ಕಾಶ್ಮೀರದ ಪಹಲ್ಗಾಮ್‌ನಲ್ಲಿ  ನಡೆದ ಭಯೋತ್ಪಾದಕ ದಾಳಿಯು ತೀವ್ರ ದುಃಖಕರ ಮತ್ತು ಖಂಡನೀಯ; ರಕ್ಷಿತ್ ಶಿವರಾಂ

0

ಬೆಳ್ತಂಗಡಿ;  ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯು ತೀವ್ರ ದುಃಖಕರ ಮತ್ತು ಖಂಡನೀಯ. ಅಮಾನವೀಯವಾಗಿದೆ. ಈ ದಾಳಿಯಲ್ಲಿ ಮೃತರಾದವರಿಗೆ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಉಗ್ರಗಾಮಿಗಳ ನಿಯಂತ್ರಣಕ್ಕೆ  ಕೇಂದ್ರ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು‌ಒತ್ತಾಯಿಸುತ್ತೇನೆ ಎಂದು  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ

ಬೆಳ್ತಂಗಡಿ : ಬೆಳಾಲು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗೋಲ್ಮಾಲ್;  ಸಿಬ್ಬಂದಿಗಳಿಬ್ಬರಿಂದ ಲಕ್ಷಾಂತರ ರೂಪಾಯಿ ವಂಚನೆ

0

ಬೆಳ್ತಂಗಡಿ : ಸಹಕಾರಿ ಸಂಘದಲ್ಲಿ ಇಬ್ಬರು ಸಿಬ್ಬಂದಿಗಳು ಸಂಘದ ಅಕೌಂಟ್ ನಿಂದ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆ ಬಗ್ಗೆ ಮಾಹಿತಿ ಪಡೆದ ಬ್ಯಾಂಕ್ ಮ್ಯಾನೇಜ್ ಮೆಂಟ್ ಅವ್ಯವಹಾರಬ ಮಾಡಿದರಿಂದ ಈಗಾಗಲೇ 50% ಹಣವನ್ನು ವಾಪಸ್ ಸಂಘಕ್ಕೆ ಕಟ್ಟಿಸಿದ್ದಾರೆ. ಉಳಿದ ಹಣವನ್ನು ಕೂಡ ಕಟ್ಟುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಆಂತರಿಕ ಪರಿಶೀಲನೆ ನಡೆಯುತ್ತಿದೆ ಎಂದು ಬ್ಯಾಂಕ್ ಆಡಳಿತಮಂಡಳಿ ಮಾಹಿತಿ ನೀಡಿದೆ.ಬೆಳ್ತಂಗಡಿ ತಾಲೂಕಿನ ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಅಕೌಂಟ್ ನಿಂದ ಪ್ಲ್ಯಾನ್‌ ಮಾಡಿ ಸಿಬ್ಬಂದಿಗಳಿಬ್ಬರು...

ಹೊಸಂಗಡಿ ಗಾಳಿ,ಮಳೆಗೆ ಹಾನಿ

0

ಬೆಳ್ತಂಗಡಿ: ಹೊಸಂಗಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ಮಳೆಯೊಂದಿಗೆ ಬೀಸಿದ ಭಾರಿ ಗಾಳಿಗೆ ಹಲವೆಡೆ ಹಾನಿ ಸಂಭವಿಸಿದೆ.ದೇರಾರ್ ಶಾರದಾ ಪೂಜಾರಿ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿ ಉಂಟಾಗಿ ದೆ.ಇನ್ನೊಂದು ತೆoಗಿನ ಮರ ಬಚ್ಚಲು ಕೊಟ್ಟಿಗೆಗೆ ಬಿದ್ದು ಅದು ಧರಾಶಾಯಿ ಆಗಿದೆ. ಪ್ರಶಾಂತ್ ಎಂಬವರ ಮನೆಯ 20 ಶೀಟ್ ಗಳು ಗಾಳಿಗೆ ಹಾರಿ ಹೋಗಿ ಹಾನಿಯಾಗಿದೆ,.ಕೇಶವ ಎಂಬವರ ಮನೆಯ ಮೇಲೆ ಅಡಕೆ ಮರ ಬಿದ್ದು ಹಾನಿಯಾಗಿದೆ. ನೂರಾರು ಅಡಕೆ ರಬ್ಬರ್ ಮರಗಳು ಮುರಿದು ಬಿದ್ದಿವೆ.ಪಿಡಿಒ ಗಣೇಶ್ ಶೆಟ್ಟಿ, . ಈ ಸಂದರ್ಭ...

ಪೋಪ್ ಫ್ರಾನ್ಸಿಸ್ ರ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯದಿಂದ ತೀವ್ರ ಸಂತಾಪ;  9 ದಿನಗಳ ಶೋಕಾಚರಣೆ

0

ಬೆಳ್ತಂಗಡಿ;  ಪೋಪ್ ಫ್ರಾನ್ಸಿಸ್ ರ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯವು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಪೋಪರ ನಿಧನದ ಹಿನ್ನಲೆಯಲ್ಲಿ 9 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಧರ್ಮಪ್ರಾಂತ್ಯಕ್ಕೆ ಸಂಬಂದಪೆಟ್ಟ ಎಲ್ಲಾ ಹಬ್ಬ ಆಚರಣೆಗಳನ್ನು ಸರಳವಾಗಿ ನಡೆಸಲೆಂದು ಘೋಷಿಸಲಾಗಿದೆ. ಇಂದು ಮುಂಜಾನೆ ಬೆಳ್ತಂಗಡಿ, ಸಂತ ಲಾರೆನ್ಸರ ಕ್ಯಾಥಿಡ್ರಲ್ ದೇವಾಲಯದಲ್ಲಿ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ರವರು ವಿಶೇಷ ಪೂಜೆ ಸಲ್ಲಿಸಿ ಪೂಪರಿಗಾಗಿ ಪ್ರಾರ್ಥನೆ ಮಾಡಿದರು. ಧರ್ಮಕ್ಷೇತ್ರದ ಬಿಷಪ್ ಹೌಸ್ ಮತ್ತು ಪಾಲನಾ ಕೇಂದ್ರದ ಎಲ್ಲ ಧರ್ಮಗುರುಗಳು, ಕನ್ಯಾಸ್ತ್ರೀಯರು ಹಾಗು ವಿಶ್ವಾಸಿಗಳು ಹಾಜರಿದ್ದರು. ವಿಶೇಷ ಪೂಜೆಯ ಸಂದೇಶದ ಸಮಯದಲ್ಲಿ...

ತೆಕ್ಕಾರು ಗೋಪಾಲಕೃಷ್ಣ ದೇವರ ಬ್ರಹ್ಮಕಲಶೋತ್ಸವಕ್ಕೆ ತಾಲೂಕಿನಿಂದ ಹೊರೆ ಕಾಣಿಕೆ

0

ಬೆಳ್ತಂಗಡಿ; ದಿನಾಂಕ 25.04.2025 ನೇ ಶುಕ್ರವಾರದಿಂದ ರಿಂದ 3.5. 2025 ನೇ ಶನಿವಾರದವರೆಗೆ ತೆಕ್ಕಾರು ಗ್ರಾಮದಲ್ಲಿರುವ ಶ್ರೀ ಗೋಪಾಲಕೃಷ್ಣದೇವರ ಬ್ರಹ್ಮಕಲಶೋತ್ಸವಕ್ಕೆ ತಾಲೂಕು ಮಟ್ಟದಿಂದ ಹೊರ ಕಾಣಿಕೆ ಸಮರ್ಪಿಸುವ ಬಗ್ಗೆ ಸಮಾಲೋಚನ ಸಭೆಯನ್ನು ನಡೆಸಲಾಯಿತು. ತಾಲೂಕಿನ ಪ್ರತಿ ಗ್ರಾಮದಿಂದ ಹೊರೆ ಕಾಣಿಕೆ ತೆಗೆದುಕೊಂಡು ಬರುವುವಂತೆ ವಿನಂತಿಸಲಾಯಿತು.ದಿನಾಂಕ 27.04.2025 ಆದಿತ್ಯವಾರ ಬೆಳಿಗ್ಗೆ ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನ ಹಾಗೂ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಏಕಕಾಲದಲ್ಲಿ ಹೊರೆ ಕಾಣಿಕೆ ಉದ್ಘಾಟನೆಗೊಳ್ಳಲಿದ್ದು ಪ್ರತಿ ಗ್ರಾಮದ ಭಕ್ತರು ಹೊರೆಕಾಣಿಕೆ ಸಮರ್ಪಿಸಬೇಕೆಂದು ಹಾಗೂ 30.04.2025ನೇ ಬುಧವಾರದಂದು ಪ್ರತಿಷ್ಠಾ ದಿವಸದಂದು ತಾಲೂಕಿನ...

ನಾಲ್ಕೂರು; ಬೈಕ್ ಅಪಘಾತ ಮಹಿಳೆ ಮೃತ್ಯು

0

ನಾಲ್ಕೂರು: ನಿನ್ನೆ ತಡರಾತ್ರಿ ನಾಲ್ಕೂರು ಗ್ರಾಮದ ಸೂಳಬೆಟ್ಟು ಸನಿಹ ಬೊಕ್ಕಸ ಬಸ್ ನಿಲ್ದಾಣದ ಬಳಿ ಬೈಕ್‌ ಸ್ಕಿಡ್ ಆಗಿ ಸಹಸವಾರೆ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ. ಶಿರ್ಲಾಲುವಿನ ಅಸುಪಾಸಿನಲ್ಲಿ ನಡೆಯುತ್ತಿರುವ ಶುಭಕಾರ್ಯಕ್ರಮಕ್ಕೆ ಹೋಗಿ ಹಿಂದೆ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ಮೃತ ಮಹಿಳೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಕೊಡಿಮಜಲು ಪ್ರತಿಮಾ (37ವರ್ಷ) ಎಂದು ತಿಳಿದು ಬಂದಿದೆ.ಪೋಲೀಸರು ಸ್ಥಳಕ್ಕಾಗಮಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

ಅಳದಂಗಡಿ; ಕಾರುಗಳ ಮುಖಾಮುಖಿ ಡಿಕ್ಕಿ ಹಲವರಿಗೆ ಗಾಯ

0

ಬೆಳ್ತಂಗಡಿ; ಅಳದಂಗಡಿ ಸಮೀಪ ಕೆದ್ದುವಿನಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿದ್ದು ಹಲವರು ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ. ಎರಡು ಕಾರುಗಳಲ್ಲಿದ್ದ 5 ಮಂದಿ ಪ್ರಯಾಣಿಕರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಇದರಲ್ಲಿ ಒಂದಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಕೂಡಲೇ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಎರಡೂ ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿದ್ದು ಸ್ಥಳಕ್ಲೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಹೆಚ್ವಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಎ. 28: ಬೆಳ್ತಂಗಡಿಯಲ್ಲಿ ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶ

0

ಬೆಳ್ತಂಗಡಿ :ಕರ್ನಾಟಕದಲ್ಲಿ ಮಹಾತ್ಮ ಪ್ರೊ.ಬಿ.ಕೃಷ್ಣಪ್ಪರವರ ನಾಯಕತ್ವದಲ್ಲಿ ಸ್ಥಾಪನೆಗೊಂಡಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂಬ ಸಾಮಾಜಿಕ ಸಂಘಟನೆಯು ನಾಡಿನ ದಲಿತ, ದಲಿತೇತರ ಎಲ್ಲಾ ಶೋಷಿತ ಸಮುದಾಯಗಳ ಆಶಾಕಿರಣವಾಗಿ ಪ್ರಬಲ ಧ್ವನಿಯಾಗಿ ಸಿಡಿದೆದ್ದುಸ್ವಾಭಿಮಾನಿ ದಲಿತರನ್ನು ಒಗ್ಗೂಡಿಸಿಕೊಂಡು ರಾಜ್ಯಾದ್ಯಂತ ಹೆಮ್ಮರವಾಗಿ ಬೆಳದು ಬಂದಿರುವುದು70ರ ದಶಕದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಾಗಿ ಉದಯಿಸಿದ ಕರ್ನಾಟಕ ದಲಿತ ಚಳುವಳಿ 2025ನೇ ವರ್ಷದಲ್ಲಿ 50ರ ಸಂಭ್ರಮದಲ್ಲಿದೆ ಇದರ ಅಂಗವಾಗಿ ಎ. 28ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶ ನಡೆಯಲಿದೆ...

ಪೋಪ್ ಫ್ರಾನ್ಸಿಸ್‌ ನಿಧನ

0

ರೋಮ್:‌ ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ , ರೋಮನ್ ಕ್ಯಾಥೋಲಿಕ್ ಧರ್ಮ ಸಭೆಯ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ (88) ಸೋಮವಾರ ನಿಧನರಾಗಿದ್ದಾರೆ. ಸೋಮವಾರ (ಏ.21) ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ ಎಂದು ವ್ಯಾಟಿಕಾನ್ ನ ಕಾರ್ಡಿನಲ್ ಕೆವಿನ್ ಫಾರೆಲ್ ದೃಢ ಪಡಿಸಿದ್ದಾರೆ. ಕಳೆದ ಕೆಲ ಸಮಯದಿಂದ ಅವರು ನ್ಯುಮೋನಿಯಾ, ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು, ಈ ಸಂಬಂಧ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ದಿನ ಕಳೆದಂತೆ ಅವರು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ವರದಿ ತಿಳಿಸಿದೆ. ಅನಾರೋಗ್ಯ ಕಾರಣ ಅವರನ್ನು ಫೆ.14ರಂದು...

ಮಾಲಾಡಿ ಮನೆಯ ಬೀಗ ಒಡೆದು ರೂ 14ಲಕ್ಷ ಮೌಲ್ಯದ ಚಿನ್ನಾಭರಣ ನಗದು ಕಳ್ಳತನ

0

ಬೆಳ್ತಂಗಡಿ; ಮಾಲಾಡಿ ಗ್ರಾಮದ ಕೊಲ್ಪೆದ ಬೈಲು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದವೇಳೆ ಮನೆಯ ಬೀಗ ಒಡೆದು ಒಳನುಗ್ಗಿದ ಕಳ್ಳರು ರೂ 14ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿದ ಘಟನೆ ಸಂಭವಿಸಿದೆ.ಕೊಲ್ಪೆದ ಬೈಲು ನಿವಾಸಿ ವಸಂತಿ ಹೆಗ್ಡೆ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯವರು ಎ.20 ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿ ಬೆಳ್ತಂಗಡಿ ಗೆ ತೆರಳಿದ್ದರು.ಸಂಜೆ ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ‌ಬಾಗಿಲಿನ ಬೀಗ ಒಡೆದಿರುವುದು ಕಂಡು ಬಂದಿದೆ ಪರಿಶೀಲಿಸಿದಾಗ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಮನೆಯ ಕೋಣೆಯ ಕಪಾಟಿನಲ್ಲಿ...