ಹೆಣ ಹೂತು ಹಾಕಿದ ಪ್ರಕರಣ; 3ನೇ ದಿನದ ಶೋಧ ಕಾರ್ಯಾಚರಣೆ ಆರಂಭ
ಬೆಳ್ತಂಗಡಿ, ಜು.31: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ 3ನೇ ದಿನಕ್ಕೆ ಕಾಲಿಟ್ಟಿದೆ.ಎಸ್ಐಟಿ ಅಧಿಕಾರಿಗಳು ಗುರುವಾರ ಪೂರ್ವಾಹ್ನ 11:30ರ ಸುಮಾರಿಗೆ ನೇತ್ರಾವತಿ ಸ್ನಾನಘಟ್ಟದಲ್ಲಿ 3ನೇ ದಿನದ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಇದೀಗ ನೇತ್ರಾವತಿ ನದಿಯ ಬದಿಯಲ್ಲಿಯೇ ಅಗೆಯುವ ಕಾರ್ಯ ನಡೆಯುತ್ತಿದೆ. ಈ ವರೆಗೆ ಅಗೆದಿರುವ ಎಲ್ಲ ಸ್ಥಳಗಳೂ ನದಿ ಬದಿಯಲ್ಲಿಯೇ ಇದ್ದು, ಎಲ್ಲೂ ಮೃತದೇಹದ ಅವಶೇಷಗಳು ಪತ್ತೆಯಾಗಿಲ್ಲ. ಈ ನಡುವೆ ಅಗೆಯುವ ಕಾರ್ಯಾಚರಣೆ 3ನೇ ದಿನಕ್ಕೆ ಕಾಲಿಟ್ಟಿದೆ....
ಬೆಳ್ತಂಗಡಿ ತಾಲೂಕು ಮಟ್ಟದ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಮೂರು ಕೋಟಿ ಅನುದಾನ; ಸಚಿವರಿಗೆ ಅಭಿನಂದನೆ
ಬೆಳ್ತಂಗಡಿ.ಬೆಳ್ತಂಗಡಿ ತಾಲೂಕು ಮಟ್ಟದ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಮೂರು ಕೋಟಿ ಅನುದಾನ ವನ್ನು ಮಂಜೂರು ಗೊಳಿಸಿದ, ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ರವರಿಗೆ ಇಂದು ಬೆಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿಯ ದಲಿತ ಮುಖಂಡರುಗಳಾದ ಬಿ.ಕೆ ವಸಂತ್ ಬೆಳ್ತಂಗಡಿ, ವೆಂಕಣ್ಣ ಕೊಯ್ಯಾರು, ಸಂಜೀವ ಆರ್, ಬೆಳ್ತಂಗಡಿ, ರಮೇಶ್ ಆರ್ ಬೆಳ್ತಂಗಡಿ, ಎಸ್ ಪ್ರಭಾಕರ್ ಶಾಂತಿಕೋಡಿ ಓಡಿಲ್ನಾಳ ಉಪಸ್ಥಿತರಿದ್ದರು.
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ; ಮತ್ತೆ 9 ಮಂದಿ ಪೊಲೀಸರು SIT ಗೆ ನೇಮಕ
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧಿಸಿದಂತೆ ಎಸ್.ಐ.ಟಿಯ ಮೂವರು ಉನ್ನತ ಅಧಿಕಾರಿಗಳು ನೇಮಕ ಮಾಡಿದ ಬಳಿಕ 20 ಮಂದಿ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.ಇದೀಗ ಮತ್ತೆ 9 ಮಂದಿ ಪೊಲೀಸರನ್ನು ನೇಮಕಗೊಳಿಸಿ ಆದೇಶ ಮಾಡಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಎಸ್ಐ ಲಾರೆನ್ಸ್, ಸೆನ್ ಪೊಲೀಸ್ ಠಾಣೆಯ ಹೆಚ್.ಸಿ ಪುನೀತ್, ಉಪ್ಪಿನಂಗಡಿ ಪೊಲೀಸ್ ಠಾಣೆಯ ಹೆಚ್.ಸಿ ಮನೋಹರ, ವಿಟ್ಲ ಪೊಲೀಸ್ ಠಾಣೆಯ ಪಿ.ಸಿ ಮನೋಜ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಸಿ ಸಂದೀಪ್, ಉಡುಪಿ ಸಿ.ಎಸ್.ಪಿ ಪೊಲೀಸ್ ಠಾಣೆಯ ಪಿ.ಸಿ ಲೋಕೇಶ್, ಹೊನ್ನಾವರ ಪೊಲೀಸ್...
ಎರಡನೆ ದಿನದ ಕಾರ್ಯಾಚರಣೆಯಲ್ಲೂ ಸಿಗದ ಕಳೆಬರ
ಬೆಳ್ತಂಗಡಿ: ನೇತ್ರಾವತಿ ಸ್ನಾನಘಟ್ಟದ ಸ್ಥಳದಲ್ಲಿ ಅನಾಮಿಕ ಗುರುತಿಸಿದ 5ನೇ ಸ್ಥಳ ಅಗೆಯುವ ಕಾರ್ಯಾಚರಣೆ ಕೊನೆಗೊಂಡಿದ್ದು ಯಾವುದೇ ಕಳೇಬರ ದೊರೆತಿಲ್ಲ. ಎಸ್.ಐ.ಟಿ. ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ, ಅವರು ಸ್ಥಳಕ್ಕೆ ಭೇಟಿ ಮಾರ್ಗದರ್ಶನ ನೀಡಿದರು. ತನಿಖಾಧಿಕಾರಿಗಳಾದ ಅನುಚೇತ್, ಎಸ್ಪಿ ಸಿ.ಎ.ಸೈಮನ್ ಜತೆಗಿದ್ದು ಕಾರ್ಯಾಚರಣೆ ಮುಗಿದ ಬಳಿಕ ಅನಾಮಿಕನನ್ನು ಎಸ್.ಐ.ಟಿ. ಕಚೇರಿಗೆ ಕರೆದೊಯ್ದಿದ್ದಾರೆ. ಜು.31 ಕ್ಕೆ 6ನೇ ಕಳೇಬರಕ್ಕಾಗಿ ಶೋಧ ಕಾರ್ಯ ನಡೆಯಲಿದೆ. ಈ ಮಧ್ಯೆ ಅನಾಮಿಕ ಪರ ನ್ಯಾಯವಾದಿ, ಮಂಜುನಾಥ್ ಎನ್. ಎಂಬವರು ಹೆಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಕಳೇಬರ ಶೋಧ ನಡೆಸುವಾಗ ಪ್ಯಾನ್ ಕಾರ್ಡ್, ಎಟಿಎಂ, ಕಾರ್ಡ್ ಸಿಕ್ಕಿದೆ ಎಂಬ...
ಬೆಳ್ತಂಗಡಿ: ಹಲವಾರು ಮೃತದೇಹ ಹೂತು ಹಾಕಿಬೆಳ್ತಂಗಡಿದ ಪ್ರಕರಣ:ಮೂರನೇ ಗುರುತು ಮಾಡಿದ ಸ್ಥಳದಲ್ಲಿ ಸಿಗದ ಕಳೇಬರಗಳು
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಜುಲೈ 30 ರಂದು ಎರಡನೇ ಗುರುತು ಮಾಡಿದ ಸ್ಥಳದಲ್ಲಿ ಏನೂ ಸಿಗದ ಹಿನ್ನಲೆಯಲ್ಲಿ ಮೂರನೇ ಗುರುತು ಮಾಡಿದ ಸ್ಥಳದಲ್ಲಿ 1 ಗಂಟೆಯಿಂದ 3 ಗಂಟೆಯವರೆಗೆ ಎಸ್.ಐ.ಟಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಯಾವುದೇ ಕಳೇಬರಗಳು ಸಿಕ್ಕಿಲ್ಲ ಎನ್ನಲಾಗಿದೆ. ಇನ್ನೂ ಊಟ ಮಾಡಿದ ಬಳಿಕ ನಾಲ್ಕನೇ ಗುರುತು ಮಾಡಿದ ಸ್ಥಳದಲ್ಲಿ ಕಾರ್ಯಾಚರಣೆಗೆ ಇಳಿಯಲಿದ್ದಾರೆ.
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ; ಎರಡನೇ ಗುರುತು ಮಾಡಿದ ಸ್ಥಳದಲ್ಲಿ ಈವರೆಗೆ ಸಿಗದ ಕಳೇಬರಗಳು
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಜುಲೈ 30 ರಂದು ಎರಡನೇ ಗುರುತು ಮಾಡಿದ ಸ್ಥಳದಲ್ಲಿ 11:30 ವರೆಯಿಂದ 12:45 ಯವರೆಗೆ ನಡೆದ ಎಸ್.ಐ.ಟಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಯಾವುದೇ ಕಳೇಬರಗಳು ಸಿಕ್ಕಿಲ್ಲ ಎನ್ನಲಾಗಿದೆ. ಎರಡನೆಯ ಗುರುತಿಸಿದ ಜಾಗಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು ಇದು ಪೂರ್ಣಗೊಂಡಿದೆಯೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ ಹೆಚ್ಚಿನ ಮಾಹಿತಿಗಾಗಿ ಅಧಿಕಾರಿಗಳು ಹೊರ ಬರುವ ವರೆಗೆ ಕಾಯಬೇಕಾಗಿದೆ.
ಬೆಳ್ತಂಗಡಿ : ಎಸ್.ಐ.ಟಿ ಕಚೇರಿಗೆ ದೂರುದಾರ ಆಗಮನ; ಮೂರನೇ ದಿನದ ಕಾರ್ಯಾಚರಣೆಗೆ ಸಿದ್ದತಡೆ
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಮೂರನೇ ದಿನದ ಅಸ್ಥಿಪಂಜರ ಹುಡುಕಾಟಕ್ಕಾಗಿ ಜುಲೈ 30 ರಂದು 10 ಗಂಟೆಗೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ತನ್ನ ವಕೀಲರ ಜೊತೆ ಆಗಮಿಸಿದ್ದಾನೆ. ಎಸ್.ಐ.ಟಿ ಕಚೇರಿಗೆ ಐಪಿಎಸ್ ಅನುಚೇತ್, ಐಪಿಎಸ್ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ ಸೈಮನ್ , ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರು ಕೆ.ಎಮ್.ಸಿ ವೈದ್ಯರ ತಂಡ, ಎಫ್ಎಸ್ಎಲ್ ತಂಡ, ಐ.ಎಸ್.ಡಿ ಹಾಗೂ ಇತರ ಅಧಿಕಾರಿಗಳು ಕಾರ್ಯಾಚರಣೆಗೆ ತಯಾರಿ ಮಾಡುತ್ತಿದ್ದಾರೆ.
ಹೆಣ ಹೂತ ಪ್ರಕರಣ ಇಂದಿನ ಕಾರ್ಯಾಚರೇ ಅಂತ್ಯ; ಸ್ಥಳದಲ್ಲಿ ಪತ್ತೆಯಾಗದ ಕಳೇಬರ
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 29 ರ ಕಾರ್ಯಾಚರಣೆಯನ್ನು 6:15 ಗಂಟೆಗೆ ಎಸ್.ಐ.ಟಿ ಅಧಿಕಾರಿಗಳು ಅಂತ್ಯ ಮಾಡಿದ್ದಾರೆ. ನಾಳೆ ಮತ್ತೆ ಮೂರನೇ ದಿನದ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.ಮೊದಲ ದಿನದ ಕಾರ್ಯಾಚರಣೆಯಲ್ಲಿ ಯಾವುದೇವಹೆಚ್ಚಿನ ಕುರುಹುಗಳು ಲಭ್ಯವಾಗಿರುವ ಬಗ್ಗೆ ಮಾಹಿತಿಗಳು ಲಭಿಸಿಲ್ಲ. ಗುರುತಿಸಲಾಗಿರುವ ಒಂದನೆ ಸ್ಥಳವನ್ನು ಅಗೆಯುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಲಸಾಲಗಿದೆ
ಬೆಳ್ತಂಗಡಿ : ಎಸ್.ಐ.ಟಿ ಕಚೇರಿಗೆ ಪುತ್ತೂರು ಎ.ಸಿ ಕೆ.ಎಂ.ಸಿ ಯ ತಜ್ಞ ವೈದ್ಯರು; ಅಸ್ಥಿಪಂಜರಗಳನ್ನು ಹೊರತೆಗೆಯುವ ಕಾರ್ಯಾಚರಣೆ ಆರಂಭಕ್ಕೆ ಕ್ಷಣಗಣನೆ
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 29 ರಂದು ದೂರುದಾರನ ಸಮ್ಮುಖದಲ್ಲಿ ಎಸ್.ಐ.ಟಿ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಂದ ಅಸ್ಥಿಪಂಜರ ಹೊರತೆಗೆಯುವ ಕಾರ್ಯಾಚರಣೆ ನಡೆಯಲಿದೆ ಎಂದು ಎಸ್.ಐ.ಟಿ ಯ ಉನ್ನತ ಮೂಲಗಳು ಮಾಹಿತಿ ನೀಡಿದೆ. ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಮಂಗಳೂರು KMC ಆಸ್ಪತ್ರೆಯ ಇಬ್ಬರು ನುರಿತ ವೈದ್ಯರಾದ ಡಾ.ಜಗದೀಶ್ ರಾವ್ ಮತ್ತು ಡಾ.ರಶ್ಮಿ ತಂಡ ಕೂಡ ಎಸ್.ಐ.ಟಿ ಆದೇಶದ ಮೇರೆಗೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿ ಅಸ್ಥಿಪಂಜರ ಹೊರತೆಗೆಯುವ ಕಾರ್ಯಾಚರಣೆಗೆ ತಯಾರಿ ಮಾಡುತ್ತಿದ್ದಾರೆ.
ಮೃತದೇಹ ಹೂತ ಪ್ರಕರಣ ಗುರುತಿಸಿದ ಜಾಗದಲ್ಲಿ 24ಗಂಟೆ ಎ.ಎನ್ ಎಫ್ ಪಡೆ ಕಾವಲು
ಬೆಳ್ತಂಗಡಿ; ಧರ್ಮಸ್ಥಳ ನೇತ್ರಾವತಿ ಸ್ನಾನಘಟದ ಸಮೀಪ ಸಾಕ್ಷಿದೂರುದಾರ ಈಗಾಗಲೇ 13ಸ್ಥಳಗಳನ್ನು ಗುರುತಿಸಿ ಮಾರ್ಕ್ ಮಾಡಲಾಗಿದ್ದು ಇದೀಗ ಈ ಸ್ಥಳಗಳು ಸಂಪೂರ್ಣ ಪೊಲೀಸ್ ಕಣ್ಗಾವಲಿನಲ್ಲಿದೆ. ಇಲ್ಲಿಗೆ ಯಾರೂ ಪ್ರವೇಶ ಮಾಡದಂತೆ ಹಾಗೂ ಸ್ಥಳದ ಸಂರಕ್ಷಣೆಗಾಗಿ ಬಿಗುವಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ 13 ಸ್ಥಳದಲ್ಲಿ 30 ಜನ ಕಾರ್ಕಳದ ಎ.ಎನ್.ಎಫ್ ತಂಡದ ಸಿಬ್ಬಂದಿಗಳು ಕಾವಲು ಕಾಯುತ್ತಿದ್ದಾರೆ. ರಾತ್ರಿ ಹಾಗು ಹಗಲು ಇಲ್ಲಿ ಕಾವಲು ವ್ಯವಸ್ಥೆ ಮಾಡಲಾಗಿದ್ದು ಸ್ಥಳ ಅಗೆದು ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ಈ ತಂಡ ಕಾವಲು ಮುಂದುವರಿಸಲಿದೆ.












