
ಬೆಳ್ತಂಗಡಿ : ಎಸ್.ಐ.ಟಿ ಮುಖ್ಯಸ್ಥರಾದ ಪ್ರಣವ್ ಮೊಹಂತಿ ಸೆ.5 ರಂದು ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ.
ಎಸ್.ಐ.ಟಿ ತಂಡವು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು ಬುರುಡೆ ವಿಚಾರದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಇಂದು ಅತ್ಯಂತ ಮಹತ್ವದ ಬೆಳವಣಿಗೆಗಳು ನಡೆಯುವ ನಿರೀಕ್ಷೆಯಿದೆ.
ಎಸ್.ಐ.ಟಿ ಕಚೇರಿಯಲ್ಲಿ ಮಟ್ಟಣ್ಣನವರ್
ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ವಿಚಾರಣೆಗಾಗಿ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಶುಕ್ರವಾರ ಬೆಳಗ್ಗೆ ಆಗಮಿಸಿದ್ದಾರೆ. ಯೂಟ್ಯೂಬರ್ ಅಭಿಷೇಕ್ ಕಳೆದ ಮೂರು ದಿನಗಳಿಂದ ಎಸ್.ಐ.ಟಿ ವಿಚಾರಣೆ ಎದುರಿಸುತ್ತಿದ್ದಾರೆ. ಅದೇರೀತಿ ಜಯಂತ್.ಟಿ, ಗುರುವಾರ ಸಂಜೆ ವಿಚಾರಣೆಗಾಗಿ ಬಂದವರು ಇನ್ನೂ ಎಸ್.ಐ.ಟಿ ಠಾಣೆಯಲ್ಲಿಯೇ ಇದ್ದಾರೆ ಎಂದು ತಿಳಿದು ಬಂದಿದೆ. ಇಂದು ಎಸ್.ಐ.ಟಿ ಕಚೇರಿಗೆ ಆಗಮಿಸಿರುವ ಪ್ರಣವ್ ಮೊಹಂತಿ ಅವರು ಈ ಮೂವರ ವಿಚಾರಣೆಯನ್ನು ಮತ್ತೆ ನಡೆಸಲಿರುವುದಾಗಿ ತಿಳಿದು ಬಂದಿದೆ.
ಚಿನ್ನಯ್ಯ ತಂದಿರುವ ಬುರುಡೆಯ ಬಗ್ಗೆ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿರುವುದಾಗಿ ತಿಳಿದು ಬಂದಿದೆ.
ದೂರುದಾರ ಚಿನ್ನಯ್ಯ ತಂದಿರುವ ಬುರುಡೆಯ ಬಗೆಗಿನ ತನಿಖೆಯಲ್ಲಿ ಇಂದು ಮಹತ್ವದ ಬೆಳವಣಿಗೆಗಳು ನಡೆಯುವ ನಿರೀಕ್ಷಯಿದೆ.