ಬೆಳ್ತಂಗಡಿ ತಾಲೂಕಿನ 9 ಶಾಲೆಗಳಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ 1. ಕೋಟಿ 71 ಲಕ್ಷ ಅನುದಾನ ಮಂಜೂರು.
ಬೆಳ್ತಂಗಡಿ. ತಾಲೂಕಿನ 9 ಶಾಲೆಗಳಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಸರ್ಕಾರ 1. ಕೋಟಿ 71 ಲಕ್ಷ ಅನುದಾನ ಬಿಡುಗಡೆ ಮಾಡಿದೆ.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಕೋಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಜಕೆ, ಸರಕಾರಿ ಪ್ರೌಢ ಶಾಲೆ ನಾವೂರುಸರಕಾರಿ ಪ್ರೌಢ ಶಾಲೆ ಕಲ್ಮಂಜ, ಸರಕಾರಿ ಪ್ರೌಢ ಶಾಲೆ ಮಿತ್ತಬಾಗಿಲು, ಸರಕಾರಿ ಪ್ರೌಢ ಶಾಲೆ ಬಳೆಂಜ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲೇದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆಕರ್ನಾಟಕ ಪಬ್ಲಿಕ್ ಸ್ಕೂಲ್ ಪೂಂಜಾಲಕಟ್ಟೆ- ಶಾಲೆಗಳಲ್ಲಿ,...
ಕಳೆಂಜ 309 ಸರ್ವೆ ನಂಬರ್ ಸರ್ವೆ; ಶಿಶಿಲದಲ್ಲಿ ಪಟ್ಟಾ ಜಾಗದಲ್ಲಿ ಸರ್ವೆಗೆ ಮುಂದಾದ ಅರಣ್ಯ ಇಲಾಖೆ; ಜನರ ಆಕ್ರೋಶ
ಬೆಳ್ತಂಗಡಿ: ಕಳೆಂಜ ಗ್ರಾಮದ ಸರ್ವೇ ನಂಬರ್ 309ರ ಸರ್ವೇ ನಂಬರ್ ನಲ್ಲಿ ನಡೆಯುತ್ತಿರುವ ಸರ್ವೆ ಕಾರ್ಯ ಶಿಶಿಲ ಭಾಗದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದೆ ಈ ವೇಳೆ ಶಿಶಿಲ ಗ್ರಾಮದಲ್ಲಿ ಪಟ್ಟಾ ಜಾಗದಲ್ಲಿ ಅರಣ್ಯ ಇಲಾಖೆ ಸರ್ವೆ ನಡೆಸಲು ಮುಂದಾಗಿದ್ದು ಇದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಈ ಹಿನ್ನಲೆಯಲ್ಲಿ ಸ್ಥಳೀಯರು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.ಕಳೆಂಜದ 309 ಸರ್ವೆ ಸಂದರ್ಭದಲ್ಲಿಸಂಧರ್ಭದಲ್ಲಿ ಅರಣ್ಯ ಇಲಾಖೆಯ ಸರ್ವೇ ಅಧಿಕಾರಿಗಳು ಅಲ್ಲಿನ ಪಟ್ಟ ಜಮೀನುಗಳನ್ನು ತಮ್ಮದೆಂದು ಸರ್ವೇ ನಡೆಸಿದ್ದಾರೆ. ಇದು ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಇದರಿಂದ...
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯಲ್ಲಿ ವಿದ್ಯಾನಿಧಿ ಯೋಜನೆ ಲೋಕಾರ್ಪಣೆ
ಬೆಳಾಲು: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶಾಲೆಯ ಅಭಿವೃದ್ಧಿ ಗಾಗಿ 'ವಿದ್ಯಾನಿಧಿ' ಯೋಜನೆಯನ್ನು ಡಿಸೆಂಬರ್14 ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಲೋಕಾರ್ಪಣೆ ಮಾಡಲಾಯಿತುವಿದ್ಯಾನಿಧಿಯನ್ನು ಲೋಕಾರ್ಪಣೆ ಮಾಡಿದ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿಯವರು ಮಾತನಾಡಿ,' ಶಾಲೆ ಎಂಬ ದೇವಾಲಯದಲ್ಲಿ ಎಲ್ಲಾ ಜಾತಿ,ಜನಾಂಗ,ಧರ್ಮದ ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಾರೆ.ಶಾಲೆ ಅಭಿವೃದ್ಧಿ ಹೊಂದಿದಾಗ ಇಡೀ ಊರೇ ಅಭಿವೃದ್ಧಿ ಆಗುತ್ತದೆ.ಹಳೆ ವಿದ್ಯಾರ್ಥಿಗಳ ಈ ಕಾರ್ಯ ಅತ್ಯಂತ ಶ್ರೇಷ್ಠ ವಾದದ್ದು' ಎಂದು ಶುಭ ಹಾರೈಸಿದರು ಮತ್ತು ಮೊದಲ ದೇಣಿಗೆಯಾಗಿ...
ಮಾಚಾರು ಬೈಕ್ ಕಾರಿನ ನಡುವೆ ಅಪಘಾತ
ಉಜಿರೆ: ಇಲ್ಲಿಯ ಮಾಚಾರು ಮಸೀದಿ ಸೇತುವೆಯ ಹತ್ತಿರ ಕಾರು ಮತ್ತು ಬೈಕ್ ಅಪಘಾತ ಸಂಭವಿಸಿದ ಘಟನೆ ಡಿ.15ರಂದು ಬೆಳಿಗ್ಗೆ ನಡೆದಿದೆ. ಮಾಚಾರಿನಿಂದ ಉಜಿರೆ ಕಡೆಗೆ ಬರುತ್ತಿದ್ದ ಬೈಕ್, ಹಾಗೂ ಕಾರು ಉಜಿರೆಯಿಂದ ಬೆಳಾಲು ಕಡೆಗೆ ಹೋಗುವ ಸಂದರ್ಭದಲ್ಲಿ ಚಾಲಕರ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ. ಬೈಕ್ ಸವಾರನಿಗೆ ಗಾಯಗಳಾಗಿದ್ದುಸ್ಥಳೀಯರ ಸಹಕಾರದೊಂದಿಗೆ ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬಸ್ ಹಾಗೂ ಬೈಕ್ ನಡುವೆ ಅಪಘಾತ ವ್ಯಕ್ತಿ ಮೃತ್ಯು
ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಡಂತ್ಯಾರು ಸಮೀಪ ಡಿ.14 ರಂದು ನಡೆದಿದೆ. ಮೃತ ವ್ಯಕ್ತಿ ನೋಯೆಲ್ ಜೋಸೆಫ್ ಪಿಂಟೋ (38) ಎಂಬವರಾಗಿದ್ದಾರೆ. ಇವರು ಮೆಸ್ಕಾಂ ವೇಣೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ತಮ್ಮ ಮನೆಯಲ್ಲಿ ಕೆಲಸದವರಿಗೆ ತಿಂಡಿ ತರಲೆಂದು ಬೆಳಗ್ಗೆ ಮಡಂತ್ಯಾರಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಕೆ.ಎಸ್.ಆರ್.ಟಿ. ಸಿ ಬಸ್, ಆಟೋ ರಿಕ್ಷಾವನ್ನು ಓವರ್ ಟೇಕ್ ಮಾಡುವ ವೇಳೆಗೆ ಬೈಕ್ ಗೆ ಡಿಕ್ಕಿ ಹೊಡೆದಿದೆ ಅಪಘಾತದಲ್ಲಿ ನೋಯೆಲ್...
ಪೂಂಜಾಲಕಟ್ಟೆಯಲ್ಲಿ ಬಸ್ ಹಾಗೂ ಕಾರಿನ ನಡುವೆ ಅಪಘಾತ
ಪುಂಜಾಲಕಟ್ಟೆ; ಮಂಗಳೂರಿನಿಂದ ಧರ್ಮಸ್ಥಳ ಕಡೆ ಬರುತ್ತಿದ್ದ ಬಸ್ ಗೆ ಮಂಗಳೂರು ಕಡೆ ಹೋಗುತ್ತಿದ್ದ ಕ್ರೇಟಾ ಕಾರು ಪುಂಜಾಲಕಟ್ಟೆ ಬಳಿ ಡಿಕ್ಕಿ ಹೊಡೆದಿದ್ದು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ವೇಳೆ ಹಿಂದಿನಿಂದ ಬಂದ ಗೂಡ್ಸ್ ಆಟೋ ಅಪಘಾತ ತಪ್ಪಿಸಲು ಹೋಗಿ ಚರಂಡಿಗೆ ಬಿದ್ದಿದೆ. ಘಟನೆಯಲ್ಲಿ ಕಾರು ಮತ್ತು ಬಸ್ ನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಮಡಂತ್ಯಾರಿನಲ್ಲಿ ‘ಕ್ರಿಸ್ಮಸ್ ಬಂಧುತ್ವ ಉಡುಗೊರೆ ‘ ಕಾರ್ಯಕ್ರಮ.
ಮಡಂತ್ಯಾರು; ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಮಡಂತ್ಯಾರು ಘಟಕದಿಂದ ಕ್ರಿಸ್ಮಸ್ ಬಂಧುತ್ವ ಉಡುಗೊರೆ ಕಾರ್ಯಕ್ರಮ ಡಿ14 ರಂದು ಆಯೋಜಿಸಲಾಗಿತ್ತು.ಸೇಕ್ರೆಡ್ ಹಾರ್ಟ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಸ್ವಾಮಿ ಸ್ಟ್ಯಾನಿ ಗೋವಿಯಸ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿ "ಕ್ರಿಸ್ತ ಜಯಂತಿ ನಾವು ಡಿಸೆಂಬರ್ 25 ರಂದು ಆಚರಿಸುತ್ತೇವೆ. ದೇವರು ಬಡವರಾಗಿ ಮಾನವ ರೂಪ ತಾಳಿ ಈ ಧರೆಗೆ ಬಂದದ್ದು ನಮ್ಮನ್ನು ಶ್ರೀಮಂತಗೊಳಿಸಲು. ದೇವರು 2025 ವರ್ಷದ ಹಿಂದೆ ಕಿಸ್ತನ ಜನನದ ಸಂದೇಶ ಸಾರಲು ಕುರುಬರನ್ನು ಮತ್ತು ನಕ್ಷತ್ರವನ್ನು ಮಾಧ್ಯಮವಾಗಿ ಉಪಯೋಗಿಸಿದರು ಕ್ರಿಸ್ಮಸ್ ಸರ್ವರ ಹಬ್ಬ,...
ದ.ಕ ಜಿಲ್ಲೆಗೆ ಡ್ರಗ್ MDMA ಸರಬರಾಜು ಮಾಡುತ್ತಿದ್ದ ಮಹಿಳೆ ಸೇರಿದಂತೆ ಮೂವರ ಬಂಧನ
ಮಂಗಳೂರು; ಬೆಂಗಳೂರಿನಿಂದ ಮಾದಕ ವಸ್ತು (MDMA) ಯನ್ನು ತಂದು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ಸರಬರಾಜು ಮಾಡುತ್ತಿದ್ದ ಅಹಮ್ಮದ್ ಶಾಬೀತ್ ಮತ್ತು ತಂಡವನ್ನು ಮಂಗಳೂರು ನಗರದ ಸಿಸಿಬಿ ಪೊಲೀಸರ ತಂಡ ಡಿ13 ರಂದು ಕಾರಿನಲ್ಲಿ ಬರುತ್ತಿದ್ದವೇಳೆ , ಅರ್ಕುಳ ಬಳಿ ಬಂಧಿಸಿ ಮಾದಕ ವಸ್ತು ಎಂ.ಡಿ.ಎಂ ಅನ್ನು ವಶ ಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಗಳು ಅಹಮ್ಮದ್ ಈತ ಮೂಲತ (35) ಮಂಗಳೂರು ಮಲ್ಲೂರು ನಿವಾಸಿಯಾಗಿದ್ದು ಇದೀಗ ಬಿ.ಸಿ.ರೋಡ್ ಕೈಕಂಬ ನಿವಾಸಿಯಾಗುದ್ದಾನೆ ಮಹಮ್ಮದ್ ಶಂಶೀರ್ (36) ಮೂಡ ಗ್ರಾಮ, ಜೋಡುಮಾರ್ಗ ಪೋಸ್ಟ್, ಬಂಟ್ವಾಳ ತಾಲೂಕುಹಾಗೂ ಶ್ರೀಮತಿ...
ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) ರವಿವಾರ ಸಂಜೆ(ಡಿ.14) ವಿಧಿವಶರಾಗಿದ್ದಾರೆ. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಆರು ಬಾರಿ ಶಾಸಕರಾಗಿದ್ದು ಹಲವು ಬಾರಿ ಸಚಿವರಾಗಿದ್ದರು
ಅಕ್ರಮ ದನ ಸಾಗಾಟ ಪತ್ತೆ ಹಚ್ಚಿದ ಪೂಂಜಾಲಕಟ್ಟೆ ಪೊಲೀಸರು ಆರೋಪಿ ಮನೆ ಜಪ್ತಿ
ಬೆಳ್ತಂಗಡಿ : ಬಂಟ್ವಾಳ ಉಳಿ ಗ್ರಾಮದ ಮಣಿನಾಲ್ಕೂರು -ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಅಟೋದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರನ್ನು ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಮುಂದುವರಿಸಿ ಆರೋಪಿ ಭೋಜ ಮೂಲ್ಯ ಎಂಬವರ ಮನೆ ಹಾಗೂ ಕೊಟ್ಟಿಗೆಯನ್ನು ಜಪ್ತಿ ಮಾಡಿದ್ದಾರೆ ಅಕ್ರಮ ದನ ಸಾಗಾಟದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಡಿ.13 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾಜೇಶ್ ಮತ್ತು ಸಿಬ್ಬಂದಿಗಳು KA-70-8686 ನೇ ನೊಂದಣಿಯ ಗೂಡ್ಸ್ ಅಟೋವನ್ನು ತಡೆದು...















