ಗಾಂಜಾ ಮಾರಾಟ ಆರೋಪಿಯ ಬಂಧನ
ಪುತ್ತೂರು; ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಜಂಕ್ಷನ್ ಎಂಬಲ್ಲಿ ವ್ಯಕ್ತಿಯೋರ್ವ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಪುತ್ತೂರು ನಗರ ಠಾಣಾ ಪಿ.ಎಸ್.ಐ ಜನಾರ್ಧನ ಕೆ.ಎಂ ರವರು ಸಿಬ್ವಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ, ಆತನನ್ನು ತಡೆದು ವಿಚಾರಿಸಿದಾಗ, ಆತನು ಪುತ್ತೂರು ಕಸಬಾ ಗ್ರಾಮ ನಿವಾಸಿ ಮಹಮ್ಮದ್ ತೌಸೀಫ್ (36)ಎಂಬುದಾಗಿ ತಿಳಿಸಿದ್ದು, ತನ್ನ ಬಳಿ ನಿಷೇಧಿತ ಗಾಂಜಾ ಇರುವುದಾಗಿ ಒಪ್ಪಿಕೊಂಡಿರುತ್ತಾನೆ. ತಪಾಸಣೆ ನಡೆಸಿದಾಗ 400 ಗ್ರಾಂ ಗಾಂಜಾ ಪತ್ತೆಯಾಗಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಆತನನ್ನು ವಶಕ್ಕೆ ಪಡೆದು ಈ ಬಗ್ಗೆ ಪುತ್ತೂರು ನಗರ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 418 ಶಾಲೆಗಳಿಗೆ 3,472 ಜೊತೆ ಡೆಸ್ಕ್-ಬೆಂಚ್ಗಳ ವಿತರಣೆ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಶಾಲಾಕೊಠಡಿ, ಆಟದಮೈದಾನ, ಕುಡಿಯುವನೀರು, ಶೌಚಾಲಯ, ರಂಗಮಂದಿರ, ಬೋಧನಾಸಾಮಾಗ್ರಿಗಳ ವಿತರಣೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪ್ರೋತ್ಸಾಹ ನೀಡಲಾಗುತ್ತದೆ ಇದಕ್ಕಾಗಿ ಈ ವರೆಗೆ 47.69 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ 418 ಶಾಲೆಗಳಿಗೆ 3,472 ಜೊತೆ ಡೆಸ್ಕ್-ಬೆಂಚ್ಗಳ ವಿತರಣೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಿಗೆ 1074...
ಬೆಳ್ತಂಗಡಿ : ಅಕ್ರಮ ಕಟ್ಟಡಗಳ ವಿರುದ್ದ ಕ್ರಮ ಕೈಗೊಳ್ಳದ ಆರೋಪ; ಲಾಯಿಲ ಪಿಡಿಓ ಶ್ರೀನಿವಾಸ್ ವರ್ಗಾವಣೆ
ಬೆಳ್ತಂಗಡಿ : ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜಿನಿಕರಿಂದ ಹಾಗೂ ಗ್ರಾ.ಪಂ ಸದಸ್ಯರುಗಳಿಂದ ಬಂದ ಆರೋಪಗಳ ಹಿನ್ನಲೆಯಲ್ಲಿ ಸಭೆಯಲ್ಲಿ ಶಾಸಕರು ನೀಡಿದ ಸೂಚನೆಯಂತೆ ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಶ್ರೀನಿವಾಸ್ ಡಿ.ಪಿ ಅವರನ್ನು ಬೆಳ್ತಂಗಡಿ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ಅವರು ಡಿ.30 ರಂದು ವರ್ಗಾವಣೆ ಮಾಡಿದ್ದಾರೆ. ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಸಮಯಗಳಿಂದ ಅಕ್ರಮ ಕಟ್ಟಡಗಳು ಯಾವುದೇ ಗ್ರಾಮ ಪಂಚಾಯತ್ ಅನುಮತಿ...
ಜ.3,4 ನಲಿಕೆ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟ
ಬೆಳ್ತಂಗಡಿ: ನಲಿಕೆ ಸಮಾಜ ಬಾಂಧವರ 5 ಓವರ್ಗಳ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮಾರಿಗುಡಿ ಫ್ರೆಂಡ್ಸ್ ಟ್ರೋಫಿ - 2026 ಜ.3 ಹಾಗೂ ಜ.4ರಂದು ತಾಲೂಕು ಕ್ರೀಡಾಂಗಣ ಬೆಳ್ತಂಗಡಿಯಲ್ಲಿ ಜರುಗಲಿದೆ ಎಂದು ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಕೋಡಿ ಹೇಳಿದರು.ಅವರು ಜ.1ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.3ರಂದು ಸಂಜೆ ಗಂಟೆ 7.00ಕ್ಕೆ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಶಶಿ ಬಂಗಾಡಿ ದೈವ ನರ್ತಕರು...
ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ಓಡಿಲ್ನಾಳ ಗ್ರಾಮದ ಕಟ್ಟದ ಬೈಲ್ ನಿವಾಸಿಮಂಜುನಾಥ ನಾಯಕ್ (42ವ) ಅವರು ತಮ್ಮ ಮನೆಯ ಕೊಠಡಿಯ ಒಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.1ರಂದು ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಯಾಗಿದ್ದು ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆ ಗೆ ಕಾರಣ ತಿಳಿದು ಬಂದಿಲ್ಲಮೃತರು ತಂದೆ ,ತಾಯಿ, ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.
ಬೆಳಾಲು;”ಪರೀಕ್ಷಾ ಸಿದ್ಧತೆ ಕಾರ್ಯಾಗಾರ”
ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ "ಪೋಷಕ- ವಿದ್ಯಾರ್ಥಿ ಸಂವಾದ" ಕಾರ್ಯಕ್ರಮವು ಡಿ. 30ರಂದು ನಡೆಯಿತು. ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಏನು? ಯಾಕೆ? ಹೇಗೆ? ಎಂಬ ವಿಷಯದಲ್ಲಿ ಪರೀಕ್ಷಾ ಸಿದ್ಧತೆಯ ಕುರಿತು ಒಂದು ದಿನದ ತರಬೇತಿ ಕಾರ್ಯವನ್ನು ಕಾರ್ಯಗಾರವನ್ನು ನಡೆಸಲಾಯಿತು.ವಿದ್ಯಾರ್ಥಿಗಳ ಪೋಷಕರಿಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಸಮಯದಲ್ಲಿ ಪೋಷಕರ ಪಾತ್ರ ಎಂಬ ವಿಷಯದಲ್ಲಿ ತರಬೇತಿಯನ್ನು ನೀಡಲಾಯಿತು.ಈ ತರಬೇತಿಯನ್ನು ಉಜಿರೆ ಶ್ರೀ ಧ. ಮಂ. ಪದವಿ ಕಾಲೇಜಿನ ನಿವೃತ್ತ...
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಗೆಅಬ್ಬೋನು ಮದ್ದಡ್ಕ ನೇಮಕ
ಬೆಳ್ತಂಗಡಿ: ಸುಲ್ತಾನುಲ್ ಉಲಮ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಎ.ಪಿ ಉಸ್ತಾದ್ ನಿರ್ದೇಶನ ಪ್ರಕಾರ ಪುನರ್ಸಂಘಟಿಸಲಾದ ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯ ಸಮಿತಿಗೆ, ಜಂ ಇಯ್ಯತುಲ್ ಉಲಮಾ ನಿರ್ದೇಶನ ಪ್ರಕಾರ ಕೆಲವು ಸದಸ್ಯರನ್ನು ಸೇರ್ಪಡೆ ಗೊಳಿಸಲಾಗಿದ್ದು ಅದರಲ್ಲಿ ಬೆಳ್ತಂಗಡಿ KMJ ಝೋನ್ ಉಪಾಧ್ಯಕ್ಷ ಅಬ್ಬೋನು ಮದ್ದಡ್ಕ ಇವರು ರಾಜ್ಯ ಸಮಿತಿಗೆ ನೇಮಕಗೊಂಡಿರುತ್ತಾರೆ.
ನಿವೃತ್ತ ಪ್ರಾಂಶುಪಾಲರ ಮನೆಗೆ ನುಗ್ಗಿ ಕಳವಿಗೆ ಯತ್ನ ಅರ್ಚಕ ಹಾಗೂ ಪತ್ನಿಯ ಬಂಧನ
ಪುತ್ತೂರು; ನಿವೃತ್ತ ಪ್ರಾಂಶುಪಾಲರ ಮನೆಗೆ ಮಧ್ಯರಾತ್ರಿ ನುಗ್ಗಿ ದರೋಡೆಗೆ ಯತ್ನಿಸಿ, ದಂಪತಿಯನ್ನು ಬೆದರಿಸಿದ ಪ್ರಕರಣದಲ್ಲಿ ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಆರ್ಚಕ ಹಾಗೂ ಆತನಪತ್ನಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಗಳು ಕಾರ್ತಿಕ್ ರಾವ್(31) ಹಾಗೂ ಅವರ ಪತ್ನಿ ಸ್ವಾತಿ ರಾವ್ ಎಂಬವ ರಾಗಿದ್ದಾರೆಪುತ್ತೂರು ಕಸಬಾ ನಿವಾಸಿ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ(84) ಅವರು ನೀಡಿದ ದೂರಿನಂತೆ ಡಿ.17ರ ಮಧ್ಯರಾತ್ರಿ ಯಾರೋ ಇಬ್ಬರು ಅಪರಿಚಿತರು ಹೆಲೈಟ್ ಧರಿಸಿಕೊಂಡು ಮುಖಚಹರೆಯನ್ನು ಮರೆಮಾಚಿ, ಮನೆ ಹಿಂಬಾಗಿಲಿನಿಂದ ಪ್ರವೇಶಿಸಿ ಬೆಲೆಬಾಳುವ ಸೊತ್ತುಗಳನ್ನು ಕಳ್ಳತನ ಮಾಡಲು...
ಧರ್ಮಸ್ಥಳ ಅದ್ಬುತ ಅಲಂಕಾರದಿಂದ ಕಣ್ಮನ ಸೆಳೆಯುತ್ತಿರುವ ದೇವಸ್ಥಾನ
ಧರ್ಮಸ್ಥಳ: ಹೊಸವರ್ಷಕ್ಕೆ ಬೆಂಗಳೂರಿನ ಭಕ್ತರಾದ ಗೋಪಾಲ ರಾವ್ ಮತ್ತು ಆನಂದ ರಾವ್ ಬಳಗದವರು ಧರ್ಮಸ್ಥಳದಲ್ಲಿ ದೇವಸ್ಥಾನದ ಒಳಾಂಗಣ, ಹೊರಾಂಗಣ, ಬೀಡು (ಹೆಗ್ಗಡೆಯವರ ನಿವಾಸ) ಹಾಗೂ ಕಟ್ಟಡಗಳನ್ನು ವಿವಿಧ ಜಾತಿಯ ಹೂಗಳನ್ನು ಮತ್ತು ಎಲೆಗಳನ್ನು ಬಳಸಿ ಆಕರ್ಷಕ ವಿನ್ಯಾಸದಿಂದ ಸಿಂಗರಿಸಿದ್ದಾರೆ. ಹಳದಿ ಸೇವಂತಿಗೆ, ಬಿಳಿ ಸೇವಂತಿಗೆ, ಕೆಂಪು ಸೇವಂತಿಗೆ, ಗುಲಾಬಿ ಬಟನ್, ರೋಸ್ಪೆಟಲ್ಸ್, ಸುಗಂಧರಾಜ ಮೊದಲಾದ ಹೂವುಗಳು ಹಾಗೂ ಸೇಬು, ಮುಸುಂಬಿ ಮತ್ತು ಕಿತ್ತಳೆ ಮೊದಲಾದ ಹಣ್ಣುಗಳು, ವಿವಿಧ ಜಾತಿಯ ಎಲೆಗಳನ್ನು ಬಳಸಿ ಆಕರ್ಷಕ ವಿನ್ಯಾಸದಲ್ಲಿ ಅಲಂಕಾರ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ೧೫೦ ಮಂದಿ ಸ್ವಯಂಸೇವಕರಾಗಿ...
ನೆರಿಯ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು
ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಡಿ 31 ರಂದು ಜರಗಿದೆ.ನೆರಿಯ ಗ್ರಾಮದ ಗಂಡಿ ಬಾಗಿಲು ನಿವಾಸಿ ಜಾನ್ ಪಿ.ಜೆ.(52)ಮೃತಪಟ್ಟವರು.ಅವರು ಡಿ.25ರಂದು ಗಂಡಿಬಾಗಿಲು-ಅಂಬಟೆಮಲೆ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಕೋಮಾ ಅವಸ್ಥೆಯಲ್ಲಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ,ಬಳಿಕ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.ಕೃಷಿಕರಾಗಿದ್ದ ಅವರಿಗೆ ಪತ್ನಿ,ಪುತ್ರ ಹಾಗೂ...














