ಹೊಸಂಗಡಿ ಹಾಗೂ ಗರ್ಡಾಡಿಯಲ್ಲಿ ಅಕ್ರಮ ಮದ್ಯಮಾರಾಟ; ಪೊಲೀಸ್ ದಾಳಿ ಪ್ರಕರಣ ದಾಖಲು
ಬೆಳ್ತಂಗಡಿ; ತಾಲೂಕಿನ ಹೊಸಂಗಡಿ ಹಾಗೂ ಗರ್ಡಾಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯಮಾರಾಟ ಕೇಂದ್ರಗಳಿಗೆ ಪೊಲೀಸರು ದಾಳಿ ನಡೆಸಿದ್ದು ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.ಗರ್ಡಾಡಿ ಗ್ರಾಮದ ಡಂಜೋಳಿ ಕ್ರಾಸ್ ಸಮೀಪ ಇರುವ ಗರ್ಡಾಡಿ ಕೋಳಿ ಫಾರ್ಮ್ಸ್ ಎಂಬಲ್ಲಿ ಅಕ್ರಮ ಮದ್ಯ ಮಾರಾ ಮಾಡುತ್ತಿರುವ ಬಂದ ಮಾಹಿತಿಯ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ಇಲ್ಲಿಂದ ಅಕ್ರಮವಾಗಿ ಶೇಖರಿಸಿಡಲಾಗಿದ್ದ ಮದ್ಯದ ಬಾಟ್ಲಿಗಳು ಪತ್ತೆಯಾಗಿದ್ದು ಆರೋಪಿ ಗೋಪಾಲ ಪೂಜಾರಿ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮತ್ತೊಂದು ಪ್ರಕರಣದಲ್ಲಿ ಹೊಸಂಗಡಿಗ್ರಾಮದ ಚಂದ್ರಕಾಂತ್ ಎಂಬಾತನಿಗೆ ಸೇರಿದ ದಿನಸಿ ಅಂಗಡಿಯಲ್ಲಿ...
ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಉದಯ್ ಪೂಜಾರಿಯವರಿಗೆ ಸಾಂತ್ವಾನ ನಿಧಿ ಹಸ್ತಾಂತರ
ಶಿಶಿಲ: ಯುವವಾಹಿನಿ(ರಿ.) ಬೆಳ್ತಂಗಡಿ ಘಟಕದ ಕ್ರಿಯಾಶೀಲ ಸದಸ್ಯರಾಗಿದ್ದು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉದಯ್ ಪೂಜಾರಿ ಒಟ್ಲಾ ಇವರು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಇತ್ತೀಚೆಗೆ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿಯಲ್ಲಿ ಇರುವ ಇವರನ್ನು ದಿನಾಂಕ 05.07.2025ರಂದು ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಪದಾಧಿಕಾರಿಗಳು ಬೇಟಿಯಾಗಿ ಆರೋಗ್ಯ ವಿಚಾರಿಸಿದರು ಈ ಸಂದರ್ಭದಲ್ಲಿ ಸಹಾಯಧನವನ್ನು ಘಟಕದ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ ಹಸ್ತಾಂತರಿಸಿದರು.ಘಟಕದ ಮಾಜಿ ಅಧ್ಯಕ್ಷರಾದ ಎಂ.ಕೆ ಪ್ರಸಾದ್, ಕೋಶಾಧಿಕಾರಿ ನಾಗೇಶ್ ಆದೇಲು, ಸಂಘಟನಾ...
ಧರ್ಮಸ್ಥಳದಿಂದ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ
ಧರ್ಮಸ್ಥಳ : ಧರ್ಮಸ್ಥಳದಿಂದ -ಉಜಿರೆ-ಬೆಳಾಲು -ಬಂದಾರು-ಉಪ್ಪಿನಂಗಡಿ, ಸೌತಡ್ಕ ಹಾಗೂ ನೆಲ್ಯಾಡಿ, ಮಾರ್ಗವಾಗಿ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರವರು ಜುಲೈ 08 ರಂದು ಧರ್ಮಸ್ಥಳ ದಲ್ಲಿ ಚಾಲನೆ ನೀಡಿದರು. ಧರ್ಮಸ್ಥಳದಿಂದ ಪಟ್ರಮೆಗೆ ಕೊಕ್ಕಡ-ಸೌತಡ್ಕ ಮಾರ್ಗವಾಗಿ ಸಂಚರಿಸಲಿದೆ ಧರ್ಮಸ್ಥಳದಿಂದ ಪುತ್ತೂರಿಗೆ ಉಜಿರೆ-ಬೆಳಾಲು-ಬಂದಾರು-ಕುಪ್ಪೆಟ್ಟಿ-ಉಪ್ಪಿನಂಗಡಿ ಮಾರ್ಗವಾಗಿ ಸಂಚರಿಸುತ್ತದೆ. ಧರ್ಮಸ್ಥಳದಿಂದ ನೆಲ್ಯಾಡಿ - ಕುಕ್ಕೆ ಸುಬ್ರಹ್ಮಣ್ಯ ಇದು ಕೊಕ್ಕಡ-ನೆಲ್ಯಾಡಿ-ಬಲ್ಯ-ಕಡಬ ಮಾರ್ಗವಾಗಿ ಸಂಚರಿಸುತ್ತದೆ ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಮಲ , ಉಪಾಧ್ಯಕ್ಷರಾದ ಶ್ರೀನಿವಾಸ್ ರಾವ್, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,ಧರ್ಮಸ್ಥಳ ಸಿ.ಎ...
ಕಿಲ್ಲೂರು; ಮೇಯಲು ಬಿಟ್ಟಿದ್ದ ದನಕ್ಕೆ ವಿಷವಿಕ್ಕಿ ಸಾಯಿಸಿದ ದುಷ್ಕರ್ಮಿಗಳು; ಪ್ರಕರಣ ದಾಖಲು
ಬೆಳ್ತಂಗಡಿ; ಕಿಲ್ಲೂರಿನಲ್ಲಿ ಮೇಯಲು ಬಿಟ್ಟಿದ್ದ ದನಕ್ಕೆ ದುಷ್ಕರ್ಮಿಗಳು ವಿಷವಿಕ್ಕಿ ಸಾಯಿಸಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕಿಲ್ಲೂರು ಕೋಯನಗರ ಎಂಬಲ್ಲಿ ಘಟನೆ ನಡೆಸಿದೆ ಇಲ್ಲಿನ ನಿವಾಸಿ ಇಸುಬು ಎಂಬವರಿಗೆ ಸೇರಿದ ದನವನ್ನು ಸೋಮವಾರ ಎಂದಿನಂತೆ ಮೇಯಲು ಬಿಟ್ಟಿದ್ದರು. ಸಂಜೆಯ ವೇಳೆ ದನ ಸಾವನ್ನಪದಪಿರುವುದು ಕಂಡು ಬಂದಿದೆ. ನೋಡಿದಾಗ ಇದು ವಿಷ ಪ್ರಾಶನದಿಂದ ಸಾವನ್ನಪ್ಪಿರುವಂತೆ ಕಂಡು ಬಂದಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ...
ಪಿಲಿಗೂಡು; ಅಕ್ರಮ ದನ ಸಾಗಾಟ ಪತ್ತೆ ಪ್ರಕರಣ ದಾಖಲು
ಬೆಳ್ತಂಗಡಿ; ತಾಲೂಕಿನ ಬಾರ್ಯಗ್ರಾಮದ ಪಿಲಿಗೂಡು ಎಂಬಲ್ಲಿ ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ದನಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿದ್ದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.ಉಪ್ಪಿನಂಗಡಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪೆದಮಲೆ ಕಡೆಯಿಂದ ಬಂದ ಪಿಕಪ್ ವಾಹವನ್ನು ತಡೆದು ಪರಿಶೀಲಿಸಿದಾಗ ಯಾವುದೇ ಪರವಾನಿಗೆಯಿಲ್ಲದೆ ದನವನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಪಿಕಪ್ ವಾಹನವನ್ನು ಹಾಗೂ ಅದರಲ್ಲಿದ್ದ ದನವನ್ನು ವಶಪಡಿಸಿಕೊಂಡ ಪೊಲೀಸರು ವಾಹನದಲ್ಲಿದ್ದ ಅಬೂಬಕ್ಕರ್, ಇಮ್ರಾನ್ ಹಾಗೂ ಮೊಹಮ್ಮದ್ ಎಂಬವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ
ಇಂದಬೆಟ್ಟು:ಇಂದಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದಬೆಟ್ಟು ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ 2.5 NVG eyiMiTRA Surathkal ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಇವರ ಜಂಟಿ ಆಶ್ರಯದಲ್ಲಿ, ಸಮೃದ್ಧಿ ಸಂಜೀವಿನಿ ಒಕ್ಕೂಟ ಇಂದಬೆಟ್ಟು ಇದರ ಸಹಕಾರದೊಂದಿಗೆ ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಇಂದಬೆಟ್ಟು ಗ್ರಾಮ ಪಂಚಾಯತನ ಹಿರಿಯ ಸದಸ್ಯರಾದ ವೀರಪ್ಪ ಮೊಯ್ಲಿ ರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು, ಸದಸ್ಯರಾದ ಪ್ರಮೋದ್ ಕುಮಾರ್, ಶ್ರೀಕಾಂತ್ ಎಸ್ ಇಂದಬೆಟ್ಟು ಸಹಕರಿಸಿದರು. ಪಂಚಾಯತ್ ಕಾರ್ಯದರ್ಶಿ ಗಿರಿಯಪ್ಪ ಗೌಡ ರವರು...
ಕಾಂಗ್ರೆಸ್ ನ ಓಲೈಕೆ ರಾಜಕಾರಣ -ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ರವರ ಮೇಲೆ ಕೇಸು – ವಿಶ್ವ ಹಿಂದೂ ಪರಿಷತ್ ಖಂಡನೆ
ಬೆಳ್ತಂಗಡಿ; ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಗೋಹತ್ಯೆ ಪ್ರಕರಣವನ್ನು ಖಂಡಿಸಿ ಮಾಧ್ಯಮದಲ್ಲಿ ನೀಡಿದ ಹೇಳಿಕೆಯ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ. ಹಲವು ವರ್ಷಗಳಿಂದ ಅಕ್ರಮ ಗೋಸಾಗಾಟ, ಗೋಹತ್ಯೆ ಅಲ್ಲದೆ ಗೋಕಳ್ಳತನ ನಡೆಯುತ್ತಿದ್ದು ಕಳ್ಳರನ್ನು ಗೋಹಂತಕರನ್ನು ಬಂದಿಸಲು ಹಾಗು ಗೋಹತ್ಯೆಯನ್ನು ನಿಲ್ಲಿಸಲು ಆಗದ ಸರಕಾರ ಹಾಗು ಕಾಂಗ್ರೆಸ್ ಪ್ರೇರಿತ ಅಧಿಕಾರಿಗಳು ಗೋಹತ್ಯೆ ವಿರುದ್ದ ಮಾತಾಡಿದ ಗೋಪ್ರೇಮಿಗಳ ಮೇಲೆ ಕೇಸು ಹಾಕಿರುವುದು ಖಂಡನೀಯ. ಗೋಹತ್ಯೆ ಲವ್ ಜಿಹಾದ್ ಕಾರಣದಿಂದ ಗಲಭೆಗಳು ನಡ್ದೆದು ಜಿಲ್ಲೆ ಪ್ರಕ್ಷುಬ್ದವಾಗಿರುವ ಘಟನೆಗಳು ನಡೆದಿತ್ತು. ಈ ಗೋಮಾಫಿಯಾದ ಹಿಂದೆ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದ್ದು...
ಅಳದಂಗಡಿ; ಫಲ್ಗುಣಿ ನದಿಯಲ್ಲಿ ಯುವಕನ ಶವ ಪತ್ತೆ
ಬೆಳ್ತಂಗಡಿ: ಆಳದಂಗಡಿಯ ಫಲ್ಗುಣಿ ನದಿಯಲ್ಲಿ ಯುವಕನ ಶವವೊಂದು ಪತ್ತೆಯಾಗಿದೆ. ಅಳದಂಗಡಿ ಅರಮನೆ ಹಿಂಬದಿಯಲ್ಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಇರುವ ಕಿಂಡಿ ಅಣೆಕಟ್ಟು ಬಳಿ ಸೋಮವಾರ ವ್ಯಕ್ತಿಯೊಬ್ಬರು ಮೀನು ಹಿಡಿಯಲೆಂದು ನದಿ ಬದಿಗೆ ತೆರಳಿದ ಸಂದರ್ಭ ಅವರಿಗೆ ಹೆಣವೊಂದು ಅಣೆಕಟ್ಟಿಗೆ ಸಿಲುಕಿಕೊಂಡಿರುವುದು ಗಮನಕ್ಕೆ ಬಂತು. ತಕ್ಷಣ ಅವರು ಸ್ಥಳೀಯರಿಗೆ ತಿಳಿಸಿದ್ದು, ಅವರು ವೇಣೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತ ಯುವಕ ದೇವರಗುಡ್ಡೆ ನಿವಾಸಿ ಸುದೀಪ್(25) ಎಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ರಾಜಕೇಸರಿ ಟ್ರಸ್ಟ್ ನಿಂದ ಉಚಿತ ಬ್ಯಾಗ್ ,ಪೆನ್ ವಿತರಣೆ; ಸರಕಾರಿ ಶಾಲೆಯ ಸೇವೆ ದೇವರ ಸೇವೆ ಮಾಡಿದಂತೆ: ಕಿರಣ್ ಪುಷ್ಪಗಿರಿ
ಬೆಳ್ತಂಗಡಿ: ಸರಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯ, ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು ಉತ್ತಮ ಪರಿಸರದ ವಾತಾವರಣ ಇದೆ. ಇದರಿಂದ ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಅರೋಗ್ಯ ಸಿಗಲು ಸಾದ್ಯ. ಕೆಲವೊಂದು ಸೌಲಭ್ಯಗಳ ಕೊರತೆ ಇದ್ದು ಇದನ್ನು ಊರವರು ,ದಾನಿಗಳು ನೀಡಲು ಮುಂದಾಗಬೇಕು .ಇಂದು ರಾಜಕೇಸರಿ ಟ್ರಸ್ಟ್ ಬ್ಯಾಗ್, ಪುಸ್ತಕ, ಇನ್ನಿತರ ಕೊಡುಗೆ ನೀಡಿ ಸರಕಾರಿ ಶಾಲಾ ಮಕ್ಕಳ ಭವಿಷ್ಯ ರೂಪಿಸುತ್ತಿದೆ. ಸರಕಾರಿ ಶಾಲಾ ಸೇವೆ ದೇವರ ಸೇವೆ ಮಾಡಿದಂತೆ ಎಂದು ದಾರ್ಮಿಕ ಮುಖಂಡ ಕಿರಣ್ ಪುಷ್ಪಗಿರಿ ಹೇಳಿದರು. ಅವರು ಭಾನುವಾರ ಸರಕಾರಿ ಹಿರಿಯ...
ಕಕ್ಕಿಂಜೆಗೆ ನೂತನ ಮೌಲಾನಾ ಆಜಾದ್ ಶಾಲೆ ಮಂಜೂರು; ರಕ್ಷಿತ್ ಶಿವರಾಂ
ಬೆಳ್ತಂಗಡಿ; ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಕ್ಕಿಂಜೆಗೆ ನೂತನವಾಗಿ ಮೌಲಾನಾ ಆಜಾದ್ ಮಾದರಿ ಶಾಲೆ ಮಂಜೂರಾಗಿರುವುದಾಗಿ ಕೆ.ಪಿ.ಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.ರಾಜ್ಯದಲ್ಲಿ ನೂತನವಾಗಿ 43 ಶಾಲೆಗಳು ಮಂಜೂರಾಗಿದ್ದು ಅದರಲ್ಲಿ ಕಕ್ಕಿಂಜೆಯಲ್ಲಿಯೂ ನೂತನ ಶಾಲೆ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.