Home ಅಪಘಾತ ಬೆಳ್ತಂಗಡಿ : ಪಟಾಕಿ ದುರಂತದಲ್ಲಿ ಯುವಕನ ಕಾಲಿಗೆ ಗಂಭೀರ ಗಾಯ

ಬೆಳ್ತಂಗಡಿ : ಪಟಾಕಿ ದುರಂತದಲ್ಲಿ ಯುವಕನ ಕಾಲಿಗೆ ಗಂಭೀರ ಗಾಯ

1
0

ಬೆಳ್ತಂಗಡಿ : ಪಟಾಕಿ ಬಿಡುತ್ತಿರುವ ವೇಳೆ ಮಾಡಿದ ಸಣ್ಣ ತಪ್ಪಿನಿಂದ ಯುವಕನೊಬ್ಬನ ಕಾಲಿಗೆ ಗಂಭೀರ ಸ್ವರೂಪದ  ಗಾಯವಾಗಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟು ಬಳಿಯ ಪೊರ್ನ್ಕಂಡ ನಿವಾಸಿ ಕೃಷ್ಣಪ್ಪ ಗೌಡ ಮಗ ಲಿಕೇಶ್ ಗೌಡ(20) ಎಂಬಾತ ನ.9 ರಂದು ಸಂಜೆ ವೇಳೆ ಮನೆಯ ಅಂಗಳದಲ್ಲಿ ಮೂಲೆ ಪಟಾಕಿ ಬಿಡುತ್ತಿರುವಾಗ ಸಂದರ್ಭದಲ್ಲಿ ಮನೆಮಂದಿ ಮನೆಯೊಳಗಿನಿಂದ ಹೊರಗಡೆ ಬಂದರು ಎಂದು ತಕ್ಷಣ ರಕ್ಷಣೆಗಾಗಿ ಪಟಾಕಿ ಮೇಲೆ ಲಿಕೇಶ್ ಗೌಡ ಬಲಕಾಲು ಇಟ್ಟಾಗ ಸ್ಪೋಟಗೊಂಡು ಭಾಗಶಃ ಬಲಕಾಲು ಗಂಭೀರವಾಗಿ ಗಾಯವಾಗಿದೆ.

ತಕ್ಷಣ ಮನೆಯವರು ಹಾಗೂ ಸ್ನೇಹತರು ಸೇರಿ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಗಂಭೀರ ಗಾಯವಾಗಿರುವ ಕಾರಣದಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here