
ಬೆಳ್ತಂಗಡಿ: ಕುವೆಟ್ಟು ಗ್ರಾಮದ ಸಂಬೋಳ್ಯ ಸಮೀಪದ ಬರಮೇಲು ಎಂಬಲ್ಲಿ ಬೆಳಿಗ್ಗೆ ಧನು ಪೂಜೆಗೆ ಹೋದ 9 ನೇ ತರಗತಿ ವಿದ್ಯಾರ್ಥಿ ನಾಪತ್ತೆಯಾದ ಘಟನೆ ಜ.14 ರಂದು ಬೆಳಗ್ಗೆ ನಡೆದಿದೆ.
ನಾಪತ್ತೆಯಾದ ಬಾಲಕ ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಸುಮಂತ್ (16). ಮುಂಜಾನೆ ಐದು ಗಂಟೆಗೆ ವೇಳೆ ಮನೆಯಿಂದ ಹತ್ತಿರ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ನಾಳದ ದೇವಸ್ಥಾನಕ್ಕೆ ಧನು ಪೂಜೆಗೆ ಹೋರಟ್ಟಿದ್ದ ಬರೆಮೇಲು ಸುಬ್ರಮಣ್ಯ ಎಂಬುವರ ಎರಡನೇ ಪುತ್ರ ಸುಮಂತ್ ನಾಪತ್ತೆಯಾಗಿರುವ ಚಾಲಕ. ಘಟನಾ ಸ್ಥಳದ ಪ್ರದೇಶದ ತೋಟದ ಕೆರೆಯ ಬದಿಯಲ್ಲಿ ರಕ್ತದ ಕಲೆಗಳು ಕಾಣಿಸುತ್ತಿದ್ದು. ಬೆಳ್ತಂಗಡಿ ಪೊಲೀಸರು, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು, ಅಗ್ನಿಶಾಮಕ ದಳದವರು ಆಗಮಿಸಿ ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.