ಬೆಳ್ತಂಗಡಿ; ಮೇದಿನಾಚರಣೆ ಅಂಗವಾಗಿ ಬೆಳ್ತಂಗಡಿಯಲ್ಲಿ ಸಿ.ಐ.ಟಿ.ಯು ನೇತೃತ್ವದಲ್ಲಿ ಕಾರ್ಮಿಕರು ರ್ಯಾಲಿ ನಡೆಸಿದರು.
ಬೆಳ್ತಂಗಡಿ ಸಿಐಟಿಯು ಕಚೇರಿಯಿಂದ ಹೊರಟ ಕಾರ್ಮಿಕರ ರ್ಯಾಲಿ ನಗರದಲ್ಲಿ ಸಂಚರಿಸಿತ್ತು. ಕಾರ್ಮಿಕ ದಿನಾಚರಣೆಯ ಘೋಷಣೆಗಳೊಂದಿಗೆ ಕಾರ್ಮಿಕರು ರ್ಯಾಲಿಯಲ್ಲಿ ಭಾಗಿಗಳಾದರು.
ಕಾರ್ಮಿಕ ಮುಖಂಡ ಬಿ.ಎಂ ಭಟ್ ರ್ಯಾಲಿಯ ನೇತೃತ್ವ ವಹಿಸಿದ್ದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಕಾರ್ಮಿಕರು ರ್ಯಾಲಿ ಯಲ್ಲಿ ಭಾಗವಹಿಸಿದ್ದರು.

