ಬೆಳ್ತಂಗಡಿ; ಡಿಜಿಟಲ್ ಯೂತ್ ತಂಡಕ್ಕೆ ಡಿ.ಕೆ ಶಿವಕುಮಾರ್ ಚಾಲನೆ
ಬೆಳ್ತಂಗಡಿ; ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಡಿಜಿಟಲ್ ಯೂತ್ ತಂಡವನ್ನು ರಚಿಸಲಾಗಿತ್ತು ಈ ತಂಡಕ್ಕೆ ಕೆಪಿಸಿಸಿ ಅಧ್ಯಕ್ಷ ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಅವರು ಡಿಜಿಟಲ್ ಯೂತ್ ವಿಂಗ್ ಗೆ ಚಾಲನೆ ನೀಡಿದರು.ಈ ಡಿಜಿಟಲ್ ಯೂತ್ ವಿಂಗ್ ನಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 243 ಬೂತ್ ಗಳಿಂದಲೂ ತಲಾ ಇಬ್ಬರು ಯುವಕರಿದ್ದಾರೆ. ಈ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷದ ಧ್ವನಿಯಾಗಿ ರೂಪಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದು ಯುವ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ.
ಬೆಳ್ತಂಗಡಿ; ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ; ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗಲುವು ನಿಶ್ಚಿತ, ಡಿ.ಕೆ ಶಿವಕುಮಾರ್
ಬೆಳ್ತಂಗಡಿ; ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ಸ್ಪಷ್ಟವಾದ ಬಹುತದೊಂದಿಗೆ ಗೆಲುವನ್ನು ಪಡೆಯಲಿದೆ ತುಳುನಾಡಿನಿಂದ ಕನಿಷ್ಟ ಹತ್ತು ಮಂದಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.ಅವರು ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ರಕ್ಷಿತ್ ಶಿವರಾಂ ಅವರ ನೇತೃತ್ವದಲ್ಲಿ ಗುರುವಾಯನಕೆರೆಯಲ್ಲಿ ನಡೆದ ಸರಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಇದು ರಾಜ್ಯದ ಸಾಮಾನ್ಯ ಜನರಿಗೆ ಶಕ್ತಿ...
ಬೆಳ್ತಂಗಡಿ : ಮೀಸಲು ಅರಣ್ಯದಲ್ಲಿ ಮರ ಕಳ್ಳತನ ಅರಣ್ಯ ಇಲಾಖೆ ದಾಳಿ ಪ್ರಕರಣ ದಾಖಲು
ಬೆಳ್ತಂಗಡಿ : ಮೇಲಂತಬೆಟ್ಟು ಗ್ರಾಮದಲ್ಲಿ ಮೀಸಲು ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಹಿಟಾಚಿ ಬಳಸಿ ಬೆಳೆಬಾಳುವ ಮರಗಳನ್ನು ದೋಚಲು ಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಸರ್ವೆ ನಂಬರ್ 158 ರ ಮೀಸಲು ಅರಣ್ಯ ಪ್ರದೇಶದೊಳಗೆ ಹಿಟಾಚಿ ಬಳಸಿ ರಸ್ತೆ ನಿರ್ಮಾಣ ಮಾಡಿ ಬೆಲೆಬಾಳುವ ಮರಗಳನ್ನು ದೋಚುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್.ಎಫ್.ಒ ತ್ಯಾಗರಾಜ್.ಟಿ.ಎಮ್ ನೇತೃತ್ವದ ತಂಡ ಏ.16...
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಡಿ. ಕೆ ಶಿವಕುಮಾರ್
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನವನ್ನು ಏ.20 ರಂದು ಬೆಳಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಡೆದರು. ಮಂಜುನಾಥ ಸ್ವಾಮಿಗೆ ಪ್ರಾಥನೆ ಸಲ್ಲಿಸಿ ಹುಂಡಿಗೆ ಕಾಣಿಗೆ ಹಾಕಿದರು. ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಅರ್ಶಿವಾದ ಪಡೆದು ಬೆಳ್ತಂಗಡಿ ಕಾರ್ಯಕ್ರಮಕ್ಕೆ ಪ್ರಯಾಣ ಮಾಡಿದರು. ಮಾಜಿ ಎಮ್.ಎಲ್.ಸಿ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುನಿಯಲು ಉದಯ ಕುಮಾರ್ ಶೆಟ್ಟಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ಉಜಿರೆಯಲ್ಲಿ ಶಾಂತಿ ಭಂಗ; ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ; ಉಜಿರೆಯಲ್ಲಿ ಪುನೀತ್ ಕೆರೆಹಳ್ಳಿ ಯನ್ನು ತಡೆದ ಘಟನೆಗೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಉಜಿರೆ ನಿವಾಸಿಗಳಾದ ಅನಿಲ್ ಅಂತರ, ಮನೋಜ್ ಕುಂಜರ್ಪ, ಪ್ರಜ್ವಲ್ ಗೌಡ, ಪ್ರಭಾಕರ, ಗಣೇಶ್ ಹಾಗೂ ಇತರರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್. ಐ ಮುರಳೀಧರ ನಾಯ್ಕ್ ಕೆ.ಜಿ ಅವರ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.ಪುನೀತ್ ಕೇರೆಹಳ್ಳಿ ಅವರು ಉಜಿರೆಗೆ ಬಂದರೆ ಉಜಿರೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ ಭಂಗ ಉಂಟುಮಾಡುವ ಸಾಧ್ಯತೆ ಇದ್ದ ಕಾರಣ ದ.ಕ ಜಿಲ್ಲಾಧಿಕಾರಿಯವರು ಸರ್ವಜನಿ...
ಗುರುವಾಯನಕೆರೆ; ಕಾಂಗ್ರೆಸ್ ಸಮಾವೇಶದ ಬ್ಯಾನರ್ ಹರಿದ ಕಿಡಿಗೇಡಿಗಳು
ಬೆಳ್ತಂಗಡಿ; ಗುರುವಾಯನಕೆರೆಯ ಶಕ್ತಿನಗರದಲ್ಲಿ ಭಾನುವಾರ ನಡೆಯಲಿರುವ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಎಂಬ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಸಮಾವೇಶಕ್ಕೆ ಹಾಕಲಾಗಿದ್ದ ಹತ್ತಾರು ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದ ಘಟನೆ ಶನಿವಾರ ರಾತ್ರಿಯ ವೇಳೆ ಸಂಭವಿಸಿದೆ. ಸಮಾವೇಶದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ , ಸಚಿವರಾದ ಚೆಲುವರಾಯ ಸ್ವಾಮಿ , ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯ ಮಟ್ಟದ ಹಲವಾರು ನಾಯಕರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ತಾಲುಕಿನಾದ್ಯಂತ ವ್ಯಾಪಕ ಪ್ರಮಾಣದ ಪ್ರಚಾರ ಬ್ಯಾನರ್ , ಪಕ್ಷದ ಧ್ವಜಗಳು ಸೇರಿದಂತೆ ಬಂಟಿಂಕ್ಸ್...
ಸಂಭ್ರಮದಿಂದ ಈಶ್ಟರ್ ಆಚರಿಸಿದ ಕ್ರೈಸ್ಥ ಬಾಂಧವರು
ಬೆಳ್ತಂಗಡಿ; ಈಸ್ಟರ್ ಹಬ್ಬವನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಸಾಂಬ್ರಮದಿಂದ ಧಾರ್ಮಿಕ ವಿಧಿವಿಧಾಮಗಳೊಂದಿಗೆ ಆಚರಿಸಲಾಯಿತ್ತು. ಬೆಳ್ತಂಗಡಿ ಧರ್ಮಪ್ರಾಂತ್ಯದ 55 ಚರ್ಚ್ ಗಳಲ್ಲಿ ಸಂಜೆ ಬಲಿಪೂಜೆಯೊಂದಿಗೆ, ಈಸ್ಟರ್ ದಿನದ ವಿಧಿವಿದಾನಗೆಳು ಆರಂಭಗೊಂಡಿತ್ತು. ಯೇಸು ಸ್ವಾಮಿಯು ಯಾತನೆಯನ್ನು ಅನುಭವಿಸಿ ಮರಣಹೊಂದಿ, ಪುನರುತ್ಧಾನಗೊಂಡ ದಿನದ ಅನುಸ್ಮರಣೆಯೆ ಈಸ್ಟರ್ ಹಬ್ಬದ ಕಾರ್ಯಕ್ರಮಗಳಲ್ಲಿ ಚರ್ಚ್ ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಗಳಾದರು. ಬೆಳ್ತಂಗಡಿ ಸಂತ ಲಾರೆನ್ಸ್ ಅವರ ಪ್ರಧಾನ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರಾದ ವ. ಬಿಷಪ್ಪ್ ಲಾರೆನ್ಸ್ ಮುಕ್ಕುಯಿಯವರು ಈಸ್ಟರ್ ಹಬದ್ಬ ವಿಧಿವಿದಾನಗೆಳನ್ನು ನೆರವೆರಿಸಿ ದಿವ್ಯಬಲಿಪೂಜೆಯನ್ನು ಅರ್ಪಿಸಿದರು. ನಂತರ ಯೆಸುಸ್ವಾಮಿಯು ಪುನರುತ್ಧಾನವನ್ನು ಸ್ಮರಿಸುವ...
ಉಜಿರೆಯಲ್ಲಿ ಹೈ ಡ್ರಾಮಾ: ಪುನೀತ್ ಕೆರೆಹಳ್ಳಿಯನ್ನು ತಡೆದು ಹಿಂದಕ್ಕೆ ಕಳುಹಿಸಿದ ಪೊಲೀಸರು
ಬೆಳ್ತಂಗಡಿ : ಉಜಿರೆ ಕೃಷ್ಣಾನುಗ್ರಹದ ಸಭಾಭವನದಲ್ಲಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ಏ.19 ರಂದು ಸಂಜೆ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಕ್ರವರ್ತಿ ಸೂಲಿಬೆಲೆ ಆಗಮಿತಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮ ವೀಕ್ಷಿಸಲು ಪುನೀತ್ ಕೆರೆಹಳ್ಳಿ ಬರುತ್ತಿದ್ದ ವೇಳೆ ಬೆಳ್ತಂಗಡಿ ಪೊಲೀಸರು ಉಜಿರೆಯ ಕಾಲೇಜ್ ರಸ್ತೆಯಲ್ಲಿ ಅಡ್ಡಹಾಕಿ ದಕ್ಷಿಣ ಕನ್ನಡ ಪ್ರವೇಶ ನಿಷೇಧ ಮಾಡಿದ ಡಿಸಿ ಆದೇಶ ತೋರಿಸಿ ಹಿಂದಕ್ಕೆ ಕಳುಹಿಸಿದ್ದರೆ.ಸೌಜನ್ಯ ಪರ ಹೊರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಹಾಗೂ ಪುನೀತ್ ಕೆರಹಳ್ಳಿ ಬೆಂಬಲಿಗರ ನಡುವೆ ಸಮಾಜಿಕ ಜಾಲತಾಣಗಳಲ್ಲಿ ಮತಿನ...
ಪುರುಷ ಕಟ್ಟುವ ಆಚರಣೆಯಲ್ಲಿ ಮುಸ್ಲಿಂ ಧರ್ಮದ ಅವಹೇಳನ; ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ; ಎಸ್.ಡಿ.ಪಿ.ಐ ಎಚ್ಚರಿಕೆ
ಬೆಳ್ತಂಗಡಿ: ‘ತುಳುನಾಡಿನ ಐತಿಹಾಸಿಕ, ಪಾರಂಪರಿಕ ಪುರುಷ ಕಟ್ಟುವ ಆಚರಣೆಯಲ್ಲಿ ಮುಸ್ಲಿಂ ಧರ್ಮದ ಅವಹೇಳನ ಹಾಗೂ ಎಸ್.ಡಿ.ಪಿ.ಐ ಪಕ್ಷದ ಧ್ವಜ ಬಳಕೆ ಮಾಡಲಾಗಿದೆ. ಈ ಬಗೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳದೇ ಇದ್ದಲ್ಲಿ ವೇಣೂರು ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ನವಾಝ್ ಶರೀಫ್ ಕಟ್ಟೆ ಹೇಳಿದರು. ಅವರು ಶನಿವಾರ ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿಂದೂರು ಬಳಿ ಪುರುಷ ಕಟ್ಟುವ ಸಾಂಪ್ರದಾಯಿಕ ಆಚರಣೆಯಲ್ಲಿ...
ಪುದುವೆಟ್ಟು ಅಕ್ರಮ ಮರಳು ಸಾಗಾಟ ಪತ್ತೆ ಲಾರಿ ವಶಕ್ಕೆ
ಬೆಳ್ತಂಗಡಿ; ಪುದುವೆಟ್ಟುವಿನಲ್ಲಿ ಅಕ್ರಮವಾಗಿ ನದಿಯಿಂದ ಮರಳು ತೆಗೆದು ಸಾಗಾಟ ಮಾಡುತ್ತಿದ್ದ ಪ್ರಕರಣದವೊಂದನ್ನು ಧರ್ಮಸ್ಥಳ ಪೊಲೀಸರು ಪತ್ತೆಹಚ್ಚಿದ್ದು ಮರಳು ಸಮೇತ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.ಧರ್ಮಸ್ಥಳ ಪಿ.ಎಸ್.ಐ ಸಮರ್ಥ್ ಅವರು ಹಾಗೂ ತಂಡ ಖಚಿತ ಮಾಹಿತಿಯ ಮೇರೆಗೆ ಪುದುವೆಟ್ಟು ಗ್ರಾಮದ ಬೊಳ್ಮನಾರು ಎಂಬಲ್ಲಿ ಅಕ್ರಮವಾಗಿ ಮರಳನ್ನು ತುಂಬಿ ಸಾಗಾಟ ಮಾಡುತ್ತಿದ್ದ ಕೆ.ಎ 17ಸಿ 2338 ನಂಬರಿನ ಈಚರ್ ಲಾರಿಯನ್ನು ಪತ್ತೆ ಹಚ್ಚಿದ್ದಾರೆ. ಯಾವುದೇ ದಾಖಲೆಗಳಿಲ್ಲದೆ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಪ್ರಕರಣ ದಾಖಲಿಸಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.ವಶಪಡಿಸಿಕೊಂಡ ಸೊತ್ತುಗಖ ಒಟ್ಟು ಮೌಲ್ಯ ರೂ 5,05,000 ಎಂದು ಅಂದಾಜಿಸಲಾಗಿದೆ.ಬೆಳ್ತಂಗಡಿ...















