

ಬೆಳ್ತಂಗಡಿ : ಬೆಳ್ತಂಗಡಿಯ ಚರ್ಚ್ ರೋಡ್ ನಲ್ಲಿ ಗೂಡ್ಸ್ ಟೆಂಪೋ ಹಾಗೂ
ಎರಡು ದ್ವಿಚಕ್ರ ವಾಹನಗಳ
ಮಧ್ಯೆ ಮುಂಜಾನೆ ನ. 11 ರಂದು ಸರಣಿ
ಅಪಘಾತ ಸಂಭವಿಸಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಕಣಿಯೂರು ಗ್ರಾಮದ ಪಿಲಿಗೂಡು ನಿವಾಸಿ ಮೋಹನ್ (33) ಚಿಕಿತ್ಸೆ ಫಲಕರಿಯಾಗದೆ ಮಂಗಳೂರಿನ ಖಾಸಗಿ
ಆಸ್ಪತ್ರೆಯಲ್ಲಿ ಕೊನೆಸುರು ಎಳೆದಿದ್ದಾರೆ. ಮಂಗಳೂರಿನಿಂದ ಚಿಕ್ಕಮಗಳೂರು ಕಡೆ ಹೋಗುತ್ತಿದ್ದ ಟಾಟಾ ಗೂಡ್ಸ್ ವಾಹನ ಹಾಗೂ ಗುರುವಾಯನಕೆರೆ ಕಡೆ ಹೋಗುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಗೂಡ್ಸ್ ಚಾಲಕ ನಿದಿರೆಯ ಮಂಪರಿನಲ್ಲಿದ್ದ ಎಂದು ತಿಳಿದು ಬಂದಿದ್ದು,ಮಂಗಳೂರಿನಲ್ಲಿ ಚಾಲಕ ಕೆಲಸ ಮಾಡುತ್ತಿದ್ದ ಸಂತೋಷ್ ಹಾಗೂ ಸುವರ್ಣ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ನಿಧನ ಹೊಂದಿದ್ದಾರೆ.










