
ಬೆಳ್ತಂಗಡಿ; ಕಾಂಗ್ರೇಸ್ ಧರಿದ್ರ ಪಕ್ಷ ಎನ್ನುವ ಬಿಜೆಪಿಗರೇ, ಬಿಜೆಪಿ ಸಂವಿದಾನ ವಿರೋದಿ ಎನ್ನುವ ಕಾಂಗ್ರೇಸಿಗರೆ ನೀವು ಎರಡೂ ಪಕ್ಷಗಳು ಸೇರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಬಡ ತಾಯಂದಿರನ್ನು ಮಾತ್ರ ದರಿದ್ರರನ್ನಾಗಿಸಬೇಡಿ ಮತ್ತು ಸಂವಿದಾನ ಬದ್ದ ಅವರ ಹಕ್ಕನ್ನು ಕಸಿಯಬೇಡಿ ಎಂದು ಸಿಐಟಿಯ ದ.ಕ. ಜಿಲ್ಲಾ ಅಧ್ಯಕ್ಷರಾದ ಬಿ.ಎಂ.ಭಟ್ ಹೆಳಿದರು
ಅವರು ಸೋಮವಾರ ಬೆಳ್ತಂಗಡಿ ತಾಲೂಕು ಕಚೇರಿ ಎದರು ಅಕ್ಷರದಾಸೋಹ ನೌಕರ ಸಂಘದ ನೇತೃತ್ವದಲ್ಲಿ ನಡೆದ ಅಕ್ಷರದಾಸೋಹ ನೌಕರರ ಮುಷ್ಕರದ ಪ್ರತಿಭಟನಾ ಸಬೆಯನ್ನುದ್ದೇಶಿಸಿ ಮಾತಾಡುತ್ತಿದ್ದರು. ಹಲವು ಶಿಕ್ಷಕರ ಸಂಘಗಳ ಪೈಕಿ ಒಂದು ಶಿಕ್ಷಕರ ಸಂಘ ನೀಡಿದ ಮನವಿಯನ್ನು ಗಂಬೀರವಾಗಿ ಪರಿಗಣಿಸಿದ ರಾಜ್ಯ ಸರಕಾರ ಕ್ಲೆಸ್ಟರ್ ವೈಸ್ ಟೆಂಡರ್ ಕರೆಯುವತ್ತ ಮಾಹಿತಿ ಸಂಗ್ರಹಿಸಲು ಆದೇಶಿಸಿರುವುದು ಖಂಡನೀಯ ಎಂದರು. ಕಳೆದ 12 ವರ್ಷಗಳಲ್ಲಿ 1 ರೂ ಸಂಬಳ ಏರಿಸದ ಮೋದಿಜಿಗೆ ಶಾಲೆಗಳಲ್ಲಿ ಮಕ್ಕಳಿಂದ ಜೈಕಾರ ಹಾಕಿಸುವ ಶಾಸಕರಿಗೆ ಬಡ ತಾಯಂದಿರ ಕಷ್ಟ ಅರ್ಥ ಆಗುವುದೇ ಇಲ್ಲ ಎಂದರು. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಗಳಾಗಿದ್ದಾಗ ಅಕ್ಷರದಾಸೋಹ ತಾಯಂದಿರ ಕೆಲಸ ತೆಗೆದರು ಎಂದು ಇತಿಹಾಸದ ಪುಟದಲ್ಲಿ ಬಾರದಿರಲಿ, ಬದಲಿಗೆ ಕಾಂಗ್ರೇಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಗ್ಯಾರೆಂಟಿ ವೇತನವನ್ನು ನೀಡಿ ಕೊಟ್ಟ ವಚನ ಈಡೇರಿಸಲಿ ಎಂದರು. ನಮ್ಮ ಅಡುಗೆಯವರ ಪಾಲಿಗೆ ಕಾಂಗ್ರೇಸ್ ಮತ್ತು ಬಿಜೆಪಿ ಎರಡೂ ರಾಜಕೀಯ ಪಕ್ಷದವರೂ ಒಂದಾಗಿ ಶೋಷಣೆ ಮಾಡುತ್ತಿರುವುದನ್ನು ನಾವು ಸಹಿಸಲಾರೆವು, ಎಂದರು.

ಅಕ್ಷರದಾಸೋಹ ನೌಕರ ಸಂಘದ ಮಾಜಿ ಅಧ್ಯಕ್ಷರಾದ ಲಲಿತ ಮಾತಾಡಿ ನಮ್ಮ ತಾಯಂದಿರ ಕಷ್ಟ ಅರ್ಥ ಆಗದ ಶಾಸಕರಾಗಲಿ, ಸರಕಾರವಾಗಲಿ ನಮಗೆ ಅಗತ್ಯ ಇಲ್ಲ. ಹಲವು ವರ್ಷಗಳಿಂದ ಸಣ್ಣ ಸಂಬಳಕ್ಕೆ ದುಡಿಯುತ್ತಾ ನಮ್ಮ ಸಂಬಳ ಏರಿಕೆಯಾದೀತು ಎಂಬ ನಿರೀಕ್ಷೆಯಿಂದ ಕಾಯುತ್ತಾ ಇನ್ನೇನು ನಿವೃತ್ತಿ ಸಮಯ ಬಂದರೂ ಬದುಕಲು ತಕ್ಕ ಸಂಬಳ ನಿಡುವ ಸರಕಾರ ಬಂದಿಲ್ಲ ಎಂದರು.
ಅಕ್ಷರದಾಸೋಹ ನೌಕರ ಸಂಘದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ವಿನೋದ ಸ್ವಾಗತಿಸಿದರು, ಸಂಘದ ಅಧ್ಯಕ್ಷರಾದ ಸುನೀತ ವಂದಿಸಿದರು. ಸಿಐಟಿಯು ಜಿಲ್ಲಾ ಸಮಿತಿ ಸದಸ್ಯರಾದ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ವಿದ್ಯಾರ್ಥಿ ನಾಯಕ ವಿನುಶರಮಣ, ಸಿಐಟಿಯು ಮುಖಂಡರಾದ ರಾಮಚಂದ್ರ, ಅಪ್ಸರಾಲಿಯ ಮೊದಲಾದವರು ಇದ್ದರು. ಪ್ರತಿಭಟನೆಯ ಕೊನೆಗೆ ತಾಲೂಕು ತಹಸೀಲ್ದಾರ್ ಮೂಲಕ ಶಿಕ್ಷಣ ಸಚಿವರಿಗೂ, ಬಳಿಕ ತಾಲೂಕು ಪಂಚಾಯತಿಗೆ ತೆರಳಿ ತಾಲೂಕು ಕಾರ್ಯನಿರ್ವಹಣಾಧಿಕಾರಿಯವರ ಮೂಲಕ ಮುಖ್ಯಮಂತ್ರಿಗಳಿಗೂ ಮನವಿ ನೀಡಲಾಯಿತು.










