ವೇಣೂರಿನಲ್ಲಿ ಮಹಾಮಸ್ತಕಾಭಿಷೇಕ ಸಮಾಲೋಚನಾ ಸಭೆ
ಬೆಳ್ತಂಗಡಿ: ವೇಣೂರಿನಲ್ಲಿ ಫೆ ೨೨ ರಿಂದ ಮಾ 1ರ ವರೆಗೆ ನಡೆಯಲಿರುವ ಭಗವಾನ್ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕದ ಸಿದ್ದತೆಗಳ ಬಗ್ಗೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ಬುಧವಾರ ನಡೆಯಿತು.ಸಭೆಯಲ್ಲಿ ಶಾಸಕರು ಸಿದ್ದತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡರು.ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ಅಗತ್ಯಕ್ರಮ ಕೈಗೊಳ್ಳುವಂತೆ, ಹೆಚ್ಚುವರಿ ಬಸ್ಸುಗಳನ್ನು ಓಡಿಸುವಂತೆ, ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಒದಗಿಸುವಂತೆ ಕುಡಿಯುವ ನೀರಿನ, ಶೌಚಾಕಯದ ವ್ಯವಸ್ಥೆ ಗಳನ್ನು ಗಮನಿಸುವಂತೆ ಆದಿಕಾರಿಗಳಿಗೆ ಅವರು ಸೂಚಿಸಿದರು. ಬೆಟ್ಟದ ಸುತ್ತಲಿನ ರಸ್ತೆಯ ಡಾಮರೀಕರಣಕ್ಕರ...
ಕುಕ್ಕೇಡಿ ಸ್ಪೋಟ ಪ್ರಕರಣ ಮುಂದುವರಿದ ತನಿಖೆ
ಬೆಳ್ತಂಗಡಿ; ವೇಣೂರು ಸಮೀಪದ ಕುಕ್ಕೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿಯಂಗಡಿಯ ಕಡ್ತ್ಯಾರು ಎಂಬಲ್ಲಿ ಭಾನುವಾರ ಸುಡುಮದ್ದು ಘಟಕ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಹಾಗೂ ಇತರ ಇಲಾಖೆಯಿಂದ ಮಾಹಿತಿ ಸಂಗ್ರಹ ಕಾರ್ಯ ನಡೆದಿದ್ದು ಇನ್ನೂ ಕೆಲವೊಂದು ವಿಚಾರಗಳ ತನಿಖೆ ಮುಂದುವರಿದಿದೆ.ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರಣದ ತನಿಖೆಗೆ ಆಂತರಿಕ ಭದ್ರತಾ ವಿಭಾಗದ ಡಿಐಜಿ ರವಿ ಚೆನ್ನಣ್ಣನವರ್, ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸೇರಿದಂತೆ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಉಪನಿರ್ದೇಶಕ (ಆಡಳಿತ) ತಿಪ್ಪೇಸ್ವಾಮಿ ಮುಖ್ಯ ಅಗ್ನಿಶಾಮಕ ಅಧಿಕಾರಿ...
ಹರೀಶ್ ಕುಮಾರ್ ಅವರಿಂದ ಸ್ಥಳ ಪರಿಶೀಲನೆ
ಬೆಳ್ತಂಗಡಿ ತಾಲ್ಲೂಕಿನ ಕುಕ್ಕೇಡಿಯಲ್ಲಿ ಪಟಾಕಿ ಸ್ಪೋಟದಿಂದ ಮೂರು ಕಾರ್ಮಿಕರನ್ನು ಬಲಿ ತೆಗೊಂಡ ಸ್ಥಳಕ್ಕೆ ಭೇಟಿ ನೀಡಿ, ನಂತರ ಸ್ಪೋಟದಿಂದ ಭಾದಿತರಾದ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದು ಬೆಳ್ತಂಗಡಿ ತಹಸೀಲ್ದಾರನ್ನು ಸಂಪರ್ಕಿಸಿ ಪರಿಹಾರದ ಬಗ್ಗೆ ಮಾತನಾಡಿದ ಸಂದರ್ಭ. ಸರಕಾರಕ್ಕೆ ವರದಿ ನೀಡಿ ಪರಿಹಾರದ ಭರವಸೆಯನ್ನು ನೀಡಲಾಯಿತು.