ಕಳಿಯ; ಮೀನು ಹಿಡಿಯಲು ಹೋದ ವ್ಯಕ್ತಿ ಕೆರೆಗೆ ಬಿದ್ದು ಸಾವು

0

ಬೆಳ್ತಂಗಡಿ; ನ್ಯಾಯತರ್ಪು ಪಲ್ಲಾದೆ ಎಂಬಲ್ಲಿ ಕೆರೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಶ್ರೀಧರ ಎಂದು ಗುರುತಿಸಲಾಗಿದೆ.ಈತ ಪಲ್ಲಾದೆ ಯಲ್ಲಿರುವ ಖಾಸಗಿ ತೋಟದಲ್ಲಿರುವ ದೊಡ್ಡ ಕೆರೆಗೆ ಮೀನು ಹಿಡಿಯಲೆಂದು ಬಂದಿದ್ದ ಮೀನುಹಿಡಿಯುವ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಅನುಮಾನಿಸಲಾಗಿದೆ.ಕೆರೆಯಲ್ಲಿ ಈತನ ಮೃತದೇಹ ಮಂಗಳವಾರ ಪತ್ತೆಯಾಗಿದ್ದು ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ಸ್ಥಳೀಯರ ಸಹಕಾರದೊಂದಿಗೆ ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಎಸ್.ಐ.ಟಿ ದಾಳಿ

0

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ಸಂಬಂಧ ಎಸ್.ಐ.ಟಿ ವಶದಲ್ಲಿರುವ ಸಾಕ್ಷಿ ದೂರುದಾರನನ್ನು ಸ್ಥಳ‌ಮಹಜರಿಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ಕರೆದೊಯ್ದಿದ್ದಾರೆ.ಸಾಕ್ಷಿ ದೂರು ದಾರ ತಾನು ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಆಶ್ರಯ ಪಡೆದಿದ್ದೆ ಎಂದು ಹೇಳಿಕೆ ನೀಡಿದ್ದು ಅದರಂತೆ ಎಸ್.ಐ.ಟಿ ತಂಡ ಅವರಮನೆಗೆ ಆ.26 ರಂದು ಬೆಳಗ್ಗೆ 9:20 ಗಂಟೆಗೆ ಎಸ್.ಐ.ಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಅಧಿಕಾರಿಗಳ ತಂಡ ತೆರಳಿದೆ.ಬೆಳ್ತಂಗಡಿ ನ್ಯಾಯಾಧೀಶರಿಂದ ಆ.25 ರಂದು ಸರ್ಚ್ ವಾರೆಂಟ್ ಪಡೆದುಕೊಂಡು ಆರೋಪಿಯನ್ನು ಜೊತೆಯಲ್ಲಿ ಕರೆದುಕೊಂಡು...

ಧರ್ಮಸ್ಥಳ ಪರ, ಶಾಸಕರ ಪರ ಪೋಸ್ಟ್ ಯುವಕನ ಮೇಲೆ ಹಲ್ಲೆ ಆರೋಪ ಪ್ರಕರಣ ದಾಖಲು

0

ಬೆಳ್ತಂಗಡಿ: ಧರ್ಮಸ್ಥಳದ ಪರ ಸ್ಟೇಟಸ್ ಹಾಕಿದ ವಿಚಾರದಲ್ಲಿ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ ಬಳಿಕ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಪ್ರಕರಣ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯಲ್ಲಿರುವ ಪ್ರಜ್ಞಾ ಹೇರ್ ಡ್ರೇಸ್ಸಸ್ ನಲ್ಲಿ ಕೆಲಸ ಮಾಡುತ್ತಿದ್ದ ಕೊಕ್ಕಡ ಗ್ರಾಮದ ಕೋರುಗದ್ದೆ ನಿವಾಸಿ ರಜತ್ ಭಂಡಾರಿ(25) ಎಂಬಾತ ಆ.25 ರಂದು ಬೆಳಗ್ಗೆ 9:50 ರ ಸಮಯದಲ್ಲಿರುವ ಅಂಗಡಿಗೆ ಕಿರಣ್ ಶಿಶಿಲ ಎಂಬಾತ ಕಾರಿನಲ್ಲಿ ಬಂದು ರಜತ್ ಎಂಬಾತನಲ್ಲಿ ಹೊರಗೆ...

ಬೆಳ್ತಂಗಡಿ : ಬೆಳ್ಳಂಬೆಳಗ್ಗೆ ಸುಜಾತ ಭಟ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಹಾಜರು

0

ಬೆಳ್ತಂಗಡಿ : ಅನನ್ಯ ಭಟ್ ನಾಪತ್ತೆ ಪ್ರಕರಣದ ಸಂಬಂಧ ತಾಯಿ ಸುಜಾತ ಭಟ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆ.26 ರಂದು ಬೆಳಗ್ಗೆ 5 ಗಂಟೆಗೆ ತನಿಖೆಗಾಗಿ ಹಾಜರಾಗಿದ್ದಾರೆ. ಬೆಂಗಳೂರಿನಿಂದ ಕಾರಿನಲ್ಲಿ ಆಗಮಿಸಿದ ಸುಜಾತ ಭಟ್ ನೇರವಾಗಿ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಹೋಗಿದ್ದಾರೆ. ಇಂದು ಅನನ್ಯ ಭಟ್ ನಾಪತ್ತೆ ಪ್ರಕರಣದ ಬಗ್ಗೆ ಸುಜಾತ ಭಟ್ ರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಬೆಳ್ತಂಗಡಿ : ಅನನ್ಯ ಭಟ್ ನಾಪತ್ತೆ ಪ್ರಕರಣದ ಸಂಬಂಧ ತಾಯಿ ಸುಜಾತ ಭಟ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆ.26 ರಂದು ಬೆಳಗ್ಗೆ 5 ಗಂಟೆಗೆ...

ಬೆಳ್ತಂಗಡಿ; ವಿಚಾರಣೆ ಮುಗಿಸಿ ಹಿಂತಿರುಗಿದ ಸಮೀರ್ ಎಂ.ಡಿ; ತಡ ರಾತ್ರಿಯ ವರೆಗೂ ಮುಂದುವರಿದ ವಿಚಾರಣೆ

0

ಬೆಳ್ತಂಗಡಿ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೆ ಮಾಡಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ದಿನವಿಡೀ ಸಮೀರ್ ಎಂ ಡಿ ಅವರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಮಧ್ಯಾಹ್ನ12 ಗಂಟೆಯ ಸುಮಾರಿಗೆ ತನ್ನ ವಕೀಲರುಗಳೊಂದಿಗೆ ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದರು. ರಾತ್ರಿ ಹತ್ತು ಗಂಟೆಯ ಸುಮಾರಿಗೆ ವಿಚಾರಣೆ ಪೂರ್ಣಗೊಳಿಸಿ ಹಿಂತಿರುಗಿದರು. ಆರಂಭದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ಅವರ ಮುಂದೆ ಹಾಜರಾಗಿ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಬಗ್ಗೆ ವಿಚಾರಣೆ ಎದುರಿಸಿದರು. ಭಾನುವಾರವೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ್ದರು. ಇಂದು...

ಜನಪ್ರತಿನಿಧಿಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ  ಸಾವಿರಾರು ಭಕ್ತರು ಧರ್ಮಸ್ಥಳ ಭೇಟಿ

0

ಬೆಳ್ತಂಗಡಿ: ದೇವರ ಅನುಗ್ರಹದಿಂದ ಸತ್ಯದ ಅನಾವರಣವಾಗುತ್ತಿರುವುದು ಸಂತಸವಾಗಿದೆ. ಧರ್ಮಸ್ಥಳಧ ಭಕ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳ ಶ್ರದ್ಧಾ-ಭಕ್ತಿಯ ಪ್ರೋತ್ಸಾಹದಿಂದ ಎಲ್ಲಾ ಸೇವಾ ಕಾರ್ಯಗಳನ್ನು ಮುಂದುವರಿಸುವ ಉತ್ಸಾಹ ಮೂಡಿಬಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಮಂಗಳೂರು, ಮೂಡಬಿದ್ರೆ, ಬಂಟ್ವಾಳ, ಸುರತ್ಕಲ್, ಉಳ್ಳಾಲ ಹಾಗೂ ಬೆಳ್ತಂಗಡಿ ತಾಲ್ಲೂಕುಗಳಿಂದ ಆಗಮಿಸಿದ ಸಾವಿರಾರು ಮಂದಿ ಭಕ್ತಾದಿಗಳು ಹಾಗೂ ಅಭಿಮಾನಿಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸೋಮವಾರ ಧರ್ಮಸ್ಥಳಕ್ಕೆ ಬಂದು ಡಾ.ಹೆಗ್ಗಡೆಯವರಿಗೆ ಗೌರವಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಅವರು ಮಾತನಾಡಿದರು.ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಎಲ್ಲರೂ ದೇವಸ್ಥಾನದ...

ಬೆಳ್ತಂಗಡಿ : ವಿಚಾರಣೆಗೆ ಹಾಜರಾದ ಯೂಟ್ಯೂಬರ್ ಸಮೀರ್.ಎಮ್.ಡಿ

0

ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಸಮೀರ್.ಎಮ್.ಡಿ ವಿರುದ್ಧ ದಾಖಲಾದ ಧರ್ಮಸ್ಥಳದಲ್ಲಿ ಪ್ರಕರಣ ಸಂಬಂಧ ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ಕಚೇರಿಗೆ ಆ.25 ರಂದು ಮತ್ತೆ ಎರಡನೇ ದಿನ ವಿಚಾರಣೆಗೆ ತನ್ನ ವಕೀಲರ ಜೊತೆ ಕಾರಿನಲ್ಲಿ ಆಗಮಿಸಿದ್ದಾನೆ.

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ ರೂ.72.70ಲಕ್ಷ ನಿವ್ವಳ ಲಾಭ, ಶೇ.16 ಡಿವಿಡೆಂಟ್ ಘೋಷಣೆ.

0

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ 2024-25 ನೇ ಸಾಲಿನ 16 ನೇ ವಾರ್ಷಿಕ ಮಹಾಸಭೆ ಆಗಸ್ಟ್ 23 ರಂದು ಲ್ಯಾಲ ಜ್ಯೋತಿ ಹಾಸ್ಪಿಟಲ್ ಬಳಿ ಇರುವ ಸಂಗಮ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ.ಅನಿಲ್ ಎ.ಜೆ ರವರ ಅಧ್ಯಕ್ಷತೆಯಲ್ಲಿ ಜರುಗಿತು. 2024-25 ನೇ ಸಾಲಿನಲ್ಲಿ ರೂ 164 ಕೋಟಿ ವ್ಯವಹಾರ ನಡೆಸಿ ನಿವ್ವಳ ರೂ 72.70ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.16 ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅನಿಲ್ ಎ.ಜೆ ರವರು ತಿಳಿಸಿದರು.ಸಂಘದ ಉಪಾಧ್ಯಕ್ಷ ಶ್ರೀ. ಜಾರ್ಜ್...

ಗೇರುಕಟ್ಟೆ : ಪರಪ್ಪು ಈದ್ ಮಿಲಾದ್ ಸ್ವಾಗತ ಸಮಿತಿಯಿಂದ ಕಳಿಯ ಗ್ರಾಮ ಪಂಚಾಯತ್, ರಿಕ್ಷಾ ಚಾಲಕರ ಸಂಘ ಸಹಭಾಗಿತ್ವದಲ್ಲಿ ಸ್ವಚ್ಛತಾ ಅಭಿಯಾನ.

0

ಅ 24 ಗೇರುಕಟ್ಟೆ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ಈದ್ ಮೀಲಾದ್ ಕಾರ್ಯಕ್ರಮದ 1500 ನೇ ವರ್ಷಾಚರಣೆಯ ಪ್ರಯುಕ್ತ ಕಳಿಯ ಗ್ರಾಮ ಪಂಚಾಯತ್, ಸ್ನೇಹ ಸಂಗಮ ಆಟೋರಿಕ್ಷಾ ಚಾಲಕರ ಸಂಘ, ಈದ್ ಮೀಲಾದ್ ಸ್ವಾಗತ ಸಮಿತಿಯ ಸಹಭಾಗಿತ್ವದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವಾಕರ ಎಮ್, ಖತೀಬರಾದ ಮಹಮ್ಮದ್ ವಿಸ್ಬಾಹಿ, ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಝಿಯಾದ್ ಮುಈನಿ,ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಕರೀಮ್ ಲತೀಫ್ ಪರಿಮರ,ಈದ್ ಮಿಲಾದ್ ಸ್ವಾಗತ ಸಮಿತಿಯ ಅಶ್ರಫ್ ಜಿ.ಡಿ., ಪಂಚಾಯತ್ ಕಾರ್ಯದರ್ಶಿ ಕುಂಙ ಕೆ,...

ಬೆಳ್ತಂಗಡಿ : ಯೂಟ್ಯೂಬರ್ ಸಮೀರ್.ಎಮ್.ಡಿ ವಿಚಾರಣೆ ಅಂತ್ಯ; ನಾಳೆ ಮತ್ತೆ ವಿಚಾರಣೆಗೆ ಬರಲು ಸೂಚನೆ

0

ಬೆಳ್ತಂಗಡಿ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಸಮೀರ್.ಎಮ್.ಡಿ ಆ.24 ರಂದು ಭಾನುವಾರ ಬೆಳಗ್ಗೆ 1 ಗಂಟೆಗೆ ಬಂದು ಸಂಜೆ 6 ಗಂಟೆಗೆ ವಿಚಾರಣೆ ಮುಗಿಸಿ ವಾಪಸ್ ಕಾರಿನಲ್ಲಿ ವಕೀಲರ ಜೊತೆ ವಾಪಸ್ ತೆರಳಿದ್ದಾನೆ. ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಇಂದು ದಾಖಲೆ ಮೂಲಕ ವಿಚಾರಣೆ ನಡೆಸಿದ್ದು. ಆ.25 ಸೋಮವಾರದಂದು ಮತ್ತೆ ವಿಚಾರಣೆಗೆ ಬರಲು ನೋಟಿಸ್ ನೀಡಿ ಸೂಚನೆ ಕೊಟ್ಟು ದಾಖಲೆಗಳಿಗೆ ಸಹಿ ಪಡೆದು ಕಳುಹಿಸಿದ್ದಾರೆ.ಎI ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್ ಮತ್ತು ಮೊಬೈಲ್ ವಶಕ್ಕೆ ಪಡೆಯಲು ಬಾಕಿ ಇರುವುದಾಗಿ ಪೊಲೀಸ್ ಮೂಲಗಳಿಂದ...