ಕೊಲೆಗಾರರಿಗೆ ಕಠಿಣ ಶಿಕ್ಷೆ ಆಗಲಿ,ಜಿಲ್ಲೆಯ ಶಾಂತಿ ಸೌಹಾರ್ದತೆ ಮತ್ತೆ ಮರುಕಳಿಸಲಿ ರಕ್ಷಿತ್ ಶಿವರಾಂ
ಬೆಳ್ತಂಗಡಿ.ಜಿಲ್ಲೆಯಲ್ಲಿ ಸರಣಿ ಕೊಲೆಗಳು ನಡೆದದ್ದು, ಇದು ತೀರಾ ಖಂಡನೀಯ, ಪೋಲಿಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು, ಜನರಿಗೆ ರಕ್ಷಣೆ ನೀಡಬೇಕು ಜಿಲ್ಲೆಯ ಜನತೆ ಶಾಂತಿ ಕಾಪಾಡಬೇಕು,ಕೊಲ್ಲುವ ರಾಕ್ಷಸಿ ಕೃತ್ಯಕ್ಕೆ ನನ್ನ ಧಿಕ್ಕಾರವಿದೆ. ಕೋಮು ದ್ವೇಷಕ್ಕೆ ಯಾವ ಧರ್ಮದವನು ಬಲಿಯಾಗಬಾರದು. ಕೊಲೆಗಾರರಿಗೆ ಕಠಿಣ ಶಿಕ್ಷೆ ಆಗಲಿ,ಜಿಲ್ಲೆಯ ಶಾಂತಿ ಸೌಹಾರ್ದತೆ ಮತ್ತೆ ಮರುಕಳಿಸಲಿ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದ್ದಾರೆ.
ಬೆಳ್ತಂಗಡಿ ಸತ್ಯಶೋಧಕ ವೇದಿಕೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆಅಭಿನಂದನೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ
ಬೆಳ್ತಂಗಡಿ : ತಾಲೂಕಿನ ಮಕ್ಕಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಶುಭ ಸಂದರ್ಭದಲ್ಲಿ ಅವರ ಮುಂದಿನ ಶೈಕ್ಷಣಿಕ ಬದುಕು ಉತ್ತಮವಾಗಿ ಬೆಳಗಲಿ ಎಂದು ಹಾರೈಸುತ್ತೇನೆಸತ್ಯ ಶೋಧಕ ವೇದಿಕೆಯ ಮೂಲಕ ಸಮಾಜ ಸುಧಾರಕರ ತತ್ವ ಅನುಷ್ಠಾನಗೊಳ್ಳುತ್ತಿದೆಅಂಬೇಡ್ಕರ್ ಚಿಂತನೆಯು ನಮ್ಮೆಲ್ಲರ ಸಾಮಾಜಿಕ ಜೀವನಕ್ಕೆ ಸಮಾಜಮುಖಿ ಕೆಲಸಗಳಿಗೆ ಪ್ರೇರಣೆಯಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಮೇ 25ನೇ ಭಾನುವಾರದಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸತ್ಯಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ನಡೆದ ಬುದ್ಧ, ಬಸವ, ಪುಲೆ ಹಾಗೂ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು...
ಪುದುವೆಟ್ಟು ಗ್ರಾ.ಪಂ ಉಪ ಚುನಾವಣೆ ಬಿಜೆಪಿ ಬೆಂಬಲಿತರ ಗೆಲುವು
ಬೆಳ್ತಂಗಡಿ; ಪುದುವೆಟ್ಟು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವನ್ನು ಪಡೆದಿದ್ದಾರೆ.ಬೆಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಜಯಲಕ್ಷ್ಮಿ ಅವರು 372ಮತಗಳನ್ನು ಪಡೆದು ವಿಜೇತರಾದರು. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಕಣಕ್ಕೆ ಇಳಿದಿದ್ದ ಸಿಂಥು ಅವರಿಗೆ ಕೇವಲ 120ಮತಗಳು ಮಾತ್ರ ಲಭಿಸಿತ್ತು. 372ಮತಗಳ ಅಂತರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವನ್ನು ಪಡೆದರು.ಬಿಜೆಪಿ ಬೆಂಬಲಿತ ಸದಸ್ಯೆ ಅನಿತಾ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು.
ಹೊಸಂಗಡಿ ಉಪಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು
ಬೆಳ್ತಂಗಡಿ; ಹೊಸಂಗಡಿ ಗ್ರಾಮ ಪಂಚಾಯತಿನ ಮೂರನೇ ವರ್ಡ್ ನಲ್ಲಿ ಹರಿಪ್ರಸಾದ್ ಪಿ ಇವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆನಂದ ಬಂಗೇರ ಗೆಲುವನ್ನು ಪಡೆದಿದ್ದಾರೆ.ಆನಂದ ಬಂಗೇರ ಅವರಿಗೆ 457ಮತಗಳು ಲಭಿಸಿದ್ದು ಅವರ ವಿರುದ್ದ ಬಿಜೆಪಿ ಬೆಂಬಲಿತರಾಗಿ ಕಣಕ್ಕೆ ಇಳಿದಿದ್ದ ಸುನಿಲ್ ಶೆಟ್ಟಿ ಅವರಿಗೆ 274ಮತಗಳು ಮಾತ್ರ ಲಭಿಸಿದೆ ಆನಂದ ಬಂಗೇರ ಅವರು 183ಮತಗಳ ಅಂತರದಿಂದ ಗೆಲುವನ್ನು ಪಡೆದಿದ್ದಾರೆ.
ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ; 15ಮಂದಿ ಆರೋಪಿಗಳ ವಿರುದ್ದ ಪ್ರಕರಣ ದಾಖಲು
ಮಂಗಳೂರು: ಕೊಲ್ತಮಜಲು ಬೆಲ್ಲೂರು ನಿವಾಸಿ ಅಬ್ದುಲ್ ಖಾದರ್ ಅವರ ಪುತ್ರ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರಾದ ದೀಪಕ್ ಮತ್ತು ಸುಮಿತ್ ಸೇರಿದಂತೆ 15ಮಂದಿ ಆರೋಪಿಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಇವರು ಕೊಲೆಯಾದ ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿಗೆ ಪರಿಚಯಸ್ಥರೇ ಆಗಿದ್ದರು ಎಂದು ತಿಳಿದು ಬಂದಿದೆ. ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಹೊಳೆ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಅನ್...
ಮುಸ್ಲಿಂ ಯುವಕನ ಕೊಲೆ : ಶಾಂತಿ ಕಾಪಾಡಲು ಸಿಪಿಐಎಂ ಮನವಿ. ಬಿಜೆಪಿ, ಸಂಘಪರಿವಾರದ ದ್ವೇಷ ಭಾಷಣ, ಸರಕಾರದ ಬೇಜವಾಬ್ದಾರಿ ನಡೆ ಇಂದಿನ ಸ್ಥಿತಿಗೆ ಕಾರಣ : ಸಿಪಿಐಎಂ ಆರೋಪ
ಬೆಳ್ತಂಗಡಿ; ಬಂಟ್ವಾಳ ತಾಲೂಕಿನ ಕೊಳ್ತಮಜಲಿನಲ್ಲಿ ನಡೆದಿರುವ ಮುಸ್ಲಿಂ ಯುವಕನ ಬರ್ಬರ ಕೊಲೆಯನ್ನು ಸಿಪಿಐಎಂ ಬಲವಾಗಿ ಖಂಡಿಸಿದೆ, ಜನತೆ ಪ್ರಚೋದನೆಗೆ ಬಲಿಯಾಗದೆ ಶಾಂತಿ ಕಾಪಾಡುವಂತೆ ಮನವಿ ಮಾಡಿದೆ. ಚಾಲಕ ವೃತ್ತಿಯ ಅಮಾಯಕ ಮುಸ್ಲಿಂ ಯುವಕನನ್ನು ಮತೀಯ ದ್ವೇಷ, ಪ್ರತೀಕಾರದ ನೆಪದಲ್ಲಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಕೊಲೆ ಹಾಗು ಕರಾವಳಿ ಜಿಲ್ಲೆಯ ಇಂದಿನ ಈ ಸ್ಥಿತಿಗೆ ಬಿಜೆಪಿ ಶಾಸಕರುಗಳು ಹಾಗೂ ಸಂಘಪರಿವಾರದ ದ್ವೇಷ ಭಾಷಣ, ಪ್ರಚೋದನೆಯ ರಾಜಕಾರಣ ಹಾಗೂ ಪರಿಸ್ಥಿತಿಯ ಗಂಭೀರತೆಯ ಅರಿವಿದ್ದೂ ಬೇಜವಾಬ್ದಾರಿ ನಡೆ ಪ್ರದರ್ಶಿಸಿದ ರಾಜ್ಯ ಸರಕಾರ...
ಬೆಳ್ತಂಗಡಿ ಸೇರಿದಂತೆ ಐದು ತಾಲೂಕುಗಳಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕು ವ್ಯಾಪ್ತಿಯಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಕಡಬ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಮೇ 27ರ ಸಂಜೆ 6 ಗಂಟೆಯಿಂದ ಮೇ 30ರ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಇಬ್ಬರು...
ಕೋಳಿ ಅಂಕಕ್ಕೆ ಪೊಲೀಸ್ ದಾಳಿ ಹಲವರ ಬಂಧನ
ಬೆಳ್ತಂಗಡಿ:ಅಳದಂಗಡಿ ಸಮೀಪದ ಪಿಲ್ಯ ಅಲೆಕ್ಕಿ ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಯುತ್ತಿದ್ದಾಗ ವೇಣೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ಆನಂದ ಎಂ.ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಪ್ರವೀಣ್ ಬಳಂಜ,ರಮೇಶ್ ಅಲೆಕ್ಕಿ, ಜೋಯೆಲ್ ಕರಂಬಾರು,ರಾಜೇಶ್ ಪೂಜಾರಿ ಸುಲ್ಕೇರಿಮೊಗ್ರು,ಅವಿನಾಶ್ ಕುದ್ಯಾಡಿ,ತೇಜಸ್ ಗರ್ಡಾಡಿ,ಸುಂದರ ಮಾಳ,ಮೇಘರಾಜ್ ಗರ್ಡಾಡಿ,ಉಮೇಶ್ ಬಡಗಕಾರಂದೂರು ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೇ 24 ರಂದು ವೇಣೂರು ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ಆನಂದ ಎಂ. ಹೊಸಂಗಡಿ ಗ್ರಾಮ ಪಂಚಾಯಿತಿ ಮರು ಚುನಾವಣಾ ಬಂದೋಬಸ್ತು ಕರ್ತವ್ಯದಲ್ಲಿರುವ ಸಮಯ ಪಿಲ್ಯ ಗ್ರಾಮದ ಅಲೆಕ್ಕಿ...
ಬಂಟ್ವಾಳ; ತಲವಾರಿನಿಂದ ಕಡಿದು ಯುಕನ ಕೊಲೆ
ಬಂಟ್ವಾಳ: ದುಷ್ಕರ್ಮಿಗಳ ತಂಡವೊಂದು ಇಬ್ಬರು ಯುವಕರ ಮೇಲೆ ತಲವಾರು ದಾಳಿ ಮಾಡಿದ ಪರಿಣಾಮ ಓರ್ವ ಮೃತಪಟ್ಟು ಇನ್ನೋರ್ವ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಇರಾಕೋಡಿ ಎಂಬಲ್ಲಿ ಮಂಗಳವಾರ ಸಂಭವಿಸಿದೆ. ಘಟನೆಯಲ್ಲಿ ಕೊಲ್ತಮಜಲು ಬೆಲ್ಲೂರು ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಅಬ್ದುಲ್ ರಹಿಮಾನ್ ಮೃತಪಟ್ಟಿದ್ದಾರೆ. ಮತ್ತೋರ್ವ ಯುವಕ ಇಮ್ಮಿಯಾಝ್ ಗಾಯಗೊಂಡಿದ್ದಾರೆ. ಇಬ್ಬರೂ ಕೊಲ್ತಮಜಲು ಎಂಬಲ್ಲಿ ಪಿಕ್ ಅಪ್ ವಾಹನದಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ತಲವಾರು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಬೆಳ್ತಂಗಡಿ; ಶಾಸಕ ಹರೀಶ್ ಪೂಂಜರ ದ್ವೇಷ ಭಾಷಣದ ವಿರುದ್ದ ಪ್ರತಿಭಟನೆ; ಆರ್.ಎಸ್.ಎಸ್.ನವರಿಗೆ ಹಿಂದು ಧರ್ಮದ ಬಗ್ಗೆ ತಿಳಿದಿಲ್ಲ; ಎಂ.ಜಿ ಹೆಗಡೆ
ಬೆಳ್ತಂಗಡಿ; ಶಾಸಕ ಹರೀಶ್ ಪೂಂಜರು ಮೈಕ್ ಸಿಕ್ಕಿದಾಗ ದ್ವೇಷ ಭಾಷಣ ಮಾಡಿ ನ್ಯಾಯಾಲಯದ ಮುಂದೆ ಪ್ರಕರಣರದ್ದು ಪಡಿಸುವಂತೆ ವಿನಂತಿಸುತ್ತಾರೆ. ಅವರಿಗೆ ತಾಕತ್ತಿದ್ದರೆ ಇಲ್ಲಿ ಮಾಡಿದ ಭಾಷಣವನ್ನು ನ್ಯಾಯಾಲಯದ ಮುಂದೆಯೂ ಒಪ್ಪಿಕೊಡು ಸಮರ್ಥಿಸಿಕೊಳ್ಳಲಿ,ಮುಸ್ಲಿಮರು ಇಲ್ಲವಾದರೆ ಬಿಜೆಪಿಯವರಿಗೆ ಪಂಚಾಯತು ಸೀಟ್ ಗೆಲ್ಲಲೂ ಅಸಾದ್ಯ ಅದಕ್ಕಾಗಿ ಅವರು ಸದಾ ಮುಸ್ಲಿಮರ ಬಗ್ಗೆಯೇ ಮಾತನಾಡುತ್ತಾರೆ. ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು ಹೇಳಿದರುಅವರು ಸೋಮವಾರ ತೆಕ್ಕಾರು ಧಾರ್ಮಿಕ ಸಭೆಯಲ್ಲಿ ಭಾರತೀಯ ಪ್ರಜೆಗಳನ್ನು ಕೀಳಾಗಿ ಸಂಬೋದಿಸಿ ಭಾರತೀಯರ ಅವಮಾನಿಸಿದ ಶಾಸಕ ಹರೀಶ್ ಪೂಂಜರನ್ನು ಶಾಸಕತ್ವದಿಂದ ತೆಗೆಯಬೇಕು...














