Home ಅಪರಾಧ ಲೋಕ ಸ್ಥಳಿಯರ ಪ್ರಯತ್ನದಿಂದ ಕಲ್ಮಂಜದಲ್ಲಿ ತಪ್ಪಿದ ಬೆಂಕಿ ಅನಾಹುತ

ಸ್ಥಳಿಯರ ಪ್ರಯತ್ನದಿಂದ ಕಲ್ಮಂಜದಲ್ಲಿ ತಪ್ಪಿದ ಬೆಂಕಿ ಅನಾಹುತ

57
0


ವಿದ್ಯುತ್ ಪರಿವರ್ತಕದಿಂದ ಸಿಡಿದ ಕಿಡಿಗಳ ಪರಿಣಾಮ ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು ಸ್ಥಳೀಯರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ಉಂಟಾಗುವುದು ತಪ್ಪಿದೆ.
ಕಲ್ಮಂಜ ಗ್ರಾಮದ ಕುಡೆಂಚಿ ಎಂಬಲ್ಲಿ ಗ್ರಾಮೀಣ ರಸ್ತೆಯ ಬದಿಯಲ್ಲಿರುವ ವಿದ್ಯುತ್ ಪರಿವರ್ತಕದಿಂದ ಕಿಡಿಗಳು ಸಿಡಿದು ಪರಿಸರದಲ್ಲಿದ್ದ ತರಗೆಲೆ ಹಾಗೂ ಗಿಡಗಂಟಿಗಳಿಗೆ ಬೆಂಕಿ ಹತ್ತಿಕೊಂಡು ಸಮೀಪದ ರಬ್ಬರ್ ತೋಟದವರೆಗೂ ಪಸರಿಸತೊಡಗಿತ್ತು.
ಪರಿಸರದಲ್ಲಿ ಮನೆಗಳು ಇಲ್ಲದ,ಹೆಚ್ಚಿನ ಜನ- ವಾಹನ ಓಡಾಟವಿಲ್ಲದ ಈ ರಸ್ತೆ ಮೂಲಕ ಕಾರ್ಯಕ್ರಮ ಒಂದಕ್ಕೆ ತೆರಳುತ್ತಿದ್ದ ಬೈಕ್ ಸವಾರರು ಬೆಂಕಿ ವ್ಯಾಪಿಸುವುದು ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದರು.
ತಕ್ಷಣ ಸ್ಥಳಕ್ಕಾಗಮಿಸಿದ ಪ್ರಭಾಕರ ಪಟವರ್ಧನ್, ಗುರುಪ್ರಸಾದ್ ಗೋಖಲೆ,ಸುನಿಲ್ ಹಾಗೂ ಸಮೀಪದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೆಂಕಿ ಇನ್ನಷ್ಟು ವ್ಯಾಪಿಸಿದಂತೆ ಕ್ರಮ ಕೈಗೊಂಡರು.
ಒಂದು ವೇಳೆ ಬೆಂಕಿ ಇನ್ನಷ್ಟು ಪಸರಿಸುತ್ತಿದ್ದರೆ ರಬ್ಬರ್ ತೋಟ ಸಹಿತ ಇತರ ಕೃಷಿ ಬೆಂಕಿಗೆ ಆಹುತಿಯಾಗುವ ಸಾಧ್ಯತೆ ಇತ್ತು.

LEAVE A REPLY

Please enter your comment!
Please enter your name here