Home ಅಪಘಾತ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

44
0


ಬೆಳ್ತಂಗಡಿ : ಹಳ್ಳಕ್ಕೆ ಇಳಿದ ವ್ಯಕ್ತಿಯೊಬ್ಬರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ವೇಣೂರಿನ ಬಜಿರೆ ಗ್ರಾಮದ ಪೆರ್ಮನು ಬೆಳ್ಳಿಬೆಟ್ಟು ಎಂಬಲ್ಲಿ ಗುರುವಾರ ನಡೆದಿದೆ.
ಸ್ಥಳೀಯ ವೀರಪ್ಪ (74) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ವಿದ್ಯುತ್ ಪರಿವರ್ತಕದ ಸಮೀಪ ತೋಟದಲ್ಲಿ ಹಾದು ಹೋಗಿದ್ದ ಎಲ್ ಟಿ ಲೈನ್ ಮೇಲೆ ತೆಂಗಿನ ಗರಿ ಬಿದ್ದು, ತಂತಿಯು ತುoಡಾಗಿ ನೀರು ಹರಿಯುವ ಹಳ್ಳಕ್ಕೆ ಬಿದ್ದಿತ್ತು.
ಆ ತಂತಿಯಲ್ಲಿ ವಿದ್ಯುತ್ ಸರಬರಾಜಾಗುವ ಫ್ಯೂಸ್ ಹೋಗಿರುವುದು ಕಂಡು ಬಂದಿದ್ದು, ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತಿದ್ದ ವೀರಪ್ಪ, ಹಳ್ಳದ ನೀರಿನಲ್ಲಿ ತೇಲಿ ಹೋಗುತ್ತಿದ್ದ ಅಡಕೆ, ತೆoಗಿನಕಾಯಿಯನ್ನು ಹೆಕ್ಕಲು ಇಳಿದಿದ್ದು, ಅಲ್ಲಿಯೇ ಬಿದ್ದಿದ್ದ ವಿದ್ಯುತ್ ತಂತಿಯನ್ನು ಬಳ್ಳಿ ಎಂದು ಬರಿ ಕೈಯಲ್ಲಿ ಹಿಡಿದು ಎಳೆದಾಗ, ವಿದ್ಯುತ್ ತಂತಿಯು ಕಂಬದಲ್ಲಿರುವ ಇನ್ನೊಂದು ತಂತಿಗೆ ತಾಗಿ ವಿದ್ಯುತ್ ಶಾಕ್ ಗೆ ಒಳಗಾಗಿ ಮೃತ ಪಟ್ಟಿರುವ ಸಾಧ್ಯತೆ ಇದೆ ಎಂದು ಮೆಸ್ಕಾಂ ತಿಳಿಸಿದೆ.ವೇಣೂರು ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here