಲ್ಲಿನ ಸೈಂಟ್ ಲಾರೆನ್ಸ್ ಪ್ರಧಾನ ದೆವಾಲಯದಲ್ಲಿಪವಿತ್ರ ಗುರುವಾರ(ಪಾಸ್ಖ ಗುರುವಾರ)ವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.ಬೆಳ್ತಂಗಡಿ ಧರ್ಮಪ್ರಾಂತ್ಯದ 55 ಚರ್ಚ್ ಗಳಲ್ಲಿ ಬೆಳಿಗ್ಗೆ ಬಲಿಪೂಜೆಯೊ0ದಿಗೆ ಪವಿತ್ರ ಗುರುವಾರ (ಪಾಸ್ಖ ಗುರುವಾರ) ವಿಧಿವಿದಾನಗೆಳು ನಡೆಯಿತು.ಬೆಳ್ತಂಗಡಿ ಸಂತ ಲಾರೆನ್ಸ್ ಅವರ ಪ್ರಧಾನ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ ಬಿಷಪ್ಪ್ ಲಾರೆನ್ಸ್ ಮುಕ್ಕುಯಿಯವರು (ಪಾಸ್ಖ ಗುರುವಾರ) ವಿಧಿವಿದಾನಗೆಳನ್ನು ನೆರವೆರಿಸಿ ದಿವ್ಯಬಲಿಪೂಜೆಯನ್ನು ಅರ್ಪಿಸಿದರು. ಯೇಸು ಸ್ವಾಮಿಯು 12 ಮಂದಿ ಶಿಷ್ಯರ ಪಾದಗಳನ್ನು ತೊಳೆದ ಕಾರ್ಯದ ಸಂಕೇತವಾಗಿ ಧರ್ಮಾಧ್ಯಕ್ಷರು 12 ಜನರ ಪಾದಗಳನ್ನು ತೊಳೆಯುವ ಕಾರ್ಯ ಮಾಡಿದರು....

ಸಮಾಜ ಸೇವಕರ ಸೋಗಿನಲ್ಲಿ ವ್ಯಕ್ತಿಯನ್ನು  ಹನಿ ಟ್ರಾಪ್ ಗೆ ಸಿಲುಕಿಸುವ ಯತ್ನ; ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು

0

ಬೆಳ್ತಂಗಡಿ : ಬಡ ಹೆಣ್ಮಗಳಿಗೆ ಮದುವೆ ಮಾಡುವ ಉದ್ದೇಶದಲ್ಲಿ ಕ್ರೌಡ್ ಫಂಡಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಸಮಾಜ ಸೇವೆ ಸೋಗಿನ ಆಸಿಫ್ ಆಪತ್ಥಾಂಧವ ಮತ್ತು ಇನ್ನಿಬ್ಬರು ಸೇರಿಕೊಂಡು ಹನಿಟ್ರ್ಯಾಪ್ ಮಾಡಿದ್ದು, ಇದರಿಂದ ನೊಂದ ವ್ಯಕ್ತಿ ಪೂಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ನಿವಾಸಿ ಅಕ್ಟ‌ರ್ ಸಿದ್ಧಿಕ್ ಸಂತ್ರಸ್ತ ವ್ಯಕ್ತಿಯಾಗಿದ್ದು, ಆಸಿಫ್ ಆಪ‌ತ್ಬಾಂಧವ ಹಾಗು ರವೂಫ್ ಬೆಂಗರೆ ಮತ್ತು ಮಿನಾಜ್ ಎಂಬ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ. ಮಂಗಳೂರಿನ ಬಡ ಯುವತಿಯೊಬ್ಬಳ ಮದುವೆ ಉದ್ದೇಶಕ್ಕಾಗಿ ಅಲ್ ಮದೀನಾ ಟ್ರಸ್ಟ್ ಹೆಸರಿನಲ್ಲಿ ಅಕ್ಟ‌ರ್...

ವೇಣೂರು ಪೋಲಿಸರ ನಿರ್ಲಕ್ಷ್ಯತನದಿಂದ ಪೆರಾಡಿಯಲ್ಲಿ ಇಸ್ಲಾಂ ಧಾರ್ಮಿಕ ಭಾವನೆಗೆ ಪುನಃ ಧಕ್ಕೆ: ಎಸ್‌ಡಿಪಿಐ ಆರೋಪ; ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ

0

ಬೆಳ್ತಂಗಡಿ,ಎಪ್ರಿಲ್ 17: ತಾಲ್ಲೂಕಿನ ವೇಣೂರು ಸಮೀಪದ ಪೆರಾಡಿ ಎಂಬಲ್ಲಿ ಕುಡುಕರ ಗುಂಪೊಂದು ಪುರುಷಕಟ್ಟುನ ಎಂಬ ಕಾರ್ಯಕ್ರಮದ ಹೆಸರಿನಲ್ಲಿ ಇಸ್ಲಾಂ ಧರ್ಮದ ಆಚಾರ ವಿಚಾರಗಳನ್ನು ಹಾಗೂ ಪ್ರವಾದಿ(ಸ.ಅ) ರವರನ್ನು ವ್ಯಂಗ್ಯವಾಗಿ ಹಾಗೂ ಆಶ್ಲೀಲವಾಗಿ ಚಿತ್ರೀಕರಿಸಿ ಕೋಮುದ್ವೇಷ ಹಬ್ಬಲು ಪ್ರಯತ್ನ ಪಡುತ್ತಿರುವ ಕೃತ್ಯವನ್ನು ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿಯರವರು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕೆಲವು ದಿನಗಳ ಹಿಂದೆ ಕೂಡ ಇಂತಹದೇ ಕೃತ್ಯ ನಡೆದ ಸಂದರ್ಭದಲ್ಲಿ ಪಕ್ಷದ ವತಿಯಿಂದ ವೇಣೂರು ಠಾಣೆಗೆ ದೂರು ನೀಡಿದ್ದರು ಆರೋಪಿಗಳ...

ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಬೆಂಬಲ; ಅಬ್ದುಲ್ ಕರೀಂ ಗೇರುಕಟ್ಟೆ

0

ಬೆಳ್ತಂಗಡಿ;  ದಿನಾಂಕ:18:04:2025 ರಂದು ಮಂಗಳೂರಿನ ಅಡ್ಯಾರ್ ಶಾ ಗಾರ್ಡನ್ ನಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ದ.ಕ.ಜಿಲ್ಲೆಯ ಖಾಝಿಗಳ ಸಂಯುಕ್ತ ನೇತೃತ್ವದಲ್ಲಿ ನಡೆಯುವ ಕೇಂದ್ರ ಸರಕಾರದ ವಿವಾದಿತ ವಕ್ಫ್ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟನೆಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವುಸಂಪೂರ್ಣ ಬೆಂಬಲವನ್ನು ಘೋಷಿಸುತ್ತದೆ ಹಾಗೂ ಬೆಳ್ತಂಗಡಿ ತಾಲೂಕಿನ ಜಮಾಅತ್ ಗಳ ಅತೀ ಹೆಚ್ಚು ಜನರು ಭಾಗವಹಿಸಬೇಕೆಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ನಗರ ಘಟಕದ ಅಧ್ಯಕ್ಷರಾದ ಕೆ.ಎಮ್.ಅಬ್ದುಲ್ ಕರೀಮ್ ಗೇರುಕಟ್ಟೆ ಪ್ರಕಟಣೆಯಲ್ಲಿತಿಳಿಸಿರುತ್ತಾರೆ.

ಕುದುರೇಮುಖ ರಾಷ್ಟ್ರೀಯ ಉದ್ಯಾನ ವನದೊಳಗೆ ಚಿರತೆ ಬೇಟೆ; ತನಿಖೆ ಚುರುಕುಗೊಳಿಸಿದ ಅರಣ್ಯ ಇಲಾಖೆ.

0

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಬೆಳ್ತಂಗಡಿ ವನ್ಯಜೀವಿ ವಿಭಾಗದ ವ್ಯಾಪ್ತಿಯ ಸವಣಾಲು ಗ್ರಾಮದ ಇತ್ತಿಲಪೇಲ ಅರಣ್ಯ ಪ್ರದೇಶದಲ್ಲಿ ಭಾನುವಾರ ಚಿರತೆಯ ಮೂಳೆಗಳು ಪತ್ತೆಯಾಗಿದ್ದು ಈ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯವರು 1972 ರ ವನ್ಯ ಜೀವಿ ಕಾಯ್ದೆಯ ಅಡಿಯಲ್ಲಿ ರಾಷ್ಟ್ರೀಯ ಉದ್ಯಾನವನದ ಒಳಗೆ ಚಿರತೆಯನ್ನು ಬೇಟೆಯಾಡಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.ಮನುಷ್ಯನಿಗೆ ಪ್ರವೇಶ ನಿರಾಕರಿಸಲಾಗಿರುವ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗೆ ವನ್ಯ ಜೀವಿಯಾಗಿರುವ ಚಿರತೆಯ ಬೇಟೆ ನಡೆದಿರುವುದನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ...

ಉಜಿರೆ ಅನುಗ್ರಹ ಪಿ.ಯು.ಕಾಲೇಜಿನಲ್ಲಿ ಕಳ್ಳತನ ಪ್ರಕರಣ; ಇಬ್ಬರು ಆರೋಪಿಗಳನ್ನು  ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು

0

ಬೆಳ್ತಂಗಡಿ : ಉಜಿರೆ ಅನುಗ್ರಹ ಪಿ.ಯು.ಕಾಲೇಜಿನಲ್ಲಿ ಸಿಸಿಕ್ಯಾಮರದ ಎನ್.ವಿ.ಆರ್ ಕಳ್ಳತನ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಜೈಲಿನಿಂದ ಬಾಡಿವಾರೆಂಟ್ ಮೂಲಕ ಕರೆತಂದು ಮಹಜರು ನಡೆಸಲಾಗಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಅನುಗ್ರಹ ಪಿ.ಯು.ಕಾಲೇಜಿನಲ್ಲಿ ಮಾ.3 ರಂದು ರಾತ್ರಿ ಯುವತಿಯರ ಚ್ಯೂಡಿದಾರ ಡ್ರೆಸ್ ಹಾಕಿಕೊಂಡು ನುಗ್ಗಿ ಸಿಸಿಕ್ಯಾಮರದ ಎನ್.ವಿ.ಆರ್ ಕಳ್ಳತನ ಮಾಡಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಾ.4 ರಂದು ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಉಜಿರೆ ಕಳ್ಳತನ ಪ್ರಕರಣದ ಬಳಿಕ ಆರೋಪಿಗಳಿಬ್ಬರು ಉಡುಪಿ ಜಿಲ್ಲೆಯ ಕಾರ್ಕಳರಲ್ಲಿ ಕಳ್ಳತನ ಪ್ರಕರಣದಲ್ಲಿ ಕಾರು ಸಮೇತ ಪೊಲೀಸರು ಬಂಧಿಸಿ ವಿಚಾರಣೆ ಬಳಿಕ...

ಬೆಳ್ತಂಗಡಿ; ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ. ಚಪ್ಪರ ಮಹೂರ್ತ

0

ಬೆಳ್ತಂಗಡಿ. ಗುರುವಾಯನಕೆರೆಯ ಶಕ್ತಿನಗರ ಮೈದಾನದಲ್ಲಿ ಏಪ್ರಿಲ್ 20ರಂದು ಕೆಪಿಸಿಸಿ ಅಧ್ಯಕ್ಷರು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಇವರ ಉಪಸ್ಥಿತಿಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ತಾತ್ಕಾಲಿಕ ಚಪ್ಪರಕ್ಕೆ ಮಹೂರ್ತ ನೆರವೇರಿಸಲಾಯಿತು. ಮೆಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಅರ್ಚಕರಾದ ಅನಂತ ಇರುವತ್ರಾಯ ಅವರು ಪೂಜಾ ವಿಧಿ–ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಕೆ ಕಾಶಿಪಟ್ಟಣ, ನಾಗೇಶ್ ಕುಮಾರ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಶೇಖರ ಕುಕ್ಕೆಡಿ, ಮಾಜಿ...