
ವೇಣೂರು: ರಸ್ತೆ ಬದಿ ತ್ಯಾಜ್ಯಗಳನ್ನು ಎಸೆದ ವೇಣೂರು ಗ್ರಾ.ಪಂ. ವ್ಯಾಪ್ತಿಯ ಕರಿಮಣೇಲು ಗ್ರಾಮದ ಅಂಗಡಿ ಮಾಲಿಕರೊಬ್ಬರಿಗೆ ವೇಣೂರು ಗ್ರಾ.ಪಂ. ರೂ. 5೦೦೦ ದಂಡ ವಿಧಿಸಿದೆ.
ಕಸಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸೂಕ್ತ ರೀತಿಯಲ್ಲಿ ವಿಲೇ ಮಾಡುವಂತೆ ಗ್ರಾ.ಪಂ. ತಿಳಿಸಿತ್ತು. ತಪ್ಪಿದ್ದಲ್ಲಿ ದಂಡ ವಿಧಿಸುವ ಎಚ್ಚರಿಕೆ ನೀಡಿತ್ತು.
ಇದೀಗ ಕರಿಮಣೇಲು ಗ್ರಾಮದ ಅಂಗಡಿ ಮಾಲಕರೊಬ್ಬರು ಕಸ ಎಸೆದಿರುವ ಬಗ್ಗೆ ಸಿಸಿಟಿವಿ ಆದರಿಸಿ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪಂಚಾಯತ್ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.
ತ್ಯಾಜ್ಯ/ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಬಿಸಾಡಿದ್ದಲ್ಲಿ ದಂಡ ವಿಧಿಸಲಾಗುವುದು. ಅಲ್ಲದೆ ಯಾರಾದರೂ ಕಸ ಬಿಸಾಡುವುದನ್ನು ಕಂಡಲ್ಲಿ ಪಂಚಾಯತ್‌ಗೆ ಮಾಹಿತಿ ನೀಡುವಂತೆ ತಿಳಿಸಿದೆ.










