Home ಬ್ರೇಕಿಂಗ್‌ ನ್ಯೂಸ್ ಎಸ್.ಐ.ಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಮಂಗಳೂರಿಗೆ ಆಗಮನ ಸಾಕ್ಷಿ ದೂರು ದಾರನ ವಿಚಾರಣೆ ಆರಂಭ

ಎಸ್.ಐ.ಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಮಂಗಳೂರಿಗೆ ಆಗಮನ ಸಾಕ್ಷಿ ದೂರು ದಾರನ ವಿಚಾರಣೆ ಆರಂಭ

0

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಎಸ್.ಐ.ಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿಯವರು ಖುದ್ದು ದೂರುದಾರನ ವಿಚಾರಣೆ ನಡೆಸಲು ಜುಲೈ 27 ರಂದು 12 ಗಂಟೆಗೆ ಮಂಗಳೂರು ಐಬಿಗೆ ಆಗಮಿಸಿದ್ದಾರೆ. ಇದರ ಜೊತೆಗೆ ದೂರುದಾರ ಕೂಡ ತನ್ನ ಇವತ್ತು ಮೂವರು ವಕೀಲರ ಜೊತೆ ಕಾರಿನಲ್ಲಿ ಬಂದು ತನಿಖೆಗೆ ಹಾಜರಾಗಿದ್ದಾನೆ.
ಬೆಳಗ್ಗೆ 10.30ರ ಸಮಾರಿಗೆ ಸಾಕ್ಷಿ ದೂರುದಾರ ತನ್ನ ವಕೀಲರೊಂದಿಗೆ ಮಂಗಳೂರಿನ ಎಸ್..ಐ.ಟಿ ಕಚೇರಿಗೆ ಬಂದಿದ್ದಾನೆ 12 ಗಂಟೆಯ ಸುಮಾರಿಗೆ ಪ್ರಣವ್ ಕುಮಾರ್ ಮೊಹಂತಿ ಅವರು ಕಚೇರಿಗೆ ಆಗಮಿಸಿದ್ದು ಆತನಿಂದ ಮಾಹಿತಿ ಪಡೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಜು26ರಂದು ದಿನ ವಿಡೀ ತಂಡದ ಅಧಿಕಾರಿ ಅನುಚೇತ್ ನೇತೃತ್ವದಲ್ಲಿ
ದೂರುದಾರನ ವಿಚಾರಣೆ ನಡೆಸಿದ್ದರು.
ಇಂದು ವಿಚಾರಣೆ ಬಳಿಕ ಎಸ್.ಐ.ಟಿ ತಂಡ ಮಹತ್ವದ ಸಭೆ ನಡೆಸಲಿದ್ದು ಇದಾದ ಬಳಿಕ ಪ್ರಕರಣದ ತನಿಖೆಯ ಬಗ್ಗೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version