ಗುರುವಾಯನಕೆರೆ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಬೆಳ್ತಂಗಡಿ; ಗುರುವಾಯನಕೆರೆಯ ಕೆರೆಯಲ್ಲಿ ಅಪರಿಚಿತ ಅಪರಿಚಿತ ವ್ಯಕ್ತಿಯ ಮೃಯದೇಹ ಭಾನುವಾರ ಪತ್ತೆಯಾಗಿದೆ. ಸ್ಥಳೀಯರು ಮೃತದೇಹವನ್ನು ಗಮನಿಸಿದ್ದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಸಾರ್ವಜನಿಕರ ಸಹಕಾರದೊಂದಿಗೆ ಮೃತದೇಹವನ್ನು ಕೆರೆಯಿಂದ ಮೇಲಕ್ಕೆ ಎತ್ತಲಾಯಿತು. ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.ಬೆಳ್ತಂಗಡಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆಮೃದದೇಹದ ಗುರುತು ಪತ್ತೆಗೆ ಕ್ರಮ ಪ್ರಯತ್ನಿಸಲಾಗುತ್ತಿದೆ.
ಸುಲ್ಕೇರಿ ಅಟ್ರಿಂಜೆ 6.8ಕೋಟಿಯ ರಸ್ತೆ ಕಾಮಗಾರಿಗೆ ಶಿಲಾನ್ಯಾಸ
ಬೆಳ್ತಂಗಡಿ: ದೇಶದ ಕಟ್ಟಕಡೆಯ ಜನರೂ ಅಭಿವೃದ್ಧಿಯ ಫಲವನ್ನು ಉಣ್ಣಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯ ಹೀಗಾಗಿ ಗ್ರಾಮಾಂತರ ಪ್ರದೇಶದ ಉನ್ನತಿಗೆ ಹಗಲು ರಾತ್ರಿ ದುಡಿಯುವ ಸಂಕಲ್ಪ ನನ್ನದು ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.ಅವರು ಪಿ.ಎಂ.ಜನ್ ಮನ್ ಯೋಜನೆಯಡಿ ರೂ. 6.8 ಕೋಟಿ ವೆಚ್ಚದಲ್ಲಿ ನಡೆಯಲಿರುವ ಸುಲ್ಕೇರಿ ಗ್ರಾ.ಪಂ. ನ ಸುಲ್ಕೇರಿಯಿಂದ ಅಂಟ್ರಿಂಜೆ ತನಕದ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಕೊರಗ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.ಎಲ್ಲಾ...
ಬೈಕ್ ಡಿಕ್ಕಿ ಗಾಯಾಳು ಮೃತ್ಯು
ಬೆಳ್ತಂಗಡಿ:ಮುಂಡಾಜೆ-ದಿಡುಪೆ ರಸ್ತೆಯಕಡಿರುದ್ಯಾವರ ಗ್ರಾಮದ ಕನಪಾಡಿ-ಇಂದಬೆಟ್ಟು ಕ್ರಾಸ್ ಸಮೀಪ ಶುಕ್ರವಾರ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.ಪಾದಚಾರಿ ಕಡಿರುದ್ಯಾವರದಅಂತರ ಲೋಕಯ್ಯ ಗೌಡ(65) ಎಂಬವರಿಗೆದಿಡುಪೆ ಮೂಲದ ವ್ಯಕ್ತಿ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದು,ಗಂಭೀರವಾಗಿ ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮೃತರಿಗೆ ಪತ್ನಿ,ಪುತ್ರಿ ಹಾಗೂ ಪುತ್ರ ಇದ್ದಾರೆ. ಘಟನೆ ಬಗ್ಗೆ ಬೈಕ್ ಸವಾರ ಚರಣ್ ರಾಜ್ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯುವ ಕಾಂಗ್ರೆಸ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ ಹಕ್ಕೀಂ ಕೊಕ್ಕಡ ಆಯ್ಕೆ
ಬೆಳ್ತಂಗಡಿ: ಯುವ ಕಾಂಗ್ರೆಸ್ ನ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೊಕ್ಕಡ ನಿವಾಸಿ ಯುವ ಉದ್ಯಮಿ ಎಸ್. ಕೆ ಹಕ್ಕೀಂ ಕೊಕ್ಕಡ ಅಧ್ಯಕ್ಷಾರಾಗಿ ಆಯ್ಕೆ ಯಾಗಿದ್ದಾರೆ.ಯುವ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿರುವ ಇವರು ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅದ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಕೊಕ್ಕಡದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವ ಕಾರ್ಯ ಮಾಡಿದ್ದರು. ಸಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಹಕ್ಕೀಂ ಅವರು ಬೆಳ್ತಂಗಡಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಮಹತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಯುವ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಅಧ್ಯಕ್ಷರಾಗಿ ಅಝರ್ ನಾವೂರು ಆಯ್ಕೆ
ಬೆಳ್ತಂಗಡಿ: ಯುವ ಕಾಂಗ್ರೆಸ್ ನ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾವೂರು ನಿವಾಸಿ ಯುವ ಉದ್ಯಮಿ ಅಝರ್ ಎನ್.ಕೆ ನಾವೂರು ಅಧ್ಯಕ್ಷಾರಾಗಿ ಆಯ್ಕೆ ಯಾಗಿದ್ದಾರೆ.ಯುವ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿರುವ ಇವರು ಸಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಯುವಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಯಾಗಿ ಅಭಿನಂದನ್ ಆಯ್ಕೆ
ಬೆಳ್ತಂಗಡಿ : ಕರ್ನಾಟಕ ರಾಜ್ಯ ಯುವ ಕಾಂಗ್ರಸ್ ಸಮಿತಿಯ ಕಾರ್ಯದರ್ಶಿಯಾಗಿ ಅಭಿನಂದನ್ ಹರೀಶ್ ಕುಮಾರ್ ಆಯ್ಕೆಯಾಗಿದ್ದಾರೆ. ಯುವ ಕಾಂಗ್ರೆಸ್ ರಾಜ್ಯ ಸಮಿತಿಗೆ ನಡೆದ ಚುನಾವಣೆಯಲ್ಲಿ ಅಭಿನಂದನ್ ಹರೀಶ್ ಕುಮಾರ್ ಅವರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇವರು ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರುಯುವ ಉದ್ಯಮಿಯಾಗಿರುವ ಅಭಿನಂದನ್ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ
ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇಬ್ರಾಹಿಂ ನವಾಝ್ ಆಯ್ಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, 10942 ಮತಗಳನ್ನು ಗಳಿಸಿ ಇಬ್ರಾಹೀಂ ನವಾಝ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಬಡಕಬೈಲ್ ನಿವಾಸಿಯಾಗಿರುವ ಇಬ್ರಾಹೀಂ ನವಾಝ್ ಈ ಹಿಂದೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕರಿಯಂಗಳ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಅವರು ಬಂಟ್ವಾಳ ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಸ್ಥಾಪಕಾಧ್ಯಕ್ಷರಾಗಿ,...
ಬೆಳ್ತಂಗಡಿ : ಮಿತ್ತಬಾಗಿಲು ಕಾಡು ಹಂದಿ ಬೇಟೆ; ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ : ಕಾಡುಹಂದಿಯನ್ನು ಯಾವುದೋ ಆಯುಧಗಳಿಂದ ದಾಳಿ ಮಾಡಿ ಸಾಯಿಸಿದ ಪ್ರಕರಣ ಸಂಬಂಧ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಹೊಸಬೆಟ್ಟು ನಿವಾಸಿ ಬಾಬು ಗೌಡರ ತೋಟದಲ್ಲಿ ಒಂದು ವರ್ಷ ಪ್ರಾಯದ 26 ಕೆ.ಜಿ ತೂಕದ ಕಾಡು ಹಂದಿಯನ್ನು ಜ.23 ರಂದು ಜಾನು ಗೌಡ ಎಂಬಾತ ಆಯುಧದಿಂದ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದು. ಈ ಘಟನೆ ಬಗ್ಗೆ ಸ್ಥಳೀಯರು ಬೆಳ್ತಂಗಡಿ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್.ಎಫ್.ಓ ತ್ಯಾಗರಾಜ್ ಮತ್ತು ತಂಡ ಜ.23...
ಕಾರ್ಮಲ್ ಹೋಮಿಯೋ ಕ್ಲಿನಿಕ್ ಉದ್ಘಾಟನೆ
ಬೆಳ್ತಂಗಡಿ; ಕಳೆದ ಸುಮಾರು ಹನ್ನೆರಡುವರ್ಷಗಳಿಂದ ಪುಷ್ಪ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ.ಎಂ.ಸಿ ಕಾರ್ಮೆಲ್ ಹೋಮಿಯೋ ಕ್ಲಿನಿಕ್ ಸಂಸ್ಥೆಯು ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.ನೂತನ ಕ್ಲಿನಿಕ್ ನಲ್ಲಿ ಕುಟ್ರುಪ್ಪಾಡಿ ಚರ್ಚಿನ ಧರ್ಮಗುರುಗಳಾದ ಫಾ. ವರ್ಗೀಸ್ ಪುದಿಯೇಡತ್ ಅವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಉದ್ಘಾಟನೆಯನ್ನು ಸಿ.ಎಂ.ಸಿ ಎವುಪ್ರಾಸಿಯಾ ಪ್ರಾವಿನ್ಷ್ಯಲ್ ನ ಮದರ್ ಪ್ರೊವಿನ್ಷ್ಯಲ್ ಸಿ. ಮೆರ್ಲಿನ್ ಸಿ.ಎಂ.ಸಿ ಅವರು ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಧರ್ಮ ಭಗಿನಿಯರು, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.ಪದವಿನ ಕ್ಲಿನಿಕ್ ನಲ್ಲಿ ತಿಂಗಳ ಮೊದಲ ಮತ್ತು...
ಬೆಳ್ತಂಗಡಿ : ಅಪಘಾತ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿ ಕೊಂಡಿದ್ದ ಲಾರಿ ಚಾಲಕ ಸಿದ್ದಿಕ್ ಬಂಧನ
ಬೆಳ್ತಂಗಡಿ : 2006 ರಲ್ಲಿ ನಡೆದ ಲಾರಿಯ ಅಜಾಗರೂಕತೆಯ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ ಪ್ರಕರಣ ಸಂಬಂಧ ಲಾರಿ ಚಾಲಕನಿಗೆ ಬೆಳ್ತಂಗಡಿ ನ್ಯಾಯಾಲಯಲ್ಲಿ ಒಂದು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸುತ್ತು.ಬಳಿಕ ಈ ಪ್ರಕರಣದ ವಿರುದ್ಧ ಲಾರಿ ಚಾಲಕ ಚಾರ್ಮಾಡಿ ಸಿದ್ದಿಕ್(40) ಹೈಕೋರ್ಟ್ ವರೆಗೆ ಅಪೀಲು ಹೋಗಿದ್ದು ಅಲ್ಲಿ ಕೂಡ ಬೆಳ್ತಂಗಡಿ ನ್ಯಾಯಾಲಯ ತೀರ್ಪನ್ನು ಎತ್ತಿ ಹಿಡಿದು ಶಿಕ್ಷೆ ಖಾಯಂ ಮಾಡಿತ್ತು ಬಳಿಕ ಲಾರಿ ಚಾಲಕ ಆರೋಪಿ ತಲೆಮರೆಸಿಕೊಂಡಿದ್ದು. ಇದೀಗ ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ಜೈಲಿಗಟ್ಟಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ...















