ಬೆಳ್ತಂಗಡಿ : ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿ ಸಾಫಿ ಬೆಳ್ಳಾರೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

0

ಬೆಳ್ತಂಗಡಿ: ಬೆಳ್ಳಾರೆ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿ ಬೆಳ್ಳಾರೆ ನಿವಾಸಿ ಸಾಫಿ ಬೆಳ್ಳಾರೆ ಎ. 7ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಸಾಫಿ ಬೆಳ್ಳಾರೆಯನ್ನು ಬಾಡಿ ವಾರೆಂಟ್ ಮೂಲಕ ಪೊಲೀಸರು ಬೆಳ್ತಂಗಡಿ ಕೋರ್ಟ್ ಗೆ ಹಾಜರು ಪಡಿಸಲಾಗಿದೆ. 2017 ರಲ್ಲಿ ಬೆಳ್ತಂಗಡಿ ಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಉದ್ರೇಕಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಕೋರ್ಟ್ ಗೆ ಹಾಜರು ಪಡಿಸಲಾಗಿದೆ. ಆರೋಪಿ ಸಾಫಿ ಬೆಳ್ಳಾರೆ ಅವರನ್ನು ಪ್ರವೀಣ್ ನೆಟ್ವಾರ್ ಹತ್ಯೆ ಪ್ರಕರಣದಲ್ಲಿ ಎರಡು ವರ್ಷದ ಹಿಂದೆ ಎನ್.ಐ.ಎ ಬಂಧಿಸಿ ನ್ಯಾಯಾಂಗ ಬಂಧನಲ್ಲಿರಿಸಲಾಗಿದೆ. ಈ ವರೆಗೂ...

ನಕ್ಸಲ್ ನಾಯಕ  ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬೆಳ್ತಂಗಡಿ ಕೋರ್ಟ್ ಗೆ ಹಾಜರು

0

ಬೆಳ್ತಂಗಡಿ : ಮೂರು ನಕ್ಸಲ್ ಚಟುವಟಿಕೆ ಪ್ರಕರಣ ದಾಖಲಾದ ಸಂಬಂಧ ಇಬ್ಬರು ನಕ್ಸಲ್ ನಾಯಕರನ್ನು ಬೆಳ್ತಂಗಡಿ ಪೊಲೀಸರು ಕೇರಳ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬೆಳ್ತಂಗಡಿ ನ್ಯಾಯಾಲಯ ಇಬ್ಬರು ನಕ್ಸಲರನ್ನು ಮೂರು ದಿನ ಬೆಳ್ತಂಗಡಿ ಪೊಲೀಸರ ಕಸ್ಟಡಿಗೆ ಒಪ್ಪಿಸಿದೆ. ಪೊಲೀಸರು ಮೂರು ಪ್ರಕರಣವನ್ನು ತನಿಖೆ ನಡೆಸಲಿದ್ದಾರೆ‌. 8-112021 ರಂದು ಕೇರಳ ರಾಜ್ಯದ ಪೊಲೀಸರು ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕರಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಿವಾಸಿ ನಕ್ಸಲ್ ಪಶ್ಚಿಮ ಘಟ್ಟದ ವಿಶೇಷ ಸಮಿತಿಯ ಕಾರ್ಯದರ್ಶಿಯಾಗಿದ್ದ ಬಿ.ಜಿ.ಕೃಷ್ಣಮೂರ್ತಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ...

ಮಾಟ ಮಂತ್ರದ ಹೆಸರಿನಲ್ಲಿ ಮಹಿಳೆಗೆ ವಂಚನೆ, ದೌರ್ಜನ್ಯ  ಗುರುವಾಯನಕೆರೆ ನಿವಾಸಿ ಅಬ್ದುಲ್ ಕರೀಮ್ ಬಂಧನ

0

ಮಂಗಳೂರು;ಮಹಿಳೆಯೊಬ್ಬರಿಗೆ ಮಾಟ, ಮಂತ್ರ ಮಾಡಿದ್ದಾರೆಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವ ಆರೋಪ ಆಧಾರದಲ್ಲಿ ಗುರುವಾಯನಕೆರೆಯ ನಿವಾಸಿ ಜಿ. ಅಬ್ದುಲ್‌ ಕರೀಮ್‌ ಎಂಬಾತನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. 2022ರಲ್ಲಿ ಸಂತ್ರಸ್ತೆಗೆ ಖನ್ನತೆಯ ಸಮಸ್ಯೆ ಉಂಟಾಗಿತ್ತು. ಆಕೆ ತನ್ನ ಸಂಬಂಧಿಯ ಸಲಹೆಯಂತೆ ಆಗ ಹೆಜಮಾಡಿಯಲ್ಲಿದ್ದ ಉಸ್ತಾದ್‌ ಅಬ್ದುಲ್‌ ಕರೀಮ್‌ ಮನೆಗೆ ಹೋಗಿದ್ದರು. ಅಲ್ಲಿ ಮಂತ್ರವಾದಿ ಅಬ್ದುಲ್‌ ಕರೀಮ್‌ ನಿಮಗೆ ಯಾರೋ ಮಾಟ ಮಂತ್ರ ಮಾಡಿದ್ದಾರೆ. ಅದನ್ನು ಪರಿಹರಿಸಬೇಕು. ಎಂದು ಹೇಳಿದನೆನ್ನಲಾಗಿದೆ. ನಂತರ ಮಾಟ-ಮಂತ್ರ ನಿವಾರಿಸುವ ಚಿಕಿತ್ಸೆ...

ಬಂದಾರು; ಮುರ್ತಾಜೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ಬಂದಾರು : ಎ 07 ಬಂದಾರು ಗ್ರಾಮ ಪಂಚಾಯತ್ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುದಾನ ದಲ್ಲಿ ಬಂದಾರು ಗ್ರಾಮದ ಮುರ್ತಾಜೆ ಎಂಬಲ್ಲಿನ ಕಾಂಕ್ರೀಟ್ ರಸ್ತೆ ಹಾಗೂ ಸೋಲಾರ್ ಲೈಟ್ ಉದ್ಘಾಟನೆ ಕಾರ್ಯಕ್ರಮ ಎಪ್ರಿಲ್ 07 ರಂದು ನೆರವೇರಿತು,ಹಿರಿಯರಾದ ರುಕ್ಮಯ ಪೂಜಾರಿ ಮತ್ತು ಸೂರಪ್ಪ ಪೂಜಾರಿ ಉದ್ಘಾಟನೆ ನೆರವೇರಿಸಿದರು, ಅನುದಾನ ಒದಗಿಸಿದ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ದಿನೇಶ್ ಗೌಡ ಖಂಡಿಗ, ಸದಸ್ಯರಾದ ಶ್ರೀಮತಿ ಸುಚಿತ್ರಾ ಮುರ್ತಾಜೆ, ಶ್ರೀಮತಿ ಪರಮೇಶ್ವರಿ ಪುಯಿಲ, ಹಾಗೂ ಸ್ಥಳೀಯರಾದ ಮೋಹಿನಿ ಮುರ್ತಾಜೆ,...

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ  ಕುತ್ಲೂರು ಸರ್ಕಾರಿ ಶಾಲೆಯ ಮಕ್ಕಳು; ಭೇಟಿ ಮಾಡಿಸಿದ ರಕ್ಷಿತ್ ಶಿವರಾಂ.

0

ಬೆಂಗಳೂರು:- ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಸರಕಾರಿ ಶಾಲೆಯ ಮಕ್ಕಳು ಶಾಲೆಯ ಆವರಣದಲ್ಲಿ ತಮ್ಮ ಕಲಿಕೆಯ ಭಾಗವಾಗಿ ಬೆಳೆಸಿದ ಹಣ್ಣು ತರಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು. ಶಾಲೆಯ ವಿದ್ಯಾರ್ಥಿಗಳನ್ನು ಬೆಂಗಳೂರಿನ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿಯಲ್ಲಿ ಇಂದು ಯುವ ನಾಯಕ ರಕ್ಷಿತ್ ಶಿವರಾಂ ಅವರು ಭೇಟಿ ಮಾಡಿಸಿದರು. ಮಕ್ಕಳು ಕಲಿಕೆಯ ಜೊತೆ ಕೃಷಿಯ ಬಗ್ಗೆ ಸ್ವಲ್ಪಮಟ್ಟಿಗೆ ಜ್ಞಾನ, ಆಸಕ್ತಿ ಬೆಳೆಸಿಕೊಂಡಿರುವುದು ಭಾರತದಂಥ ಕೃಷಿ ಪ್ರಧಾನ ರಾಷ್ಟ್ರದಲ್ಲಿ ಉತ್ತಮ‌ ಅಭ್ಯಾಸ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳೊಂದಿಗೆ ತನ್ನ ಬಾಲ್ಯವನ್ನೂ ಕೂಡ ಮೆಲುಕು ಹಾಕಿದ ಸಿದ್ದರಾಮಯ್ಯನವರು,...

ಸೇವಾಭಾರತಿಗೆ CR 3 (India) private limited ಕಂಪೆನಿಯಿಂದ ರೂ. 5,00,000 ದೇಣಿಗೆ

0

ಕನ್ಯಾಡಿ: ಮಂಗಳೂರು CR 3 (India) private limited ನ ಸೀನಿಯರ್ ಎಚ್ ಆರ್ ಎಕ್ಸಿಕ್ಯೂಟಿವ್ ಶ್ರೀ ಗಣೇಶ ಟಿ ಸೇವಾನಿಕೇತನಕ್ಕೆ ಭೇಟಿ ನೀಡಿ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಕಂಪೆನಿಯಿಂದ ರೂ. 5,00,000/- ದ ಚೆಕ್ ನೀಡಿ ಕಟ್ಟಡದ ನಿರ್ಮಾಣ ಶೀಘ್ರ ನೆರವೇರುವಂತೆ ಶುಭಹಾರೈಸಿದರು. ಸೇವಾಧಾಮ ಸಂಸ್ಥೆಯ ಸಂಚಾಲಕರಾದ ಶ್ರೀ ಕೆ. ಪುರಂದರ ರಾವ್ ಮತ್ತು ಸೇವಾಭಾರತಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸ್ವರ್ಣಗೌರಿ ಇದನ್ನು ಸಿಬ್ಬಂದಿಯೊಂದಿಗೆ ಸ್ವೀಕರಿಸಿ ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು.

ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರ ನೇಮಕ

0

ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕೂ ವ್ಯಾಪ್ತಿಗೆ ಒಳಪಡುವ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ನೇಮಕ ಮಾಡಿದ್ದಾರೆ. ಪರಿಶಿಷ್ಟ ಜಾತಿ ವರ್ಗದಿಂದ ಗಣೇಶ್ ಬಿನ್ ರುಕ್ಮಯ್ಯ ಪೇರ್ದಡ್ಕ ಕಣಿಯೂರು, ಮಹಿಳೆ ಶ್ರೀಮತಿ ಗೀತಾ ಕೋಂ ಪ್ರವೀಣ್ ಪೂಜಾರಿ ಬಂದಾರು, ಸಾಮಾನ್ಯ ವರ್ಗದಿಂದ ಮಹಮ್ಮದ್ ಬಿನ್ ಸುಲೈಮಾನ್ ಕರಾಯ, ನೇಮಕವಾಗಿದ್ದಾರೆ

ಸೌಜನ್ಯ ಪ್ರಕರಣ ಎ.6ರ ಪ್ರತಿಭಟನಾ ಸಭೆಗೆ ಹೈಕೊರ್ಟ್ ತಾತ್ಕಾಲಿಕ ತಡೆ

0

ಬೆಳ್ತಂಗಡಿ;  ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಏ.೬ರಂದು ವರ್ಮಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದ್ದ ಬೃಹತ್ ಹಕ್ಕೊತ್ತಾಯ ಸಭೆ ಪ್ರತಿಭಟನೆಗೆ ಕರ್ನಾಟಕ ಹೈಕೋರ್ಟ್ ಆರಂಭದಲ್ಲಿ ಅನುಮತಿ ನೀಡಿದ್ದರೂ, ಈ ಸಂಬಂಧ ವಾಟ್ಸಪ್ ಮೂಲಕ ರವಾನೆಯಾಗುತ್ತಿದ್ದ ಸಂದೇಶಗಳ ಗಂಭೀರತೆಯರಿತ ನ್ಯಾಯಪೀಠ ಪ್ರತಿಭಟನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಉದ್ದೇಶಿತ ಪ್ರತಿಭಟನೆಗೆ ಅವಕಾಶ ನೀಡದಂತೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ನ್ಯಾಯಪೀಠ ಆರಂಭದಲ್ಲಿ ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಿತ್ತು ಆದರೆ ಉದ್ದೇಶಿತ ಪ್ರತಿಭಟನೆಗೆ ಸಂಬಂಧಿಸಿ ವಾಟ್ಸಾಪ್ ಮೂಲಕ ರವಾನೆಯಾಗುತ್ತಿದ್ದ ಕೆಲವು ಸಂದೇಶಗಳು, ಬಹುಸಂಖ್ಯೆಯಲ್ಲಿ ಜನರನ್ನು ಕರೆಸಿಕೊಂಡು ದೇವಸ್ಥಾನ ಪ್ರವೇಶಿಸುವ ಯತ್ನಗಳ ಬಗ್ಗೆ...

ಕಳಿಯ; ಅಕ್ರಮ ಗೋ ಸಾಗಾಟ ಪತ್ತೆ 12ದನಗಳ ರಕ್ಷಣೆ

0

ಬೆಳ್ತಂಗಡಿ: ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದ ವಾಹನವನ್ನು ಕಳಿಯ ನ್ಯಾಯತರ್ಪು ಸಮೀಪದ ಜಾರಿಗೆಬೈಲು ಎಂಬಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ತಡೆಹಿಡಿಯಲಾಗಿದ್ದು ದನಗಳನ್ನು ರಕ್ಷಿಸಲಾಗಿದೆತರಕಾರಿ ಸಾಗಾಟದ ವಾಹನದಲ್ಲಿ ಹಿಂಸಾತ್ಮಕವಾಗಿ ಹಸುಗಳನ್ನು ಗೋವಧೆಗೆಂದು ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆಹಿಡಿದಿದ ಘಟನೆ ಸಂಭವಿಸಿದೆ. ದನ ಸಾಗಾಟದ ವಾಹನವನ್ನು ಯುವಕರು ಬೆನ್ನು ಹತ್ತಿದ್ದು ಇದನ್ನು ಗಮನಿಸಿದ ಚಾಲಕರ ವಾಹನ ಬಿಟ್ಟು ಪರಾರಿಯಾಗಿದ್ದಾನೆ, ಬೆಳ್ತಂಗಡಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ದೊರೆತು ಕೂಡಲೇ ಸ್ಥಳಕ್ಕೆ ಧಾವಿಸಿ ಹಿಂಸಾತ್ಮಕವಾಗಿ ಸಾಗಾಟ...

ವೇಣೂರು; ರಿಕ್ಷಾಕ್ಕೆ ಕಾರು ಡಿಕ್ಕಿ ರಿಕ್ಷಾ ಚಾಲಕನಿಗೆ ಗಂಭೀರ ಗಾಯ

0

ಬೆಳ್ತಂಗಡಿ; ವೇಣೂರು ಗ್ರಾಮದ ಕುಂಭಶ್ರೀ ಶಾಲೆಯ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದು ಎರಡೂ ವಾಹನಗಳು ಜಖಂಗೊಂಡು ರಿಕ್ಷಾ ಚಾಲಕ ಗಂಭೀರಗಾಗಿ ಗಾಯಗೊಂಡ ಘಟನೆ ಸಂಭಿಸಿದೆ.ಕಾರು ಚಾಲಕ ಅತಿಯಾದ ವೇಗದಲ್ಲಿ ಕಾರನ್ನು ಚಲಾಯಿಸಿ ಲಾರಿಯೊಂದನ್ನು ಓವರ್ ಟೇಕ್ ಮಾಡಿ ಎದುರಿನಿಂದ ಬರುತ್ತಿದ್ದ ಅಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದು ಕಾರು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ರಿಕ್ಷಾ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು ರಿಕ್ಷಾ ಚಾಲಕ ನೌಶಾದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ...