Home ರಾಜಕೀಯ ಸಮಾಚಾರ SIR ಫಾರಂ 7 ದುರುಪಯೋಗ ವಿರುದ್ದ SDPI ಪ್ರತಿಭಟನೆ;  ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತಹಶೀಲ್ದಾರ್...

SIR ಫಾರಂ 7 ದುರುಪಯೋಗ ವಿರುದ್ದ SDPI ಪ್ರತಿಭಟನೆ;  ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ : ರಿಯಾಝ್ ಕಡಂಬು

1
0

ಬೆಳ್ತಂಗಡಿ, ಅ.9: SIR ಪ್ರಕ್ರಿಯೆಯಲ್ಲಿ ಇಲ್ಲಿನ ಅಹಿಂದ ವರ್ಗಗಳ ಮತಗಳನ್ನು ಅಳಿಸಿ ಹಾಕಬೇಕು ಎಂಬ ಕನಸನ್ನು SDPI ನುಚ್ಚು ನೂರುಗೊಳಿಸಿದೆ. ಮುಂದುವರಿದ ಷಡ್ಯಂತ್ರದ ಭಾಗವಾಗಿ Form-7 ಅರ್ಜಿಗಳ ದುರುಪಯೋಗ ಮಾಡುವ ಮೂಲಕ ಮತಕಳ್ಳತನಕ್ಕೆ ಕೈ ಹಾಕಿದ್ದು ಬೆಳ್ತಂಗಡಿಯಲ್ಲಿ ನಡೆದ ಅಕ್ರಮದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು SDPI ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಎಚ್ಚರಿಸಿದರು.

ಅವರು SIR ಪ್ರಕ್ರಿಯೆಯಡಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು Form-7 ಅರ್ಜಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ SDPI ಬೆಳ್ತಂಗಡಿ ಕ್ಷೇತ್ರ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

‘ಫಾರಂ-7 ಟೂಲ್ ಕಿಟ್–ಮತಕಳ್ಳತನದ ಸಂಚಿನ ವಿರುದ್ಧ ಪ್ರತಿರೋಧ’ ಎಂಬ ಘೋಷಣೆಯೊಂದಿಗೆ ಸಂತೆಕಟ್ಟೆಯಿಂದ ಮಿನಿ ವಿಧಾನಸೌಧದವರೆಗೆ ಕಾಲ್ನಡಿಗೆ ಜಾಥಾದ ಆರಂಭದಲ್ಲಿ ಮಾತನಾಡಿದ SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ ನಡೆಯಬೇಕು. ರಾಜಕೀಯ ಅಥವಾ ವೈಯಕ್ತಿಕ ಉದ್ದೇಶದಿಂದ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಅವಕಾಶ ನೀಡಬಾರದು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ, Form-7 ಅರ್ಜಿಗಳಲ್ಲಿರುವ ಮಾಹಿತಿಯ ಸತ್ಯಾಸತ್ಯತೆ, ದಾಖಲೆಗಳ ಬಳಕೆ ಹಾಗೂ ಅರ್ಜಿ ಸಲ್ಲಿಕೆಯ ಉದ್ದೇಶವನ್ನು ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಬೇಕು. ಸುಳ್ಳು ಮಾಹಿತಿ ಅಥವಾ ದಾಖಲೆಗಳ ದುರುಪಯೋಗ ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನುಬದ್ಧ ಆಧಾರವಿಲ್ಲದ ಅರ್ಜಿಗಳನ್ನು ತಿರಸ್ಕರಿಸಿ, ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಅನ್ಯಾಯವಾಗಿ ಕೈಬಿಡದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಾಸ್, ಮತದಾರರ ಅನುಮತಿಯಿಲ್ಲದೆ ಅಥವಾ ತಪ್ಪು ಮಾಹಿತಿಯ ಆಧಾರದ ಮೇಲೆ Form-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ BLO ಹಾಗೂ BLAಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

SDPI ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯ ರಹ್ಮಾನ್ ನಾವೂರು, ಕ್ಷೇತ್ರ ಉಪಾಧ್ಯಕ್ಷ ನಿಸಾರ್ ಕುದ್ರಡ್ಕ, ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಸ್ವಾಲಿ ಮದ್ದಡ್ಕ, ರಶೀದ್ ಬೆಳ್ತಂಗಡಿ, ಮುಸ್ತಾಫ ಜಿ. ಕೆರೆ, ಮೊಹಮ್ಮದ್ ಅಲಿ ಉಜಿರೆ, ಖಾದರ್ ನಾವೂರು, ಅಶ್ರಫ್ ಕಟ್ಟೆ ಸೇರಿದಂತೆ ಪಕ್ಷದ ಮುಖಂಡರು, ಬ್ಲಾಕ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here