ದೇಶದಲ್ಲಿ ‘ಮಕ್ಕಳ ರಕ್ಷಣಾ ನೀತಿ’ ಜಾರಿಗೆ ಬಂದಿದ್ದರೂ 42% ಮಕ್ಕಳ ಧ್ವನಿ ಕೇಳಿಸುವುದೇ ಇಲ್ಲ ಪ್ರಗತಿ ಪರಿಶೀಲನಾ ಸಭೆಯಲ್ಲಿರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಕಳವಳ
ಬೆಳ್ತಂಗಡಿ : 2016ರಲ್ಲಿ ಮಕ್ಕಳ ರಕ್ಷಣಾ ನೀತಿ ಜಾರಿಗೆ ಬಂದರೂ ದೇಶದ 42% ಮಕ್ಕಳ ಧ್ವನಿ ಕೇಳುವುದೇ ಇಲ್ಲ ಎಂದು ತಿಪ್ಪೇಸ್ವಾಮಿ ಕಳವಳ ವ್ಯಕ್ತಪಡಿಸಿದರು.ಅವರು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ವಿವಿಧ ಇಲಾಖಾಧಿಕಾರಿಗಳ ಉಪಸ್ಥಿತಿಯಲ್ಲಿ ಕರೆಯಲಾಗಿದ್ದ ಮಕ್ಕಳ ಹಕ್ಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗುರುವಾರ ಮಾತನಾಡುತ್ತಾಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಎಂ ಇಲಾಖಾ ವಿದ್ಯಾರ್ಥಿ ನಿಲಯ ಹಾಗೂ ತಾಲೂಕಿನ ಶಾಲಾ ಕಾಲೇಜುಗಳ ಸ್ಥಿತಿಗತಿ ಮಾಹಿತಿಮತ್ತು ವಿದ್ಯಾರ್ಥಿ ನಿಲಯಗಳಲ್ಲಿ 18 ವರ್ಷದೊಳಗಿನ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಮಾಹಿತಿ, ಜಾಗೃತಿ ಕಾರ್ಯಕ್ರಮಗಳ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ...
ಬಂದಾರು ಪ್ರಾಥಮಿಕ ಶಾಲೆಯ ಬಾಲಕಿಯರ ವಾಲಿಬಾಲ್ ತಂಡಕ್ಕೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ
ಬಂದಾರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಛೇರಿ ಮಂಗಳೂರು ಇದರ ಆಶ್ರಯದಲ್ಲಿ ಮೂಡಬಿದ್ರೆ ರೋಟರಿ ಆಂಗ್ಲಮಾಧ್ಯಮ ಶಾಲಾ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ 14 ನೇ ವಯೋಮಾನದ ಬಾಲಕಿಯರ ವಿಭಾಗದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಹಾಸನದಲ್ಲಿ ನಡೆಯುವ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ಉತ್ತಮ ಪಾಸರ್ ಆಗಿ ಕು. ಅತಿಶ್ರೀ ಬಂದಾರು, ಉತ್ತಮ ಹೊಡೆತಗಾರ್ತಿಯಾಗಿ ಕು.ಯಶ್ಮಿತಾ ಬಂದಾರು ವೈಯಕ್ತಿಕ ಬಹುಮಾನ ಪಡೆದಿರುತ್ತಾರೆ. ವಿಜೇತ...
ಮುಂಡಾಜೆ ವಿವೇಕಾನಂದ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡಕ್ಕೆ ಸತತವಾಗಿ 14 ನೇ ಬಾರಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ
ಮುಂಡಾಜೆ :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ ಮಂಗಳೂರು ಇದರ ಆಶ್ರಯದಲ್ಲಿ ಮೂಡಬಿದ್ರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ 17 ರ ವಯೋಮಾನದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆಯ ಪ್ರೌಢಶಾಲಾ ಬಾಲಕಿಯರ ತಂಡ ಸತತ 14 ವರುಷಗಳಿಂದ ಪ್ರಥಮ ಸ್ಥಾನ ಪಡೆದು ಅಕ್ಟೋಬರ್ 8,9 ರಂದು ಹಾಸನದಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ. ಬೆಸ್ಟ್ ಪಾಸರ್ ಆಗಿ ಕು.ಸಿಂಚನಾ ಬಂದಾರು. ಬೆಸ್ಟ್ ಹೊಡೆತಗಾರ್ತಿಯಾಗಿ ಕು.ಯಕ್ಷಿತಾ...
ಧರ್ಮಸ್ಥಳ; ಕಳೆದು ಸಿಕ್ಕಿದ್ದ ಚಿನ್ನದ ಸರವನ್ನು ಹಿಂತಿರುಗಿಸಿ ಪ್ರಮಾಣಿಕತೆ ಮೆರೆದ ಪ್ರವೀಣ್
ಬೆಳ್ತಂಗಡಿ; ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಬಿದ್ದು ಸಿಕ್ಕಿದ ಚಿನ್ನದ ಮಾಂಗಲ್ಯ ಸರವನ್ನು ಪ್ರವೀಣ್ ಧರ್ಮಸ್ಥಳ ಅವರು ಪೊಲೀಸ್ ಅಧಿಕಾರಿಗಳಿಗೆ ಒಪ್ಪಿಸಿ ಆಮೂಲಕ ಸಂಬಂಧ ಪಟ್ಟ ಮನೆಯವರಿಗೆ ತಲುಪಿಸುವ ಕಾರ್ಯವನ್ನು ಮಾಡುದ್ದಾರೆ. ಅವರ ಈ ಪ್ರಾಮಾಣಿಕತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಶೀಪಟ್ಣ ಪತಿ ಪತ್ನಿ ನೇಣು ಬಿಗಿದು ಅತ್ಮಹತ್ಯೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಾಶಿಪಟ್ನ ಗ್ರಾಮದ ಉರ್ದು ಗುಡ್ಡೆ ಎಂಬಲ್ಲಿ ಪತಿ ಹಾಗೂ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಸ್ಥಳೀಯ ನಿವಾಸಿಗಳಾದ ನೊಣಯ್ಯ ಪೂಜಾರಿ63) ಹಾಗೂ ಬೇಬಿ (46) ಎಂಬವರೆ ಆತ್ಮಹತ್ಯೆ ಮಾಡಿಕೊಂಡ ದಂಪತಿಗಳಾಗಿದ್ದಾರೆ. ತಮ್ಮ ಮನೆಯ ಸಮೀಪ ಕಾಡಿನಲ್ಲಿ ಗುರುವಾರ ಇವರಿಬ್ಬರೂ ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ನೊಣಯ್ಯ ಪೂಜಾರಿ ಕಳೆದ ಐದು ವರ್ಷಗಳಿಂದ ತಲೆನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಪತ್ನಿ ಬೇಬಿ ಮಕ್ಕಳಿಲ್ಲದ ಕೊರಗಲ್ಲಿದ್ದರು. ಇದೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಅನುಮಾನಿಸಲಾಗಿದೆ. ನೋಣಯ್ಯ ಪೂಜಾರಿಗೆ ಇದು ಎರಡನೇ...
ಕಲ್ಮಂಜದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ಕಲ್ಮಂಜ ಗ್ರಾಮದ ಅಕ್ಷಯ ನಗರ ಎಂಬಲ್ಲಿ ತನಿಯ (67) ಎಂಬ ವ್ಯಕ್ತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.ಇವರ ಪತ್ನಿ ಮೂರು ತಿಂಗಳ ಹಿಂದೆ ನಿಧನರಾಗಿದ್ದರು. ಎಂದು ತಿಳಿದು ಬಂದಿದೆ.
ದಯಾ ವಿಶೇಷ ಶಾಲೆಯಲ್ಲಿ ಉಚಿತ ವೈಧ್ಯಕೀಯ ಶಿಬಿರ
ಬೆಳ್ತಂಗಡಿ; ದಯಾ ವಿಶೇಷ ಶಾಲೆಯಲ್ಲಿ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಜ್ಯೋತಿ ಆಸ್ಪತ್ರೆ, ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಯಿತು. ಆಸ್ಪತ್ರೆಯ ಆಡಳಿತಾಧಿಕಾರಿಯವರಾದ ಸಿಸ್ಟರ್.ಮೆರಿಟ್, ಡಾ.ಸಿಸ್ಟರ್.ಜೆನಿಫರ್, ವೈದ್ಯಾಧಿಕಾರಿಗಳು, ಡಾ.ನವ್ಯಾ ಪೌಲ್, ವೈದ್ಯಾಧಿಕಾರಿಗಳು, ಶ್ರೀಮತಿ. ಜೆಸಿಂತಾ ತೌರೋ, ಲೆಕ್ಕಿಗರು, ಸಿಸ್ಟರ್. ಡಾನಿಶಾ, ಶುಶ್ರೂಷಕಿ, ಹಾಗೂ .ರಂಜಿತ್, ಪಿ.ಆರ್.ಒ ಮುಂತಾದವರು ಭಾಗವಹಿಸಿ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಿಕೊಟ್ಟರು.ದಯಾ ಶಾಲೆಯ ಸಂಚಾಲಕರಾದ ವಂ.ಫಾ.ವಿನೋದ್ ಮಸ್ಕರೇನಸ್ ರವರು ಆಗಮಿಸಿದ ವೈದ್ಯಕೀಯ ತಂಡವನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಈ ಶಿಬಿರದಲ್ಲಿ ಶಾಲೆಯ 82 ಮಕ್ಕಳು ಭಾಗವಹಿಸಿ ಸೂಕ್ತ ಚಿಕಿತ್ಸೆ ಹಾಗೂ...
ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಗ್ಗೆ ಸಚಿವರಿಂದ ಸಭೆ, ಶಾಸಕ ಹರೀಶ್ ಪೂಂಜ ಭಾಗಿ
ಬೆಳ್ತಂಗಡಿ; ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಕ್ಕೆ ತರುವ ವಿಚಾರದ ಬಗ್ಗೆ ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶ ಗಳ ಶಾಸಕರುಗಳು ಭಾಗವಹಿಸಿದ್ದರು. ಸಮಾಲೋಚನಾ ಸಭೆಯಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಭಾಗವಹಿಸಿ,ಈ ವರದಿಯ ಅನುಷ್ಟಾನದಿಂದಾಗಿ ಬೆಳ್ತಂಗಡಿ ತಾಲೂಕಿನ ಅನೇಕ ಗ್ರಾಮಗಳ ರೈತರು ಹಾಗು ನಿವಾಸಿಗಳಿಗೆ ತೊಂದರೆಯುಂಟಾಗುವುದರಿಂದ ಈ ವರದಿಯನ್ನು ಅನುಷ್ಠಾನಗೊಳಿಸಬಾರದೆಂದು ಅಭಿಪ್ರಾಯವನ್ನು ತಿಳಿಸಿದರು.
ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬೆಳ್ತಂಗಡಿ: ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಸಮೀಪ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ನದಿ ನೀರಿನಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಸೆ18 ರಂದು ಪತ್ತೆಯಾಗಿದೆ.ನದಿ ನೀರಿನಲ್ಲಿ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡುದ್ದಾರೆಸುಮಾರು 45ರಿಂದ50 ವರ್ಷ ಪ್ರಯದ ವ್ಯಕ್ತಿಯ ಮೃತದೇಹ ಇದಾಗಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಂತೆ ಕಂಡು ಬರುತ್ತಿದ್ದು ಮೃತನ ಯಾವುದೇ ಗುರುತುಗಳು ಪತ್ತೆಯಾಗಿಲ್ಲ ವಾರಿಸುದಾರರು ಇದ್ದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣ ಗೊಳಿಸಿದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಯವರು
ಮಂಗಳೂರು; ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣ ಕಾರ್ಯಕ್ರಮ ಮಂಗಳೂರಿನ ಕಾವೂರು ಆದಿಚುಂಚನಗಿರಿ ಶಾಖಾ ಮಠದಲ್ಲಿ ನಡೆಯಿತು.ಶ್ರೀ ಶ್ರೀ ಶ್ರೀ . ಧರ್ಮಪಾಲನಾಥ ಸ್ವಾಮೀಜಿ ಯವರು ಲೋಗೋವನ್ನು ಲೋಕಾರ್ಪಣೆಗೊಳಿಸಿ ಮಾರ್ಗದರ್ಶನ ನೀಡಿದರು.ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗರ ಸೇವಾ ಸಂಘ ( ರಿ ) ಇದರ ಉಪಾಧ್ಯಕ್ಷರಾದ ಶ್ರೀ ಭಾಸ್ಕರ ಗೌಡ ದೇವಸ್ಯ, ಜಿಲ್ಲಾ ನಿರ್ದೇಶಕರುಗಳಾದ ಲಿಂಗಯ್ಯ, ರಕ್ಷಿತ್ ಪುತ್ತಿಲ, ದಾಮೋದರ ಗೌಡ ಸುರುಳಿ, ವಿಜಯ ಗೌಡ ವೇಣೂರು, ಸೂರಜ್ ರಾಜ್ ಗೌಡ ವಳಂಬ್ರ,...














