Home ಸ್ಥಳೀಯ ಸಮಾಚಾರ ಕೆರೆಯಲ್ಲಿ ಕಾಡುಕೋಣದ ಮೃತದೇಹ ಪತ್ತೆ

ಕೆರೆಯಲ್ಲಿ ಕಾಡುಕೋಣದ ಮೃತದೇಹ ಪತ್ತೆ

399
0


ಕೊಯ್ಯೂರು ಗ್ರಾಮದ ಬದ್ಯಾರು ಎಂಬಲ್ಲಿ ಕೃಷಿಕರೊಬ್ಬರ ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತ ದೇಹ ಕಂಡುಬಂದ ಘಟನೆ ಭಾನುವಾರ ನಡೆದಿದೆ.
ಕಾಡುಕೋಣದ ಮೃತ ದೇಹವನ್ನು ಅರಣ್ಯ ಇಲಾಖೆ, ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಹಾಗೂ ಸ್ಥಳೀಯರು ಸೇರಿ ಸೋಮವಾರ ಕೆರೆಯಿಂದ ಮೇಲೆತ್ತಿದರು.


ನೀರು ಅರಸಿಕೊಂಡು ಬಂದ ಸುಮಾರು 6 ವರ್ಷ ಪ್ರಾಯದ ಕಾಡುಕೋಣ ನೀರು ಕುಡಿದ ಬಳಿಕ ಕೆರೆಯ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾರದೆ ಎರಡು ದಿನಗಳ ಹಿಂದೆ ಮೃತಪಟ್ಟಿರುವ ಕುರಿತು ಶಂಕಿಸಲಾಗಿದೆ. ಘಟನೆ ಮನೆಯವರಿಗೆ ತಡವಾಗಿ ತಿಳಿದು ಬಂದಿದ್ದು ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಎಸಿಎಫ್ ಸುಬ್ಬಯ್ಯ ನಾಯ್ಕ್ ,ಉಪ್ಪಿನಂಗಡಿ ಆರ್ ಎಫ್ ಒ ಜಯಪ್ರಕಾಶ್, ಡಿ ಆರ್ ಎಫ್ ಒ ಭರತ್ ಹಾಗೂ ಸಿಬ್ಬಂದಿಗಳ ಸಮಕ್ಷಮದಲ್ಲಿ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರಾದ ರವೀಂದ್ರ ನಾಯ್ಕ ಉಜಿರೆ, ಅನಿಲ್, ಸುರೇಂದ್ರ, ಶರೀಫ್, ಸುಲೇಮಾನ್, ಹರೀಶ್ ಕೂಡಿಗೆ, ಅವಿನಾಶ್ ಭಿಡೆ, ಪ್ರಕಾಶ್, ನಳಿನ್ ಬೇಕಲ್ ಮತ್ತಿತರರು ಮೃತ ದೇಹವನ್ನು ಕೆರೆಯಿಂದ ಮೇಲೆತ್ತಲು ಸಹಕರಿಸಿದರು.
ಪಶುವೈದ್ಯಾಧಿಕಾರಿ ಡಾ.ವಿಶ್ವನಾಥ್ ಪೋಸ್ಟ್ ಮಾರ್ಟಂ ನಡೆಸಿದ ಬಳಿಕ ಮೃತ ದೇಹವನ್ನು ದಫನ ಮಾಡಲಾಯಿತು

LEAVE A REPLY

Please enter your comment!
Please enter your name here