ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕ.
ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಎ ಜಯರಾಮ್ ಶೆಟ್ಟಿ ಸದಸ್ಯರಾಗಿ, ನಿತೀಶ್ ಎಚ್, ರಾಕೇಶ್ ಕುಮಾರ್ ಪಿ.ಎನ್, ಅಶೋಕ್ ಪಾಣೂರು, ಸತೀಶ್ ಹೆಗ್ಡೆ, ಶ್ರೀಮತಿ ಜಯಂತಿ ದೇವಾಡಿಗ, ಶ್ರೀಮತಿ ನಂದಿತಾ, ಸೇಸ ಎಂ, ಪ್ರಧಾನ ಅರ್ಚಕರಾಗಿ ಟಿ.ವಿ ವಿಷ್ಣುಮೂರ್ತಿ ಭಟ್ ನೇಮಕವಾಗಿದ್ದಾರೆ. ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ದೇವಸ್ಥಾನದ ಆಡಳಿತ ಅಧಿಕಾರಿ, ವೇಣೂರು ಕಂದಾಯ ನಿರೀಕ್ಷಕರಾದ ಕುಮಾರಸ್ವಾಮಿ ನಡೆಸಿ...
ಪುದುವೆಟ್ಟು ಮಿಯ್ಯಾರು ಶ್ರೀ ವನದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕ
ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಮಿಯ್ಯಾರು ಶ್ರೀ ವನದುರ್ಗಾದೇವಿ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಬೊಮ್ಮಣ್ಣ ಗೌಡ ಸದಸ್ಯರಾಗಿ, ನಾರಾಯಣ ನಾಯ್ಕ, ಶ್ರೀಮತಿ ಶುಭನಿತ. ಶ್ರೀಮತಿ ಹರಿಣಾಕ್ಷಿ, ಜನಾರ್ದನ ಪೂಜಾರಿ, ಸೋಮನಾಥ ಗೌಡ, ಕೆ ಆರ್ ಶಾಜು, ಸಂತೋಷ್ ಕೆ ಸಿ, ಪ್ರಧಾನ ಅರ್ಚಕರಾಗಿ ಪಿವಿ ಈಶ್ವರ ಪ್ರಸಾದ್ ನೇಮಕವಾಗಿದ್ದಾರೆ. ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ದೇವಸ್ಥಾನದ ಆಡಳಿತ ಅಧಿಕಾರಿ, ಪುದುವೆಟ್ಟು ಗ್ರಾಮಆಡಳಿತ ಅಧಿಕಾರಿ ಸಿದ್ದೇಶ್ ನಡೆಸಿ...
ಜನವರಿ 24- ಫೆಬ್ರವರಿ2 ಕಾಜೂರು ಉರೂಸ್ ಮಹಾ ಸಂಭ್ರಮ; ಜನವರಿ 30 ಬ್ರಹತ್ ಝಿಕ್ರ್ ಮಜ್ಲಿಸ್ ಹಾಗೂ ಮುಸಾಫಿರ್ ಖಾನ ಕಟ್ಟಡ ಉದ್ಘಾಟನೆ ಜನವರಿ 30 ಬ್ರಹತ್ ಝಿಕ್ರ್ ಮಜ್ಲಿಸ್ ಹಾಗೂ ಮುಸಾಫಿರ್ ಖಾನ ಕಟ್ಟಡ ಉದ್ಘಾಟನೆ
ಬೆಳ್ತಂಗಡಿ: ಸುಮಾರು 8 ಶತಮಾನಗಳಿಗೂ ಅಧಿಕ ವರ್ಷಗಳ ಇತಿಹಾಸವಿರುವ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿವೆತ್ತಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್‌ನಲ್ಲಿ ಈ ವರ್ಷದ ಉರೂಸ್ ಮಹಾ ಸಂಭ್ರಮವು ಜ.24 ರಿಂದ ಆರಂಭಗೊಂಡು ಫೆಬ್ರವರಿ 2 ರ ವರೆಗೆ ವಿವಿಧ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎಂದಿನಂತೆ ಕಾಜೂರು ಮತ್ತು ಕಿಲ್ಲೂರು ಜಂಟಿ ಜಮಾಅತ್ ಗಳ ಆಶ್ರಯದಲ್ಲಿ ರಚನೆಯಾಗಿರುವ ಉರೂಸ್ ಸಮಿತಿಯ ನೇತೃತ್ವದಲ್ಲಿ ಉರೂಸ್ ಕಾರ್ಯಕ್ರಮಗಳು ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಮಾಹಿತಿ ನೀಡಿದರು.ಬೆಳ್ತಂಗಡಿಯಲ್ಲಿ...
ಬೆಳಾಲಿನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ 3ನೇ ವರ್ಷದ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ
ಬೆಳಾಲು : ಜ 21 ಗ್ರಾಮ ಪಂಚಾಯತ್ ಬೆಳಾಲು ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ 3ನೇ ವರ್ಷದ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ ಪಂಚಾಯಿತಿ ಸಭಾಭವನದಲ್ಲಿ ನೆರವೇರಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ ವಹಿಸಿಕೊಂಡು ವಿಶೇಷ ಚೇತನ ಮಕ್ಕಳು ದೇವರ ಸಮಾನ ಅವರನ್ನು ದೇವರಾಗಿ ಕಾಣಿ ಹೊರತಾಗಿ ಹೊರೆಯಾಗಿ ಕಾಣಬೇಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರೋತ್ಸಾಹವನ್ನು ನೀಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಸಂತ ಮರಕಡ ವಕೀಲರು ಅಧ್ಯಕ್ಷರು ವಕೀಲರ ಸಂಘ...
ಫೆ 2: ಧರ್ಮಸ್ಥಳ.ದಲ್ಲಿ ಭಗವಾನ್ ಬಾಹುಬಲಿಮೂರ್ತಿಗೆ ಪಾದಾಭಿಷೇಕ
ಧರ್ಮಸ್ಥಳ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿರುವ ಭಗವಾನ್ ಬಾಹುಬಲಿಮೂರ್ತಿಗೆ ಫೆ. 2 ರಂದು ಭಾನುವಾರ ಬೆಳಿಗ್ಯೆ ಗಂಟೆ 8.30 ರಿಂದ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಪಾದಾಭಿಷೇಕ ನಡೆಯಲಿದೆ.ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡುವರು.ಇದಕ್ಕೆ ಪೂರ್ವಭಾವಿಯಾಗಿ ಫೆ. ಒಂದರಂದು ಶನಿವಾರ ಬೆಳಿಗ್ಯೆ ಗಂಟೆ 9 ರಿಂದ ರತ್ನಗಿರಿಯಲ್ಲಿ ತೋರಣಮುಹೂರ್ತ, ವಿಮಾನಶುದ್ಧಿ ಷೋಡಶ ಕಲಶಾಭಿಷೇಕ ಮತ್ತು ಸಂಜೆ ನಾಲ್ಕು ಗಂಟೆಯಿಂದ ನಾಂದಿಮಂಗಲ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ.
ಕೋಟೆಕಾರು ದರೋಡೆ ಪ್ರಕರಣ; ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಪೊಲೀಸರಿಂದ ಗುಂಡಿನ ದಾಳಿ
ಮಂಗಳೂರು: ತನಿಖೆಯ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಮಂಗಳವಾರ ನಡೆದಿದೆ.ತಲಪಾಡಿಯ ಕಾಟುಂಗರ ಗುಡ್ಡೆ ಬಳಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಮುಂಬೈ ಚೆಂಬೂರು ತಿಲಕ್ ನಗರ ನಿವಾಸಿ ಕಣ್ಣನ್ ಮಣಿ ಎಂಬಾತನ ಮೇಲೆ ಮಂಗಳೂರು ಸಿಟಿ ಕ್ರೈಂ ಬ್ರ್ಯಾಂಚ್ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ನಾಟಕ – ಕೇರಳ ಗಡಿಯ ತಲಪಾಡಿ ಗ್ರಾಮದ ಕಾಟುಂಗರ ಗುಡ್ಡೆ ಬಳಿ ಈ...
ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕ
ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಕುಶಾಲಪ್ಪ ಗೌಡ, ಸದಸ್ಯರಾಗಿ, ಕೃಷ್ಣಪ್ಪ ಪೂಜಾರಿ, ಕೃಷ್ಣಪ್ಪ ಕೋಟ್ಯಾನ್, ಶಿವಾನಂದ, ಪುರಂದರ ಗೌಡ, ರಮೇಶ್ ನಾಯ್ಕ್ , ಶ್ರೀಮತಿ ಬೇಬಿ ಕೇಶವ ಪೂಜಾರಿ, ಶ್ರೀಮತಿ ಸುಮಿತ್ರ ಹರೀಶ್ ಪೂಜಾರಿ, ನೇಮಕವಾಗಿದ್ದಾರೆ. ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ದೇವಸ್ಥಾನದ ಆಡಳಿತ ಅಧಿಕಾರಿ ಅಳದಂಗಡಿ ಪಶುವೈದ್ಯಾಧಿಕಾರಿ ರಮೇಶ್ ನಡೆಸಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.
ಹರಿಪ್ರಸಾದ್ ಹೊಸಂಗಡಿ ಅವರಿಗೆ ತಾಲೂಕು ಯುವಜನ ಒಕ್ಕೂಟದಿಂದ ಶ್ರದ್ಧಾಂಜಲಿ
ಬೆಳ್ತಂಗಡಿ. ತಾಲೂಕಿನ ಹೊಸಂಗಡಿ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಹಾಗೂ ಹಲವಾರು ಸಂಘಟನೆಯಲ್ಲಿ ಸಕ್ರಿಯವಾಗಿದ್ದುಕೊಂಡು, ಮತ್ತು ತಾಲೂಕು ಯುವಜನ ಒಕ್ಕೂಟದ ನಿರ್ದೇಶಕರಾಗಿಯೂ ಸೇವೆಯನ್ನು ಸಲ್ಲಿಸಿರುವ, ಇತ್ತೀಚಿಗೆ ನಿಧನರಾದ ಹರಿಪ್ರಸಾದ್ ಹೊಸಂಗಡಿ ಅವರಿಗೆ ತಾಲೂಕು ಯುವಜನ ಒಕ್ಕೂಟದಿಂದ,ಬೆಳ್ತಂಗಡಿತಾಲೂಕು ಪಂಚಾಯತ್ ಸಭಾಂಗಣದಲ್ಲಿ,ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಜಿಲ್ಲಾ ಯುವಜನ ಒಕ್ಕೂಟದ ಗೌರವ ಅಧ್ಯಕ್ಷರಾದ ರಾಜೀವ್ ಸಾಲಿಯನ್ ಮುಂಡೂರು ನುಡಿ ನಮನವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ವಿಜಯ ಗೌಡ ವೇಣೂರು, ಗೌರವ ಅಧ್ಯಕ್ಷರಾದ ರಮಾನಂದ ಸಾಲಿಯನ್ ಮುಂಡೂರು...
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ದ ಮಾನಹಾನಿಕರ ಹೇಳಿಕೆ ನೀಡದಂತೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರಿಗೆ ಹೈಕೋರ್ಟ್ ಆದೇಶ
ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬದ ಸದಸ್ಯರ ವಿರುದ್ಧ ಯಾವುದೇ ಮಾನಹಾನಿಕಾರಕ ಹೇಳಿಕೆ ನೀಡದಂತೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರಿಗೆ ಸೂಚನೆ ನೀಡಿರುವ ಹೈಕೋರ್ಟ್, ಒಂದೊಮ್ಮೆ ಅವರು ಹೇಳಿಕೆ ನೀಡಿ ಅದು ಮಾನಹಾನಿಕಾರಕ ಮತ್ತು ಅಪರಾಧವೆಂದು ತಿಳಿದು ಬಂದರೆ ಪೊಲೀಸರು ಕಾನೂನು ಕ್ರಮ ಜರಗಿಸಬೇಕು ಎಂದು ನಿರ್ದೇಶನ ನೀಡಿದೆ. ಡಾ| ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮಾನಹಾನಿ ಹೇಳಿಕೆ ನೀಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ವಿರುದ್ಧ ಕಾನೂನು ಕ್ರಮ ಜರಗಿಸಲು...
ಚಾರ್ಮಾಡಿ ಘಾಟಿಯಲ್ಲಿ ಕಾಡ್ಗಿಚ್ಚುನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ
ಬೆಳ್ತಂಗಡಿ:ಪಶ್ಚಿಮ ಘಟ್ಟಗಳ ಸಾಲಿನ ಸೂಕ್ಷ್ಮ ಪ್ರದೇಶದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಬಿದಿರುತಳ ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದೆ.ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂದು ತಿಳಿದು ಬಂದಿಲ್ಲ. ಪ್ರಾಣಿ ಸೇರಿದಂತೆ ಅಪರೂಪದ ಸಸ್ಯ ಸಂಪತ್ತು ನಾಶವಾಗಿರುವ ಸಂಭವವಿದೆ. ಸದ್ಯ ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.ದಕ ಜಿಲ್ಲಾ ವಿಭಾಗದ ಘಾಟಿ ಪ್ರದೇಶ ಈ ಸ್ಥಳಕ್ಕೆ ಹತ್ತಿರವಿದ್ದು ಅಲ್ಲಿಗೂ ಬೆಂಕಿ ವ್ಯಾಪಿಸುವ ಭೀತಿ ಇದೆ.ಚಾರ್ಮಾಡಿ ಘಾಟಿಯಲ್ಲಿ ಹೆಚ್ಚಾಗಿ ಬೇಸಿಗೆಯಲ್ಲಿ ಪ್ರತಿ...















