ಬೆಳ್ತಂಗಡಿ : 82 ವರ್ಷದ ವೃದ್ಧೆಯ 40 ಗ್ರಾಂ ತೂಕದ ಚಿನ್ನದ ಬಳೆ ಎಳೆದೊಯ್ದ ಕಳ್ಳ

0

ಬೆಳ್ತಂಗಡಿ : ಮನೆಯಲ್ಲಿ ಒಬ್ಬರೇ ಇದ್ದ 82 ವರ್ಷದ ವೃದ್ಧೆಯ ಕೈಯಲ್ಲಿದ್ದ ಸುಮಾರು 5 ಲಕ್ಷ ಮೌಲ್ಯದ ಚಿನ್ನದ ಬಳೆಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿರುವ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಉದ್ದದ ಗುಡ್ಡೆಯಲ್ಲಿ ನಡೆದಿದೆ. ಆ.14 ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿದೆ. ಉದ್ದದ ಗುಡ್ಡೆ ನಿವಾಸಿ ಅವ್ವಮ್ಮ (82) ಅವರು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಪ್ರವೇಶಿಸಿದ್ದಾನೆ ಎನ್ನಲಾಗಿದೆ. ಆರೋಪಿ, ಅವ್ವಮ್ಮ ಅವರ...

ಬೆಳ್ತಂಗಡಿ; ತಾಲೂಕು ಆಡಳಿತದ ನೇತೃತ್ವದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

0

ಬೆಳ್ತಂಗಡಿ; ತಾಲೂಕು ಆಡಳಿತ ಬೆಳ್ತಂಗಡಿ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಸಂಭ್ರಮದಿಂದ ಮಿನಿ ವಿಧಾನ ಸೌಧದ ಆವರಣದಲ್ಲಿ ನಡೆಯಿತು.ಬೆಳ್ತಂಗಡಿ ತಹಶಿಲ್ದಾರರಾದ ಎಸ್.ಎನ್ ನರಗುಂದ ಅವರು ಧ್ವಜರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಇತಿಹಾವನ್ನು ನೆನಪಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಹಿಸಿ ಮಾತನಾಡುತ್ತಾ ವಿಕಸಿತ ಭಾರತಸ ಕನಸು ಈಡೇರಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟಸ ಇತಿಹಾಸವನ್ನು ಅರಿತುಕೊಂಡು ಅವರನ್ನು ಅನುಸರಿಸಿ ದೇಶ ಕಟ್ಟುವ ಕಾರ್ಯವನ್ನು ಮಾಡೋ‌ಣ ಕೇವಲ‌ದೇಶ ಪ್ರೇಮದ ಘೋಷಣೆ, ಸಾಮಾಜಿಕ‌ ಜಾಲತಾಣದ ಪೋಸ್ಟ್ ಮಾತ್ರವಲ್ಲ ಪ್ರತಿಯೊಬ್ಬರೂ...

ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

0

ಬೆಳ್ತಂಗಡಿ;  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಡಗರದಿಂದ ಆಚರಿಸಲಾಯಿತು. ಭಾರತೀಯ ಸೇನೆಯ ಮಾಜಿ ಸೈನಿಕರು,ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿರುವ ಶ್ರೀಯುತ ಜಯಕುಮಾರ್ ಅವರು ಧ್ವಜಾರೋಹಣವನ್ನು ನೆರವೇರಿಸಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.ಜೊತೆಗೆ ಸ್ವಾತಂತ್ರ್ಯ ಹೋರಾಟ ವೀರರ ತ್ಯಾಗ ಹಾಗೂ ಅವರಿಂದ ಅಳವಡಿಸಿಕೊಳ್ಳಬೇಕಾದ ಗುಣಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಇನ್ನೊಬ್ಬ ಮುಖ್ಯ ಅತಿಥಿ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಯಾಗಿ ನಿವೃತ್ತಿ...

ಬೆಂಗಳೂರಿನಲ್ಲಿ ಪತ್ನಿಯ ಕೊಲೆ ಮಾಡಿ ಆತ್ಮಹತ್ಯೆ ಗೆ ಶರಣಾದ ಬೆಳ್ತಂಗಡಿಯ ಯುವಕ

0

ಬೆಳ್ತಂಗಡಿ: ಬೆಂಗಳೂರು ನಗರದ ರಾಜೇಶ್ವರಿ ನಗರದಲ್ಲಿ ಬೆಳ್ತಂಗಡಿಯ ಯುವಕನೋರ್ವ ಹೆಂಡತಿಯನ್ನು ಕತ್ತು ಹಿಸುಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆ.13 ರಂದು ಮಧ್ಯರಾತ್ರಿ ನಡೆದಿದಿದ್ದು.ಮೃತರು ಪದ್ಮಾವತಿ (29) ಹಾಗೂ ಸುಮಂತ್ ಜೈನ್ (32) ಎಂಬವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಗೆ ಗ್ರಾಮದ ಎಳನೀರು ನಿವಾಸಿಯಾಗಿರುವ ಸುಮಂತ್ ಜೈನ್(32) ಸಿವಿಲ್‌ ಎಂಜಿನಿಯ‌ರ್ ಆಗಿದ್ದರು. ಹುಬ್ಬಳಿ ಮೂಲದ ಪದ್ಮಾವತಿ(29) ವೈಟ್ ಫೀಲ್ಡ್ ಸಮೀಪದ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಆ.13 ರಂದು ಮಧ್ಯರಾತ್ರಿ ಕೌಟುಂಬಿಕ ಕಲಹವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಸುಮಂತ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ....

ಕಸ್ತೂರಿ ರಂಗನ್ ವರದಿ ಅನುಷ್ಠನವನ್ನು ಕೇಂದ್ರ ಸರಕಾರ ಕೈಬಿಡಲಿ  ರಕ್ಷಿತ್‌ಶಿವರಾಂ ಒತ್ತಾಯ; ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಿ

0

ಬೆಳ್ತಂಗಡಿ; ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ರಾಜ್ಯದ‌ ಮಲೆನಾಡಿನ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಕೇಂದ್ರ ಸರಕಾರ ವರದಿ ಜಾರಿಗೆ ತರುವ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು, ರಾಜ್ಯದ ಸಂಸದರು ಕೇಂದ್ರ‌ರಕಾರದ ಮೇಲೆ ಒತ್ತಡ ಹೇರಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ರಂಗನ್ ವರದಿ ವಿರೋಧೀ ಹೋರಾಟ ಸಮಿತಿಯ ಸಂಚಾಲಕ ರಕ್ಷಿತ್ ಶಿವರಾಂ ಒತ್ತಾಯಿಸಿದ್ದಾರೆ.ಬೆಳ್ತಂಗಡಿ ಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಕಸ್ತೂರಿರಂಗನ್ ವರದಿ ವಿರುದ್ದ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು ತಾಲೂಕಿನಲ್ಲಿ ಇದರಿಂದ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ತೆರಳಿ ಜನಜಾಗೃತಿ...

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ “ಆಟಿದ ಕಲ”

0

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜು, ಹಳೇಕೋಟೆಯಲ್ಲಿ 'ಆಟಿದ ಕಲ' ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಬೆಳಗ್ಗೆ ಸಾಂಪ್ರದಾಯಿಕ ಆಟಿ ತಿಂಗಳ ತಿಂಡಿ-ತಿನಿಸುಗಳ ಸ್ಪರ್ಧೆಗಳ ಉದ್ಘಾಟನೆಯನ್ನು ವಾಣಿ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನೆರವೇರಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಸುಮಾರು 30 ತಂಡಗಳಲ್ಲಿ ಪಾಲ್ಗೊಂಡು ವಿವಿಧ ಬಗೆಯ ಸಾಂಪ್ರದಾಯಿಕ ಆಟಿ ತಿಂಡಿಗಳನ್ನು ತಯಾರಿಸಿ ಪ್ರದರ್ಶಿಸಿದರು. ವಿದ್ಯಾರ್ಥಿಗಳಿಂದ ತಯಾರಿಸಲಾದ ವೈವಿಧ್ಯಮಯ ಸಾಂಪ್ರದಾಯಿಕ ತಿಂಡಿಗಳು ಗಮನ ಸೆಳೆದವು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಕುಶಾಲಪ್ಪ ಗೌಡ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ...

ಬೆಳ್ತಂಗಡಿ : ಕಂದಾಯ ನಿರೀಕ್ಷಕರಾಗಿ ಮಲ್ಲೇಶ್ ಕರ್ತವ್ಯಕ್ಕೆ ಹಾಜರು;ಪವಡಪ್ಪ ದೊಡ್ಡಮನಿ ಕರ್ತವ್ಯದಿಂದ ಬಿಡುಗಡೆ

0

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ 23 ವರ್ಷಗಳಿಂದ ವಿವಿಧ ಹುದ್ದೆಯಲ್ಲಿ ಕರ್ತವ್ಯ ಮಾಡಿ ಕಳೆದ ಏಳು ವರ್ಷಗಳಿಂದ ಕೊಕ್ಕಡ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿದ್ದ ಪವಡಪ್ಪ ದೊಡ್ಡಮನಿಯವರನ್ನು ಮೂಡಬಿದಿರೆ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಸ್ಥಳಕ್ಕೆ ಸರಕಾರ ವರ್ಗಾವಣೆ ಮಾಡಿದ್ದು. ಮೂಡಬಿದಿರೆ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾಗಿದ್ದ ಕಳೆದ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಜಿ.ಎಸ್. ಮಲ್ಲೇಶ್ ಅವರನ್ನು ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಸ್ಥಳಕ್ಕೆ ಆ.31 ರಂದು ವರ್ಗಾವಣೆ ಮಾಡಲಾಗಿತ್ತು. ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕರಾಗಿ ಜಿ.ಎಸ್. ಮಲ್ಲೇಶ್ ಅವರು...

ಮುಂಡಾಜೆ ಸೈಂಟ್ ಮೇರೀಸ್ ಚರ್ಚ್ ಗೆ ರಕ್ಷಿತ್‌ ಶಿವರಾಂ ಭೇಟಿ ಮಳೆಯಿಂದಾದ‌ ಹಾನಿ ಪರಿಶೀಲನೆ

0

ಬೆಳ್ತಂಗಡಿ;  ಮಳೆಯಿಂದ ಸೈಂಟ್ ಮೇರಿಸ್ ಮುಂಡಾಜೆ ಚರ್ಚ್ ನ ತಡೆಗೋಡೆ ಕುಸಿದುಬಿದ್ದಿದ್ದು ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಧರ್ಮಗುರುಗಳಾದ ವರ್ಗೀಸ್ ಪುದಿಯೆಡತ್ಚರ್ಚ್ ಪಾಲನಾ ಸಮಿತಿಯ ಸದಸ್ಯರಾದ ಅಲೆಕ್ಸ್, ಸಿ.ವಿ.ಜೋಸೆಫ್ ಹಾಗೂ ತೋಮಸ್ ಕಿರಣ್, ಕೆ.ಕೆ ಜೋಸ್, ಆ್ಯಂಟನಿ ಅಗರಿ, ರೆನ್ನಿ ಅಗರಿ , ಸಂತೋಷ್, ಸೆಬಾಸ್ಟಿನ್ ,ಪ್ರಕಾಶ್.ವಿ.ಸ್, ರಾಜೇಶ್.ಕೆ.ವಿ ಲಿಜೋಸ್ಕರಿಯಾ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಪ್ರವೀಣ್ ಹಳ್ಳಿ ಮನೆ ಉಪಸ್ಥಿತರಿದ್ದರು

ಧರ್ಮಸ್ಥಳ ಸಹಕಾರ ಸಂಘದ ಐತಿಹಾಸಿಕ ಸಾಧನೆ-ರೂ. 2.89 ಕೋಟಿ ನಿವ್ವಳ ಲಾಭ – ಶೇ.21 ಡಿವಿಡೆಂಟ್ ಘೋಷಣೆ

0

ಧರ್ಮಸ್ಥಳ: ಸುಭಾಷ್ ಯಾದವ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಮತ್ತೊಮ್ಮೆ ದಾಖಲೆ ಸಾಧನೆ ಮಾಡಿದ್ದು 2025-26ನೇ ಸಾಲಿನಲ್ಲಿ ರೂ. 2.89 ಕೋಟಿ ನಿವ್ವಳ ಲಾಭಗಳಿಸಿರುವ ಸಂಘವು ಸದಸ್ಯರಿಗೆ ಶೇ.21 ಡಿವಿಡೆಂಟ್ ಘೋಷಿಸಿದೆ. ಆ.14 ರಂದು ಸಂಘದ ಸಾಧನಾ ಕಟ್ಟಡದ ಅಟಲ್ ಜೀ ಸಭಾ ಭವನದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಾಯಿತು. ಸಂಘದ ಅಧ್ಯಕ್ಷ ಪ್ರೀತಮ್ ಡಿ. ಅವರು ಅಧ್ಯಕ್ಷತೆ ವಹಿಸಿದ್ದರು. 100 ಕೋಟಿ ಠೇವಣಿ; ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಪ್ರೀತಮ್ ಡಿ....

ಬಂಟ್ವಾಳ ಕಾವಳ ಪಡೂರಿನಲ್ಲಿ ಪೊಲೀಸ್‌ ದಾಳಿ; ನಿಷೇಧಿತ ಎಂ.ಡಿ.ಎಂ.ಎ ಸೇರಿದಂತೆ 4 ಲಕ್ಷ 90 ಸಾವಿರ ಮೌಲ್ಯದ ಸೊತ್ತುಗಳು ವಶಕ್ಕೆ.

0

ಬಂಟ್ವಾಳ; ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಯಶ್ ಕುಮಾರ್ ಶರ್ಮಾ, ಐ.ಪಿ.ಎಸ್ ರವರ ನೇತೃತ್ವದ ತಂಡವು, ಬಂಟ್ವಾಳ‌ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಕಾವಳಪಡೂರು ಎಂಬಲ್ಲಿ ದಾಳಿ ನಡೆಸಿ, ಸುಮಾರು 2 ಲಕ್ಷ 25 ಸಾವಿರ ಮೌಲ್ಯದ 22.57 ಗ್ರಾಂ ನಿಷೇಧಿತ ಎಂ.ಡಿ.ಎಂ.ಎ ಹಾಗೂ 30.34 ಗ್ರಾಂ ಗಾಂಜಾ, ಡ್ರಗ್ಸ್ ಸಾಗಾಟಕ್ಕೆ ಬಳಸಿದ ಕಾರು ಹಾಗೂ 5 ಮೊಬೈಲ್‌ ಗಳು ಸೇರಿದಂತೆ ಒಟ್ಟು 4 ಲಕ್ಷ 90 ಸಾವಿರ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳುನಾಶೀರ್ ಹುಸೇನ್...