ಉಜಿರೆ;ರಜತ ಮಹೋತ್ಸವದ ಸಂಭ್ರಮದಲ್ಲಿ ಬೆನಕ ಆಸ್ಪತ್ರೆ; ಜ18 ನೂತನ ಕಟ್ಟಡದ ಉದ್ಘಾಟನೆ; ಡಾ. ಗೋಪಾಲಕೃಷ್ಣ ಮಾಹಿತಿ
ಬೆಳ್ತಂಗಡಿ; ಕಳೆದ 25ವರ್ಷಗಳಿಂದ ಗ್ರಾಮೀಣ ಪ್ರದೇಶವಾಗಿರುವ ಉಜಿರೆಯಲ್ಲಿ ಕಾರ್ಯನುರ್ವಹಿಸುತ್ತಿರುವ ಬೆನಕ ಆಸ್ಪತ್ರೆ ಅತ್ಯತ್ತಮದರ್ಜಿಯ ಆರೋಗ್ಯ ಶುಶೂಷೆಯನ್ನು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಹಾಗೂ ಸಮುದಾಯದ ಆಶಯಗಳಿಗೆ ಅನುಗುಣವಾಗಿ ಒದಗಿಸುವ ಕಾರ್ಯ ವನ್ನು ಮಾಡುತ್ತಾ ಬಂದಿದೆ. ಈ ಸಂಸ್ಥೆ ಜನರ ಆಶಯಗಳಿಗೆ ಅನುಗುಣವಾಗಿರುವ ಆಸ್ಪತ್ರೆಯಾಗಿಬೆಳೆಯಬೇಕು ಎಂಬುದು ನಮ್ಮ ಸಂಕಲ್ಪ" ಎಂದು ಬೆನಕ ಆಸ್ಪತ್ರೆಯ ಡಾ ಗೋಪಾಲಕೃಷ್ಣ ಕೆ ಹೇಳಿದರು. ಬೆನಕ ಆಸ್ಪತ್ರೆಯ ರಜತ ಮಹೋತ್ಸವದ ಸಂಭ್ರಮದಲ್ಲಿದೆ ವಿಸ್ತ್ರತ ನೂತನ ಕಟ್ಟಡ ಕಾಮಗಾರಿ ಕೂಡ ಮುಗಿದಿದ್ದು, ಕಟ್ಟದ ಉದ್ಘಾಟನೆ ಜ. 18 ರಂದು ನಡೆಯಲಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ...
ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಯ 5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಜ 18 ರಂದು ಶಿಲನ್ಯಾಸ; ರಕ್ಷಿತ್ ಶಿವರಾಂ ಮಾಹಿತಿ
ಬೆಳ್ತಂಗಡಿ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದ 4 ಕೋಟಿ 60 ಲಕ್ಷ ವೆಚ್ಚದ ನೂತನ ಕಟ್ಟಡ ನಿರ್ಮಾಣ ಮತ್ತು ಸಿಬ್ಬಂದಿ ವಸತಿಗೃಹ ಕಾಮಗಾರಿಗೆ ಹಾಗೂ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ 40 ಲಕ್ಷ ವೆಚ್ಚದಲ್ಲಿ ನಡೆಯುವ ಮೂಲಭೂತ ಸೌಕರ್ಯ ಹಾಗೂ ಉನ್ನತಿಕರಣ ಕಾಮಗಾರಿಯಶಿಲನ್ಯಾಸವನ್ನು ರಾಜ್ಯ ಸರಕಾರದ ಆರೋಗ್ಯ ಸಚಿವರೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರೂ ಆದ ದಿನೇಶ್ ಗುಂಡೂರಾವ್ ಅವರುನೆರವೇರಿಸಲಿದ್ದಾರೆ ನಂತರ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿನ ಸಾರ್ವಜನಿಕ ಪ್ರಯೋಗಾಲಯ ಕಟ್ಟಡದ ಉದ್ಘಾಟನೆ, ತಾಲೂಕು ಆಸ್ಪತ್ರೆಯಲ್ಲಿನ 12 ಬೆಡ್ ಗಳ ಐಸೋಲೇಶನ್...
ಧರ್ಮಸ್ಥಳ; ಕಟ್ಟದ ಬಯಲು ನಿವಾಸಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ಕಟ್ಟದ ಬೈಲು ನಿವಾಸಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಮೃತ ವ್ಯಕ್ತಿ ಕಟ್ಟದ ಬಯಲು ನಿವಾಸಿ ಉಮೇಶ್ ಗುಡಿಗಾರ (42) ಎಂಬವರಾಗಿದ್ದಾರೆ.ಮನೆಯ ಸಮೀಪವೇ ಇರುವ ಬಾವಿಯ ಅಡ್ಡಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಉಮೇಶ್ ಅವರ ಮೃತದೇಹ ಪತ್ತೆ ಯಾಗಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಮೇಶ್ ವಿಪರೀತ ಕುಡಿತದ ಚಟ ಹೊಂದಿದ್ದ ಎನ್ನಲಾಗಿದ್ದು ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ
ಮದ್ದಡ್ಕ; ವಸಂತ ಬಂಗೇರ ಹುಟ್ಟುಹಬ್ಬ, ಬಂಗೇರ ಬ್ರಿಗೇಡ್ ನಿಂದ ಕಬಡ್ಡಿ ಪಂದ್ಯಾಟ
ಬೆಳ್ತಂಗಡಿ : 'ಮನುಷ್ಯ ಬದುಕಿದರೆ ಕೆ. ವಸಂತ ಬಂಗೇರರ ಹಾಗೆ ಬದುಕಬೇಕು. ಬಡವರ ಪರ ಸದಾ ಕಾಳಜಿ ಬೆಳೆಸಿಕೊಂಡಿದ್ದ ಅವರು ತನ್ನ ಸಿದ್ಧಾಂತದಿಂದ ಹೊರಬಾರದ ಅಪರೂಪದ ವ್ಯಕ್ತಿಯಾಗಿದ್ದರು ' ಎಂದು ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಹೇಳಿದರು. ಅವರು ಬುಧವಾರ ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬಿನುತಾ ಬಂಗೇರರವರ ಸಾರಥ್ಯದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇದರ ಸಹಕಾರದಲ್ಲಿ ಮಾಜಿ ಶಾಸಕರೂ, ಬೆಳ್ತಂಗಡಿ ಅಭಿವೃದ್ಧಿಯ ಹರಿಕಾರರೂ ಕೀರ್ತಿಶೇಷ ಕೆ.ವಸಂತ ಬಂಗೇರರವರ 79 ನೇ...
ನಿಡ್ಲೆ; ಸೇವಾ ಸಹಕಾರಿ ಬ್ಯಾಂಕಿನ ಚುನಾವಣೆ; ಎಲ್ಲ ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತರಿಗೆ ಗೆಲುವು
ಬೆಳ್ತಂಗಡಿ: ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಜ.15ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಎಲ್ಲ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ ಗೆಲುವನ್ನು ಪಡೆದಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಸ್ಥಾನಗಳಲ್ಲಿ ಸೋಲನ್ನು ಕಂಡಿದ್ದಾರೆ. ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದ ಸಾಮಾನ್ಯ ಕ್ಷೇತ್ರದಿಂದ ಕೆ. ರಮೇಶ್ ರಾವ್ (497), ಧನಂಜಯ ಗೌಡ ಕಳೆಂಜ (559), ವಿಜಯ ಕುಮಾರ್ ಹೆಚ್....
ವಸಂತ ಬಂಗೇರ ಹುಟ್ಟು ಹಬ್ಬ ಆಚರಣೆ; ಅಭಿಮಾನಿಗಳಿಂದ ರಕ್ತದಾನ ಶಿಬಿರ, ಬಂಗೇರರು ನೊಂದವರ ಧ್ವನಿಯಾಗಿದ್ದರು;ತುಕಾರಾಮ ಪೂಜಾರಿ
ಬೆಳ್ತಂಗಡಿ: ಅನ್ಯಾಯ, ಅಸತ್ಯವನ್ನು ಸಹಿಸದೆ ನೊಂದವರ ದ್ವನಿಯಾಗಿ ಬದುಕಿನ ಉದ್ದಕ್ಕೂ ಸಮಾಜಕ್ಕಾಗಿ ಜೀವನವನ್ನು ಮುಡುಪಾಗಿಟ್ಟ ಅಪರೂಪದ ರಾಜಕಾರಣಿ ವಸಂತ ಬಂಗೇರರಾಗಿದ್ದರು ಎಂದು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅದ್ಯಯನ ಪೀಠದ ಮುಖ್ಯಸ್ಥ ಡಾ ತುಕರಾಮ ಪೂಜಾರಿ ಹೇಳಿದರು. ಅವರು ಬುದವಾರ ಬೆಳ್ತಂಗಡಿ ಶ್ರಿ ಗುರುನಾರಾಯಣ ಸಭಾಭವನದಲ್ಲಿ ಮಾಜಿ ಶಾಸಕ ಕೀರ್ತಿ ಶೇಷ ವಸಂತ ಬಂಗೇರರ 79 ನೇ ಹುಟ್ಟುಹಬ್ವದ ಪ್ರಯುಕ್ತ ಕೆ ವಸಂತ ಬಂಗೇರರ ಅಬಿಮಾನ ಬಳಗ ಸಮಿತಿ ವತಿಯಿಂದ ನಡೆದ ಬ್ರಹತ್ ರಕ್ತದಾನ ಶಿಬಿರದಲ್ಲಿ ಕೆ ವಸಂತ ಬಂಗೇರರ ಸಾದನೆ ಬದುಕಿನ...
ನೃತ್ಯ ಗುರು, ನಿವೃತ್ತ ಶಿಕ್ಷಕ ಕಮಲಾಕ್ಷ ಆಚಾರ್ ನಿಧನ
ಬೆಳ್ತಂಗಡಿ: ನಿವೃತ್ತ ಮುಖ್ಯೋಪಾಧ್ಯಾಯ ನೃತ್ಯ ಗುರು ಕಮಲಾಕ್ಷ ಆಚಾರ್ ( 77) ಜ. 14ರಂದು ಮಂಗಳೂರಿನಲ್ಲಿ ವಯೋ ಸಹಜ ಅಸೌಖ್ಯದಿಂದ ನಿಧನ ಹೊಂದಿದರು. 2022 ರಲ್ಲಿ ಕರ್ನಾಟಕ ಸರಕಾರ ಇವರ ಸಾಧನೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕೃರಿಸಿತ್ತು. ಅವರು ತಾಲೂಕಿನ ಪ್ರಥಮ ಭರತನಾಟ್ಯ ಗುರುವಾಗಿದ್ದರು. ಬೆಳ್ತಂಗಡಿಯಲ್ಲಿ ನೃತ್ಯ ನಿಕೇತನ ಸಂಸ್ಥೆಯನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮುಖ್ಯ ಶಿಕ್ಷಕರಾಗಿ, ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. 2021- 22ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ...
ತಾಲೂಕಿನ ಅಲ್ಲಲ್ಲಿ ಕಾಡಾನೆ ಸಂಚಾರ; ಜನರಲ್ಲಿ ಆತಂಕ
ಬೆಳ್ತಂಗಡಿ; ಸೋಮವಾರ ರಾತ್ರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳು ಸಂಚರಿಸಿದ್ದು ಜನರಲ್ಲಿ ಭೀತಿಯ ವಾತಾವರಣ ಏರ್ಪಟ್ಟಿದೆ.ಭಾನುವಾರ ತಡರಾತ್ರಿ ಕಡಿರುದ್ಯಾವರ ಗ್ರಾಮದ ಪಣಿಕಲ್ಲು ಪರಿಸರದಲ್ಲಿ ಒಂಟಿ ಸಲಗ ಕೃಷ್ಣ ಭಟ್ ಅವರ ಕೃಷಿ ತೋಟದಲ್ಲಿ ಹಾನಿ ಉಂಟುಮಾಡಿತ್ತು. ಬಳಿಕ ಸೋಮವಾರ ಇದೇ ಗ್ರಾಮದ ಕಿನ್ಯಡ್ಕ ಹಾಗೂ ಇನ್ನಿತರ ಪರಿಸರಗಳಲ್ಲಿ ಓಡಾಟ ನಡೆಸಿದೆ.ಇದಲ್ಲದೆ 3 ಆನೆಗಳ ಹಿಂಡೊಂದು ನೆರಿಯ ಚಿಬಿದ್ರೆ,ತೋಟತ್ತಾಡಿ, ಚಾರ್ಮಾಡಿ ಗ್ರಾಮಗಳಲ್ಲಿ ಸೋಮವಾರ ಸಂಜೆ ಬಳಿಕ ಸಂಚಾರ ನಡೆಸಿದೆ.ನೆರಿಯದ ಪರ್ಪಳ ಪ್ರದೇಶದಿಂದ ಬಂದಿದ್ದ ಹಿಂಡು ಅಣಿಯೂರು ಶಾಲೆ, ಬಯಲು,ಬಸ್ತಿ ಇತರ ಕಡೆ ಸಂಚರಿಸಿದೆ.ಈ ವೇಳೆ...
ಮಾಲಾಡಿಯ ಯುವಕನ ಮೃತದೇಹ ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಪತ್ತೆ
ಬೆಳ್ತಂಗಡಿ: ಮಾಲಾಡಿ ಗ್ರಾಮದ ಶಕ್ತಿನಗರ ಕೋಲ್ಪೆದಬೈಲ್ ನಿವಾಸಿ ನಾಗೇಶ್ ಕುಲಾಲ್( 33) ಎಂಬವರ ಮೃತದೇಹ ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.ಇವರು ಜ.13 ರಂದು ಬೆಳಗ್ಗೆ ಮನೆಯಲ್ಲಿ ಸಂಜೆ ಬರುತ್ತೇನೆ ಎಂದು ಹೇಳಿ ಹೋದವರು ಮನೆಗೆ ಹಿಂತಿರುಗಲಿಲ್ಲ ಇವರಿಗಾಗಿ ಎಲ್ಲೆಡೆ ಹುಡುಕಾಟ ನಡೆಸಲಾಗುತ್ತಿತ್ತು. ಜ14 ರಂದು ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ನಾಗೇಶ್ ಕುಲಾಲ್ ಅವರ ಮೃತದೇಹ ಪತ್ತೆಯಾಗಿದೆ,ಧರ್ಮಸ್ಥಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಅಂದಾಜಿಸಲಾಗಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಡಾ.ಗೋಪಾಲಕೃಷ್ಣ ಮತ್ತು ಡಾ ಭಾರತಿ ದಂಪತಿಗಳ ಸೇವೆ ಅನನ್ಯ – ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ
ಬೆಳ್ತಂಗಡಿ; ಉಜಿರೆಯ ಬೆನಕ ಆಸ್ಪತ್ರೆಗೆ ದಿನಾಂಕ13.01.2025ರಂದು ಚಿತ್ತೈಸಿದ ಕುಕ್ಕೆ ಸುಬ್ರಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಸ್ಪತ್ರೆಯ ವಿಸ್ಕೃತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ದೀಪ ಬೆಳಗಿಸಿ ಚಾಲನೆ ನೀಡಿದರು. ನಂತರ ಆಶೀರ್ವಚನ ನೀಡುತ್ತಾ ಉಜಿರೆಯಂಥ ಸಣ್ಣ ಪ್ರದೇಶದಲ್ಲಿ ಕಳೆದ 25 ವರ್ಷಗಳಿಂದ ಅವಿರತ ಪರಿಶ್ರಮದಿಂದ ಸಕಲ ಸೌಲಭ್ಯಗಳನ್ನು ಒಳಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಿರುವುದು ಅವರ ನಿರಂತರ ಸೇವೆಯ ದ್ಯೋತಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಮುಂದೆಯೂ ಇದೆ ರೀತಿ ನೆಡಿಸಿಕೊಂಡು ಪರಿಸರದ ಜನರಿಗೆ ಉತ್ತಮ ಆರೋಗ್ಯ ನೀಡಲು ಶ್ರೀ ಸುಬ್ರಮಣ್ಯನ ಅನುಗ್ರಹ...















