ಬೆಳ್ತಂಗಡಿ; ತ್ರಿಸ್ಟಾರ್ ವೈನ್ಸ್ ನ ಬೀಗ ಒಡೆದು ಕಳ್ಳತನ
ಬೆಳ್ತಂಗಡಿ; ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪವೇ ಇರುವ ತ್ರಿ ಸ್ಟಾರ್ ವೈನ್ಸ್ ಗೆ ಬೀಗ ಒಡೆದು ನುಗ್ಗಿದ ಕಳ್ಳರು ಹಣ ಹಾಗೂ ಮದ್ಯದ ಬಾಟಲಿ ಗಳನ್ನು ಕಳ್ಳತನ ಮಾಡಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.ಅಂಗಡಿಯ ಹೊರಗಿನ ಬೀಗ ಒಡೆದು ಶಟರ್ ತೆಗೆದು ಒಳಗೆ ನುಗ್ಗಿದ ಕಳ್ಳರು ಅಂಗಡಿಯ ಒಳಗೆ ಇರಿಸಲಾಗಿದ್ದ ಸುಮಾರು ಆರುಸಾವಿರಕ್ಕೂ ಹೆಚ್ಚು ನಗದನ್ನು ಅಪಹರಿಸಿರುವುದಾಗಿ ತಿಳಿದು ಬಂದಿದೆ. ಮದ್ಯದ ಬಾಟ್ಲಿಗಳನ್ನೂ ಕಳ್ಳತನ ಮಾಡಲಾಗಿದ್ದು ಇದರಬಗ್ಗೆ ಹೆಚ್ಚಿನ ಮಾಹುತಿಗಳು ತಿಳಿದು ಬರಬೇಕಾಗಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ
ನೆರಿಯದಲ್ಲಿ ನದಿಗಿಳಿದ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ಮೃತ್ಯು
ಬೆಳ್ತಂಗಡಿ; ನೆರಿಯದಲ್ಲಿ ನದಿಗೆ ಇಳಿದಿದ್ದ ತೋಟತ್ತಾಡಿ ನಿವಾಸಿ ಯುವಕನೋರ್ವ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ಸಂಭವಿಸಿದೆ.ನೆರಿಯ ಗ್ರಾಮದ ತೋಟತ್ತಾಡಿ ಪಿತ್ತಿಲು ನಿವಾಸಿ ಶಿವಕುಮಾರ್ ಎಂಬಾತನೇ ಮೃತಪಟ್ಟಿರುವ ಯುವಕನಾಗಿದ್ದಾನೆ.ಈತ ಭಾನುವಾರ ಗೆಳೆಯರೊಂದಿಗೆ ಮೀನು ಹಿಡಿಯಲು ನೆರಿಯ ಗ್ರಾಮದ ಎಸ್ಟೇಟ್ ಒಂದರ ಸಮೀಪ ನದಿಗೆ ಹೋಗಿದ್ದ ಎನ್ನಲಾಗಿದೆ. ನದಿಯಲ್ಲಿ ಸಂಜೆಯ ವೇಳೆ ಈತ ನಾಪತ್ತೆಯಾಗಿದ್ದ. ಈತನಿಗಾಗಿ ಸ್ಥಳೀಯರ ನೇತೃತ್ವದಲ್ಲಿ ನಡೆಸಿದ ಹುಡುಕಾಟದಲ್ಲಿ ಮೃತದೇಹ ಪತ್ತೆಯಾಗಿದೆಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭಾರೀ ಮಳೆ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ
ಬೆಳ್ತಂಗಡಿ: ತಾಲೂಕಿನ ಹಲವೆಡೇ ಸಂಜೆ ಭಾರೀ ಮಳೆಯಾಗಿದ್ದು ,ವಾಹನ ಸಂಚಾರ ಅಸ್ತವ್ಯಸ್ತವಾಗಿ ಅಲ್ಲಲ್ಲಿ ರೋಡ್ ಬ್ಲಾಕ್ ಆದ ಘಟನೆ ನಡೆದಿದೆ.ಆದಿತ್ಯವಾರ ಸಂಜೆ ಸುಮಾರು 5 ಗಂಟೆಯಿಂದ ಧರ್ಮಸ್ಥಳ,ಉಜಿರೆ, ಮುಂಡಾಜೆ ಸೇರಿದಂತೆ ತಾಲೂಕಿನಾದ್ಯಂತ ಹಲವಡೇ ತಾಸುಗಟ್ಟಲೆ ಭಾರೀ ಮಳೆ ಸುರಿದಿದ್ದು. ಅಲ್ಲಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಉಜಿರೆಯಿಂದ , ಮುಂಡಾಜೆಯವರೆಗೆ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದ ರಸ್ತೆಯಲ್ಲಿರುವ ದೊಡ್ಡ ಹೊಂಡಗಳಲ್ಲಿ ಮಳೆ ನೀರು ನಿಂತ ಪರಿಣಾಮ ದ್ವಿಚಕ್ರ ಸೇರಿದಂತೆ ವಾಹನ ಸವಾರರರು ಪರದಾಡುತ್ತ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಗುರುವಾಯನಕೆರೆ ಕಾರುಗಳ ನಡುವೆ ಅಪಘಾತ
ಗುರುವಾಯನಕೆರೆ: ಇಲ್ಲಿನ ಶಕ್ತಿನಗರದಲ್ಲಿ ಇಂದು ಮುಂಜಾನೆ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಗುರಯವಾಯನಕೆರೆಯಿಂದ ಹೆಬ್ರಿ ಕಡೆಗೆ ಹೋಗುವ ಸ್ಕೋಡಾ ಕಾರು ಮತ್ತು ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಐ20 ಕಾರಿನ ನಡುವೆ ಅಪಘಾತ ಸಂಭವಿಸಿದೆ.ಐ20 ಕಾರು ಚಾಲಕ ರಸ್ತೆಯ ಹೊಂಡ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಕಾರುಗಳು ಎರಡೂ ಜಖಂಗೊಂಡಿದೆ.
ನೆಲ್ಯಾಡಿ; ನದಿಗೆ ಬಿದ್ದ ಬಸ್ ಚಾಲಕ ಸ್ಥಳದಲ್ಲಿಯೇ ಸಾವು
ನೆಲ್ಯಾಡಿ; ಬೆಂಗಳೂರು ಮೂಲದ ಖಾಸಗಿ ಸ್ವೀಪರ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ 11 ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು, ಗುದ್ದಿದ ರಭಸಕ್ಕೆ ಬಸ್‌ನ ಡ್ರೈವರ್ ಬಸ್‌ನಿಂದ ಹೊರಗಡ ಎಸೆಯಲ್ಪಟ್ಟು ಬಸ್ಸಿನ ಅಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತರು ಬೆಂಗಳೂರು ಮೂಲದವರೆಂದು ತಿಳಿದುಬಂದಿದೆ. ಈ ಖಾಸಗಿ ಸ್ಲಿಪರ್ ಬಸ್ ಗುರುವಾರ ಬೆಂಗಳೂರಿನಿಂದ ಪ್ರಯಾಣಿಕರನ್ನು ಗೋಕರ್ಣದಲ್ಲಿ ಇಳಿಸಿ, ನಿನ್ನೆ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಪಿಕ್- ಅಪ್ ಮಾಡಲು...
ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ: ಉಜಿರೆಯಲ್ಲಿ ಮ್ಯಾರಥಾನ್ ಓಟ
World Mental Health Day celebrations: Marathon run in Ujire ಉಜಿರೆ : ದೈಹಿಕ ಆರೋಗ್ಯದೊಂದಿಗೆ ಮಾನಸಿಕಆರೋಗ್ಯ ರಕ್ಷಣೆಗೂ ಎಲ್ಲರೂ ಆದ್ಯತೆ ನೀಡಬೇಕು ಎಂದು ಬೆಳ್ತಂಗಡಿ ತಾಲ್ಲೂಕು ಆಸ್ಪತ್ರೆಯ ನೇತ್ರವೈದ್ಯ ಮತ್ತು ವೈದ್ಯಕೀಯ ನಿರ್ವಹಣಾಧಿಕಾರಿ ಡಾ. ರಮೇಶ್ ಹೇಳಿದರು.ಅವರು ಗುರುವಾರ ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಮ್ಯಾರಥಾನ್ ಓಟವನ್ನು ಉದ್ಘಾಟಿಸಿ ಮಾನಸಿಕ ಆರೋಗ್ಯದ ಮಹತ್ವವನ್ನು ವಿವರಿಸಿದರು.ಎಸ್.ಡಿ.ಎಮ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದರು.160ಕ್ಕೂ ಹೆಚ್ಚು ಮಂದಿ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದರು....
ಗುರುವಾಯನಕೆರೆ ಬೈಕ್ ಅಪಘಾತ ಸವಾರ ಸ್ಥಳದಲ್ಲಿಯೇ ಸಾವು
Guruwayanakere bike accident rider dies on the spot ಬೆಳ್ತಂಗಡಿ :ಗುರುವಾಯನಕೆರೆ ಶಕ್ತಿನಗರದ ಬಳಿ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಕಟ್ಟೆ ನಿವಾಸಿ ಸುಧೀಶ್ (31)ಎಂಬವರೇ ಮೃತಪಟ್ಟ ಬೈಕ್ ಸವಾರರಾಗಿದ್ದಾರೆ.ಪೊಲೀಸರು ಘಟನಾ ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ
ಗೇರು ಕಟ್ಟೆ ಸಹಾಯ ಮಡುವ ನೆಪದಲ್ಲಿ ವೃದ್ದನ ಎ.ಟಿ.ಎಂ ಕಾರ್ಡ್ ಅಪಹರಿಸಿ ಹಣ ಕಳ್ಳತನ
ಬೆಳ್ತಂಗಡಿ; ಗೇರುಕಟ್ಟೆಯಲ್ಲಿ ಎ.ಟಿ.ಎಂ ಕೇಂದ್ರದಲ್ಲಿ ಹಣ ತೆಗೆಯುತ್ತಿದ್ದ ವೃದ್ದನ ಕೈಯಿಂದ ಎ.ಟಿ.ಎಂ ಕಾರ್ಡ್ ಅನ್ನು ಕಸಿದುಕೊಂಡ ಅಪರಿಚಿತರು ಅದರಲ್ಲಿದ್ದ ಹಣವನ್ನು ಕಸಿದುಕೊಂಡ ಘಟನೆ ಸಂಭವಿಸಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಲಾಗಿದೆ.ಗೇರುಕಟ್ಟೆ ನಿವಾಸಿ ಅಬೂಬಕ್ಕರ್ (71) ಎಂಬವರೇ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ.ಇವರು ಗೇರುಕಟ್ಟೆ ಕೆನರಾ ಬ್ಯಾಂಕಿನ ಎ.ಟಿ.ಎಂ ನಲ್ಲಿ ಅ 2ರಂದು ಇವರು ಹಣ ತೆಗೆಯಲೆಂದು ಹೇಗಿದ್ದು ಈ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಎ.ಟಿ.ಎಂ ಒಳಗೆ ಬಂದಿದ್ದು ಅವರಿಗೆ ಸಹಾಯ ಮಾಡಲು ಮುಂದಾಗುದ್ದಾರೆ. ಹಿಂದಿಯಲ್ಲಿ ಮಾತನಾಡುತ್ತಿದ್ದ ಇವರಿಗೆ...
ತಾತ್ಕಾಲಿಕ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಲೆಬೆಟ್ಟು ನಿವಾಸಿಗೆ19ಲಕ್ಷ ವಂಚನೆ ಪ್ರಕರಣ ದಾಖಲು
ಬೆಳ್ತಂಗಡಿ : ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯವಾದ ಯಾರೋ ಅಪರಿಚಿತರು ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಸುಮಾರು ರೂ.19.90 ಲಕ್ಷ ವಂಚಿಸಿದ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆ.29 ರಂದು ಮಲೆಬೆಟ್ಟು ನಿವಾಸಿ ಅಮೃತೇಶ್ ಕುಮಾರ್ ಎಂಬವರಿಗೆ. ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯವಾದ ಯಾರೋ ಅಪರಿಚಿತರು ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ನೀಡುವುದಾಗಿ ಅವರ ಬಾಬು ಮೊಬೈಲ್ ನಲ್ಲಿದ್ದ ಟೆಲಿಗ್ರಾಂ ಅಪ್ಲಿಕೇಶನ್ ಗೆ ಯಾರೋ ಅಪಚಿರಿತರು https://ecommerecboostbranding.Com ವೆಬ್ ಸೈಟ್ ನ ಲಿಂಕ್...
ರುಡ್ ಸೆಟ್ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್ ಮೋಟಾರು ರಿವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿಯ ಸಮಾರೋಪ ಸಮಾರಂಭ
ಉಜಿರೆ : ಇಂದು ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮ ನಮ್ಮ ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಇರುವುದರಿಂದ ಜೀವನದಲ್ಲಿ ನಾವು ಯಾವ ರೀತಿಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದೇವೆ ಅನ್ನುವುದರ ಮೂಲಕ ನಮ್ಮ ಯಶಸ್ವ ಇರುತ್ತದೆಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಶುಂಪಾಲರಾದ ಡಾ. ಬಿ. ಎ. ಕುಮಾರ್ ಹೆಗ್ಡೆ ಅಭಿಪ್ರಾಯಪಟ್ಟರು. ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ ಇಲೆಕ್ಟ್ರಿಕಲ್ ಮೋಟಾರು ರಿವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು.ಸ್ವಯಂ ಶಿಸ್ತು...















