Home ರಾಜಕೀಯ ಸಮಾಚಾರ ಕೇಂದ್ರಸರ್ಕಾರದ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಸಕುಟುಂಬಿಕರಾಗಿ ಧರ್ಮಸ್ಥಳ ಭೇಟಿ

ಕೇಂದ್ರಸರ್ಕಾರದ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಸಕುಟುಂಬಿಕರಾಗಿ ಧರ್ಮಸ್ಥಳ ಭೇಟಿ

12
0

ಬೆಳ್ತಂಗಡಿ: ಕೇಂದ್ರಸರ್ಕಾರದ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಸಕುಟುಂಬಿಕರಾಗಿ ಸೋಮವಾರ ಸಂಜೆ ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಸನ ಪಡೆದರು. ಧರ್ಮಸ್ಥಳಕ್ಕೆ ಆಗಮಿಸಿ್ ಅವರನ್ನು ಪೂರ್ಣಕುಂಭದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ಬಳಿಕ ಅವರು ದೇವರ ದರ್ಶನ ಪಡೆದು, “ರಂಗಪೂಜೆ” ಸೇವೆಯನ್ನು ಸಲ್ಲಿಸಿದರು.
ಸಚಿವರ ಪತ್ನಿ ಅನಿತಾಕುಮಾರಸ್ವಾಮಿ, ಮಗ ನಿಖಿಲ್‌ ಕುಮಾರಸ್ವಾಮಿ ಮತ್ತು ಸೊಸೆ ರೇವತಿ ನಿಖಿಲ್ ಜೊತೆಗಿದ್ದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇ ಗೌಡ ಉಪಸ್ಥಿತರಿದ್ದರು.
“ಶ್ರೀಸನ್ನಿಧಿ” ಅತಿಥಿಗೃಹದಲ್ಲಿ ತಂಗಿರುವ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಕಟುಂಬದವರು ಮಂಗಳವಾರ ಸುಬ್ರಹ್ಮಣ್ಯಕ್ಕೆ ತೆರಳಲಿದ್ದಾರೆ.

LEAVE A REPLY

Please enter your comment!
Please enter your name here