Home ಸ್ಥಳೀಯ ಸಮಾಚಾರ ಸವಣಾಲು : ಬಸದಿಯಲ್ಲಿ ಧಾಮ ಸಂಪ್ರೋಕ್ಷಣ ಮಹೋತ್ಸವ

ಸವಣಾಲು : ಬಸದಿಯಲ್ಲಿ ಧಾಮ ಸಂಪ್ರೋಕ್ಷಣ ಮಹೋತ್ಸವ

29
0


ಬೆಳ್ತಂಗಡಿ: ತಾಲ್ಲೂಕಿನ ಸವಣಾಲು ಗ್ರಾಮದಲ್ಲಿರುವ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯು ಊರ ಹಾಗೂ ಪರವೂರ ದಾನಿಗಳಿಂದ ಜೀರ್ಣೋದ್ಧಾರಗೊಂಡಿದ್ದು, ಧಾಮ ಸಂಪ್ರೋಕ್ಷಣ ಮಹೋತ್ಸವವು ಫೆ. 28 (ಶುಕ್ರವಾರ) ಹಾಗೂ ಮಾರ್ಚ್ 1 (ಶನಿವಾರ) ಮತ್ತು 2 ರಂದು (ಭಾನುವಾರ) ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ಬಸದಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಕಿಶೋರ್ ಹೆಗ್ಡೆ, ಎರ್ಮೆದೋಡಿ ಗುತ್ತು ಮತ್ತು ಕಾರ್ಯದರ್ಶಿ ಸುರೇಶ್ ಕುಮಾರ್, ಉಜಿರೆ ತಿಳಿಸಿದ್ದಾರೆ.
ಫೆ:೨28 ಶುಕ್ರವಾರ: ಬೆಳಿಗ್ಯೆ ಗಂಟೆ 8 ರಿಂದ ಇಂದ್ರಪ್ರತಿಷ್ಠೆ, ತೋರಣಮುಹೂರ್ತ, ವಿಮಾನಶುದ್ಧಿ, ಮುಖವಸ್ತು ಉದ್ಘಾಟನೆ.
ಅಪರಾಹ್ನ ಗಂಟೆ 2.30ರಿಂದ ನಾಂದಿಮಂಗಲ ಪೂಜಾವಿಧಾನ, ಕ್ಷೇತ್ರಪಾಲ ಪ್ರತಿಷ್ಠೆ, ನಾಗಪ್ರತಿಷ್ಠೆ, ಭಗವಾನ್ ಆದಿನಾಥಸ್ವಾಮಿಗೆ ೨೪ ಕಲಶ ಅಭಿಷೇಕ, ಮಹಾಪೂಜೆ
ಮಾ.1 ಶನಿವಾರ: ಬೆಳಿಗ್ಯೆ 8 ಗಂಟೆಯಿಂದ ನಿತ್ಯವಿಧಿ ಸಹಿತ ವಾಸ್ತು ಪೂಜಾವಿಧಾನ, ನವಗ್ರಹ ಶಾಂತಿ, ಅಪರಾಹ್ನ ಪದ್ಮಾವತಿ ದೇವಿಗೆ ರಜತಕವಚ ಸಮರ್ಪಣೆ, ಆರಾಧನೆ, ಲಕ್ಷ ಹೂವಿನ ಪೂಜೆ, ಭಗವಾನ್ ಆದಿನಾಥ ಸ್ವಾಮಿಗೆ ೫೪ ಕಲಶ ಅಭಿಷೇಕ, ಮಹಾಪೂಜೆ


ಮಾ. 2: ಭಾನುವಾರ: ಬೆಳಿಗ್ಯೆ ಗಂಟೆ 8 ರಿಂದ ಧಾಮ ಸಂಪ್ರೋಕ್ಷಣೆ, ಭಗವಾನ್ ಆದಿನಾಥ ಸ್ವಾಮಿ ಪ್ರತಿಷ್ಠೆ, ಶಿಖರಾರೋಹಣ.
ಅಪರಾಹ್ನ ಭಕ್ತಾಮರ ಆರಾಧನೆ. ಭಗವಾನ್ ಆದಿನಾಥ ಸ್ವಾಮಿಗೆ ೧೦೮ ಕಲಶ ಅಭಿಷೇಕ, ಮಹಾಪೂಜೆ, ತೋರಣ ವಿಸರ್ಜನೆ ನಡೆಯಲಿದೆ
ಸೇವಾಕರ್ತೃಗಳಾದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬಸ್ಥರು.
ಪ್ರತಿಷ್ಠಾಚಾರ್ಯ ಬೆಳ್ತಂಗಡಿ ಜಯರಾಜ ಇಂದ್ರರು, ಪುಷ್ಪರಾಜ ಇಂದ್ರರು ಮತ್ತು ಸ್ಥಳ ಪುರೋಹಿತ ವೃಷಭರಾಜ ಇಂದ್ರರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುವರು.
ಧಾರ್ಮಿಕ ಸಭೆ: ಮಾ. 2 ರಂದು ಭಾನುವಾರ ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸುವರು. ಇತರ ಗಣ್ಯರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here