ಎಸ್.ಐ.ಟಿ ಗೆ ದೂರು ನೀಡಿದ ಸೌಜನ್ಯ ತಾಯಿ ಕುಸುಮಾವತಿ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಕಚೇರಿಗೆ ಆಗಮಿಸಿದ ಸೌಜನ್ಯ ತಾಯಿ ಕುಸುಮಾವತಿ ಅವರು ಎಸ್.ಐ.ಟಿ ಅಧಿಕಾರಿಗಳಿಗೆ ಗುರುವಾರ ದೂರು ನೀಡಿದ್ದು ದೂರನ್ನು ಸ್ವೀಕರಿಸಿದ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಿಂಬರಹ ನೀಡಿದ್ದಾರೆ.ಅತ್ಯಾಚಾರಕ್ಕೆ ಈಡಾಗಿ ಕೊಲೆಯಾದ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಮನೆಯವರು ಗುರುವಾರ ಮಧ್ಯಾಹ್ನ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದು‌ಅಧಿಕಾರಿಗಳ ಸೂಚನೆಯ ಮೇರೆಗೆ ಆರಂಭದಲ್ಲಿ ಅಲ್ಲಿಂದ ಹಿಂತಿರುಗಿದ್ದರು. ಆದರೆ ಬಳಿಕ ಅಧಿಕಾರಿಗಳ ಸೂಚನೆಯಂತೆ ಸೌಜನ್ಯ ತಾಯಿ ಕುಸುಮಾವತಿ ಎಸ್.ಐ.ಟಿ ಕಚೇರಿಗೆ ಬಂದು ದೂರನ್ನು...

ತಲಪಾಡಿ ಟೋಲ್ ಗೇಟ್ ಸಮೀಪ ಭೀಕರ ಅಪಘಾತ 5 ಮಂದಿ ಸಾವು

0

ಮಂಗಳೂರು: ಕೆ ಸಿರೋಡ್ ಸಮೀಪದ ತಲಪಾಡಿ ಟೋಲ್ ಗೇಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಕೆಸಿ ರೋಡ್ ನಿಂದ ಬರುತ್ತಿದ್ದ ರಿಕ್ಷಾ ಮತ್ತು ಬಸ್ ಮಧ್ಯೆ ಮೇಲಿನ ತಲಪಾಡಿಯಲ್ಲಿ ಅಪಘಾತ ನಡೆದಿದ್ದು ರಿಕ್ಷಾದಲ್ಲಿದ್ದ ಕೆಸಿ ರೋಡ್ ಮೂಲದವರೆನ್ನಲಾದ 5 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಮಗು ಸೇರಿದೆ ಎನ್ನಲಾಗುತ್ತಿದ್ದು, ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿರುವ ಮಾಹಿತಿಯಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು...

ಎಸ್.ಐ.ಟಿ ಕಚೇರಿಗೆ ಬಂದ ಸೌಜನ್ಯ ತಾಯಿ ಅಧಿಕಾರಿಗಳು ಸಿಗದ ಹಿನ್ನಲೆಯಲ್ಲಿ ಹಿಂದಕ್ಕೆ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಕಚೇರಿಗೆ ಅತ್ಯಾಚಾರಕ್ಕೆ ಈಡಾಗಿ ಕೊಲೆಯಾದ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಮನೆಯವರು ಗುರುವಾರ ಮಧ್ಯಾಹ್ನ ಆಗಮಿಸಿದ್ದು‌ಅಧಿಕಾರಿಗಳ ಸೂಚನೆಯ ಮೇರೆಗೆ ಹಿಂತಿರುಗಿದ್ದಾರೆಗುರುವಾರ ಮಧ್ಯಾಹ್ನದ ವೇಳೆಗೆ ಎರಡು ವಾಹನಗಳಲ್ಲಿ ಸೌಜನ್ಯ ಮನೆಯವರು ಎಸ್.ಐ‌.ಟಿ ಕಚೇರಿಗೆ ಆಗಮಿಸಿದ್ದರು. ಆದರೆ ಇವರು ಮುಂಚಿತವಾಗಿ ಅನುಮತಿ ಪಡೆಯದೆ ಆಗಮಿಸಿದ‌ ಹಿನ್ನಲೆಯಲ್ಲಿ ಇವರನ್ನು ಪೊಲೀಸರು ಹಿಂದಕ್ಕೆ ಕಳುಹಿಸಿದ್ದಾರೆ. ಇಂದು ಎಸ್.ಐ.ಟಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಇರಲಿಲ್ಲ ಎನ್ನಲಾಗಿದೆ.ಸಾಕ್ಷಿದೂರು ದಾರನಾಗಿ ಬಂದ ಚೆನ್ನಯ್ಯ ಯುಟ್ಯೂಬರ್ ಗಳಿಗೆ ನೀಡಿದ...

ಬೆಳ್ತಂಗಡಿ; ಭಾರೀ ಮಳೆ ತಾಲೂಕಿನ ಶಾಲೆಗಳಿಗೆ ಆ 28ರಂದು ರಜೆ

0

ಬೆಳ್ತಂಗಡಿ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯೆ ಸಂಸ್ಥೆಗಳಿಗೆ ದಿನಾಂಕ:28.08.2025 ರಂದು ರಜೆ ಘೋಷಿಸಲಾಗಿದೆ. ಎಂದು ತಹಶಿಲ್ದಾರ್ ತಿಳಿಸಿದ್ದಾರೆ

ಪಣಕಜೆ; ಖಾಸಗಿ ಬಸ್ ಡಿಕ್ಕಿ ಮಹಿಳೆ ಮೃತ್ಯು

0

ಬೆಳ್ತಂಗಡಿ; ಖಾಸಗಿ ಬಸ್ ಡಿಕ್ಕಿಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಣಕಜೆಯಲ್ಲಿ ಸಂಭವಿಸಿದೆ.ಮೃತ ಮಹಿಳೆ ಸುನಂದ ಲತಾ (55) ಎಂಬವರಾಗಿದ್ದಾರೆ.ಈಕೆ ಆ 26 ರಂದು ಬೆಳಗ್ಗೆ ಪಣಕಜೆ ಎಂಬಲ್ಲಿ ಹೆದ್ದಾರಿಯನ್ನು ದಾಟುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ ತುಳುನಾಡು ಬಸ್ ಅನ್ನು ಅದರ ಚಾಲಕ ಅಜಾಗರೂಕತೆ ಹಾಗಿ ನುರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದದ್ದು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಇವರನ್ನು ಕೂಡಲೇ ಆಂಬ್ಯುಲೆನ್ಸ್ ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆವೇಳೆಗೆ ಆಕೆ ಮೃತಪಟ್ಟಿದ್ದಳು. ಘಟನೆಯ...

ಬೆಳ್ತಂಗಡಿ : ಸಾಕ್ಷಿ ದೂರುದಾರ ಚಿನ್ನಯ್ಯನಿಗೆ ಮೇಡಿಕಲ್ ಟೆಸ್ಟ್

0

ಬೆಳ್ತಂಗಡಿ : ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಎಸ್.ಐ.ಟಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ಸಬ್ ಇನ್ಸ್ಪೆಕ್ಟರ್ ವಿನೋದ್ ರೆಡ್ಡಿ ನೇತೃತ್ವದಲ್ಲಿ ಆ.27 ರಂದು ಮಾದ್ಯಾಹ್ನ 1:40 ಕ್ಕೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಕರೆತಂದು ಮೇಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಇಂದು ಬೆಳಗ್ಗಿನ ಜಾವದ ವರೆಗೂ ತಿಮರೋಡಿಯ ಮನೆಯಲ್ಲಿ ಈತನಿಗೆ ಸಂಬಂಧಿಸಿದ ವಸ್ತುಗಳ ಮಹಜರು ನಡೆಸಿ ವಶಪಡಿಸಿಕೊಳ್ಳಲಾಗಿತ್ತು.

ಬೆಳ್ತಂಗಡಿ : ತಿಮರೋಡಿಯಲ್ಲಿ ಬೆಳಗ್ಗಿನ ವರೆಗೂ ಮುಂದುವರಿದ ಎಸ್.ಐ.ಟಿ ಕಾರ್ಯಾಚರಣೆ

0

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ಸಂಬಂಧ ಎಸ್.ಐ.ಟಿ ಬಂಧಿಸಿರುವ ಸಾಕ್ಷಿ ದೂರುದಾರ ಚಿನ್ನಯ್ಯನಿಗೆ ಎರಡು ತಿಂಗಳು ಅಶ್ರಯ ನೀಡಿದ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಹಾಗೂ ಅವರ ಸಹೋದರನ ಮನೆಗೆ ಆ.26 ರಂದು ಸರ್ಚ್ ವಾರೆಂಟ್ ನೊಂದಿಗೆ ದಾಳಿ ನಡೆಸಿದ್ದ ಎಸ್.ಐ.ಟಿ ತಂಡ 27ಬೆಳಗ್ಗಿನ ವರೆಗೂ ಪರಿಶೀಲನೆ ಮಹಜರು ಕಾರ್ಯ ನಡೆಸಿದೆ. ಆರಂಭದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಬಂದ ಎಸ್.ಐ.ಟಿ ತಂಡ ರಾತ್ರಿಯವರೆಗೂ ಅಲ್ಲಿಯೇ ಪರಿಶೀಲನೆ ನಡೆಸಿದ್ದರು. ಬಳಿಕ ಸಾಕ್ಷಿ ದೂರುದಾರ‌ ಕೆಲ ದಿನಗಳ...

ಕಾರ್ಕಳದಲ್ಲಿ ನಡೆದ ಕೊಲೆ ಪ್ರಕರಣ‌‌ ಬೆಳ್ತಂಗಡಿ ನಿವಾಸಿ ಬಂಧನ

0

ಬೆಳ್ತಂಗಡಿ; ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಲ್ಪಾಡಿ ಎಂಬಲ್ಲಿ ನಡೆದ ಮಂಗಳೂರು ಮೂಲದ ನವೀನ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬೆಳ್ತಂಗಡಿ ತಾಲೂಕು ನಡ ನಿವಾಸಿ ಸಂಜೀವ ಗೌಡ ಎಂಬವರ ಮಗ ಪರೀಕ್ಷಿತ್(44) ಎಂಬಾತನನ್ನು ಪೊಲೀಸರು ಆಗಸ್ಟ್ 26 ರಂದು ಬಂಧಿಸಿದ್ದಾರೆ. ಪರೀಕ್ಷಿತ್‌ಗೆ ಪರಿಚಯ ಇದ್ದ ಮಹಿಳೆ ಜೊತೆ ನವೀನ್ ಪೂಜಾರಿ ಗೆಳೆತನವನ್ನು ಬೆಳೆಸಿ ಆತ್ಮೀಯರಾಗಿದ್ದರು. ಈ ವಿಚಾರವಾಗಿ ಇವರ ಮಧ್ಯೆ ಜಗಳ ನಡೆದಿದ್ದು, ಇದುವೇ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಮಂಗಳವಾರ ಬೆಳಗಿನ ಜಾವ ನವೀನ್ ಪೂಜಾರಿ ಮೃತದೇಹವು ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು,...

ವಸಂತ್ ಗಿಳಿಯಾರ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು

0

ಬೆಳ್ತಂಗಡಿ; ಧರ್ಮ ಧರ್ಮಗಳ ನಡುವೆ ಜಾತಿಗಳ ಮಧ್ಯೆ ದ್ವೇಷ ಹುಟ್ಟುವಂತೆ ಪ್ರಚೋದನಕಾರಿಯಾಗಿ ಮಾತನಾಡಿ ಅದನ್ನು ಸಾಮಾಜಿಕ ಜಲತಾಣವಾದ ಯುಟ್ಯೂಬ್ ನಲ್ಲಿ ಪ್ರಸಾರ ಮಾಡಿದ್ದ ಬಗ್ಗೆ ವಸಂತ ಗಿಳಿಯಾರ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಅವರು ನೀಡಿದ ದೂರಿನಂತೆ ಸೆಕ್ಷನ್ 196(1)(a), 353(2) ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಿಸಲಾಗಿದೆ.ಈಬಗ್ಗೆ ಶೇಖರ ಲಾಯಿಲ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದುಬೆಂಗಳೂರಿನಲ್ಲಿ ನಡೆದ ಧರ್ಮಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದ ವಸಂತ ಗಿಳಿಯಾರ್ ಅವರು ಬೆಳ್ತಂಗಡಿ ಭಾಗದಲ್ಲಿ ಮಿಷನರಿಗಳ ಪ್ರಭಾವದಿಂದ ಹಿಂದುಗಳ ತುಳಸಿಕಟ್ಟೆಯನ್ನು ಒಡೆಸಿ...

ಬೆಳ್ತಂಗಡಿ; ಪದ್ಮನಾಭ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ

0

ಬೆಳ್ತಂಗಡಿ;  ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿಯ ಆಗಸ್ಟ್ ತಿಂಗಳ ಸಭೆಯು ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್‌ ರವರ ಅಧ್ಯಕ್ಷತೆಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ರವರ ಉಪಸ್ಥಿತಿಯಲ್ಲಿ ಸಮಿತಿಯ ಕಛೇರಿಯಲ್ಲಿ ನಡೆಯಿತು.ಮೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಉದ್ಯೋಗ ವಿನಿಮಯ ಕಛೇರಿಗಳ ಮೂಲಕ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ...