ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ಇದರ ವತಿಯಿಂದ ಹರೀಶ್ ಪೂಂಜ ಅವರ ಹುಟ್ಟು ಹಬ್ಬದ ಪ್ರಯುಕ್ತ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಕುವೆಟ್ಟು ನಿವಾಸಿ ಕಮಲರವರಿಗೆ ನೂತನ ನೂತನ ಮನೆ ನಿರ್ಮಾಣ ಸಂಕಲ್ಪದೊಂದಿಗೆ ಪ್ರಾರ್ಥನೆ

0

ಗುರುವಾಯನಕೆರೆ : ಆ.17 ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ಗುರುವಾಯನಕೆರೆ ಇದರ ವತಿಯಿಂದ ಜನಪ್ರಿಯ ಶಾಸಕರಾದ ಹರೀಶ್ ಪೂಂಜ ಅವರ ಹುಟ್ಟು ಹಬ್ಬದ ಪ್ರಯುಕ್ತ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು.ಶಾಸಕರ ಹುಟ್ಟು ಹಬ್ಬದ ಪ್ರಯುಕ್ತ ಈ ಬಾರಿ ಕುವೆಟ್ಟು ಗ್ರಾಮದ ಬರಾಯ ನಿವಾಸಿ ಬಡ ಕುಟುಂಬದ ಕಮಲ ಅವರಿಗೆ ಶಾಸಕರ ಸಹಕಾರದೊಂದಿಗೆ ,ಸಾಯಿ ರಾಮ್ ಫ್ರೆಂಡ್ಸ್ ಹಾಗು ದಾನಿಗಳ ನೆರವಿನೊಂದಿಗೆ ಮನೆ ನಿರ್ಮಾಣ ಮಾಡಿಕೊಡುವ ಸಂಕಲ್ಪದೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್...

ಯುವವಾಹಿನಿ (ರಿ.) ಬೆಳ್ತಂಗಡಿ ಘಟಕಆಟಿದ ನೆಂಪು’ ಕಾರ್ಯಕ್ರಮ

0

ಬೆಳ್ತಂಗಡಿ: ತುಳುನಾಡಿನ ಸಮೃದ್ಧ ಸಂಸ್ಕೃತಿ ಮತ್ತು ಅನನ್ಯ ಆಹಾರ ಪದ್ಧತಿಯನ್ನು ಸಾರುವ 'ಆಟಿದ ನೆಂಪು' ಕಾರ್ಯಕ್ರಮವು ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಆಗಸ್ಟ್ 15 ರಂದು ಬೆಳ್ತಂಗಡಿಯ ಗುರುನಾರಾಯಣ ಸಭಾಭವನದಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿತು. ಘಟಕದ ಅಧ್ಯಕ್ಷೆ ಲೀಲಾವತಿ ಪಣಕಜೆ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮಹಿಳಾ ಬಿಲ್ಲವ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಸುಜಿತಾ ವಿ. ಬಂಗೇರ ಅವರು ಸಾಂಪ್ರದಾಯಿಕ ಲಾಟನ್ ದೀಪ (lamp)ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಟಿ ತಿಂಗಳಿನ ಸಂಪ್ರದಾಯಗಳು ಹಾಗೂ ಆಚರಣೆಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು. ಆಟಿದ...

ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ಬಂಜೆತನ ನಿವಾರಣಾ ಶಿಬಿರ

0

“ಬಂಜೆತನ ಪತಿ- ಪತ್ನಿ ಇಬ್ಬರಿಗೂ ಸಂಬಂಧಿಸಿದ ಸಮಸ್ಯೆ” - ಡಾ. ಗೋಪಾಲಕೃಷ್ಣ ಕೆ. ಬೆಳ್ತಂಗಡಿ;  NABH ಪುರಸ್ಕೃತ ಉಜಿರೆ ಬೆನಕ ಹೆಲ್ತ್ ಸೆಂಟರ್, ಬೆನಕ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಆನ್ಸ್ ಕ್ಲಬ್ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಉಜಿರೆಯ ಬೆನಕ ಹೆಲ್ತ್ ಸೆಂಟರ್‌ನಲ್ಲಿ ಉಚಿತ ಬಂಜೆತನ ನಿವಾರಣಾ ಶಿಬಿರ ಇತ್ತೀಚಿಗೆ ನಡೆಯಿತು.ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿ ಸಿ ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ರೋ. ಶ್ರೀಧರ್ ಕೆ.ವಿ. ಇವರು ಮಾತನಾಡಿ, ಬಂಜೆತನದ ಕುರಿತು ಸಮಾಜದಲ್ಲಿ ವೈಜ್ಞಾನಿಕ ಅರಿವು ಮೂಡಿಸುವ...

ಬಂಟ್ವಾಳ ಅಜ್ಜಿಯ ಚಿನ್ನದ ಬಳೆ ಅಪಹರಿಸಿದ ಮೊಮ್ಮಗ ನ ಬಂಧನ

0

ಬೆಳ್ತಂಗಡಿ;  ಪುಂಜಾಲಕಟ್ಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಬಂಟ್ವಾಳ ತೆಂಕಕಜೆಕಾರು ಉದ್ದದ ಗುಡ್ಡೆ ಎಂಬಲ್ಲಿ ಮನೆಯಲ್ಲಿ  ಸಾದಿಕ್‌ ಎಂಬವರ ತಾಯಿ ಅವ್ವಮ್ಮ (82) ಎಂಬವರು  ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆ14 ರಂದು ಯಾರೋ ಅಪರಿಚಿತ ವ್ಯಕ್ತಿಯೋರ್ವನು ಮುಖಚಹರೆ ಕಾಣದಂತೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮನೆಯೊಳಗೆ ಬಂದು ಪಿರ್ಯಾದಿದಾರರ ತಾಯಿಯ ಎರಡು ಕೈಯಲ್ಲಿದ್ದ ಸುಮಾರು 5,00,000/- ಮೌಲ್ಯದ ಸುಮಾರು 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿದ್ದು, ಈ ವೇಲೆ ಸದ್ರಿಯವರ ಕೈಗೆ ರಕ್ತಗಾಯವಾಗಿರುವ ಬಗ್ಗೆ ಸಾದಿಕ್‌ ಎಂಬವರು ನೀಡಿದ ದೂರಿನಂತೆ ಪುಂಜಾಲಕಟ್ಟೆ...

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ

0

ತೋಟತ್ತಾಡಿ: ಶ್ರೀ ಸೋಮನಾಥೇಶ್ವರ ದೇವಸ್ಥಾನ ಬೈಲಂಗಡಿ ತೋಟತ್ತಾಡಿ ನಾಗರ ಪಂಚಮಿ ಪ್ರಯುಕ್ತ ದೇವಸ್ಥಾನದ ಜಾಗದಲ್ಲಿರುವ ನಾಗಬನದಲ್ಲಿ ನಾಗದೇವರಿಗೆ ಪಂಚಮಿ ಪ್ರಯುಕ್ತ ಸಿಯಾಳ ಅಭಿಷೇಕ, ಹಾಲಿನ ಅಭಿಷೇಕ ಸಹಿತ ತಂಬಿಲಸೇವೆ ನಡೆಯಿತು.ಊರಿನ ಮತ್ತು ಪರ ಊರಿನ ಭಕ್ತಾದಿಗಳು ನಾಗರಪಂಚಮಿಯ ಕಾರ್ಯಕ್ರಮದಲ್ಲಿ ಭಾಗಿಯಾದರು. ದೇವಸ್ಥಾನದ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು

ಡಿ.ವೈ.ಎಫ್.ಐ. ನೂತನ ಅಧ್ಯಕ್ಷರಾಗಿ ಅಧಿತಿ ಕೊಯ್ಯೂರು ಪ್ರಧಾನ ಕಾರ್ಯದರ್ಶಿಯಾಗಿ ಅಭಿಷೇಕ್ ಪದ್ಮುಂಜ  ಖಜಾಂಜಿಯಾಗಿ ಜಯಂತ ಪಟ್ರಮೆ ಆಯ್ಕೆ

0

ಬೆಳ್ತಂಗಡಿ; ಇತ್ತೀಚೆಗೆ ನಡೆದ ಭಾರತ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟ (ಡಿ.ವೈ.ಎಫ್.ಐ.) ಬೆಳ್ತಂಗಡಿ ತಾಲೂಕು 10ನೇ ಸಮ್ಮೇಳನವು ನೂತನ ತಾಲೂಕು ಅಧ್ಯಕ್ಷರನ್ನಾಗಿ ಅದಿತಿ ಕೊಯ್ಯೂರು ಪ್ರಧಾನ ಕಾರ್ಯದರ್ಶಿಯನ್ನಾಗಿ ಅಭಿಷೇಕ್ ಪದ್ಮುಂಜ, ಖಜಾಂಜಿಯಾಗಿ ಜಯಂತ ಪಟ್ರಮೆ ಅವರುಗಳು ಮರು ಆಯ್ಕೆ ಆದರು. ನೂತನ ಉಪಾಧ್ಯಕ್ಷರುಗಳಾಗಿ ಅಶ್ವಿತ ಕುತ್ಲೂರು ಮತ್ತು ನಝೀರ್ ಕಕ್ಕಿಂಜೆ ಹಾಗೂ ಸಹಕಾರ್ಯದರ್ಶಿಗಳಾಗಿ ವಿನುಶರಮಣ ಬೋಳೋಡಿ ಮತ್ತು ಇಂತಿಯಾಸ್ ಕಲ್ಲೇರಿ ಅವರುಗಳು ಸರ್ವಾನುಮತದಿಂದ ಆಯ್ಕೆಯಾದರು. ಜೊತೆಗೆ ಭುವನೇಶ್, ವಿಶಾಲ್, ನಿತಿನ್, ರಂಜಿತ್, ರತನ್, ದೀಕ್ಷಿತ್, ಆನಂದ, ಶಿವಪ್ಪ, ರೋಹಿತ್, ಯಶೋಧರ, ತಾಜುದ್ದೀನ್ ಮೊದಲಾದ 11...

ಬೆಳ್ತಂಗಡಿ ತಾಲೂಕು ಕುಲಾಲ ಸಂಘದಿಂದ ಬೆಸ್ಟ್ ಎಂ.ಎಲ್.ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಗೌರವಾಪ೯ಣೆ

0

ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘಗುರುವಾಯನಕೆರೆ,ಕುಲಾಲ,ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ಮತ್ತು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಕಟ್ಟಡ ಸಮಿತಿ ಇದರ ಸಹಯೋಗದಲ್ಲಿ ನಡೆದಆಟಿಡೊಂಜಿಹಾಗೂ ಬೆಸ್ಟ್ ಎಂ.ಎಲ್.ಎ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾರವರಿಗೆಅಭಿನಂದನಾ ಕಾರ್ಯಕ್ರಮಆ.16ರಂದು ಕುಲಾಲ ಮಂದಿರದಲ್ಲಿ ಜರುಗಿತು.ಸಮಾರಂಭದಲ್ಲಿ ಬೆಸ್ಟ್ ಎಂ.ಎಲ್.ಎ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜರನ್ನು ಶಾಲು ಹೊದಿಸಿ, ಪೇಟಾ ತೊಡಿಸಿ ಕುಲಾಲ ಸಮಾಜದ ವತಿಯಿಂದ ಗೌರವಿಸಲಾಯಿತು.ನಂತರ ಮಾತನಾಡಿದ...

ಧರ್ಮಸ್ಥಳದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಲಯಾಳಿ ಕ್ರೈಸ್ತ ಬಾಂಧವರ ಸಭೆ

0

ಬೆಳ್ತಂಗಡಿ;  ಧರ್ಮಸ್ಥಳದ ನೇತ್ರಾವತಿಯಲ್ಲಿರುವ ಪಾರಿಜಾತ ಸಭಾಂಗಣದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಗ್ರಾಮೀಣ ಘಟಕದ ಅಧ್ಯಕ್ಷರಾದ  ಪಿ.ಟಿ. ಸಬಾಸ್ಟಿಯನ್ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ವಿಂಗ್‌ನ ಮಲಯಾಳಿ ಕ್ರೈಸ್ತ ಬಾಂಧವರ ಸಭೆ ನಡೆಯಿತು. ಸಭೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಲ್ಲರಿಗೂ ಶುಭಾಶಯಗಳನ್ನು ಕೋರಲಾಯಿತು. ಇದೇ ಸಂದರ್ಭದಲ್ಲಿ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಹಾಗೂ ಕ್ರೈಸ್ತ ಸಮುದಾಯಕ್ಕೆ ಸಂಬಂಧಿಸಿದ ವಿವಿಧ ಪ್ರಮುಖ ವಿಚಾರಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ವಿಶೇಷವಾಗಿ ಕಸ್ತೂರಿರಂಗನ್ ವರದಿಯ ಅನುಷ್ಠಾನದಿಂದ ನಮ್ಮ ಬಹುತೇಕ ಜನರಿಗೆ ಉಂಟಾಗಬಹುದಾದ ತೊಂದರೆಗಳು ಹಾಗೂ ಅದರ ಪರಿಣಾಮಗಳ ಕುರಿತು ಚರ್ಚಿಸಲಾಯಿತು. ಈ ವಿಚಾರದಲ್ಲಿ...

ನೆರಿಯ ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಸಭೆ; ಜನರ ಬದುಕು ಕಸಿಯುವ ವರದಿ‌ ಅನುಷ್ಠಾನ ಬೇಡ‌ ರಕ್ಷಿತ್‌ ಶಿವರಾಂ

0

ಬೆಳ್ತಂಗಡಿ; ಪಶ್ಚಿಮ ಘಟ್ಟ ಸೇರಿದಂತೆ ಅರಣ್ಯ ಸಂರಕ್ಷಣೆಯ ಅಗತ್ಯವಿದೆ ಆದರೆ ಅದರ‌ ಹೆಸರಿನಲ್ಲಿ ಜನರ ಬದುಕನ್ನು ನಾಶ ಪಡಿಸುವ ಕಸ್ತೂರಿರಂಗನ್ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಅದರ ವಿರುದ್ಧ ಜನಜಾಗೃತಿ ಮೂಡಿಸುವ ಜೊತೆಗೆ ತೀವ್ರ ಸ್ವರೂಪದ ಹೋರಾಟಕ್ಕೆ ಜನರು ಮುಂದಾಗಬೇಕು ಎಂದು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ತಾಲೂಕು ಸಂಚಾಲಕ ರಕ್ಷಿತ್ ಶಿವರಾಂ ಕರೆ ನೀಡಿದರು. ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ನೆರಿಯ ಗ್ರಾಮ ಸಮಿತಿ ವತಿಯಿಂದ ನೆರಿಯ ಗ್ರಾಮ ಪಂಚಾಯತ್ ಆವರಣದಲ್ಲಿ ಅದಿತ್ಯವಾರ ನಡೆದ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಮಣ್ಣಿನ...

ಮಾದಕವಸ್ತು ಸಾಗಾಟ ಜಾಲ ಪತ್ತೆ, ಓರ್ವ ಆರೊಪಿ ಬಂಧನ ಒಂದು ಕೋಟಿ ಮೌಲ್ಯದ ಸೊತ್ತುಗಳು ವಶಕ್ಕೆ.

0

ಬಂಟ್ವಾಳ; ಹಾಸನದಿಂದ ಮಂಗಳೂರಿಗೆ ಮಾದಕ ವಸ್ತುಗಳ‌ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬಂಟ್ವಾಳ ಪೊಲೀಸರು ಪತ್ತೆ ಹಚ್ಚಿದ್ದು ಆರೋಪಿಯನ್ನು ಬಂಧಿಸಿ ರೂ ಒಂದು ಕೋಟಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಾಗಿದೆ.ಬಂಧಿತ ಆರೋಪಿ ಬೆಂಗಳೂರು ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಎಂಬಾತನಾಗಿದ್ದಾನೆ.ಆ 16 ರಂದು ರಾತ್ರಿ, ಮಂಜುನಾಥ ಟಿ, ಪೊಲೀಸ್‌ ಉಪನಿರೀಕ್ಷಕರು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆರವರಿಗೆ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಮಾದಕವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಗಳೊಂದಿಗೆ ತಡರಾತ್ರಿ KA-01-MA-1284 ನೋಂದಣಿಯ ಕಾರೊಮದನ್ನು ತಡೆದು ಸದ್ರಿ ವಾಹನ ಚಾಲಕನಾಗಿದ್ದ...