ಕೊಕ್ಕಡ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆ; ಎಲ್ಲ ಕ್ಷೇತ್ರಗಳಲ್ಲೂ ಸಹಕಾರ ಭಾರತಿಗೆ ಗೆಲುವು
ಬೆಳ್ತಂಗಡಿ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಜ.27ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ 12 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಾದ ಸಾಮಾನ್ಯ ಕ್ಷೇತ್ರದ ಪಿ. ಕುಶಾಲಪ್ಪ ಗೌಡ, ವಿಠಲ ಬಂಡಾರಿ, ಶ್ರೀನಾಥ ಬಿ., ಪದ್ಮನಾಭ ಕೆ., ಉದಯ ಎ., ಮಹಾಬಲ ಶೆಟ್ಟಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸುನಿಲ್, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ರವಿಚಂದ್ರ ಪಿ., ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ...
ಚಾರ್ಮಾಡಿ ಘಾಟಿಯಲ್ಲಿ ಕಾರು-ಲಾರಿ ಅಪಘಾತ ನಾಲ್ವರಿಗೆ ಗಂಭೀರ ಗಾಯ
ಬೆಳ್ತಂಗಡಿ:ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಭಾನುವಾರ ತಡರಾತ್ರಿ ಲಾರಿ ಮತ್ತು ಕಾರು ಡಿಕ್ಕಿಯಾಗಿ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.ಮೂಡಿಗೆರೆಯಿಂದ ಉಜಿರೆ ಕಡೆ ಬರುತ್ತಿದ್ದ ಕಾರು ಹಾಗೂ ಕೊಟ್ಟಿಗೆಹಾರ ಕಡೆ ತೆರಳುತ್ತಿದ್ದ ಲಾರಿ ಡಿಕ್ಕಿಯಾಗಿದ್ದು ಕಾರಿನಲ್ಲಿ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಹಂಪೆಯ ವೇದಮ್ಮ(55) ಜ್ಞಾನಮ್ಮ(70), ಮಂಜುಳಾ(50) ಮತ್ತು ರೇಣುಕಾ(26) ಗಂಭೀರವಾಗಿ ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಕಾರಿನಲ್ಲಿದ್ದ ಚಾಲಕ ಮತ್ತು ಇಬ್ಬರು ಮಕ್ಕಳು ಯಾವುದೇ ರೀತಿಯ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ಆಧ್ಯಾತ್ಮಿಕ ಚೌಕಟ್ಟು ಮೀರಿ ಬದುಕುವವರಿಂದ ಸಮಾಜಕ್ಕೆ ಅಪಾಯ; ಕಾಜೂರು ತಂಙಳ್ ಕಾಜೂರು ಮಖಾಂ ಉರೂಸ್‌ಗೆ ಸಂಭ್ರಮದ ಚಾಲನೆ
ಬೆಳ್ತಂಗಡಿ; ಧರ್ಮ ಮತ್ತು ಆಧ್ಯಾತ್ಮಿಕತೆ ಒಳಗೊಂಡಿರುವ ಬದುಕು ಸೌಹಾರ್ದತೆಯ ನಾಡಿಗೆ ಪ್ರೇರಣೆ. ಹಿಂದೂ ಕ್ರೈಸ್ತ ಮುಸಲ್ಮಾನ ಜೈನ್ ಬೌದ್ದ ಯಾವುದೇ ಧರ್ಮವಿರಲಿ ಅದರ ಆಚಾರ್ಯರು, ಮುನಿಗಳು ಮತ ಪಂಡಿತರು ಕಲಿಸಿಕೊಡುವಮೂಲತತ್ವ ಕಲಿಯದೆ ಸ್ವತಂತ್ರವಾಗಿ ಬದುಕಲು ಆರಂಭಿಸಿದ್ದರಿಂದಲೇ ಇಲ್ಲಿ ಸಂಘರ್ಷ ಗಳಿಗೆ ಕಾರಣವಾಗುತ್ತಿದೆ.ಆದ್ದರಿಂದ ಧರ್ಮದ ತಿರುಳನ್ನು, ಧರ್ಮ ವಿಜ್ಞಾನವನ್ನು ತಮ್ಮ ಅನುಯಾಯಿಗಳಿಗೆ ಕಲಿಸಿಕೊಡಬೇಕಾದುದು ಧರ್ಮಶ್ರೇಷ್ಠರುಗಳ ಜವಾಬ್ಧಾರಿಯಾಗಿದೆ. ಹಾಗಿದ್ದರೆ ಮಾತ್ರ ಸುಂದರ ಭಾರತ ನೋಡಲು ಸಾಧ್ಯ ಎಂದು ಸಯ್ಯಿದ್ ಕಾಜೂರು ತಂಙಳ್ ಹೇಳಿದರು. ಕಾಜೂರು ಮಖಾಂ ಶರೀಫ್ ನಲ್ಲಿ ಆರಂಭಗೊಂಡ 2025 ನೇ ಉರೂಸ್ ಸಂಭ್ರಮ ಉದ್ಘಾಟಿಸಿ...
ಕಕ್ಕಿಂಜೆ ವೃದ್ಧ ದಂಪತಿಯರ ಕೊಲೆ ಪ್ರಕರಣ, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಬೆಳ್ತಂಗಡಿ: ತಾಲೂಕಿನ ಕಕ್ಕಿಂಜೆಯಲ್ಲಿ ಮನೆಗೆ ನುಗ್ಗಿ ವೃದ್ಧ ದಂಪತಿಗಳನ್ನು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನ, ನಗದು ದರೋಡೆ ಗೈದ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 2016ರ ನವೆಂಬರ್ 10ರಂದು ರಾತ್ರಿ ಕಕ್ಕಿಂಜೆ ಹೈಸ್ಕೂಲ್ ನ ಹಿಂಬದಿಯ ಮನೆಯಲ್ಲಿ ವಾಸಿಸುತ್ತಿದ್ದ ವೃದ್ದ ದಂಪತಿಯರಾದ ವರ್ಕಿ ಹಾಗೂ ಏಲಿಕುಟ್ಟಿ ಅವರ ಕೊಲೆಯಾಗಿತ್ತು. ಕೊಲೆ ಪ್ರಕರಣದ ಅಪರಾಧಿಗದಗ ಜಿಲ್ಲೆಯ ಬಿ.ಸಿ.ಕೇರಿ ನಿವಾಸಿ ರಾಜು ಕಲ್ಲವಡ್ದರ್ ಎಂಬಾತ ಅಪರಾಧಿ ಎಂಬುದು ಸಾಬೀತಾಗಿದ್ದು ಅವನಿಗೆ...
ಚಾರ್ಮಾಡಿ ಘಾಟಿಯಲ್ಲಿ ಕಾಡ್ಗಿಚ್ಚು ನೂರಾರು ಎಕ್ರೆ ಅರಣ್ಯ ಬೆಂಕಿಗೆ ಆಹುತಿ
ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದ ಸಮೀಪ ಸೇರಿದಂತೆ ವಿವಿಧೆಡೆ ಶುಕ್ರವಾರ ರಾತ್ರಿ ಆವರಿಸಿದ ಕಾಡ್ಗಿಚ್ಚು ಶನಿವಾರವೂ ಸಹ ಉರಿಯುತ್ತಿದ್ದು, ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಿಸಿಲಿನಲ್ಲಿಯೇ ಹರಸಾಹಸ ಮಾಡಿ ಬೆಂಕಿ ನಂದಿಸಲು ಪ್ರಯತ್ನ ನಡೆಸಿದರು. ಸತತ ಪ್ರಯತ್ನದಿಂದ ಬೆಂಕಿ ಹತೋಟಿಗೆ ಬಂದಿದ್ದು ಇನ್ನು ಕಾರ್ಯಾಚರಣೆ ಮುಂದುವರಿದಿದೆ. ಸಿಬ್ಬಂದಿಗಳು ಕಡಿದಾದ ಬೆಟ್ಟವನ್ನೇರಿ ಹರಸಾಹಸ ಪಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಚಾರ್ಮಾಡಿ ಅರಣ್ಯದಲ್ಲಿ ಎರಡನೇ ಸಲ ಭಾರಿ ಪ್ರಮಾಣದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ.
ತೋಟತ್ತಾಡಿ ನಿವಾಸಿ ವಿ.ಒ ಜೋಸೆಫ್ ನಿಧನ
ಬೆಳ್ತಂಗಡಿ; ತೋಟತ್ತಾಡಿ ನಿವಾಸಿ ವಿ.ಒ ಜೋಸೆಫ್ ಕುರುಪ್ಪನಾಟ್ (92) ವಯೋಸಹಜ ಅನಾ ರೋಗ್ಯದಿಂದ ಜ 24 ರಂದು ನಿಧನರಾಗಿದ್ದಾರೆಮೃತರು ಪತ್ನಿ ರೋಸಮ್ಮ, ಮಕ್ಕಳಾದ ಬಿಜು ಜೋಸೆಫ್, ಲಿನ್ಸಿ ಶಾಜನ್, ಬಿನ್ಸಿ ರೆಜಿ, ಸೊಸೆ ಶೀನಾ ಬಿಜು, ಆಳಿಯಂದಿರಾದ ಶಾಜನ್ ಪ್ಲಾಕಾಟ್, ರೆಜಿ ಎಮ್ಮಾನುವೆಲ್, ಮೊಮ್ಮಕ್ಕಳಾದ ನಿಮಯಾ, ದಿವಿನ್, ದಿಯಾ, ಡೋನಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಜ 29 ಬುಧವಾರ 10.30 ಕ್ಕೆ ತೋಟತ್ತಾಡಿ ಸೈಂಟ್ ಆಂಟನ್ ಆಂಟನಿ ಚರ್ಚ್ ನಲ್ಲಿ ನಡೆಯಲಿದೆ
ಧರ್ಮಸ್ಥಳಕೂಟದಕಲ್ಲು ನಿವಾಸಿ ನಿತೇಶ್ ನಿಧನ
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ನಿವಾಸಿ ನಿತೇಶ್ (30)ಅಲ್ಪ ಕಾಲದ ಅಸೌಖ್ಯದ ಬಳಿಕ ಜ. 24ರಂದು ನಿಧನರಾಗಿದ್ದಾರೆ.ಮೃತರು ತಂದೆ ತಾಯಿ ಸಹೋದರ ಹಾಗೂ ಅಪಾರ ಬಂಧುಬಳಗ ಗೆಳೆಯರನ್ನು ಅಗಲಿದ್ದಾರೆ
ಬಂಗೇರಕಟ್ಟೆಯಲ್ಲಿ ರಸ್ತೆ ದುರಸ್ಥಿಗೆ ಆಗ್ರಹಿಸಿ ಎಸ್.ಡಿ.ಪಿ.ಐ ವತಿಯಿಂದ ಪ್ರತಿಭಟನೆ
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮ ವ್ಯಾಪ್ತಿಯ ಬಂಗೇರಕಟ್ಟೆ- ಅಮ್ಡಾಲ್ ನೆತ್ತರವರೆಗಿನ ರಸ್ತೆ ದುರಸ್ಥಿಗೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಚ್ಚಿನ ಗ್ರಾಮ ಸಮಿತಿ ಅಧ್ಯಕ್ಷರಾದ ಹನಿಫ್ ಬಳ್ಳಮಂಜ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆಯನ್ನು ನಡೆಸಲಾಯಿತು. ಪ್ರತಿಭಟನಾಕರರನ್ನು ಉದ್ದೇಶಿಸಿ ಕ್ಷೇತ್ರ ಸಮಿತಿ ಸದಸ್ಯರಾದ ಅಬ್ದುಲ್ ರೌಫ್, ಸ್ಥಳೀಯರು ರಸ್ತೆ ದುರಸ್ಥಿಗೆ ಆಗ್ರಹಿಸಿ ಪಂಚಾಯತ್ ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಗಳು ಆಗಿಲ್ಲ, ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚರಗೊಂಡು ಒಂದು ತಿಂಗಳೊಳಗೆ ರಸ್ತೆಗೆ ಡಾಂಬರು...
ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳಿಗೆ ರೂ 290 ಕೋಟಿ ಅನುದಾನ; ಪದ್ಮನಾಭ ಸಾಲಿಯಾನ್
ಬೆಳ್ತಂಗಡಿ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಂತ ಸಮರ್ಪಕವಾಗಿ ಅನುಷ್ಠಾನ ಗೊಳಿಸಲಾಗಿದ್ದು ತಾಲೂಕಿಗೆ ಈ ವರೆಗೆ ರೂ290 ಕೋಟಿ ಗೂ ಅಧಿಕ ಗ್ಯಾರಂಟಿ ಹಣ ಬಂದಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಹೇಳಿದರು.ಅವರು ಜ.23ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಚಾರ ತಿಳಿಸಿದರು.ಗೃಹ ಜ್ಯೋತಿ ಯೋಜನೆ ಯಲ್ಲಿ ಅತಿ ಹೆಚ್ಚು 75,734 ಕುಟುಂಂಬಗಳು ಇದರ ಪ್ರಯೋಜನ ಪಡೆದಿದ್ದಾರೆ. ಪ್ರತಿಯೊಂದು ಯೋಜನೆಯಲ್ಲಿಯೂಶೇ...
ವಿಟ್ಲ; ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ, ಆರೋಪಿಗಳನ್ನು ಬಂಧಿಸಿದ ಪೊಲೀಸರು
ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶೆ ಎಂಬಲ್ಲಿ ಉದ್ಯಮಿಯ ಮನೆಯಲ್ಲಿ ಇ.ಡಿ ಅಧಿಕಾರಿಗಳೆಂದು ಬಂದ ಆರು ಮಂದಿಯ ತಂಡ ಮನೆಯೊಳಗೆ ಶೋಧ ನಡೆಸಿ 30ಲಕ್ಷ ನಗದನ್ನು ದರೋಡೆ ಮಾಡಿದ ಪ್ರಕರಣವನ್ನು ಬೇಧಿಸಿದ ಪೊಲೀಸರು ಅಂತರ್ ರಾಜ್ಯ ದರೋಡೆಕೋರನನ್ನು ಬಂಧಿಸಿದ್ದು ಕಾರು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿ ಕೇರಳದ ಕೊಲ್ಲಂ ಜಿಲ್ಲೆಯ ನಿವಾಸಿ ಅನಿಲ್ ಫೆರ್ನಾಂಡಿಸ್ (49) ಎಂಬಾತನಾಗಿದ್ದಾನೆ. ಈತನಿಂದ ಕೃತ್ಯಕ್ಕೆ ಉಪಯೋಗಿಸಿದ ಕಾರು ಹಾಗೂ ರೂ 5 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ 11ಲಕ್ಷ...















