

ಬೆಳ್ತಂಗಡಿ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಳೆಬದಿಯಲ್ಲಿ ಕೃಷಿ ಜಮೀನುಗಳ ಸಂರಕ್ಷಣೆಗೆ ಮತ್ತು ದೇವಸ್ಥಾನದ ಬಳಿ ತಡೆಗೋಡೆ ರಚನೆ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಗೆ ರಕ್ಷಿತ್ ಶಿವರಾಂ ಅವರ ಮೂಲಕ ಸಲ್ಲಿಸಲಾದ ಮನವಿ ಮೇರೆಗೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ಶಿಫಾರಸ್ಸಿನ ಮೇರೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ರವರು
ತಾಲೂಕಿನ ವಿವಿಧ ಕಾಮಗಾರಿಗಳಿಗೆ ಎರಡು ಕೋಟಿ ಹತ್ತು ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ.
ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಮಗಾರಿಯ ವಿವರಗಳು
ತಾಲೂಕಿನ ಬಡಗಕಾರಂದೂರು ಗ್ರಾಮದ ಬೈಲ ಕೊಡಂಗೆ ಬಳಿ ತಡೆಗೋಡೆ ರಚನೆ ಕಾಮಗಾರಿಗೆ 30 ಲಕ್ಷ,
ಕುಧ್ಯಾಡಿ ಗ್ರಾಮದ ಪದ್ಮಾಂಜಲಿ ಬಳಿ ತಡೆಗೋಡೆ ರಚನೆ 25 ಲಕ್ಷ
ಪುತ್ತಿಲ ಗ್ರಾಮದ ಗುತ್ತು ಮನೆಯ ಬಳಿ ತಡೆಗೋಡೆ ರಚನೆ 25 ಲಕ್ಷ
ಪುತ್ತಿಲ ಗ್ರಾಮದ ರವಿಪ್ರಭಾ ಮನೆಯ ಬಳಿ ತಡೆಗೋಡೆ ರಚನೆ ಕಾಮಗಾರಿ 25 ಲಕ್ಷ, ನಾರಾವಿ ಗ್ರಾಮದ ಸೂರ್ಯನಾರಾಯಣ ದೇವಸ್ಥಾನದ ಬಳಿ ತಡೆಗೋಡೆ ರಚನೆ 75 ಲಕ್ಷ, ನಡ ಪಂಚಾಯತ್ ವ್ಯಾಪ್ತಿಯ ಕನ್ಯಾಡಿ ಗ್ರಾಮದ ಮೂಡಬೆಟ್ಟು ಬಾಯ್ತರು ಬಳಿ ತಡೆಗೋಡೆ ರಚನೆ 30 ಲಕ್ಷ ಅನುದಾನ ಮಂಜೂರಾಗಿರುವುದಾಗಿ ಅವರು ತಿಳಿಸಿದ್ದಾರೆ.
