
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 26 ರಂದು ಮಂಗಳೂರು ಐಬಿ ಯಲ್ಲಿ ಎಸ್.ಐ.ಟಿ ತನಿಖೆಗೆ ದೂರುದಾರ ವ್ಯಕ್ತಿ ಇಬ್ಬರು ವಕೀಲರ ಜೊತೆ ಬೆಳಗ್ಗೆ 11 ಗಂಟೆಗೆ ಹಾಜರಾಗಿದ್ದು ಸಂಜೆ 7:30 ಕ್ಕೆ ವಿಚಾರಣೆ ಮುಗಿಸಿ ವಕೀಲರ ಜೊತೆ ವಾಪಸ್ ತೆರಳಿರುವುದಾಗಿ ತಿಳಿದು ಬಂದಿದೆ.
ಸುಮಾರು 8 ಗಂಟೆ 30 ನಿಮಿಷಗಳ ಕಾಲ ಎಸ್.ಐ.ಟಿ ಅಧಿಕಾರಿಗಳೊಂದಿಗೆ ಈತ ಕಳೆದಿದ್ದು ಎಲ್ಲ ವಿಚಾರಗಳಬಗ್ಗೆ ವಿಚಾರಣೆಗೆ ನಡೆಸಿದ್ದಾರೆ. ಇದೀಗ ಈತ ವಕೀಲರುಗಳೊಂದಿಗೆ ಹಿಂತಿರುಗಿದ್ದು ಎಸ್.ಐ.ಟಿ ಅಧಿಕಾರಿಗಳ ಮುಂದಿನನಡೆ ಏನು ಎಂದು ಕಾದು ನೋಡಬೇಕಾಗಿದೆ.