

ಬೆಳ್ತಂಗಡಿ, ಫೆ.26: ಕ್ರಿಸ್ತ ಯೇಸುವಿನ ಜನನದ 2025 ನೇ ವರ್ಷಧ ಅಂಗವಾಗಿ ಇಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಜ್ಞಾನನಿಲಯ ಪಾಲನಾ ಕೇಂದ್ರದಲ್ಲಿ ವಿಶೇಷ ಕಲಿಕಾ ಶಿಬಿರ ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿ ಕೇರಳದ ಪಾಲಕ್ಕಾಡ್ ಧರ್ಮಪ್ರಾಂತ್ಯದ ಯಾಜಕರಾದ ವಂದನೀಯ ಡಾ. ಅರುಣ್ ಕಲಮತ್ತಂರವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. 1965 ರಲ್ಲಿ ಕೊನೆಗೊಂಡ ಎರಡನೇ ವ್ಯಾಟಿಕನ್ ಮಹಾಸಮ್ಮೇಳನದ ಆದುನಿಕ ಕಾಲದ ಧರ್ಮಸಭೆಯ ಸಂವಿಧಾನಿಕ ದಾಖಲೆಗಳ ಕುರಿತು ಚರ್ಚಿಸಲಾಯಿತು. ಧರ್ಮಸಭೆಯು ಸಮಾಜದಲ್ಲಿ ಒಳಿತಿನ, ಧಾರ್ಮಿಕತೆಯ ಕಾವಲುಗಾರನಾಗಿರಲು ಎರಡನೇ ವ್ಯಾಟಿಕನ್ ಮಹಾಸಮ್ಮೇಳನವು ನಮಗೆ ಆಹ್ವಾನ ನೀಡುತ್ತದೆ ಎಂದರು.

ಶಿಬಿರವನ್ನು ಉದ್ಗಾಟಿಸಿ ಮಾತನಾಡಿದ ಅತಿ ವಂದನೀಯ ಲಾರೆನ್ಸ್ ಮುಕ್ಕುಜ್ಹಿ ಯವರು ” ಆದುನಿಕ ಲೋಕಕ್ಕೆ ದಾರಿದೀಪವಾಗಿರುವ ಎರಡನೇ ವ್ಯಾಟಿಕನ್ ಮಹಾಸಮ್ಮೇಳನದ ದಾಖಲೆಗಳು ಆಳವಾಗಿ ತಿಳಿಯುವುದು ಅನಿವಾರ್ಯ ಹಾಗು ಲೋಕ ಸಮಾಧಾನಕ್ಕೆ ಅವಶ್ಯವಾಧದ್ದು” ಎಂದರು. ಧರ್ಮಪ್ರಾಂತ್ಯದ ಎಲ್ಲ ಧರ್ಮಗುರುಗಳು ಹಾಗು ಧರ್ಮ ಭಗಿನೀಯರು ಪ್ರಸ್ತುತ ಕಲಿಕಾ ಶಿಬಿರದಲ್ಲಿ ಭಾಗವಹಿಸಿದರು.
