ಅರಸಿನ ಮಕ್ಕಿ; 31ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ

0

ಅರಸಿನಮಕ್ಕಿ;  ಸೇವಾಭಾರತಿ (ರಿ.), ಕನ್ಯಾಡಿ ಇದರ ನೇತೃತ್ವದಲ್ಲಿ, ಸಬಲಿನಿ ಯೋಜನೆಯಡಿ ಗ್ರಾಮ ಪಂಚಾಯತ್ ಅರಸಿನಮಕ್ಕಿ ಮತ್ತು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.), ಅರಸಿನಮಕ್ಕಿ ಇದರ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಉಚಿತ 31ನೇ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಅರಸಿನಮಕ್ಕಿಯ ಹತ್ಯಡ್ಕ ಸಿ ಎ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು. ಅರಸಿನಮಕ್ಕಿ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘ ಇದರ ಸಿಇಒ ಶ್ರೀಮತಿ ಸ್ವರ್ಣಗೌರಿ...

ಕಳೆಂಜ; ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಬೆಳ್ತಂಗಡಿ;  ಕಳೆಂಜ ಗ್ರಾಮದ  ಕಾಂಗ್ರೇಸ್ ಗ್ರಾಮ ಸಮಿತಿಯ ಸಭೆ ನಡೆಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಭೆಯಲ್ಲಿ ಭಾಗವಹಿಸಿ ಪಕ್ಷ ಸಂಘಟನೆಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.  ಈ ಸಂದರ್ಭದಲ್ಲಿ, ಗ್ರಾಮೀಣ ಬ್ಲಾಕ್ ಕಾಂಗೇಸ್ ಸಮಿತಿಯ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಕೆಪಿಸಿಸಿ ಸದಸ್ಯರಾದ ಕೇಶವ ಪಿ ಬೆಳಾಲು, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸೆಬಾಸ್ಟಿನ್ ಪಿ.ಟಿ, ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಶ್ರೀದರ್ ಕಳೆಂಜ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಯುವ ಕಾಂಗೇಸ್ ಅದಕ್ಷರಾದ ಹಕಿಂ...

ಬಜೆಟ್ ನಲ್ಲಿ ಅರಣ್ಯ ಮೂಲ ಬುಡಕಟ್ಟು ಸಮುದಾಯಕ್ಕೆ 200 ಕೋಟಿ ಅನುದಾನ ಅಭಿನಂದನೀಯ : ಜಿಲ್ಲಾ ಮಲೆಕುಡಿಯರ ಸಂಘದ‌ ಅಧ್ಯಕ್ಷ ಹರೀಶ್ ಎಳನೀರು

0

ಬೆಳ್ತಂಗಡಿ;  ಮಲೆಕುಡಿಯ ಸಮುದಾಯ ಸೇರಿದಂತೆ 12 ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿ ಗಳು ಬಜೆಟ್ ನಲ್ಲಿ 200 ಕೋಟಿ ಅನುದಾನ ಮೀಸಲಿಟ್ಟುರುವುದು ಹಾಗೂ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳಿಗೆ ಸಿವಿಲ್ ಸರ್ವೀಸ್ ಸೇವೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸಲು ನೇರ ನೇಮಕಾತಿಯನ್ನು ಕೈಗೊಳ್ಳುವ ಘೋಷನೆ ಮಾಡಿರುವುದು ಶ್ಲಾಘನೀಯ ಎಂದು ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷರಾದ ಹರೀಶ್ ಎಳನೀರ್ ಹಾಗೂ ಪ್ರಧಾನ ಕಾರ್ಯದರ್ಶಿ ಜಯೇಂದ್ರ ನಿಡ್ಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಸರಕಾರದ ಈ ಯೋಜನೆಗಳನ್ನು ಸಂಬಂಧ ಪಟ್ಟ ಇಲಾಖೆಗಳು ಸಮುದಾಯದ ಸಹಭಾಗಿತ್ವದಲ್ಲಿ...

ಶಾಸಕ ಹರೀಶ್ ಪೂಂಜ ಅವರಿಂದ ಮೈಪಾಲ‌ ಸೇತುವೆ ಕಾಮಗಾರಿ ವೀಕ್ಷಣೆ

0

ಕೊಕ್ಕಡ;  ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹಾಗೂ ಬಂದಾರು ಗ್ರಾಮವನ್ನು ಸಂಪರ್ಕಿಸಲು ಕೊಕ್ಕಡ ಗ್ರಾಮದ ಮೈಪಾಲ ಎಂಬಲ್ಲಿ ರೂ.72 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೈಪಾಲ ಸೇತುವೆ ಸಹಿತ ಕಿಂಡಿ ಆಣೆಕಟ್ಟು ಕಾಮಗಾರಿಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ,ಕೊಕ್ಕಡ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಯೋಗೀಶ್ ಆಳಂಬಿಲ, ಕೊಕ್ಕಡ ಪಂಚಾಯತ್ ಸದಸ್ಯರಾದ ವಿಶ್ವನಾಥ, ಬಿಜೆಪಿ ಮಂಡಲ ಎಸ್. ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ ಕುರ್ಲೆ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ...

ಬಂಟ್ವಾಳ; ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಪತ್ತೆ

0

ಬಂಟ್ವಾಳ: ನಿಗೂಢ ರೀತಿಯಲ್ಲಿ ನಾಪತ್ತೆಯಾದ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಸುಮಾರು 10 ದಿನದ ಬಳಿಕ ಮಾ.8ರ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಆತನನ್ನು ಬಂಟ್ವಾಳಕ್ಕೆ ಕರೆ ತರುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿ, 40ಕ್ಕೂ ಅಧಿಕ ಪೊಲೀಸರ ತಂಡ ಹುಡುಕಾಟ ನಡೆಸಿದ್ದರು. ಡಿ‌ಎಆರ್ ತಂಡದ 30 ಪೊಲೀಸರು, ರೈಲ್ವೆ ಪೊಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್, ಡಾಗ್ ಸ್ಕ್ವಾಡ್, ಡ್ರೋನ್ ಕ್ಯಾಮರಾಗಳನ್ನು ಬಳಿಸಿ ಹುಡುಕಾಟ ನಡೆಸಿದ್ದರು. ಈತ ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಫೆ. 25ರ...

ಉಜಿರೆ; ಬೈಕ್ ಹಾಗೂ ಸ್ಕೂಟರ್ ನಡುವೆ ಅಪಘಾತ; ಸ್ಕೂಟರ್ ಸವಾರ ಮೃತ್ಯು

0

ಬೆಳ್ತಂಗಡಿ; ಉಜಿರೆಯಲ್ಲಿ ಬೈಕ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸಂಭವಿಸಿದೆ.ಮೃತ ವ್ಯಕ್ತಿ ಉಜಿರೆ ನಿವಾಸಿ ಜಯಂತ್ (56) ಎಂಬವರಾಗಿದ್ದಾರೆ.ಇವರು ಮಾ.7ರಂದು ರಾತ್ರಿಯ ವೇಳೆ ಉಜಿರೆಯಿಂದ ಬಂದು ಭಾರತ್ ಶೋರೂಮ್ ಬಳಿ ಅಜಿತ್ ನಗರದ ರಸ್ತೆಗೆ ತಿರುಗಿಸುವ ವೇಳೆ ಉಜಿರೆ ಕಡೆಗೆ ಬರುತ್ತಿದ್ದ ಬೈಕ್ ಅವರಿಗೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ರಸ್ತೆಗೆ ಬಿದ್ದ ಜಯಂತ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ. ಬೈಕ್ ಸವಾರ ಸಣ್ಣ...

ಬೆಳ್ತಂಗಡಿ; ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಪ್ರಕರಣ‌ ದಾಖಲು

0

ಬೆಳ್ತಂಗಡಿ; ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಸೌಜನ್ಯ ಪರ ಹೋರಾಟದ ನೇತೃತ್ವ ವಹಿಸಿರುವ ಉಜಿರೆಯ ಮಹೇಶ್ ಶೆಟ್ಟಿ ತಿರೋಡಿ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ದಾಖಲಿಸಲಾಗಿದೆ.ಸಾರ್ವಜನಿಕ ಸಭೆಗಳಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ವಿರುದ್ದವಾಗಿ, ಅವರ ಕುಟುಂಬ ಸಂಸ್ಥೆಗಳ ಬಗ್ಗೆ ಅಪಪ್ರಚಾರ ಅಥವಾ ಮನಹಾನಿಕರವಾಗಿ ಮಾತನಾಡಬಾರದು ಎಂಬ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಭಾಷಣ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.ಫೆ.8 ರಂದು ಬೆಳ್ತಂಗಡಿ ತಾಲೂಕಿನ ಬೆದ್ರಬಟ್ಟುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ನೀಡಿರುವ ಹೇಳಿಕೆಗಳು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಹಾಗೂ ಸಮಾಜದಲ್ಲಿ ಅಶಾಂತಿಯನ್ನು...

ಗೇರುಕಟ್ಟೆ; ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ

0

ಬೆಳ್ತಂಗಡಿ;ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಗೇರುಕಟ್ಟೆ ಸಂಬೋಳ್ಯ ಸಮೀಪದ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಟ್ರಕ್ಕ್ ಡಿಕ್ಕಿಯಾಗಿ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ಸಂಭವಿಸಿದೆ.ಅಪಘಾತದಲ್ಲಿ ಟ್ರಕ್ ನ‌ ಮುಂಭಾಗ‌ ನುಜ್ಜುಗುಜ್ಜಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಬೆಳ್ತಂಗಡಿ : ಅಕ್ರಮವಾಗಿ ಲಾರಿಯಲ್ಲಿ ಮರ ಸಾಗಾಟ ಪತ್ತೆ; ಮಂಗಳೂರು ಅರಣ್ಯ ಸಂಚಾರಿ ದಳದಿಂದ ಕಾರ್ಯಾಚರಣೆ

0

ಬೆಳ್ತಂಗಡಿ : ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ವಿವಿಧ ಜಾತಿಯ ಮರಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಅರಣ್ಯ ಸಂಚಾರಿ ದಳ(FMS)ದ ಅಧಿಕಾರಿಗಳು ಬೆಳ್ತಂಗಡಿಯ ಬೆದ್ರಬೆಟ್ಟುವಿನಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳ್ತಂಗಡಿ - ಕೊಲ್ಲಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಬೆಳ್ತಂಗಡಿ ಕಡೆಗೆ ಅಕ್ರಮವಾಗಿ ವಿವಿಧ ಜಾತಿಯ ಮರಗಳನ್ನು ಅಶೋಕ್ ಲೈಲಾಂಡ್ ಕಂಪನಿಯ KA-19-AE-6067 ಸಂಖ್ಯೆಯ ಲಾರಿಯಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಮಂಗಳೂರು ಅರಣ್ಯ ಸಂಚಾರಿ ದಳದ(FMS) ಅಧಿಕಾರಿಗಳಿಗೆ ಖಚಿತ ಮಾಹಿತಿ ಬಂದಿದ್ದು ತಕ್ಷಣ ಕಾರ್ಯಾಚರಣೆಗಿಳಿದ ತಂಡ ಮಾ.6...

ಅಭಿವೃದ್ಧಿಗೆ ಒತ್ತು ನೀಡದ ಸಾಲದ ಹೊರೆ ಹೆಚ್ಚಿಸುವ ಅಲ್ಪಸಂಖ್ಯಾತರ ಓಲೈಕೆಯ ಬಜೆಟ್; ಪ್ರತಾಪ ಸಿಂಹ ನಾಯಕ್

0

ಬೆಳ್ತಂಗಡಿ: ಅಭಿವೃದ್ಧಿಗೆ ಒತ್ತು ನೀಡದ, ಸಾಲದ ಹೊರೆಯನ್ನು ಹೆಚ್ಚಿಸುವ, ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ ಇದಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಟೀಕಿಸಿದ್ದಾರೆ.ಸಾಲ ಮಾಡಿ ಬಜೆಟ್ ಗಾತ್ರವನ್ನು ಹಿಗ್ಗಿಸಲಾಗಿದೆ. ಶಾಶ್ವತ ಯೋಜನೆಗಳನ್ನು ಆಯವ್ಯಯದಿಂದ ತೆಗೆದುಹಾಕಲಾಗಿದೆ. ಮತಬ್ಯಾಂಕ್ ಆಧಾರಿತ, ರಾಜ್ಯದ ಆರ್ಥಿಕ ಶಿಸ್ತನ್ನು ಹಾಳುಗೆಡುವ ಬಜೆಟ್ ಇದಾಗಿದೆ.ಕೌಶಲ್ಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಕಡೆಗೆಣಿಸಲಾಗಿದ್ದು ಮತ್ತು ರೈತ ವಿರೋಧಿಯಾಗಿದ್ದು, ಸಾಂಸ್ಕೃತಿಕ ವಲಯ, ಪ್ರವಾಸೋದ್ಯಮವನ್ನು ನಿರ್ಲಕ್ಷಿಸಲಾಗಿದೆ. ಎಸ್.ಸಿ, ಎಸ್.ಟಿ., ಮತ್ತು ಓಬಿಸಿ ಗಳು ತಮ್ಮ ಆರ್ಥಿಕ ಸದೃಢತೆಯತ್ತ ಸಾಗಲು ನೀರಸ ಬಂಡವಾಳ ಒದಗಿಸಲಾಗಿದೆ. ವಕ್ಭ ಆಸ್ತಿಯ...