ಬೆಳ್ತಂಗಡಿ; 2023-24ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹಾಲಿ ಮದ್ದಡ್ಕ ತೋಟಗಾರಿಕೆ ಕ್ಷೇತ್ರದಲ್ಲಿ ಹೈಬ್ರಿಡ್ (TXD) ತೆಂಗಿನ ಸಸಿಗಳು ರಿಯಾಯಿತಿ ದರದಲ್ಲಿ ಮಾರಾಟಕ್ಕಿರುತ್ತದೆ.
ಆಸಕ್ತಿ ಹೊಂದಿರುವ ಕನಿಷ್ಠ ಅರ್ಧ ಎಕರೆ (25 ಗಿಡಗಳು) ತೆಂಗು ತೋಟ ಅಭಿವೃದ್ಧಿ ಪಡಿಸಲು ಇಚ್ಛೆಯುಳ್ಳವರು ಹಾಗೂ ನೀರಾವರಿ ಸೌಕರ್ಯ ಹೊಂದಿರುವ ರೈತರು ಪಹಣಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿಗಳನ್ನು, ಇಲಾಖೆ ನಿಗದಿಪಡಿಸಿದ ಅರ್ಜಿಯೊಂದಿಗೆ ಬೆಳ್ತಂಗಡಿ ತೋಟಗಾರಿಕೆ ಇಲಾಖೆ ಕಛೇರಿಗೆ ದಿನಾಂಕ: 29-02-2024 ರೊಳಗೆ ಸಲ್ಲಿಸಲು ಕೋರಿದೆ.
ಇಲಾಖಾ ಮಾರ್ಗಸೂಚಿಯನ್ವಯ ರೂ. 170/- ಮಾರುಕಟ್ಟೆ ಮೌಲ್ಯದ ಹೈಬ್ರಿಡ್ ತೆಂಗಿನ ಸಸಿಗಳು ರೂ. 95/- ಮೌಲ್ಯಕ್ಕೆ ಮಾರಾಟಕ್ಕೆ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಅಧಿಕಾರಿ ವರ್ಗದವರನ್ನು ಸಂಪರ್ಕಿಸಬಹುದಾಗಿದೆ.
ಮದ್ದಡ್ಕ ತೋಟಗಾರಿಕೆ ಕ್ಷೇತ್ರ : ಶ್ರೀ ಮಂಜುನಾಥ್, ಸ.ತೋ.ನಿ, ಮೊಬೈಲ್ ನಂ: 9901771226
ಬೆಳ್ತಂಗಡಿ ಹೋಬಳಿ : ಶ್ರೀ ಮಹಾವೀರ ಶೇಬಣ್ಣವರ ನೇ. , ಮೊಬೈಲ್ ನಂ: 8123921087
ವೇಣೂರು ಹೋಬಳಿ : ಶ್ರೀ ಭೀಮರಾಯ ಸೊಡ್ಡಗಿ, ಮೊಬೈಲ್ ನಂ: 9741713598
ಕೊಕ್ಕಡ ಹೋಬಳಿ : ಶ್ರೀ ಮಲ್ಲಿನಾಥ ಬಿರಾದಾರ, ಮೊಬೈಲ್ ನಂ: 9986411477
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು : ಕೆ.ಎಸ್. ಚಂದ್ರಶೇಖರ್, ಮೊಬೈಲ್ ನಂ: 9448336863