ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ವಕೀಲರ ಮೂಲಕ ಹೇಳಿಕೆ ನೀಡುತ್ತಿದ್ದ ಪಾಪ ಪ್ರಜ್ಞೆ ಕಾಡಿದ ವ್ಯಕ್ತಿ ಜುಲೈ 3 ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಬಂದು ದೂರು ನೀಡಿರುವುದಾಗಿ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್ ದೇಶಪಾಂಡೆ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಬಹಿರಂಗ ಮಾಡಿದ್ದಾರೆ.
ಈ ಪ್ರಕರಣದ ಬಗ್ಗೆ ಎಸ್ಪಿ ಕಚೇರಿಗೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಸದ್ರಿ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿದ್ದು ವಿಚಾರಣೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ವಕೀಲರು ಹೊರಡಿಸಿರುವ ಪತ್ರದಲ್ಲಿ ಪಾಪ ಪ್ರಜ್ಞೆ ಕಾಡಿದ ವ್ಯಕ್ತಿ ಹಲವಾರು ಕೊಲೆ ಅತ್ಯಾಚಾರ ಮಾಡಿದ ಮೃತದೇಹಗಳನ್ನು ಹೂತು ಹಾಕಿದ್ದರಬಗ್ಗೆ ಮಾಹಿತಿ ನೀಡಿದ್ದಾನೆ ಅದನ್ನು ಪೊಲೀಸರು ಪ್ರಕರಣ ದಾಖಲಿಸಿ ಆತನಿಗೆ ಭದ್ರತೆ ನೀಡಬೇಕು ಬಳಿಕ ಎಲ್ಲಾ ಹೂತು ಹಾಕಿದ ಮೃತದೇಹ ಪೊಲೀಸರಿಗೆ ತೋರಿಸಿಕೊಡುತ್ತೇನೆ. ಅದಲ್ಲದೆ ಇತ್ತೀಚೆಗೆ ಗೌಪ್ಯವಾಗಿ ಬಂದು ಹೂತು ಹಾಕಿದ ಮೃತದೇಹ ಹೊರತೆಗೆದಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ. ದೂರಿನ ಜೊತೆ ಕೆಲಸ ಮಾಡಿದ ಸಂಸ್ಥೆಯ ಐಡಿ ಕಾರ್ಡ್, ಆಧಾರ್ ಕಾರ್ಡ್, ಹೊರತೆಗೆದ ಕಳೇಬರದ ಫೋಟೋ ಜೊತೆಯಲ್ಲಿ ಲಗತ್ತು ಮಾಡಿರುವುದಾಗಿ 6 ಪುಟಗಳ ಪತ್ರದಲ್ಲಿ ತಿಳಿಸಿದ್ದಾನೆ.
ಈ ಪತ್ರದಲ್ಲಿ ಆತ ತಾನು ಹೂತು ಹಾಕಿರುವ ಹಲವು ಹೆಣಗಳ ಬಗ್ಗೆ ಆತ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
