Home ಬ್ರೇಕಿಂಗ್‌ ನ್ಯೂಸ್ ಸೌಜನ್ಯ ತಾಯಿ ಕುಸುಮಾವತಿ ಅರ್ಜಿ ವಿಚಾರಣೆ ಫೆ. 19 ಕ್ಕೆ ಮುಂದೂಡಿದ ಹೈ ಕೋರ್ಟ್

ಸೌಜನ್ಯ ತಾಯಿ ಕುಸುಮಾವತಿ ಅರ್ಜಿ ವಿಚಾರಣೆ ಫೆ. 19 ಕ್ಕೆ ಮುಂದೂಡಿದ ಹೈ ಕೋರ್ಟ್

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ನಡೆದ 74 ಅಸಹಜ ಸಾವುಗಳ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೌಜನ್ಯ ತಾಯಿ ಕುಸುಮಾವತಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಫೆ.3 ರಂದು ನಡೆದು ನ್ಯಾಯಾಲಯ ವಿಚಾರಣೆಯನ್ನು ಫೆ 19 ಕ್ಕೆ ಮುಂದೂಡಿದೆ.
ಪ್ರಕರಣದ ವಿಚಾರಣೆ ವೇಳೆ ಸರಕಾರದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನಾಪತ್ತೆ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತುದ್ದು ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದಕ್ಕೆ ಆಕ್ಷೇಪವಿಲ್ಲ ಈ ಬಗ್ಗೆ ಒಂದುವಾರದಲ್ಲಿ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸುವುದಾಗಿ ತಿಳಿಸಿದ್ದು ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version