Home ಅಪರಾಧ ಲೋಕ ಬೆಳ್ತಂಗಡಿ; ನಾವೂರು ಕ್ಲಿನಿಕ್ ಗೆ ಬೆಂಕಿ ಪ್ರಕರಣ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

ಬೆಳ್ತಂಗಡಿ; ನಾವೂರು ಕ್ಲಿನಿಕ್ ಗೆ ಬೆಂಕಿ ಪ್ರಕರಣ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

3
0

ಬೆಳ್ತಂಗಡಿ: ನಾವೂರು ಪೇಟೆಯಲ್ಲಿರುವ ಡಾ. ಪ್ರದೀಪ್ ಅವರ ಮಾಲಕತ್ವದ ಆರೋಗ್ಯ ಕ್ಲಿನಿಕ್‌ಗೆ ಡೀಸಿಲ್ ಸುರಿದು ಬೆಂಕಿ ಹಚ್ಚಿದ ಆರೋಪದಲ್ಲಿ ಬೆಳ್ತಂಗಡಿ ಠಾಣಾ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಮೂವರಿಗೆ ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ‌ ಆರೋಪಿ ರವಿ ಪೂಜಾರಿ, ಹಾಗೂ ಸುರೇಶ್ ಇಂಚರ, ದಿನೇಶ್ ಪ್ರಭು ಅವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಇದೀಗ ನ್ಯಾಯಾಲಯ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.
ಪ್ರಮುಖ ಆರೋಪಿ ರವಿ ಪೂಜಾರಿ ಪರ ವಕೀಲ ಅರುಣ್ ಬಂಗೇರ ವಾದಿಸಿದ್ದರು. ಸುರೇಶ್ ಇಂಚರ ಮತ್ತು ದಿನೇಶ್ ಪ್ರಭು ಪರ ವಕೀಲ ಮಯೂರಕೀರ್ತಿ ವಾದಿಸಿದ್ದರು.
ಈ ಪ್ರಕರಣದಲ್ಲಿ ರಕ್ಷಿತ್ ಬಡೆಕಾವುಗುತ್ತು ಅವರಿಗೆ ಈಗಾಗಲೇ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇವರು ಮೂವರೂ ಮಂಗಳವಾರ ಜೈಲಿನಿಂದ‌ ಬಿಡುಗಡೆಯಾಗುವ ನಿರೀಕ್ಷೆಯಿದೆ‌.

LEAVE A REPLY

Please enter your comment!
Please enter your name here