ದಯಾ ವಿಶೇಷ ಶಾಲೆಯಲ್ಲಿ ಪೋಷಕರ ಸಭೆ ಮತ್ತು ಆಪ್ತ ಸಮಾಲೋಚನಾ ಕಾರ್ಯಕ್ರಮ
ಬೆಳ್ತಂಗಡಿ; ದಯಾ ವಿಶೇಷ ಶಾಲೆಯಲ್ಲಿ ಶನಿವಾರದಂದು ಪೋಷಕರ ಸಭೆ ಮತ್ತು ಆಪ್ತಸಮಾಲೋಚನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ವೇದಿಕೆಯಲ್ಲಿದ್ದ ಸಂಸ್ಥೆಯ ಸಂಚಾಲಕರು ಹಾಗೂ ನಿರ್ದೇಶಕರು ಆದ ವಂ. ಫಾದರ್. ವಿನೋದ್ ಮಸ್ಕರೇನ್ಹಸ್‌ರವರು ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿ ಶಾಲೆಯಲ್ಲಿ ಇಂದು ಪೋಷಕರ ಸಭೆ ಮತ್ತು ಆಪ್ತ ಸಮಾಲೋಚನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೋಷಕರು ಮಕ್ಕಳ ಸಮಸ್ಯೆಗಳ ಬಗ್ಗೆ ಅರಿತುಕೊಂಡಿರಬೇಕು, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೋಷಕರು ಪ್ರೋತ್ಸಾಹವನ್ನು ನೀಡುವುದು, ಅವರ ಮುಂದಿನ ಭವಿಷ್ಯದ ಕಡೆಗೆ ಗಮನ ಹರಿಸುವುದು ಮುಂತಾದ ವಿಚಾರಗಳ ಬಗ್ಗೆ ತಿಳಿಸಿದರು. ಸಂಸ್ಥೆಯಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಕರಕುಶಲ ತರಬೇತಿಗಳನ್ನು...
ಕೇಂದ್ರದ ಬಜೆಟ್ ಗಾತ್ರ 50.65 ಲಕ್ಷ ಕೋಟಿಯಲ್ಲಿ ಕರ್ನಾಟಕಕ್ಕೆ ಮತ್ತೆ ಮೋಸ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ. ರಕ್ಷಿತ್ ಶಿವರಾಂ.
ಬೆಳ್ತಂಗಡಿ; ಸಾಲಮಾಡಿಯಾದ್ರು ತುಪ್ಪ ತಿನ್ನು ಎನ್ನುವಹಾಗೆ ಒಟ್ಟು ಬಜೆಟ್ ನಲ್ಲಿ 24% ರಷ್ಟು ಸಾಲ 15.68 ಲಕ್ಷ ಕೋಟಿ ಸಾಲ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಮತ್ತೊಮ್ಮೆ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಬಜೆಟ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರುಕೇಂದ್ರ ಸರ್ಕಾರದ ಒಟ್ಟು ಸ್ವೀಕೃತಿ 31.47 ಲಕ್ಷ ಮತ್ತು ಒಟ್ಟು ತೆರಿಗೆ ಸ್ವೀಕೃತಿ 25.57 ಲಕ್ಷ ಕೋಟಿ.ಸಾಲ ಮರುಪಾವತಿ 12.67 ಲಕ್ಷ ಕೋಟಿ ಅಂದರೆ ಬಜೆಟ್ ನ 20% ಸಾಲಕ್ಕೆ ಹೋಗುತ್ತದೆ. ಒಟ್ಟಾರೆಯಾಗಿ 11.54...
ಜನತೆಯ ನಾಡಿ ಮಿಡಿತ ಅರಿತು ವಿಕಸಿತ ಭಾರತದ ಬಜೆಟ್ ಮಂಡನೆ- ಹರೀಶ್ ಪೂಂಜ
ಬೆಳ್ತಂಗಡಿ:ಫೆ.01- ಮಧ್ಯಮ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಇಂದು ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ 2025-26ನೇ ಸಾಲಿನ ಮುಂಗಡ ಪತ್ರ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿ ಸರ್ಕಾರ ಉತ್ತಮ ಆಡಳಿತ ಆರ್ಥಿಕ ಸುಧಾರಣೆ ನೀಡುವತ್ತ ದಿಟ್ಟ ಹೆಜ್ಜೆ ಇರಿಸುತ್ತಿರುವುದರ ದ್ಯೋತಕವಾಗಿದೆಯೆಂದು ಶಾಸಕ ಹರೀಶ್ ಪೂಂಜ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಪ್ರಧಾನಮಂತ್ರಿ ದನ್ಯವಾದ ಕೃಷಿ ಯೋಜನೆ, ಕೃಷಿ ಹಾಗೂ ಉತ್ಪಾದನಾ ವಲಯದ ಪ್ರಗತಿಗೆ ಪೂರಕವಾಗಲಿದ್ದು ಮೀನುಗಾರಿಕಾ ವಲಯಕ್ಕೆ ಉತ್ತೇಜನ, ಸಣ್ಣ ಉದ್ಯಮಿಗಳಿಗೆ ಸರಳ ಸಾಲ ಪ್ರತ್ಯೇಕ ಕ್ರೆಡಿಟ್ ಕಾರ್ಡ್ ಯೋಜನೆ ಪ್ರೋತ್ಸಾಹದಾಯಕವಾಗಲಿದೆ. ಸರಕಾರಿ...
ಗುರುವಾಯನಕೆರೆಯಲ್ಲಿ ಬಡ ಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ
ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುರುವಾಯನಕೆರೆ ಬ್ರಾಂಚ್ ಸಮಿತಿ ಹಾಗೂ ಜುಮ್ಮಾ ಮಸೀದಿ ಗುರುವಾಯನಕೆರೆ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಕುವೆಟ್ಟು ಗ್ರಾಮದ ಪಣೆಜಾಲು ನಲ್ಲಿ ನಿರ್ಮಿಸಿದ ಮನೆಯನ್ನು ಬಡ ಮಹಿಳೆ ಜೋಹಾರ ಪಣೆಜಾಲು ಅವರಿಗೆ ಹಸ್ತಾಂತರ ಮಾಡಲಾಯಿತು. ಅಸ್ಸಯ್ಯದ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ಅವರು ದುವಾ ಆಶಿರ್ವಾದಗೈದರು. ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸದಾತ್ ಬಜತ್ತೂರು ಮನೆ ಕೀ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮನೆ ನಿರ್ಮಾಣ ಕ್ಕೆ...
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ತಡೆಗೋಡೆ ರಚನೆ ಕಾಮಗಾರಿಗೆ 2 ಕೋಟಿ 10 ಲಕ್ಷ ಅನುದಾನ ಮಂಜೂರು ರಕ್ಷಿತ್ ಶಿವರಾಂ
ಬೆಳ್ತಂಗಡಿ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಳೆಬದಿಯಲ್ಲಿ ಕೃಷಿ ಜಮೀನುಗಳ ಸಂರಕ್ಷಣೆಗೆ ಮತ್ತು ದೇವಸ್ಥಾನದ ಬಳಿ ತಡೆಗೋಡೆ ರಚನೆ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಗೆ ರಕ್ಷಿತ್ ಶಿವರಾಂ ಅವರ ಮೂಲಕ ಸಲ್ಲಿಸಲಾದ ಮನವಿ ಮೇರೆಗೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ಶಿಫಾರಸ್ಸಿನ ಮೇರೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ರವರುತಾಲೂಕಿನ ವಿವಿಧ ಕಾಮಗಾರಿಗಳಿಗೆ ಎರಡು ಕೋಟಿ ಹತ್ತು ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ.ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಪತ್ರಿಕಾ...
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೇರ್ ವಿತರಣೆ.
ಬಂದಾರು :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ,ಉಜಿರೆ ವಲಯದ, ಬೈಪಾಡಿ ಕಾರ್ಯಕ್ಷೇತ್ರದ ಕರ್ಲೋಡಿ ನಿವಾಸಿ ಲಕ್ಷ್ಮೀಯವರು ನಡೆದಾಡಲು ಕಷ್ಟಸಾಧ್ಯವಾಗಿದ್ದು ಇವರಿಗೆ ಸಮುದಾಯ ಅಭಿವೃದ್ಧಿ ವಿಭಾಗದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರ್ ಗೆ ಬೇಡಿಕೆ ನೀಡಿದ್ದು.ಸದ್ರಿ ಬೇಡಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುತ್ತಾರೆ. ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ರವರು ವೀಲ್ ಚೇರ್ ವಿತರಣೆ ಮಾಡಿದರು , ಈ ಸಂದರ್ಭದಲ್ಲಿ ಉಜಿರೆ ವಲಯದ ಮೇಲ್ವಿಚಾರಕಿ ವನಿತಾ, ಸೇವಾಪ್ರತಿನಿದಿ ಪ್ರಮೀಳಾ, ಬೈಪಾಡಿ ಒಕ್ಕೂಟದ...
ಬೆಳ್ತಂಗಡಿ :ಅಪ್ರಾಪ್ತ ಬಾಲಕಿಯ ಅತ್ಯಾಚಾರ & ಗರ್ಭಿಣಿ ಪ್ರಕರಣ; ಆರೋಪಿ ಕೇಶವ ಪೂಜಾರಿಗೆ ಶಿಕ್ಷೆ ಪ್ರಕಟ
ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿ ಗರ್ಭಿಣಿಯಾಗಲು ಕಾರಣವಾಗಿದ್ದ ಆರೋಪಿ ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ ಕೇಶವ ಪೂಜಾರಿ(43)ಗೆ ಮಂಗಳೂರು ಪೋಕ್ಸೋ ನ್ಯಾಯಾಲಯ 20 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ ಜ.28 ರಂದು ಶಿಕ್ಷೆ ಪ್ರಕಟ ಮಾಡಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 11-11-2023 ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. ಜ.28 ರಂದು ಆರೋಪಿ ಕೇಶವ ಪೂಜಾರಿ ಎಂಬಾತನಿಗೆ u/s 6 pocso 376(2)(n). 376(3) ನಲ್ಲಿ 20 ವರ್ಷ ಕಾರಗೃಹ ಶಿಕ್ಷೆ 50 ಸಾವಿರ ರೂಪಾಯಿ ದಂಡ...
ಮುಂಡಾಜೆಯಲ್ಲಿ ಚರಂಡಿಗೆ ಇಳಿದ ಬಸ್ ಹಲವರಿಗೆ ಗಾಯ
ಬೆಳ್ತಂಗಡಿ: ಧರ್ಮಸ್ಥಳದಿಂದ ಕಡಿರುದ್ಯಾವರ ಗ್ರಾಮದ ಆಲಂದಡ್ಕ ಸಾಗುವ ಸಾರಿಗೆ ಬಸ್ ಮುಂಡಾಜೆ ಸಮೀಪದ ಸೋಮಂತಡ್ಕದಲ್ಲಿ ಚರಂಡಿಗೆ ಸರಿದ ಘಟನೆ ಜ. 28ರ ಮಂಗಳವಾರ ನಡೆದಿದೆ. ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ ಮುಂಡಾಜೆ ಮೂಲಕ ಕಡಿರುದ್ಯಾವರದಿಂದ ಆಲಂದಡ್ಕ ಸಾಗುವ ಬಸ್ ಸುಮಾರು 4.30 ಕ್ಕೆ ಅಪಘಾತ ಸಂಭವಿಸಿದೆ. ಬಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಇದ್ದು ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಮೋರಿ ಅಳವಡಿಸಲಾಗಿದೆ. ಈ ಸ್ಥಳದಲ್ಲಿ ಬಸ್ ನ ಸ್ಟೇರಿಂಗ್ ಕಟ್ ಅಥವಾ ಬ್ರೇಕ್ ಫೈಲ್ ನಿಂದಾಗಿ ಬಸ್ ಸಮೀಪದ ಮೋರಿಗೆ...
ಇಂದಬೆಟ್ಟು: ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶಿಬಿರ
ಬೆಳ್ತಂಗಡಿ; ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಶಿಬಿರವನ್ನು ಇಂದಬೆಟ್ಟಿನ ಸಂತ ಫ್ರಾನ್ಸಿಸ್ ಕ್ಲೀವಿಯರ್ ಚರ್ಚ್ ಸಭಾಂಗಣದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷ ಬಿ ಪದ್ಮನಾಭ ಸಾಲ್ಯಾನ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರದ ಈ ಮಹತ್ವದ ಯೋಜನೆಯನ್ನು ತಾಲೂಕಿನಲ್ಲಿ ಅತ್ಯಂತ ಉತ್ತಮವಾದ ರೀತಿಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ವಿವಿಧ ಕಾರಣಗಳಿಂದಾಗಿ ಯೋಜನೆಯಿಂದ ವಂಚಿತರಾದವರಿಗೆ ಯೋಜನೆಯ ಪ್ರಯೋಜನ ತಲುಪಿಸುವ ಉದ್ದೇಶದಿಂದ ಈ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.ಇಂದಬೆಟ್ಟು ಗ್ರಾಮ ಪಂಚಾಯತಿಯ ಅಧ್ಯಕ್ಷೆ ಆಶಾಲತರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು...
ಎಸ್.ಡಿ.ಎಂ.ಕಾಲೇಜಿನಲ್ಲಿ ರಕ್ತದಾನ ಶಿಬಿರ
ಉಜಿರೆ : ಉಜಿರೆಯ ಶ್ರೀ ಧ. ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್, ಮಂಗಳೂರು , ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ , ರೋಟರಿ ಕ್ಲಬ್, ಬೆಳ್ತಂಗಡಿ , ಲಯನ್ಸ್ ಕ್ಲಬ್, ಬೆಳ್ತಂಗಡಿಯ ಸಹಯೋಗದೊಂದಿಗೆ ಕಾಲೇಜಿನಲ್ಲಿ ರಕ್ತ ದಾನ ಶಿಬಿರವನ್ನು ಜನವರಿ 27 ರಂದು ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಲಯನ್ಸ್ ಕ್ಲಬ್, ಬೆಳ್ತಂಗಡಿಯ ಅಧ್ಯಕ್ಷರಾದ ಲಯನ್. ದೇವದಾಸ್ ಶೆಟ್ಟಿ ಹಿಬರೋಡಿ ಮಾತನಾಡಿ " ನಮ್ಮಲ್ಲಿ ಹಲವರು ದಾನಗಳಿದ್ದರೂ , ರಕ್ತದಾನ ಅದರಲ್ಲಿ ಶ್ರೇಷ್ಠ ದಾನವಾಗಿದೆ....















